ರಾಜ್ ಕುಂದ್ರಾ ಮೇಲೆ ಸಿಟ್ಟಿನಿಂದ ಅರಚಿ ಅವಮಾನ ಮಾಡಿ ಬಿಟ್ಟೆ ಎಂದ ಶಿಲ್ಪಾ ಶೆಟ್ಟಿ: ಗಂಡ ಹೆಂಡತಿ ಯನ್ನು ಸಮಾಧಾನ ಮಾಡಿದ ಪೋಲಿಸರು!
ಕಳೆದ ಕೆಲವು ದಿನಗಳಿಂದಲೂ ಸಹಾ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿರುವುದು ಬಾಲಿವುಡ್ ನ ಜನಪ್ರಿಯ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರ ಪತಿ. ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಅವುಗಳ ಹಂಚಿಕೆ ಆ ರೋ ಪದಲ್ಲಿ ಬಲವಾದ ಸಾಕ್ಷ್ಯಗಳು ಲಭ್ಯವಿದೆ ಎನ್ನುವ ಕಾರಣಕ್ಕೆ ರಾಜ್ ಕುಂದ್ರಾ ಅವರನ್ನು ಮುಂಬೈನ ಕ್ರೈಂ ಬ್ರಾಂಚ್ ನ ಪೋಲಿಸರು ಬಂಧಿಸಿದ್ದಾರೆ. ಅಲ್ಲದೇ ರಾಜ್ ಕುಂದ್ರಾ ಅವರ ನ್ಯಾಯಾಂಗ ಬಂಧನವನ್ನು ಕೋರ್ಟ್ ವಿಸ್ತರಣೆ ಮಾಡಿದ್ದು, ರಾಜ್ ಕುಂದ್ರಾ ಅವರ ಜಾಮೀನು ಅರ್ಜಿಯನ್ನು ಬುಧವಾರದ ದಿನದಂದು ವಿಚಾರಣೆ ಮಾಡಲಾಗುವುದು ಎನ್ನಲಾಗಿದೆ. ಇನ್ನು ಇವೆಲ್ಲವುಗಳ ನಡುವೆಯೇ ಒಂದು ಪ್ರಮುಖ ಮಾಧ್ಯಮ ನೀಡಿದೆ ಎನ್ನಲಾಗುವ ವರದಿ ಈಗ ದೊಡ್ಡ ಸುದ್ದಿಯಾಗಿದೆ. ಪ್ರಕರಣದ ವಿಚಾರವಾಗಿ ಪೋಲಿಸ್ ಅಧಿಕಾರಿಗಳುವರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ವಾಸವಿರುವ ಮುಂಬೈನ ಬಾಂದ್ರಾ ನಿವಾಸಕ್ಕೆ ಪೋಲಿಸರು ರಾಜ್ ಕುಂದ್ರಾ ಸಹಿತ ತೆರಳಿ ಸುಮಾರು ಆರು ಗಂಟೆಗಳ ಕಾಲ ಅವರ ಮನೆಯ ತಪಾಸಣೆ ಮತ್ತು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ವಿಚಾರಣೆಯ ವೇಳೆ ನಟಿ ಶಿಲ್ಪಾ ಶೆಟ್ಟಿ ಅವರ ಮುಂದೆಯೇ ರಾಜ್ ಕುಂದ್ರಾ ಅವರನ್ನು ಕುಳ್ಳಿಸಲಾಗಿತ್ತು ಎನ್ನಲಾಗಿದೆ. ಅಲ್ಲದೇ ವಿಚಾರಣೆ ವೇಳೆ ನಟಿ ಶಿಲ್ಪಾ ಶೆಟ್ಟಿ ತಮ್ಮ ಪತಿಯ ಮೇಲೆ ತಮ್ಮ ಕೋಪ, ಅಸಹನೆಯನ್ನು ಹೊರಹಾಕಿದ್ದಾರೆ ಎನ್ನುವ ವಿಷಯವೊಂದು ಸಹಾ ಹೊರ ಬಂದಿದೆ. ಶಿಲ್ಪಾ ಶೆಟ್ಟಿ ಅವರು ತಮ್ಮ ಪತಿಯನ್ನು, ಎಲ್ಲಾ ಇರುವಾಗ ಇದೆಲ್ಲಾ ಏಕೆ ಬೇಕಿತ್ತು? ಎಂದು ತಮ್ಮ ಪತಿಯ ಮೇಲೆ ಅರಚಾಡಿದ್ದಾರೆ ಎನ್ನಲಾಗಿದೆ. ಅದು ಮಾತ್ರವೇ ಅಲ್ಲದೇ ಪತಿಯ ಮೇಲೆ ಅಸಹನೆಯನ್ನು ಹೊರಹಾಕುವ ವೇಳೆಯಲ್ಲಿ ಶಿಲ್ಪಾ ಶೆಟ್ಟಿ ಭಾವುಕರಾಗಿ ಜೋರಾಗಿ ಅತ್ತರು ಎನ್ನಲಾಗಿದೆ.

ಅಧಿಕಾರಿಗಳು ಶಿಲ್ಪಾ ಶೆಟ್ಟಿ ಅವರನ್ನು ಸಹಾ ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರಣೆಯ ವೇಳೆಯಲ್ಲಿ ಶಿಲ್ಪಾ ತಮ್ಮ ಪತಿಯನ್ನು ಕುರಿತಾಗಿ ಕುಟುಂಬದ ಪ್ರತಿಷ್ಠೆ ಮಣ್ಣು ಪಾಲು ಮಾಡಿದಿರಿ ಎಂದು ಸಹಾ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ರಾಜ್ ಕುಂದ್ರಾ ವಿಚಾರ ವಿವಾದದ ರೂಪವನ್ನು ಪಡೆದ ಕೂಡಲೇ ಇದರ ನೇರ ಪರಿಣಾಮ ನಟಿ ಶಿಲ್ಪಾ ಶೆಟ್ಟಿ ಅವರ ಮೇಲಾಗಿದೆ. ಈ ವಿಚಾರವು ಸುದ್ದಿಯಾದ ನಂತರ ಶಿಲ್ಪಾ ಶೆಟ್ಟಿ ಅವರ ಕೆಲವು ಪ್ರಮುಖ ಬ್ರಾಂಡ್ ಗಳ ಕೆಲಸ ಅವರಿಂದ ದೂರವಾಗಿದೆ ಎನ್ನಲಾಗಿದೆ. ಅಲ್ಲದೇ ಶಿಲ್ಪಾ ಅವರು ಸಹಾ ಕೆಲವು ಹೊಸ ಪ್ರಾಜೆಕ್ಟ್ ಗಳಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.
ವಿಚಾರಣೆಯ ವೇಳೆಯಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಪತಿಯನ್ನು ವಹಿಸಿಕೊಂಡು ಅವರ ಪರವಾಗಿ ಸಹಿತ ಮಾತನಾಡಿದ್ದಾರೆ. ಶಿಲ್ಪಾ ತಮ್ಮ ಪತಿ ನಿರ್ಮಾಣ ಮಾಡಿರುವುದು ಸಾ ಫ್ಟ್ ಪಾರ್ನ್ ಅಥವಾ ಎರೋಟಿಕಾ ಮಾದರಿಯ ಸಿನಿಮಾಗಳೇ ಹೊರತು ಅವು ಅ ಶ್ಲೀ ಲ ಸಿನಿಮಾಗಳು ಅಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಅಂದರೆ ಅವು ಶೃಂಗಾರಕ್ಕೆ ಪ್ರಾಧಾನ್ಯತೆ ಇರುವ ಸಿನಿಮಾಗಳೇ ಹೊರತು ಅಲ್ಲಿ ಅ ಶ್ಲೀ ಶ ತೆ ಇಲ್ಲ ಎನ್ನುವ ಮಾತನ್ನು ಶಿಲ್ಪಾ ಶೆಟ್ಟಿ ಹೇಳಿದ್ದಾರೆ ಎನ್ನಲಾಗಿದೆ. ಕೋರ್ಟ್ ನಲ್ಲಿ ರಾಜ್ ಕುಂದ್ರಾ ಪರ ವಕೀಲರು ಸಹಾ ಇದೇ ವಿಚಾರವನ್ನು ಮುಂದಿಟ್ಟು ವಾದವನ್ನು ಮಾಡಿದ್ದಾರೆ.
ಹೌದು ರಾಜ್ ಕುಂದ್ರಾ ಪರ ವಕೀಲರು ಪೊಲೀಸರು ರಾಜ್ ಕುಂದ್ರಾ ಅವರನ್ನು ಅ ಕ್ರ ಮವಾಗಿ ಬಂಧಿಸಿದ್ದಾರೆ ಎಂದೂ, ರಾಜ್ ಕುಂದ್ರ ಅವರ ಚಲನಚಿತ್ರಗಳು ‘ಶೃಂಗಾರ’ ಸಿನಿಮಾಗಳು ಹಾಗೂ ಐಟಿ ಕಾಯ್ದೆಯ ಸೆಕ್ಷನ್ 67 (ಎ) ಅನ್ನು ಅವುಗಳ ಮೇಲೆ ಹೇರಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ. ಸಿಕ್ಕಿ ಬೀಳುವ ಭಯ ಬಂದಾಗ ಅದರಿಂದ ತಪ್ಪಿಸಿಕೊಳ್ಳಲು ಸಹಾ ರಾಜ್ ಕುಂದ್ರಾ ಪ್ಲಾನ್ ಮಾಡಿದ್ದರು ಎನ್ನಲಾಗಿದ್ದು, ಹಳೆಯ ಚಾಟ್ ಹಿಸ್ಟರಿ ಸಿಗದ ಹಾಗೆ ಮಾಡಲು ಅವರು ತಮ್ಮ ಫೋನ್ ಎಲ್ಲೋ ಎಸೆದಿದ್ದಾರೆ ಎನ್ನಲಾಗಿದೆ ಹಾಗೂ ಕಂಪನಿಯ ಐಟಿ ಹೆಡ್ ಗೆ ಎಲ್ಲಾ ವೀಡಿಯೋಗಳನ್ನು ಡಿಲೀಟ್ ಮಾಡುವ ನಿರ್ದೇಶನ ನೀಡಿದ್ದರೆನ್ನಲಾಗಿದೆ.
ರಾಜ್ ಕುಂದ್ರಾ ಅವರ ವಿಯಾನ್ ಇಂಡಸ್ಟ್ರೀಸ್ ಮೇಲೆ ಧಾಳಿ ನಡೆಸಿದ ಪೋಲಿಸರಿಗೆ ಅಲ್ಲಿ 48 ಜಿಬಿ ಡೇಟಾ ದೊರೆತಿದೆ. ಇದರಲ್ಲಿ ಅ ಶ್ಲೀ ಲ ವೀಡಿಯೋಗಳು ಇವೆ ಎನ್ನಲಾಗಿದೆ. ಅಲ್ಲದೇ ಸಿಕ್ಕಿ ಬೀಳದೇ ಇರಲು ಅನೇಕ ದಾಖಲೆಗಳನ್ನು ಮೊದಲೇ ನಾಶ ಮಾಡಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ರಾಜ್ ಕುಂದ್ರಾ ಅವರ ಕಾನ್ಪುರದ ಎರಡು ಬ್ಯಾಂಕ್ ಖಾತೆಗಳನ್ನು ಪೋಲಿಸರು ಸೀಲ್ ಮಾಡಿದ್ದಾರೆ. ಇದಲ್ಲದೇ ಶಿಲ್ಪಾ ಶೆಟ್ಟಿ ಅವರ ಬ್ಯಾಂಕ್ ಖಾತೆಗಳ ಪರಿಶೀಲನೆ ಕೂಡ ನಡೆಸಲಾಗುತ್ತಿದೆ. ಅ ಶ್ಲೀ ಲ ಸಿನಿಮಾಗಳಿಂದ ಮಾಡಿದ ಹಣ ಶಿಲ್ಪಾ ಅವರ ಖಾತೆಯಲ್ಲಿ ಇದೆಯೋ, ಇಲ್ಲವೋ ಎನ್ನುವ ಪರಿಶೀಲನೆ ಇದಾಗಿದೆ ಎನ್ನಲಾಗಿದೆ.