ಐ ಯಾಮ್ ಸಾರಿ ಅಮ್ಮಾ, ಗೇಮ್ ನಲ್ಲಿ 40 ಸಾವಿರ ಸೋತೆ, ನೀವು ಅಳಬೇಡಿ ಎಂದು ಬರೆದು ನೇ ಣಿ ಗೆ ಶರಣಾದ 13 ರ ಬಾಲಕ

ಪ್ರತಿಯೊಬ್ಬ ತಂದೆ ತಾಯಿಯೂ ತಮ್ಮ ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗಬೇಕೆಂದು ಆಸೆ ಪಡುತ್ತಾರೆ. ಮಕ್ಕಳು ಹೆಚ್ಚು ಸಮಯವನ್ನು ಓದು ಬರಹದಲ್ಲಿ ಕಳೆಯಲಿ ಎಂದು ಇಚ್ಛಿಸುತ್ತಾರೆ. ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡದೆ ಕಲಿಕೆಯ ವಿಚಾರದಲ್ಲಿ ಮಕ್ಕಳು ಗಮನಹರಿಸಿದರೆ ಸಾಕೆಂದು ಬಯಸುತ್ತಾರೆ. ಆದರೆ ಮಕ್ಕಳಿಗೆ ಪಾಠ ಹಾಗೂ ಕಲಿಕೆಯ ಜೊತೆಗೆ ಆಟವೂ ಬಹಳ ಮುಖ್ಯವಾಗಿರುತ್ತದೆ. ಅವರ ಸಮಗ್ರ ಬೆಳವಣಿಗೆಗೆ ಆಟಗಳು ಅತ್ಯಾವಶ್ಯಕ. ಆದರೆ ಇತ್ತೀಚಿನ ದಿನಗಳಲ್ಲಿ ಅಂದರೆ ಸ್ಮಾರ್ಟ್ ಫೋನ್ ಮತ್ತು ಸೋಷಿಯಲ್ ಮೀಡಿಯಾಗಳ ಕಾಲದಲ್ಲಿ ಮಕ್ಕಳು ಹೊರಾಂಗಣ ಆಟಗಳನ್ನು ಆಡುವುದಕ್ಕೆ ಅಷ್ಟಾಗಿ ಆಸಕ್ತಿಯನ್ನು ತೋರುತ್ತಿಲ್ಲ. ಸದಾ ಸ್ಮಾರ್ಟ್ ಫೋನ್ ನಲ್ಲಿ ಹೆಚ್ಚು ಸಮಯವನ್ನು ಕಳೆಯುವ ಮಕ್ಕಳಿಗೆ ಸ್ಮಾರ್ಟ್ ಫೋನುಗಳಲ್ಲಿ ಗೇಮ್ ಗಳನ್ನು ಆಡುವುದು ಬಹಳ ಇಷ್ಟ. ಆದ್ದರಿಂದಲೇ ಬಹಳಷ್ಟು ಸಮಯಗಳಲ್ಲಿ ತಂದೆ-ತಾಯಿಗೆ ತಿಳಿಯದಂತೆ ಮೊಬೈಲ್ ನಲ್ಲಿ ಆಟವನ್ನು ಆಡುತ್ತಾ ಕುಳಿತಿರುತ್ತಾರೆ.

ಮೊಬೈಲ್ ನಲ್ಲಿ ಆಟಗಳನ್ನು ಆಡುವ ಇಂತಹದೇ ಒಂದು ಗೀಳು ಮಧ್ಯಪ್ರದೇಶದ ಛತ್ತರ್ ಪುರ್ ನ 13 ವರ್ಷದ ಬಾಲಕ ಕೃಷ್ಣನಿಗೆ ಇತ್ತು. ಈ ಹುಡುಗ ಲಾಕ್ ಡೌನ್ ಸಮಯದಲ್ಲಿ ತನ್ನ ತಾಯಿಯ ಮೊಬೈಲ್ ಫೋನಿನ ಮೂಲಕ ಆನ್ ಲೈನ್ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದ. ಅಲ್ಲದೇ ತನ್ನ ತಾಯಿಗೆ ತಿಳಿಯದಂತೆ ಗೇಮ್ ಗಳನ್ನು ಕೂಡ ಆಡುತ್ತಿದ್ದ. ಗೇಮ್ ಗಳನ್ನು ಆಡುವುದು ಎಂದರೆ ಅವನಿಗೆ ಒಂದು ಚಟವಾಗಿ ಹೋಗಿತ್ತು. ಕೃಷ್ಣನಿಗೆ ಫ್ರೀ ಫೈಯರ್ ಗೇಮ್ ಆಡುವುದು ಬಹಳ ಇಷ್ಟ. ಆದರೆ ಹಾಗೆ ಗೇಮ್ ಆಡುತ್ತಲೇ ಆತ ಆ ಗೇಮ್ ನಲ್ಲಿ ಹಣ ಹೂಡಲು ಪ್ರಾರಂಭಿಸಿದ್ದಾನೆ. ಹೀಗೆ ಆತ ಗೇಮ್ ನಲ್ಲಿ ಬರೋಬ್ಬರಿ ನಲವತ್ತು ಸಾವಿರ ರೂಪಾಯಿಗಳನ್ನು ಸೋತಿದ್ದಾನೆ. ಆತ ಹೂಡಿದ ಅಷ್ಟು ದೊಡ್ಡ ಮೊತ್ತ ಆತನ ತಾಯಿಯ ಬ್ಯಾಂಕ್ ಖಾತೆಯಿಂದ ಕಡಿತಗೊಂಡಿತ್ತು.

ಕೃಷ್ಣ ಆಟಕ್ಕಾಗಿ ಹಣ ಕಳೆದುಕೊಂಡ ಮೇಲೆ ಹುಡುಗನ ತಾಯಿ ಪ್ರೀತಿ ಪಾಂಡೆ ಅವರಿಗೆ ಬ್ಯಾಂಕ್ ಕಡೆಯಿಂದ ಒಂದು ಸಂದೇಶ ಹೋಗಿದೆ. ಅದನ್ನು ನೋಡಿದ ಆಕೆ ಮಗನಿಗೆ ಕರೆಮಾಡಿ ವಿಷಯವನ್ನು ಕೇಳಿದಾಗ, ಕೃಷ್ಣ ಫ್ರೀ ಫೈಯರ್ ಗೇಮ್ ಆಡುವಾಗ ಆಟದಲ್ಲಿ ಸೋತ ಕಾರಣ ಹಣ ಕಡಿತ ಗೊಂಡಿದೆ ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿ ಪ್ರೀತಿ ಬಹಳ ಕೋಪಗೊಂಡು ಮಗನನ್ನು ಚೆನ್ನಾಗಿ ಬೈದಿದ್ದಾರೆ. ಆಕೆಯ ಬೈಗುಳಗಳಿಂದ ಖಿನ್ನತೆಗೆ ಒಳಗಾದ ಕೃಷ್ಣ ಈ ಚಿಕ್ಕ ವಯಸ್ಸಿನಲ್ಲಿ ನೇ ಣಿ ಗೆ ಶರಣಾಗಿದ್ದಾನೆ. ಆದರೆ ಆತ ಸಾಯುವ ಮುನ್ನ ಒಂದು ಡೆ ತ್ ನೋಟ್ ಬರೆದಿದ್ದು ಅದನ್ನು ಓದಿದವರ ಕಣ್ಣಲ್ಲಿ ಹನಿಗೂಡಿದೆ.

ವಿವೇಕ್ ಪಾಂಡೆ ಮತ್ತು ಪ್ರೀತಿ ಪಾಂಡೆ ಎನ್ನುವವರ ಮಗ ಕೃಷ್ಣ. ಆತನ ತಂದೆ ಪ್ಯಾಥಾಲಜಿ ಆಪರೇಟರ್ ಹಾಗೂ ತಾಯಿ ಜಿಲ್ಲಾಸ್ಪತ್ರೆಯಲ್ಲಿ ಕೆಲಸವನ್ನು ಮಾಡುತ್ತಾರೆ. ಕೃಷ್ಣ ಆರನೇ ತರಗತಿಯಲ್ಲಿ ಓದುತ್ತಿದ್ದನು. ಆತನಿಗೆ ಒಬ್ಬ ಅಕ್ಕ ಇದ್ದಾರೆ. ಕಳೆದ ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಕೃಷ್ಣ ಹಾಗೂ ಆತನ ಸಹೋದರಿ ಮಾತ್ರವೇ ಇದ್ದರು. ತಂದೆ ತಾಯಿ ಇಬ್ಬರೂ ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ಹೋಗಿದ್ದರು. ಈ ವೇಳೆಯಲ್ಲಿ ಕೃಷ್ಣ ಅವರ ತಾಯಿಯ ಮೊಬೈಲ್ ಗೆ ಅವರ ಬ್ಯಾಂಕ್ ಖಾತೆಯಿಂದ ಸಾವಿರದ ಐನೂರು ರೂಪಾಯಿಗಳ ಮೊತ್ತದ ಹಣ ಕಡಿತವಾಗಿರುವ ಬಗ್ಗೆ ಬ್ಯಾಂಕ್ ನ ಕಡೆಯಿಂದ ಸಂದೇಶವೊಂದು ಬಂದಿದೆ.

ಸಂದೇಶವನ್ನು ನೋಡಿದ ಪ್ರೀತಿ ಅವರು ಮಗನಿಗೆ ಕರೆ ಮಾಡಿ ವಿಷಯವನ್ನು ಕೇಳಿದಾಗ ಕೃಷ್ಣ ತಾನು ಮೊಬೈಲ್ ಗೇಮ್ ಆಡುವಾಗ ಸೋತ ಕಾರಣ ಹಣ ಹಣ ಕಳೆದುಕೊಂಡ ವಿಚಾರ ಹೇಳಿದಾಗ, ಆ ಮಾತನ್ನು ಕೇಳಿದ ತಾಯಿ ಕೋಪದಿಂದ ಒಂದಷ್ಟು ಬೈದಿದ್ದಾರೆ. ತಾಯಿಯಿಂದ ಬೈಗುಳ ಕೇಳಿದ ಮೇಲೆ ಕೃಷ್ಣ ಕೋಣೆಗೆ ಹೋಗಿ ಬಾಗಿಲನ್ನು ಹಾಕಿಕೊಂಡಿದ್ದಾನೆ. ಸ್ವಲ್ಪ ಹೊತ್ತಿನ ನಂತರ ಕೃಷ್ಣನ ಅಕ್ಕ ಕೋಣೆಯ ಬಾಗಿಲನ್ನು ತಟ್ಟಿದಾಗ ಆತ ಬಾಗಿಲು ತೆರೆದಿಲ್ಲ. ಕೂಡಲೇ ಆಕೆ ತಂದೆ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಕೃಷ್ಣನ ತಂದೆ ತಾಯಿ ಮನೆಗೆ ಬಂದು ನೋಡಿದಾಗ, ಮಗನ ಕೋಣೆಯಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದು ಕಂಡು, ಕೋಣೆಯ ಬಾಗಿಲನ್ನು ಮುರಿದು ಒಳಗೆ ಹೋದಾಗ ಎದುರಿಗೆ ಕಂಡ ದೃಶ್ಯ ಅವರಿಗೆ ದೊಡ್ಡ ಆಘಾತವನ್ನೇ ನೀಡಿದೆ.

13 ವರ್ಷದ ಹುಡುಗ ನೇ ಣು ಹಗ್ಗಕ್ಕೆ ಕೊರಳು ಕೊಟ್ಟು ಪ್ರಾಣ ಕಳೆದುಕೊಂಡಿರುವ ದೃಶ್ಯ ಬರ ಸಿಡಿಲಿನಂತೆ ಪೋಷಕರ ಮೇಲೆ ಎರಗಿದೆ. ಕೃಷ್ಣ ಒಂದು ಡೆತ್ ನೋಟ್ ಕೂಡಾ ಬರೆದಿದ್ದು, ಅದರಲ್ಲಿ ತಾನು ಪ್ರೀ ಫೈಯರ್ ಗೇಮ್ ನಲ್ಲಿ ನಲವತ್ತು ಸಾವಿರ ರೂಪಾಯಿಗಳನ್ನು ತೊಡಗಿಸಿ, ಸೋತು ಹೋಗಿದ್ದೇನೆ. ಅದೇ ಡಿಪ್ರೆಶನ್ ನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು, ಐಯಾಮ್ ಸಾರಿ ಅಮ್ಮ, ಡೋಂಟ್ ಕ್ರೈ ಎಂದು ಬರೆದಿದ್ದಾನೆ. ಕೃಷ್ಣ ಬರೆದ ಆ ಕೊನೆಯ ಪತ್ರ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ, ಅದನ್ನು ನೋಡಿ ಜನ ಭಾವುಕರಾಗಿದ್ದಾರೆ.