10 ವರ್ಷದ ಬಾಲಕಿಯನ್ನು ತೋಳದ ಧಾಳಿಯಿಂದ ತಪ್ಪಿಸಲು ತೋಳದ ಮೇಲೆ ತಿರುಗಿ ಬಿದ್ದ ಸಾಕು ನಾಯಿ! ವೈರಲ್ ಆಯ್ತು ವಿಡಿಯೋ
ಕೆಲವೊಮ್ಮೆ ದುರ್ಬಲರು ಕೂಡಾ ಸಬಲರ ಮೇಲೆ ತಮ್ಮ ಸಾಮರ್ಥ್ಯವೇನು ಎನ್ನುವುದನ್ನು ಸಾಬೀತು ಮಾಡಿ ತೋರಿಸುವಂತಹ ಘಟನೆಗಳು ನಡೆಯುತ್ತದೆ. ಪ್ರಾಣಿ ವರ್ಗದಲ್ಲಿ ನಿಯತ್ತಿಗೆ ಮತ್ತೊಂದು ಹೆಸರಾಗಿರುವ ಪ್ರಾಣಿ ಎಂದರೆ ಅದು ನಾಯಿ. ನಾಯಿಗಳು ತನ್ನನ್ನು ಸಾಕಿದ ಮಾಲೀಕರಿಗಾಗಿ ಅವರ ರಕ್ಷಣೆಗಾಗಿ ಏನನ್ನು ಬೇಕಾದರೂ ಮಾಡಬಲ್ಲುದು. ಅಂತಹ ಕೆಲವು ವಿಚಾರಗಳನ್ನು ಕೇಳಿದಾಗ ಅನೇಕರಿಗೆ ಗಾಬರಿ ಹಾಗೂ ಅಚ್ಚರಿ ಎರಡೂ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಂತೂ ನಾಯಿ ತಮ್ಮ ಮಾಲೀಕರನ್ನು ಉಳಿಸುವ ಸಲುವಾಗಿ ತಮ್ಮ ಪ್ರಾಣವನ್ನು ಪಣಕ್ಕೆ ಇಡಲು ಹಿಂಜರಿಯುವುದಿಲ್ಲ. ಇಂತಹದೇ ಒಂದು ಸನ್ನಿವೇಶದಲ್ಲಿ ನಾಯಿಯೊಂದು ಹತ್ತು ವರ್ಷದ ಬಾಲಕಿಯೊಬ್ಬಳ ಮೇಲೆ ತೋಳವೊಂದು ಆಕ್ರಮಣ ಮಾಡಲು ಬಂದಾಗ ಆಕೆಯ ರಕ್ಷಣೆಗೆ ಧಾವಿಸಿದ ಘಟನೆ ನಡೆದಿದೆ.

ಈ ಘಟನೆ ನಡೆದಿರುವುದು ಕೆನಡಾ ದೇಶದ ಟೊರಾಂಟೊ ದ ಸ್ಕಾರ್ಬರೋ ಎನ್ನುವಲ್ಲಿ. ಇನ್ನು ಈ ಘಟನೆಯ ವಿವರಗಳಿಗೆ ಹೋಗುವುದಾದರೆ ಕ್ವಾನ್ ಎನ್ನುವ ಹುಡುಗಿ ತಾನು ಸಾಕಿದ ನಾಯಿಯನ್ನು ಕರೆದುಕೊಂಡು ಮಾರ್ನಿಂಗ್ ವಾಕ್ ಮಾಡಲು ಹೋಗಿದ್ದಳು. ಅದೇ ಸಂದರ್ಭದಲ್ಲಿ ಅನಿರೀಕ್ಷಿತ ಎನ್ನುವಂತೆ ಅಲ್ಲೊಂದು ಕೊಯೆಟೆ ( ತೋಳದ ಜಾತಿಗೆ ಸೇರಿದ ಪ್ರಾಣಿ) ಬಂದಿದೆ. ಅದು ಕ್ವಾನ್ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದೆ. ಇದನ್ನು ನೋಡಿದ ಆಕೆಯ ಸಾಕು ನಾಯಿ ಮೈಸಿ ಕೂಡಲೇ ಆ ಪ್ರಾಣಿಯ ಮೇಲೆ ತಾನು ದಾಳಿಯನ್ನು ಮಾಡಲು ಮುಂದಾಗಿ, ತೋಳದ ಜೊತೆಗೆ ಅದು ಸಂಘರ್ಷಕ್ಕೆ ಇಳಿದಿದೆ. ಈ ಇಡೀ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋದಲ್ಲಿ ಕಿರುಚಿಕೊಂಡು ಓಡುತ್ತಿರುವ ಬಾಲಕಿಯನ್ನು ನೋಡಬಹುದಾಗಿದೆ.

ನಾಯಿ ತನಗಿಂತ ಗಾತ್ರದಲ್ಲಿ ದೊಡ್ಡದಾದ ಹಾಗೂ ಶಕ್ತಿಯಲ್ಲೂ ತನಗಿಂತ ಹೆಚ್ಚು ಸಾಮರ್ಥ್ಯ ಉಳ್ಳಂತಹ ತೋಳದ ಜೊತೆಗೆ ಹೋರಾಟಕ್ಕಿಳಿದಿದೆ. ಈ ವೇಳೆಯಲ್ಲಿ ತೋಳದ ದೊಡ್ಡ ದೊಡ್ಡ ಹಲ್ಲುಗಳು ನಾಯಿಯ ದೇಹದ ಮೇಲೆ ಆಘಾತವನ್ನು ಉಂಟು ಮಾಡಿದೆ. ತೋಳದ ಕ್ರೂ ರ ವಾದ ಆಕ್ರಮಣ ಮಾಡಿದರೂ ಸಹಾ ನಾಯಿ ಮಾತ್ರ ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪದೇ, ಅದು ತಿರುಗಿ ಬಿದ್ದಿದೆ. ವೀಡಿಯೋ ನೋಡಿದಾಗ ನಾಯಿಯ ಮೇಲೆ ತೋಳ ಹಲವು ಬಾರಿ ಆಕ್ರಮಣ ಮಾಡುವುದು ಕಾಣುತ್ತದೆ. ಆದರೆ ನಾಯಿ ಮಾತ್ರ ಬೊಗಳುವುದು ನಿಲ್ಲಿಸಿಲ್ಲ. ಆ ಹುಡುಗಿ ಸಹಾಯಕ್ಕಾಗಿ ಅರಚುತ್ತಾ ಇರುತ್ತಾಳೆ. ನಾಯಿ ಮಾತ್ರ ತೋಳವು ಅಲ್ಲಿಂದ ಹೋಗುವವರೆಗೂ ಬೊಗಳುತ್ತಲೇ ಇರುತ್ತದೆ.
ವಿಡಿಯೋ ನೋಡಿ
ಸ್ಥಳೀಯ ಮಾಧ್ಯಮವೊಂದರಲ್ಲಿ ಮಾತನಾಡುತ್ತಾ ಕ್ವಾನಾ ಹೆಸರಿನ ಆ ಹುಡುಗಿಯು, ನಾನು ಓಡುತ್ತಿದ್ದೆ, ಸಹಾಯಕ್ಕಾಗಿ ಕಿರುಚಿದೆ, ಆದರೆ ಯಾರಿಗೂ ನನ್ನ ಧ್ವನಿ ಕೇಳಲಿಲ್ಲ. ಅದೇ ವೇಳೆ ನಾನು ನಾಯಿಯನ್ನು ಕಟ್ಟಿದ್ದ ಹಗ್ಗವನ್ನು ಬಿಟ್ಟು ಬಿಟ್ಟೆ, ಆ ಕ್ಷಣದಲ್ಲಿ ನನಗೆ ಬಹಳ ಭಯವಾಗಿತ್ತು. ಆದರೆ ನಾನು ಅರಚುತ್ತಿದ್ದ ಆ ಸಮಯದಲ್ಲಿ ಕೊನೆಗೆ ಅಲ್ಲೇ ಹತ್ತಿರದ ಮನೆಯವರೊಬ್ಬರು ನನ್ನ ಧ್ವನಿಯನ್ನು ಕೇಳಿಸಿಕೊಂಡು ಮನೆಯಿಂದ ಹೊರಗಡೆ ಬಂದರು. ಅವರು ಅಲ್ಲಿದ್ದ ಆ ಭ ಯಾ ನಕ ತೋಳವನ್ನು ಓಡಿಸಲು ಸಹಾಯವನ್ನು ಮಾಡಿದರು ಎಂದು ಹೇಳಿದ್ದಾಳೆ.

ಇದಾದ ನಂತರ ತೋಳದ ಧಾ ಳಿ ಗೆ ಸಿಲುಕಿದ ನಾಯಿ ತೀ ವ್ರವಾಗಿ ಗಾಯಗೊಂಡಿತ್ತು. ಕೂಡಲೇ ಅದನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿ ನಾಯಿಯನ್ನು ತುರ್ತು ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ನಾಯಿ ಮಾಡಿದ ಸಾಹಸದ ವೀಡಿಯೋ ವೈರಲ್ ಆದ ಮೇಲೆ ಜನರು ನಾಯಿಗೆ ಬಹಳ ಮೆಚ್ಚುಗೆಗಳನ್ನು ಸೂಚಿಸಿದ್ದಾರೆ. ಅದು ಮಾತ್ರವೇ ಅಲ್ಲದೇ ನಾಯಿ ಬೇಗ ಗುಣಮುಖ ಆಗಲಿ ಎಂದು ಆಶಿಸಿದ್ದರು. ನಾಯಿ ಚಿಕಿತ್ಸೆಯ ನಂತರ ಚೇತರಿಸಿಕೊಂಡ ಮೇಲೆ ಅದನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಒಟ್ಟಾರೆ ನಾಯಿ ಮಾಡಿದ ಸಾಹಸವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ.
