ತಮ್ಮ ಮುಂಬೈನ ಎರಡು ದುಬಾರಿ ಫ್ಲ್ಯಾಟ್ ಗಳನ್ನು ಮಾರಾಟ ಮಾಡಿದ ಪ್ರಿಯಾಂಕ ಚೋಪ್ರಾ: ನಡೆಸಿದ ವಹಿವಾಟು ಎಷ್ಟು ಕೋಟಿ ನೋಡಿ

ಪ್ರಿಯಾಂಕ ಚೋಪ್ರಾ ಅವರು ನಿಕ್ ಜೋನಸ್ ಅವರ ಜೊತೆಗೆ ಮದುವೆಯಾದ ನಂತರ ಈಗ ಹೆಚ್ಚಾಗಿ ಲಾಸ್ ಏಂಜಲೀಸ್ ನಲ್ಲಿಯೇ ಇರುತ್ತಿದ್ದಾರೆ. ಅವರು ಈಗಷ್ಟೇ ಮುಂಬೈಯಲ್ಲಿ ತಮ್ಮ ಎರಡು ದುಬಾರಿ ನಿವಾಸಗಳನ್ನು ಮಾರಿದರು. ವಿಶೇಷವೆಂದರೆ ಅವರ ಮದುವೆಯ ಅನೇಕ ಕಾರ್ಯಕ್ರಮಗಳು ಮುಂಬೈಯ ಇದೇ ಮನೆಯಲ್ಲಿ ನಡೆದಿದ್ದವು. ಹೀಗಾಗಿ ಈ ಮನೆಯಲ್ಲಿ ಅವರ ಮದುವೆಯ ಅನೇಕ ಸವಿ ನೆನಪುಗಳು ಕೂಡಿಕೊಂಡಿವೆ.

ನಟಿ ಪ್ರಿಯಾಂಕ ಚೋಪ್ರಾ ಅವರು ಬಾಲಿವುಡ್ ನಲ್ಲಿಯ ಎಲ್ಲಕ್ಕೂ ಶ್ರೀಮಂತ ನಟಿಯರಲ್ಲಿ ಒಬ್ಬರಾಗಿದ್ದಾರೆ. ಭಾರತದ ಅನೇಕ ಕಡೆಗಳಲ್ಲಿ ಅವರ ಸ್ವಂತ ಆಸ್ತಿ ಇದೆ. ಆದರೆ ಈಗ ಮುಂಬೈಯಲ್ಲಿ ಇರುವ ಎರಡು ಮನೆಗಳನ್ನು ಮಾರಿದರು. ಈ ವ್ಯವಹಾರವನ್ನು ಅವರ ತಾಯಿಯೇ ಮಾಡಿದ್ದಾರೆ. ಇದರ ಜೊತೆಗೆ ಅವರ ಕೆಲವು ಆಫೀಸುಗಳನ್ನು ಬಾಡಿಗೆಗೆ ನೀಡಿದ್ದಾರೆ. ಮುಂಬೈಯ ಓಶಿವರಾ ಭಾಗದಲ್ಲಿ ಎರಡನೆಯ ಅಂತಸ್ತಿನಲ್ಲಿರುವ ಪ್ರೆಸ್ಸಿಂತ ಆಫೀಸ್ 2.11 ಲಕ್ಷ ರೂಪಾಯಿಗಳಿಗೆ ಕಳೆದ ಜೂನ್ ನಿಂದ ಬಾಡಿಗೆಗೆ ನೀಡಿದ್ದಾರೆ. ಅಂಧೇರಿಯಲ್ಲಿರುವ ನಿವಾಸ 7 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದರು. ಇನ್ನೊಂದು ಸ್ಥಳದಲ್ಲಿರುವ ಮನೆ 3 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಎಲ್ಲ ವ್ಯವಹಾರಗಳನ್ನು ಪ್ರಿಯಾಂಕ ಚೋಪ್ರಾ ಅವರ ತಾಯಿ ಕಳೆದ ಮಾರ್ಚ್ ನಲ್ಲಿ ಮಾಡಿದ್ದಾರೆ.

ಇದಕ್ಕೂ ಮೊದಲು ಪ್ರಿಯಾಂಕಾ ಅವರು ಕಳೆದ ವರ್ಷ ತಮ್ಮ ಅನೇಕ ಆಸ್ತಿಗಳನ್ನು ಮಾರಿದ್ದಾರೆ. 2020ರಲ್ಲಿ ಅಂಧೇರಿಯ ಲೋಖಂಡ್ ವಾಲಾ ಕಾಂಪ್ಲೆಕ್ಸ್ ನಲ್ಲಿರುವ ಮನೆಯನ್ನು ಸಹ ಮಾರಾಟ ಮಾಡಿದ್ದಾರೆ. ಪ್ರಿಯಾಂಕ ಅವರು ಸದ್ಯ ಲಾಸ್ ಏಂಜಲೀಸ್ ನಲ್ಲಿ ಇರುತ್ತಿದ್ದರೂ ಅವರ ತಾಯಿ ಮತ್ತು ಸಹೋದರ ಭಾರತದಲ್ಲಿಯೇ ಇರುತ್ತಾರೆ. ಇವರಿಗೆ ಭೇಟಿಯಾಗಲು ಪ್ರಿಯಾಂಕ ಅನೇಕ ಸಲ ಭಾರತಕ್ಕೆ ಬರುತ್ತಿರುತ್ತಾರೆ. ಆದರೆ ಕಳೆದ ವರ್ಷದಿಂದ ಕೊರೋನಾ ಕಾರಣದಿಂದಾಗಿ ಪ್ರಿಯಾಂಕಾ ಅವರಿಗೆ ಭಾರತಕ್ಕೆ ಹೆಚ್ಚು ಬರಲಾಗಿಲ್ಲ.

ಮುಂಬೈ ಗೋವಾ ಹಾಗೂ ಅಮೆರಿಕೆಯಲ್ಲಿಯೂ ಸಹ ಪ್ರಿಯಾಂಕಾ ಅವರ ಹೆಸರಿಗೆ ಅನೇಕ ಪ್ರಾಪರ್ಟಿಗಳು ಇವೆ. ಸದ್ಯ ಅಮೆರಿಕೆಯಲ್ಲಿ ಪ್ರಿಯಾಂಕಾ ಅವರು ‘ಸೋನಾ’ ಹೆಸರಿನ ಹೊಸ ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ. ಅವರ ಈ ರೆಸ್ಟೋರೆಂಟ್ ನಲ್ಲಿ ಭಾರತದ ಸುಪ್ರಸಿದ್ಧ ಆಹಾರಗಳು ದೊರೆಯುತ್ತವೆ. ಈಗ ಅಮೆರಿಕೆಯ ಬೇವ್ಹರಲಿ ಹೀಲ್ಸ್ ನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ.