ಎಲೆನ್ ಮಸ್ಕ್ ನ ಟೆಸ್ಲಾ ಕಂಪನಿಯ ಕಾರಿನ ಆಟೋ ಪೈಲಟ್ ತಂತ್ರಜ್ಞಾನದಿಂದ ಉಳಿಯಿತು ಚಾಲಕನ ಪ್ರಾಣ! ಹೇಗೆ..?? ನೋಡಿ ಈ Video
ಟೆಸ್ಲಾ ಅಥವಾ ಸ್ಪೇಸ್ ಎಕ್ಸ್ ಇದು ಜಗತ್ತಿನಲ್ಲಿಯ ಎರಡನೆಯ ಕ್ರಮಾಂಕದ ಶ್ರೀಮಂತ ಎಲೆಕ್ಟ್ರಿಕ್ ಕಾರು ಕಂಪನಿಯಾಗಿದೆ. ಈ ಕಾರು ಮತ್ತು ಕಾರಿನ ಕಂಪನಿಯ ಮಾಲೀಕರಾದ ಎಲ್ಲೆನ್ ಮಸ್ಕ್ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಏನಾದರೂ ಸುದ್ದಿಗಳು ಇದ್ದೇ ಇರುತ್ತವೆ. ಈ ಕಾರಿನ ವಿಡಿಯೋ ಮತ್ತು ಫೋಟೋಗಳು ಸತತ ವೈರಲ್ ಆಗುತ್ತಿರುತ್ತವೆ. ಟೆಸ್ಲಾ ಕಾರಿನ ಆಟೋ ಪೈಲಟ್ ಸಿಸ್ಟಮ್ ಬಗ್ಗೆ ಅಂತೂ ಯಾವತ್ತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಜಾಗತಿಕ ಗುಣಮಟ್ಟದ ತಂತ್ರಜ್ಞಾನ ಮತ್ತು ಸುರಕ್ಷೆಯ ಉಪಾಯಗಳಿಗಾಗಿ ಗುರುತಿಸಲಾಗುವ ಈ ಕಂಪನಿ ಸತತವಾಗಿ ವಿಕಸಿತ ಮಾಡುವ ಆಟೋ ಪೈಲಟ್ ಸಿಸ್ಟಮ್ ನ ತಂತ್ರಜ್ಞಾನವು ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವುದು. ಇದೇ ಆಟೋ ಪಾಯ್ಲೆಟ್ ಸಿಸ್ಟಮ್ ಚಾಲಕನೊಬ್ಬನ ಪ್ರಾಣವನ್ನು ರಕ್ಷಿಸಿದೆ. ಇದೇ ಸಂದರ್ಭದ ಒಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದರೊಂದಿಗೆ ತುಂಬಾ ಶೇರ್ ಆಗುತ್ತಿದೆ.
24 ವರ್ಷದ ನಾರ್ವೇಯ ಚಾಲಕನೊಬ್ಬ ಟೆಸ್ಲಾ ಕಾರನ್ನು ನಡೆಸುವಾಗ ನಶೆಯಲ್ಲಿದ್ದನು. ಆತ ತುಂಬಾ ನಶೆಯಲ್ಲಿ ಇದ್ದುದರಿಂದ ವಾಹನ ನಡೆಸಲು ವಿಫಲನಾಗಿದ್ದ. ಸ್ವಲ್ಪ ಸಮಯದ ನಂತರ ಕಾರಿನ ಮೇಲಿನ ಕಂಟ್ರೋಲ್ ಕಳೆದುಕೊಂಡು ಬಿಟ್ಟ. ಅದೃಷ್ಟ ಚೆನ್ನಾಗಿರುವುದರಿಂದ ಕಾರಿನ ಅಟೋ ಪೈಲೆಟ್ ಸಿಸ್ಟಂಗೆ ಈ ವಿಷಯ ಗೊತ್ತಾಯಿತು. ಅದು ಗಾಡಿಯ ಕಂಟ್ರೋಲ್ ತನ್ನ ಕೈಯಲ್ಲಿ ತೆಗೆದುಕೊಂಡಿತು. ಹೀಗಾಗಿ ಯಾವುದೇ ಜೀವ ಹಾನಿಯಾಗಲಿಲ್ಲ ಮತ್ತು ಅಪಘಾತ ಘಟಿಸಲಿಲ್ಲ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ವಿಡಿಯೋವನ್ನು ರಸ್ತೆಯ ಮೇಲೆ ಚಲಿಸುತ್ತಿರುವ ಎರಡನೇ ಗಾಡಿ ಚಾಲಕನು ಶೂಟ್ ಮಾಡಿದ್ದಾನೆ. ನಾರ್ವೆಯಲ್ಲಿ ಒಂದು ಹೈವೇ ಮೇಲೆ ಈ ಘಟನೆ ನಡೆದಿದೆ. ಟೆಸ್ಲಾ ಗಾಡಿಯಲ್ಲಿಯ ಚಾಲಕ ಯಾವುದೇ ಪ್ರತಿಕ್ರಿಯೆ ನೀಡದೇ ಇರುವ ವಿಷಯ ಕಾರಿನ ಗಮನಕ್ಕೆ ಬಂದಾಗ ಕಾರು ಸಂಪೂರ್ಣವಾಗಿ ನಿಂತುಬಿಟ್ಟಿದೆ. ಅನಂತರ ಎಮರ್ಜೆನ್ಸಿ ಸರ್ವಿಸ್ ಗೆ ಮೆಸೇಜ್ ನೀಡುವ ಸಲುವಾಗಿ ಅಪಾಯದ ಲೈಟ್ ಗಳನ್ನು ಸಹ ಸಿಸ್ಟಮ್ ಹೊತ್ತಿಸಿದೆ.
ಈಸ್ಟರ್ನ್ ಪೊಲೀಸ್ ಡಿಸ್ಟ್ರಿಕ್ ನ ಅಧಿಕೃತ ಟ್ವಿಟರ್ ಪೋಸ್ಟ್ ಪ್ರಕಾರ ಡ್ರೈವರ್ ಕಾರಿನ ಮೇಲಿನ ಕಂಟ್ರೋಲ್ ಸಂಪೂರ್ಣವಾಗಿ ಕಳೆದುಕೊಂಡ ನಂತರ ಸಿಸ್ಟಮ್ ಸಕ್ರಿಯವಾಗಿದೆ. ಅಲ್ಲಿಯ ಸ್ಥಾನಿಕ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಟೆಸ್ಲಾ ಕಾರಿನ ಚಾಲಕ ತುಂಬಾ ನಶೆಯಲ್ಲಿದ್ದನು. ಆತ ಕಾರನ್ನು ಚಲಾಯಿಸಲು ನಿರಾಕರಿಸಿದ್ದಾನೆಂದು ಹೇಳಿದರೂ ಸಹ ವಿಡಿಯೋದ ಸಾಕ್ಷಾಧಾರಗಳು ಆ ರೀತಿ ದರ್ಶಿಸುವದಿಲ್ಲ. ಆತನ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತುಗೊಳಿಸಿ ಆತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ವಿಡಿಯೋ ನೋಡಿ
Tesla owner in Norway suffers unconsciousness while driving, Tesla autopilot detects it, slows, comes to a stop so EMS can help @elonmusk @Tesla ❤️🩹🚑
— Austin Tesla Club (@AustinTeslaClub) July 31, 2021
pic.twitter.com/kl1CEeiHDi
ಆಸ್ಟಿನ್ ಟೆಸ್ಲಾ ಕ್ಲಬ್ ಪೋಸ್ಟ್ ಮಾಡಿದ ವಿಡಿಯೋ ನೋಡಿ ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಯನ್ನು ತಿಳಿಸುತ್ತಿದ್ದಾರೆ. ಅವರಲ್ಲಿ ಒಬ್ಬ ಯೂಸರ್ ಹೀಗೆ ಹೇಳಿದ್ದಾನೆ, ಕಾರಿಗೆ ಏನು ಮಾಡಬೇಕಾಗಿತ್ತು ಅದನ್ನು ತುಂಬಾ ಸರಿಯಾಗಿ ಮಾಡಿದೆ, ಕಾರು ನಿಧಾನವಾಯಿತು ಮತ್ತು ಅಪಾಯದ ಲೈಟುಗಳನ್ನು ಉರಿಸಿತು ಮತ್ತು ಚಾಲಕನಿಗೆ ಅಪಾಯದ ಮುನ್ಸೂಚನೆಯನ್ನು ಕೊಟ್ಟ ನಂತರ ಆಮೇಲೆ ನಿಂತಿದೆ.
ಒಬ್ಬ ಯೂಸರ್ ಅಂತೂ, ಟೆಸ್ಲಾ ಕಾರು, ಚಾಲಕನ ಪ್ರಾಣ ಅಲ್ಲ ತನ್ನ ಪ್ರಾಣವನ್ನು ಉಳಿಸಿಕೊಂಡಿದೆ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾನೆ. ಕಾರಿನಲ್ಲಿ ಆಟೋ ಪೈಲೆಟ್ ಸಿಸ್ಟಮ್ ಇಲ್ಲದಿದ್ದರೆ ಏನಾಗುತ್ತಿತ್ತು? ಎಂಬುದರ ಬಗ್ಗೆ ಕಲ್ಪನೆ ಮಾಡಲು ಸಹ ಭಯವಾಗುತ್ತದೆ.