ಅಮೆರಿಕನ್ನರಿಗೆ ಮುಂಬೈನ ಜನಪ್ರಿಯ ‘ವಡಾಪಾವ್’ ತಿನ್ನಿಸುತ್ತಿದ್ದಾರೆ ಪ್ರಿಯಾಂಕ ಚೋಪ್ರಾ: ಬೆಲೆ ಕೇಳಿದ್ರೆ ಹಸಿವು ಸಾಯೋದು ಖಚಿತ!

ಪ್ರಿಯಾಂಕಾ ಮದುವೆಯಾದಾಗಿಂದ ಗಂಡನ ಜೊತೆಗೆ ಅಮೆರಿಕದಲ್ಲಿಯೇ ನೆಲೆಸಿದ್ದಾರೆ. ಇತ್ತೀಚೆಗೆ ಅವರು ನ್ಯೂಯಾರ್ಕ್ ನಲ್ಲಿ ಸೋನಾ ಹೆಸರಿನ ಭಾರತೀಯ ಹೋಟಲ್ ಒಂದನ್ನು ಶುರು ಮಾಡಿದ್ದಾರೆ. ಇಲ್ಲಿ ಭಾರತೀಯ ಫೇಮಸ್ ಆಹಾರ ಪದಾರ್ಥಗಳೆಲ್ಲವೂ ಸಿಗುತ್ತವೆ. ಇದರಲ್ಲಿ ಪಾನಿಪೂರಿ, ದೋಸಾ, ಉತ್ತಪ್ಪಾ, ಇಡ್ಲಿ, ವಡಾ ಕುಲ್ಚಾನಿಂದ ಹಿಡಿದು ಇನ್ನು ಅನೇಕ ಪದಾರ್ಥಗಳು ದೊರೆಯುತ್ತವೆ. ಇಲ್ಲಿ ಅನೇಕ ಸೆಲೆಬ್ರಿಟಿಗಳು ಸಹ ತಮ್ಮ ಹಾಜರಿ ಕೊಟ್ಟಿದ್ದಾರೆ. ಇವರಲ್ಲಿ ಬಾಲಿವುಡ್ ಜನಪ್ರಿಯ ನಿರ್ಮಾಪಕ ಲೋಲಾ ಜೇಮ್ಸ್ ಸಹ ಮೊನ್ನೆ ಸೋನಾ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ದಾರೆ.

ಲೋಲಾ ಅವರು ಗರ್ವದಿಂದ ಮುಂಬಯಿಯ ಹೆಗ್ಗುರುತು ಮತ್ತು ಐಕೊನಿಕ್ ವಡಾಪಾವ ತಿಂದಿದ್ದಾರೆ. ಇದರ ಜೊತೆಗೆ ಇನ್ನೂ ಅನೇಕ ಪದಾರ್ಥಗಳ ರುಚಿ ನೋಡಿದ್ದಾರೆ. ಇದಕ್ಕೆ ಸಂಬಂಧಿಸಿದ ಅನೇಕ ಫೋಟೋಗಳನ್ನು ತಮ್ಮ ಇನ್ಸ್ಟಾ ಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ನಿಜಕ್ಕೂ ಪ್ರಿಯಾಂಕಾ ಅವರ ಈ ಹೋಟೆಲ್ ಅದ್ಭುತವಾಗಿದೆ ಎಂದಿದ್ದಾರೆ. ಒಂದು ಸಲ ರುಚಿಕಟ್ಟಾದ ಊಟನ್ನು ಸವಿಯಲು ಭೇಟಿ ನೀಡಿ ಎಂದಿದ್ದಾರೆ.

ಒಂದು ವೇಳೆ ನಿಮಗೂ ಪ್ರಿಯಾಂಕಾ ಅವರ ಹೋಟೆಲ್ಲಿಗೆ ಹೋಗಿ ವಡಾಪಾವ್ ತಿನ್ನುವ ಆಸೆಯಾದರೆ ಮೊದಲು ಅದರ ಬೆಲೆ ತಿಳಿದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಕಾರಣ ಈ ಹೋಟೆಲ್ ನಲ್ಲಿ ಒಂದು ವಡಾಪಾವ್ ಬೆಲೆ 14 $ (ಅಮೆರಿಕನ್ ಡಾಲರ್) ಅಂದರೆ ಸುಮಾರು 1 ಸಾವಿರ ರೂಪಾಯಿಗಳು. ಪ್ರಿಯಾಂಕಾಳ ಹೋಟೆಲ್ ನಲ್ಲಿ ವಡಾಪಾವ್ ಸಿಗುತ್ತೆ ಅಂತ ಗೊತ್ತಿರಲಿಲ್ಲ. ಮುಂಬಯಿ ಜನರ ಅಸ್ಮಿತೆಯನ್ನು ತೋರಿಸುವ ಈ ವಡಾಪಾವ್ ಇನ್ನು ಅಮೆರಿಕನ್ನರ ಹೃದಯದ ಮೇಲೆ ರಾಜ್ಯ ಮಾಡಲಿ ಎಂದು ಹಾರೈಸೋಣ.