ಅಬ್ಬಾ! ಸೈಫ್-ಕರೀನಾ ಮಗ ತೈಮೂರ್ ಇಷ್ಟು ಚಿಕ್ಕ ವಯಸ್ಸಿನಲ್ಲೇ ಎಷ್ಟೊಂದು ಕೋಟಿ ಒಡೆಯ ಗೊತ್ತೇ?
ಬಾಲಿವುಡ್ ಕಲಾಕಾರರ ಕೋಟಿ ಕೋಟಿ ರೂಪಾಯಿಗಳ ಸಂಪತ್ತು ಬ್ಯಾಂಕಿನಲ್ಲಿ ಬಿದ್ದು ಧೂಳು ತಿನ್ನುತ್ತಿದೆ. ಇವರು ತಮ್ಮ ಜೀವನ ರಾಜ ಮಹಾರಾಜರಂತೆ ಜೀವಿಸುತ್ತಾರೆ. ಬಾಲಿವುಡ್ ಮಹಾ ನಾಯಕನಿಂದ ಹಿಡಿದು ಅಕ್ಷಯ್, ಅಜಯ್, ಸಲ್ಮಾನ್, ಅಮೀರ್, ಶಾರುಖ್ ಇವರೆಲ್ಲರೂ ತಮ್ಮ ಅಭಿನಯ ಕೌಶಲ್ಯದಿಂದ ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ. ನಟಿಗಳಲ್ಲಿಯೂ ದೀಪಿಕಾ, ಪ್ರಿಯಾಂಕಾ, ಮಾಧುರಿ ದೀಕ್ಷಿತ್, ಕರೀನಾ ಕಪೂರ್ ಸಹ ಹಿಂದಿಲ್ಲ.
ಆದರೆ ಇಂದಿನ ಲೇಖನದಲ್ಲಿ ಬಾಲಿವುಡ್ ಸ್ಟಾರ್ ಕಿಡ್ ತೈಮೂರ್ ಬಗ್ಗೆ ಹೇಳುತ್ತಿದ್ದೇವೆ. ಸೈಫ್ ಮತ್ತು ಕರೀನಾ ಮಗನಾದ ನಾಲ್ಕು ವರ್ಷದ ತೈಮೂರ್ ಸದ್ಯ ಮೀಡಿಯಾಗಳಲ್ಲಿ ಅತ್ಯಂತ ಪ್ರಿಯ ಸ್ಟಾರ್ ಕಿಡ್ ಆಗಿದ್ದಾನೆ.

ಇಷ್ಟೊಂದು ಚಿಕ್ಕವಯಸ್ಸಿನಲ್ಲಿಯೇ ತೈಮೂರ್ ಸುದ್ದಿ ಮಾಧ್ಯಮಗಳ ಕಾರಣದಿಂದಾಗಿ ತುಂಬಾ ಪ್ರಸಿದ್ಧಿ ಪಡೆದಿದ್ದಾನೆ. ತೈಮೂರನ ಭಾವಚಿತ್ರಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿಯೇ ತೈಮೂರ್ ಕೋಟ್ಯಾವಧಿ ರೂಪಾಯಿಗಳ ಸಂಪತ್ತಿನ ಒಡೆಯನಾಗಿದ್ದಾನೆ.
ಪಟೌಡಿ ಕುಟುಂಬದ ಪೂರ್ವಜರಾದ ಸಲಾಮತ್ ಖಾನ್ ಅವರು 1408 ರಲ್ಲಿ ಅಫಘಾನಿಸ್ತಾನದಿಂದ ಭಾರತಕ್ಕೆ ಬಂದು ನೆಲೆಯೂರಿದರು. ತದನಂತರ ಇವರ ಕುಟುಂಬದವರು ಮೊಘಲರ ಅನೇಕ ಕೆಲಸಗಳಲ್ಲಿ ತಮ್ಮ ಬೆಂಬಲವನ್ನು ಸೂಚಿಸಿದರು. ಅದರ ಬದಲಾಗಿ ಮೊಗಲರು ಪಟೌಡಿ ಕುಟುಂಬಕ್ಕೆ ರಾಜಸ್ಥಾನ ದೆಹಲಿ ಮತ್ತು ಹರಿಯಾಣದಲ್ಲಿ ಸಾಕಷ್ಟು ಭೂಮಿಯನ್ನು ಬಹುಮಾನವಾಗಿ ನೀಡಿದರು.

ನವಾಬ್ ಹಮೀದ್ ಉಲ್ಲಾಖಾನ್ ಇವರ ನಿಧನದ ನಂತರ ಭಾರತ ಸರಕಾರವು 1961 ರಲ್ಲಿ ಸೈಫ್ ಅಲಿ ಖಾನ್ ಅವರ ಅಜ್ಜಿ ಸಾಜಿದಾ ಸುಲ್ತಾನಳಿಗೆ ಬೇಗಮ್ ಸ್ವೀಕರಿಸಿದನು. ಅವರಿಗೆ ಜನ್ಮಿಸಿದ ಮನ್ಸೂರ್ ಅಲಿ ಖಾನ್ ಪಟೌಡಿ ಅಂದರೆ ಸೈಫ್ ಅಲಿ ಖಾನರ ತಂದೆ 9ನೇ ನವಾಬ್ ಆಗಿದ್ದರು. ಸೈಫ್ ಅವರ ಸಾಮ್ರಾಜ್ಯದ ಹತ್ತನೆಯ ನವಾಬ ಆಗಿದ್ದಾರೆ.
ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ನಿಧನದ ನಂತರ ಸೈಫ್ ಅಲಿ ಖಾನ್ ಅವರಿಗೆ ನವಾಬ್ ಮಾಡಲಾಯಿತು. ತಂದೆ ಮನ್ಸೂರ್ ಅಲಿ ಖಾನ್ ಪಟೌಡಿಯವರ ನಿಧನದ ನಂತರ ಎಲ್ಲ ಸಂಪತ್ತನ್ನು ಸೈಫ್ ಅಲಿ ಖಾನ್ ಅವರ ಹೆಸರಿಗೆ ವರ್ಗಾಯಿಸಲಾಯಿತು. ಹೀಗಾಗಿ ಸದ್ಯ ಸೈಫ್ ಅಲಿ ಖಾನ್ ಅವರ ಮಗ ತೈಮೂರನು ಈಗಾಗಲೇ ಒಂದು ಸಾವಿರ ಎಕರೆ ಫಲವತ್ತಾದ ಜಮೀನಿನ ಮಾಲೀಕತ್ವದ ಜೊತೆಗೆ 500 ಕೋಟಿ ರೂಪಾಯಿ ಬೆಲೆಯ ರಾಜವಂಶದ ಒಡೆಯನಾಗಿದ್ದಾನೆ.

ಈಗ ಪಟೌಡಿ ಕುಟುಂಬದ ಮಾಲೀಕ ಶರ್ಮಿಳಾ ಟಾಗೋರ್ ಇದ್ದಾರೆ. ಶರ್ಮಿಳಾ ಮತ್ತು ಅವರ ಮಗಳು ಕುಟುಂಬದ ಎಲ್ಲ ಆಸ್ತಿಯನ್ನು ಈ ಇಬ್ಬರೇ ನಿರ್ವಹಿಸುತ್ತಾರೆ.
ಒಂದು ಮೀಡಿಯಾ ರಿಪೋರ್ಟ್ ಪ್ರಕಾರ ನವಾಬ್ ಕುಟುಂಬದ ಕಡೆಗೆ ಸುಮಾರು 2700 ಕೋಟಿ ರೂಪಾಯಿಗಳ ಆಸ್ತಿ ಇದೆ. ಇದರಲ್ಲಿ ಇವರ ಹೆಸರಿಗೆ ಅನೇಕ ಅರಮನೆ ಮತ್ತು ಮಹಲುಗಳಿವೆ. ಅವುಗಳ ಬೆಲೆ ಕೋಟಿ ಕೋಟಿ ರೂಪಾಯಿಗಳಷ್ಟು ಇವೆ.