ಸಿಹಿ ಸುದ್ದಿ: ಸರ್ಕಾರದ ನಿರ್ಧಾರದಿಂದಾಗಿ 38 ಸಾವಿರ ರೂ. ಅಗ್ಗವಾದ ಸ್ಕೂಟರ್ ಬೆಲೆ: ಬೆಲೆ ಪಟ್ಟಿಯನ್ನು ಒಮ್ಮೆ ನೋಡಿ
ಓಕಿನಾವಾ ಆಟೋಟೆಕ್ ನ ಸ್ಕೂಟರ್ ಗಳ ಬೆಲೆಯಲ್ಲಿ ಭಾರೀ ಬೆಲೆ ಇಳಿಕೆ ಕಂಡು ಬಂದಿದೆ. ಸರ್ಕಾರದ FAME II ಪ್ರೋತ್ಸಾಹಕ ನೀತಿ ಮತ್ತು ಗುಜರಾತ್ ಸರ್ಕಾರಗಳ ಪ್ರೋತ್ಸಾಹದಿಂದಾಗಿ ಸ್ಕೂಟರ್ ಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ ಎನ್ನಲಾಗಿದೆ. ಓಕಿನಾವಾ ಆಟೋಟೆಕ್ ಪ್ರಸ್ತುತ ಗುಜರಾತಿನಲ್ಲಿ ಓಕಿನಾವಾ ರೆಡ್ಜ್ +, ಓಕಿನಾವಾ ಪ್ರೈಸ್ ಪ್ರೊ, ಓಕಿನಾವಾ ಐ ಪ್ರೈಸ್ + ಸ್ಕೂಟರ್ ಗಳನ್ನು ಮಾರಾಟ ಮಾಡುತ್ತದೆ. ಈ ಮೂರು ಸ್ಕೂಟರ್ ಗಳ ಬೆಲೆಯಲ್ಲಿ ಕೂಡಾ ಕಡಿತವನ್ನು ಮಾಡಲಾಗಿದೆ. ಬೆಲೆ ಇಳಿಕೆಯ ನಂತರ ಈ ಸ್ಕೂಟರ್ ಗಳ ಮೊದಲ ಬೆಲೆಗೂ ಹಾಗೂ ಈಗಿನ ಬೆಲೆ ಗೂ ಅಜಗಜಾಂತರ ವ್ಯತ್ಯಾಸವನ್ನು ನಾವು ಗಮನಿಸಬಹುದಾಗಿದೆ. ಹಾಗಿದ್ದರೆ ಯಾವ ಯಾವ ಸ್ಕೂಟರ್ ಗಳ ಬೆಲೆ ಈಗ ಎಷ್ಟಾಗಿದೆ ಎನ್ನುವುದನ್ನು ಒಮ್ಮೆ ತಿಳಿಯೋಣ.
ಬೆಲೆ ಇಳಿಕೆಯ ನಂತರ ಇದೀಗ ಒಕಿನಾವಾ ಪ್ರೈಸ್ ಪ್ರೊ ಸ್ಕೂಟರ್ ಅನ್ನು ಈಗ 84,795 ರೂ. ಗಳ ಬದಲು 57,848 ರೂಗಳಿಗೆ ಖರೀದಿಸಬಹುದಾಗಿದೆ. ಅದೇ ವೇಳೆಯಲ್ಲಿ, ಒಕಿನಾವಾ ರಿಡ್ಜ್ + ಸ್ಕೂಟರ್ 24,609 ರೂಪಾಯಿಗಳವರೆಗೆ ಅಗ್ಗವಾಗಿದೆ. ಈಗ ಇದನ್ನು 44,391 ರೂಗಳಿಗೆ ಖರೀದಿಸಬಹುದಾಗಿದೆ. ಒಕಿನಾವಾ ಐ ಪ್ರೈಸ್ + ಸ್ಕೂಟರ್ ಮೇಲೆ ಬೇರೆಲ್ಲವುಗಳಿಂತ ದೊಡ್ಡ ಬೆಲೆ ಕಡಿತವನ್ನು ಕಂಡಿದೆ ಎಂದು ಹೇಳಬಹುದಾಗಿದೆ. ಏಕೆಂದರೆ ನೀವು ಈಗ ಈ ಸ್ಕೂಟರ್ ಅನ್ನು 79,708 ರೂಗಳಿಗೆ ಖರೀದಿಸಬಹುದು. ಬೆಲೆ ಇಳಿಕೆಯ ಮೊದಲು ಈ ಸ್ಕೂಟರ್ ನ ಬೆಲೆ 1,17,600 ರೂ. ಗಳಾಗಿತ್ತು.
ಕಂಪನಿಯ ಸ್ಕೂಟರ್ ಗಳಲ್ಲಿ ಒಕಿನಾವಾ ಐಪ್ರೈಸ್ + ಹೆಚ್ಚು ಮಾರಾಟವಾದಂತಹ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು 160 ರಿಂದ 180 ಕಿ.ಮೀ ರೇಂಜ ಅನ್ನು ಹೊಂದಿದೆ. ಅಂದರೆ, ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನೀವು ಒಮ್ಮೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ, ಸುಮಾರು 160-180 ಕಿಲೋಮೀಟರ್ ನಿಲ್ಲದೇ ಚಲಿಸುವ ಸಾಮರ್ಥ್ಯವನ್ನು ಈ ಸ್ಕೂಟರ್ ಹೊಂದಿದೆ. ಇನ್ನು ಚಾರ್ಜಿಂಗ್ ವಿಚಾರವಾಗಿ ಹೇಳುವುದಾದರೆ ಬಗ್ಗೆ ಈ ಎಲೆಕ್ಟ್ರಿಕ್ ಸ್ಕೂಟರ್ 0 ರಿಂದ 100% ಚಾರ್ಜ್ ಆಗಲು ಬೇಕಾಗುವ ಅವಧಿ ಸುಮಾರು 2-3 ಗಂಟೆಗಳ ಕಾಲವಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಕಂಪನಿಯು 100% ಸ್ಥಾನಿಕರಣ ವನ್ನು ಸಾಧಿಸುವ ನಿಟ್ಟಿನಲ್ಲಿ ಬಹಳ ಶ್ರದ್ಧೆಯಿಂದ ಕೆಲಸವನ್ನು ಮಾಡುತ್ತಿದೆ ಎನ್ನಲಾಗಿದ್ದು, ಈ ವರ್ಷದ ಮೇ ಅಂತ್ಯದ ವೇಳೆಗೆ ಕಂಪನಿಯು ಗೊತ್ತು 90,000 ಸ್ಕೂಟರ್ ಗಳನ್ನು ಮಾರಾಟ ಮಾಡಿದೆ ಎನ್ನುವ ವಿಚಾರವನ್ನು ಓಕಿನಾವಾ ಆಟೋಟೆಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸ್ಥಾಪಕರು ಆಗಿರುವಂತಹ ಜಿತೆಂದ್ರ ಶರ್ಮ ಅವರು ತಿಳಿಸಿದ್ದಾರೆ. ಇನ್ನು ಪ್ರಸ್ತುತ ಈ ಕಂಪನಿಯು ಗುಜರಾತಿನಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸುವ ತಯಾರಿಯನ್ನು ನಡೆಸುತ್ತಿದೆ ಎನ್ನಲಾಗಿದೆ.