1440 ಕೋಟಿ ಸಂಪತ್ತಿನೊಂದಿಗೆ 300 ವರ್ಷಗಳ ಹಿಂದೆ ಸಾಗರದಲ್ಲಿ ಮುಳುಗಿದ ಹಡಗು: ಇಂದಿಗೂ ಅದರ ಹುಡುಕಾಟ ನಿಂತಿಲ್ಲ!

ಸುಮಾರು 300 ವರ್ಷಗಳ ಹಿಂದೆ ಸ್ಟೈನ್ ದೇಶದ ಹಡಗು ಸ್ಯಾನ್ ಜೋಸ್ ಭಗ ಭಗನೆಂದು ಉರಿದು ಹೋಗಿತ್ತು. ಈ ಹಡಗಿನ ನಾವಿಕರು ಸುಮಾರು ಗಂಟೆಗಳ ಕಾಲ ಬ್ರಿಟನ್ನಿನ ಸೈನಿಕರ ಜೊತೆ ಹೋರಾಟವನ್ನು ಮಾಡುತ್ತಿದ್ದರು. ಇದರ ಹಿಂದಿನ ಪ್ರಮಖ ಕಾರಣವೇನೆಂದರೆ ಈ ಹಡಗಿನಲ್ಲಿ ಇದ್ದಂತಹ ಅಪಾರವಾದ ಸಂಪತ್ತನ್ನು ಬ್ರಿಟನ್ ತನ್ನ ವಶಕ್ಕೆ ಪಡೆದುಕೊಳ್ಳಲು ಬಯಸಿತ್ತು. ಆದರೆ ಅಂದು ನಡೆದಂತಹ ಹೋರಾಟದ ಕಾರಣದಿಂದ ಹಡಗು ನಷ್ಟವಾಯಿತು, ಅದರ ಜೊತೆಗೆ 600 ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು ಮಾತ್ರವಲ್ಲದೇ ಸುಮಾರು 14 ಬಿಲಿಯನ್ ಪೌಂಡ್ ಮೊತ್ತದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಜಲಸಮಾಧಿ ಆಯಿತು ಎನ್ನಲಾಗಿದೆ.

ಡೈಲಿ ಎಕ್ಸ್ಪ್ರೆಸ್ ವರದಿಯ ಪ್ರಕಾರ ಹಿಸ್ಟರಿ ಚಾನೆಲ್ ಸಾಕ್ಷ್ಯಚಿತ್ರ ಒಂದರಲ್ಲಿ ಗ್ಲೋಬಲ್ ಎಕ್ಸ್ಪ್ಲೋರೇಶನ್ ನಲ್ಲಿ ಪ್ರೆಶರ್ ಹಂಟರ್ ಎನಿಸಿಕೊಂಡಿರುವ ಜೆರ್ರಿ ಲೀ, ಜೋಸ್ ಪನಾಮಾ ದಲ್ಲಿತ್ತು. ಅಲ್ಲಿ ದಕ್ಷಿಣ ಅಮೇರಿಕಾದ ಪಶ್ಚಿಮ ಕರಾವಳಿಯಲ್ಲಿ ಚಿನ್ನವನ್ನು ಲೂಟಿ ಮಾಡಲಾಗುತ್ತಿತ್ತು. ದೀರ್ಘಕಾಲ ಅಲ್ಲಿಯೇ ಉಳಿದಿದ್ದರಿಂದ ಅಲ್ಲಿನ ಇತರೆ ಹಡಗುಗಳಲ್ಲಿ ಕೂಡಾ ಚಿನ್ನವೂ ತುಂಬಿತ್ತು. ನಂತರ ಎಲ್ಲಾ ಹಡಗುಗಳು ಒಟ್ಟಾಗಿ ಕೊಲಂಬಿಯಾ ಕಡೆಗೆ ಹೊರಟಿದ್ದವು ಎನ್ನಲಾಗಿದ್ದು, ಸ್ಯಾನ್ ಜೋಸ್ ನನ್ನು ಪತ್ತೆಹಚ್ಚಿದ್ದ ಓಶನೋ ಗ್ರಾಫಿಕ್ ಇಂಜಿನಿಯರ್ ಎನಿಸಿಕೊಂಡಿದ್ದ ಜೆಫ್ ಕೇಲಿ ಪ್ರಕಾರ ಹಡಗುಗಳು‌ ಮಾಯಾ ಸಾಮ್ರಾಜ್ಯದಿಂದ ಸಾಕಷ್ಟು ಪ್ರಮಾಣದ ಚಿನ್ನ, ಬೆಳ್ಳಿ ಮತ್ತು ಪಚ್ಚೆಯನ್ನು ಹೊತ್ತು ತರುತ್ತಿದ್ದವು ಎನ್ನಲಾಗಿದೆ.

ಶತಮಾನಗಳವರೆಗೆ ಸಾಗರ ಗರ್ಭ ಸೇರಿದ್ದ ಸಂಪತ್ತಿನ ಈ ವಿಷಯವೂ ಸಾಗರದಲ್ಲಿ ಕಳೆದುಹೋಗಿತ್ತು. ಆದರೆ 2015‌ರಲ್ಲಿ ಕೊಲಂಬಿಯಾ ಸರ್ಕಾರವು ಈ ಅಪಾರವಾದ ಸಂಪತ್ತನ್ನು ಹೊತ್ತ ಹಡುಗು ಮುಳುಗಿದ ಸಾಗರದ ಶಿಲಾ ಖಂಡರಾಶಿಗಳನ್ನು ಹುಡುಕುವ ಕಾರ್ಯಭಾರವನ್ನು ಸಾಗರ ಪುರಾತತ್ತ್ವಜ್ಞರು ಮತ್ತು ವುಡ್ಸ್ ಹೋಲ್ ಓಡೋವಿಕ್ವಿಕ್ ಇನ್ಸ್ಟಿಟ್ಯೂಷನ್ಗೆ ವಹಿಸಿತು. (ವಿಶೇಷವೆಂದರೆ ಇದೇ ಸಂಸ್ಥೆಯು ಟೈಟಾನಿಕ್ ಹಡಗಿನ ಮುಳುಗಿದ್ದ ಶಿಲಾ‌ಖಂಡ ರಾಶಿಯನ್ನು ಹುಡುಕುವ ಕೆಲಸವನ್ನು ಮಾಡಿತ್ತು) ಸಂಸ್ಥೆಯು ತನಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ವರ್ಷದ ಕೊನೆಯ ವೇಳೆಗೆ ತನ್ನ ಕಾರ್ಯವನ್ನು ಸಂಪೂರ್ಣಗೊಳಿಸಿತ್ತು.

ಆದರೆ ಇದರ ನಂತರ ಈಗ ಉದ್ಙವಿಸಿರುಬ ಪ್ರಮುಖ ಪ್ರಶ್ನೆ ಏನೆಂದರೆ ಸಮುದ್ರದಲ್ಲಿ ಮುಳುಗಿ ಹೋಗಿದೆ ಎನ್ನಲಾಗಿರುವ ಆ ಅಪಾರವಾದ ಸಂಪತ್ತಿನ ಅಸಲಿ ಮಾಲೀಕರು ಯಾರು? ಎನ್ನುವುದು. ಈ ವಿಷಯದಲ್ಲಿ ಸ್ಪೇನ್ ದೇಶವು ಮುಳುಗಿದ ಹಡಗು ತನ್ನ ದೇಶಕ್ಕೆ ಸೇರಿದ್ದು ಎಂದು ತನ್ನ ವಾದವನ್ನು ಮುಂದಿಟ್ಟರೆ, ಕೊಲಂಬಿಯಾ ಅದು ಮುಳುಗಿರುವುದು ತನ್ನ ಪ್ರದೇಶದಲ್ಲಿ ಎಂದು ತನ್ನ ವಾದವನ್ನು ಕೂಡ ಮುಂದಿಟ್ಟಿದೆ. ಇದೇ ವೇಳೆ ಮುಳುಗಿರುವ ಸಂಪತ್ತು ಇಂಕಾ ಸಾಮ್ರಾಜ್ಯಕ್ಕೆ ಸೇರಿದ್ದು ಎನ್ನುವುದಾಗಿ ಮಾನವಶಾಸ್ತ್ರ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾಗಿರುವಂತಹ ಟೋಕ್ ಥಾಂಪ್ಸನ್ ಅವರು ಹೇಳಿದ್ದಾರೆ.

ಇದೇ ವೇಳೆ ಟ್ರೆಶರ್ ಹಂಟರ್ ಜಾನ್ ಮೆಟ್ರಾ ಹೇಳುವಂತೆ, ಸಂಪತ್ತು ಎಲ್ಲಿ ಮುಳುಗಿದೆ ಎನ್ನಲಾಗಿದೆಯೋ ಅದು ಕೊಲಂಬಿಯಾಗೆ ಸಂಬಂಧ ಪಟ್ಟಿರುವ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದರಿಂದ ಅದು ಕೊಲಂಬಿಯಾ ದೇಶಕ್ಕೆ ಸೇರಬೇಕು ಎನ್ನುವ ವಾದಕ್ಕೆ ಬೆಂಬಲ ನೀಡಿದ್ದು, ಪ್ರಸ್ತುತ ಈ ಸಮಸ್ಯೆಗೆ ಬಂದು ಪರಿಹಾರವಂತೂ ಸಿಕ್ಕಿಲ್ಲ. ಕುತೂಹಲಕಾರಿ ಸಂಗತಿಯೆಂದರೆ ನಿಧಿ ಇದೆ ಎನ್ನುವ ಸ್ಥಳವೇನೋ ಪತ್ತೆಯಾಗಿದೆಯೇ ಹೊರತು, ಅಲ್ಲಿ ಮುಳುಗಿದೆ ಎನ್ನಲಾದ ಅಪಾರವಾದ ಚಿನ್ನ ಹಾಗೂ ಬೆಳ್ಳಿಯ ಸಂಪತ್ತು ದೊರೆತಿಲ್ಲ. ಅಲ್ಲದೇ ಅನೇಕರು ಕಾಲಾನುಕ್ರಮದಲ್ಲಿ ಸಮುದ್ರದ ಉಪ್ಪು ನೀರಿನಲ್ಲಿ ಚಿನ್ನ , ಬೆಳ್ಳಿ ಹಾಗೂ ಇತರೆ ಆಭರಣಗಳು ಕರಗಿ ಹೋಗಿರಬಹುದು, ಎರಡು ದೇಶಗಳ ಮಧ್ಯದಲ್ಲಿ ಜಗಳದ ನಂತರ ಎರಡು ದೇಶಕ್ಕೆ ಏನು ಸಿಗದೇ ಹೋಗಬಹುದು ಎನ್ನುವ ಮಾತುಗಳನ್ನು ಸಹಾ ಆಡಿದ್ದಾರೆ.