Post ನ ‘ಈ’ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ ತಿಂಗಳಿಗೆ 5 ಸಾವಿರ ಗಳಿಸಿ!
ಪೋಸ್ಟ್ ಆಫೀಸಿನಲ್ಲಿ ಮಾಡುವ ಹಣದ ಹೂಡಿಕೆ ಇದು ಮಾಸಿಕ ಉತ್ಪನ್ನ ಯೋಜನೆ ಹೂಡಿಕೆಯ ವಿಷಯದಲ್ಲಿ ತುಂಬಾ ಒಳ್ಳೆಯದು ಎಂದೇ ಹೇಳಬಹುದು. ಇದರಲ್ಲಿ ವಾರ್ಷಿಕ ಅಥವಾ ಪ್ರತಿ ತಿಂಗಳು ಒಮ್ಮೆಲೆ ಹಣ ಹೂಡಿಕೆ ಮಾಡಿ ಒಳ್ಳೆಯ ರಿಟರ್ನ್ ಪಡೆಯಬಹುದು. ಇದರಿಂದ ನಿಮ್ಮ ತಿಂಗಳ ಉತ್ಪನ್ನವನ್ನು ಹೆಚ್ಚಿಸಬಹುದು. ಈ ಯೋಜನೆಯಲ್ಲಿ ಬರೀ 1000 ರೂಪಾಯಿಗಳಿಗೆ A/C ಓಪನ್ ಮಾಡಬಹುದು. ದೀರ್ಘ ಕಾಲಾವಧಿಯ ಹೂಡಿಕೆಯಲ್ಲಿ ಅದರ ಸಿಗುವ ಲಾಭ ಹೆಚ್ಚಿಗಿರುತ್ತದೆ.
MIS ಮುಖಾಂತರ (Post Office MIS) ನೀವು ಪ್ರತಿ ತಿಂಗಳು 5 ಸಾವಿರ ₹ಗಳ ವರೆಗೆ ಲಾಭ ಪಡೆಯಬಹುದು. ಇದರಲ್ಲಿ ಸಿಂಗಲ್ ಮತ್ತು ಸಂಯುಕ್ತ ಹೀಗೆ ಎರಡು ಅಕೌಂಟ್ ಗಳನ್ನು ತೆರೆಯಲು ಬರುತ್ತದೆ.
ಅಕೌಂಟ್ ಹೇಗೆ ತೆಗೆಯಬೇಕು?
ಪೋಸ್ಟ್ ಆಫೀಸಿನ MIS ನಲ್ಲಿ ಒಂದೇ ವೇಳೆ ಹಣವನ್ನು ಜಮೆ ಮಾಡಿ ಸ್ವಂತಕ್ಕಾಗಿ ಮಾಸಿಕ ಗಳಿಕೆಯ ವ್ಯವಸ್ಥೆ ಮಾಡಿಕೊಳ್ಳಲು ಬರುತ್ತದೆ.
ನಿಮ್ಮ ಅಕೌಂಟ್ ಒಂದೇ ಇದ್ದರೆ ಮತ್ತು ಅದರಲ್ಲಿ ಹೆಚ್ಚೆಂದರೆ ನಾಲ್ಕೂವರೆ ಲಕ್ಷ ರೂಪಾಯಿಗಳ ವರೆಗೆ ಜಮೆ ಮಾಡಲು ಸಾಧ್ಯವಿದೆ. ಅದೇ ರೀತಿ ಸಂಯುಕ್ತ ಅಕೌಂಟ್ ಇದ್ದರೆ 9 ಲಕ್ಷ ರೂಪಾಯಿಗಳವರೆಗೆ ಹಣ ಜಮೆ ಮಾಡಬಹುದಾಗಿದೆ.
ಈ ಯೋಜನೆಯಲ್ಲಿ ಮಕ್ಕಳ ಹೆಸರಿನಲ್ಲಿಯೂ ಅಕೌಂಟ್ ಓಪನ್ ಮಾಡಲು ಸಾಧ್ಯವಿದೆ. ಇದಕ್ಕಾಗಿ ಪೋಷಕರ ಹೆಸರು ಸೇರಿಸುವುದು ಅಗತ್ಯವಿದೆ. ಯಾವಾಗ ಮಕ್ಕಳು ಹತ್ತು ವರ್ಷದವರಾಗುತ್ತಾರೆ ಆಗ ಅಕೌಂಟ್ ನ್ನು ಅವರೇ ಮ್ಯಾನೇಜ್ ಮಾಡಬಹುದಾಗಿದೆ.

5000 ಹೇಗೆ ಪಡೆಯುವುದು?
ಈ ಯೋಜನೆಯಲ್ಲಿ 6.6% ಬಡ್ಡಿ ನೀಡಲಾಗುತ್ತದೆ. ಒಂದು ವೇಳೆ ನೀವು ಒಂದೇ ಅಕೌಂಟ್ ಅಡಿಯಲ್ಲಿ ನಾಲ್ಕೂವರೆ ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದ್ದೆ ಆದರೆ ಸದ್ಯದ ಬಡ್ಡಿ ದರದ ಪ್ರಕಾರ ವರ್ಷಕ್ಕೆ ನಿಮಗೆ 29700 ರೂಪಾಯಿಗಳು ಸಿಗುತ್ತವೆ.
ಒಂದು ವೇಳೆ ನೀವು ಸಂಯುಕ್ತ ಅಕೌಂಟ್ 9 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ವರ್ಷಕ್ಕೆ ನಿಮಗೆ ಬಡ್ಡಿ ಸ್ವರೂಪದಲ್ಲಿ 59400 ರೂಪಾಯಿಗಳು ಸಿಗುತ್ತವೆ. ಅಂದರೆ ಪ್ರತಿ ತಿಂಗಳು 4950 ರೂಪಾಯಿಗಳು ಸಿಗುತ್ತವೆ.
ಮೆಚುರಿಟಿ ಪೂರ್ವದಲ್ಲಿಯೇ ಹಣ ತೆಗೆಯುವುದಾದರೆ ಶುಲ್ಕವೆಷ್ಟು?
MIS ಅಕೌಂಟ್ ನ ಮ್ಯಾಚುರಿಟಿ ಕಾಲಾವಧಿ ಐದು ವರ್ಷದ್ದಾಗಿದೆ. ಆದಾಗ್ಯೂ ಅವಶ್ಯಕತೆ ಮತ್ತು ಅನಿವಾರ್ಯತೆಯಿಂದಾಗಿ ನೀವು ಅಕೌಂಟ್ ಬಂದ್ ಮಾಡಬಹುದಾಗಿದೆ. ಆದರೆ ಅಕೌಂಟ್ ಓಪನ್ ಆಗಿ ಒಂದು ವರ್ಷದ ಕಾಲಾವಧಿ ಆಗಿರಬೇಕು.
ಮುಂಗಡ ಹಣವನ್ನು ಪಡೆಯಬೇಕಾದಲ್ಲಿ ನಿಮ್ಮ ಠೇವಣಿಯ ಹಣದಲ್ಲಿಯ 2% ಶುಲ್ಕ ಪಾವತಿಸಲಾಗುತ್ತದೆ. ಇದೇ ಹಣವನ್ನು ಒಂದು ವೇಳೆ ನೀವು ಮೂರು ವರ್ಷಗಳ ನಂತರ ತೆಗೆದರೆ ಅದಕ್ಕೆ 1% ಶುಲ್ಕ ವಿಧಿಸಲಾಗುತ್ತದೆ.