ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಬಂದ ನಂತರ ಟ್ರಕ್ ಚಾಲಕರನ್ನು ಹುಡುಕ್ತಿದ್ದಾರೆ ಮೀರಾಬಾಯಿ ಚಾನು! ಕಾರಣ ಕೇಳಿದರೆ…

ಜಪಾನಿನ ಟೋಕಿಯೋದಲ್ಲಿ ನಡೆಯುತ್ತಿರುವ ಆಲಂಪಿಕ್ ಸ್ಪರ್ಧೆಯಲ್ಲಿ ಮೀರಾಬಾಯಿಯವರು ವೆಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿಯನ್ನು ಗೆದ್ದು ದೇಶಕ್ಕೆ ಅಭಿಮಾನವನ್ನು ತಂದರು. ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರೂ ಗೆಲ್ಲುವ ಛಲ ಮತ್ತು ಮನಸ್ಸಿದ್ದರೆ ಏನೂ ಬೇಕಾದರೂ ಸಾಧಿಸಲು ಸಾಧ್ಯ ಎನ್ನುವ ಸಂದೇಶವನ್ನು ನೀಡಿದರು.

ಮೆಡಲ್ ಗೆದ್ದು ಭಾರತಕ್ಕೆ ಬಂದಾಗ ಮೀರಾಬಾಯಿಯ ಸ್ವಾಗತ ಭರ್ಜರಿಯಾಯಿತು. ಅವರ ಮೇಲೆ ಬಹುಮಾನಗಳ ಮಳೆಯೇ ಸುರಿದಿದೆ. ಮೀರಾ ಇಲ್ಲಿಯವರೆಗೆ ತಲುಪಲು ಜೀವನದಲ್ಲಿ ತುಂಬಾ ಸಂಘರ್ಷವನ್ನು ಮಾಡಿದ್ದಾರೆ. ಆ ಸಮಯದಲ್ಲಿ ಮೀರಾ ಅವರಿಗೆ ಕೆಲವರು ಸಹಾಯವನ್ನು ಸಹ ಮಾಡಿದ್ದಾರೆ. ಇದೇ ರೀತಿ ಅವರಿಗೆ ಒಂದು ಸಂದರ್ಭದಲ್ಲಿ ಸಹಾಯ ಮಾಡಿದ ಟ್ರಕ್ ಚಾಲಕರನ್ನು ಮೀರಾ ಶೋದಿಸುತ್ತಿದ್ದಾರೆ. ಈ ಟ್ರಕ್ ಚಾಲಕರು ಇವರನ್ನು ದಿನಂಪ್ರತಿ ನೊಂಗ್ ಪೋಕ ಕಾಕಚಿಂಗ್ ಊರಿನಲ್ಲಿರುವ ಮನೆಯಿಂದ ಖುಮಾನ್ ಲಂಪಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿರುವ ತರಬೇತಿ ಶಿಬಿರದವರೆಗೆ ಉಚಿತವಾಗಿ ಲಿಫ್ಟ್ ಕೊಡುತ್ತಿದ್ದರಂತೆ.

ಮೀರಾಬಾಯಿಯವರ ಕುಟುಂಬದ ಆರ್ಥಿಕ ಪರಿಸ್ಥಿತಿ ಹಾಗೇನು ಇಲ್ಲ. ಮೀರಾಳ ತರಬೇತಿಗಾಗಿ ಆಗುವ ಖರ್ಚು ಅವರ ಕೈಗೆಟುಕುವ ಹಾಗಿರಲಿಲ್ಲ. ಮನೆಯಿಂದ ತರಬೇತಿ ಶಿಬಿರವು 30 ಕಿಮೀ ದೂರದಲ್ಲಿತ್ತು. ಅಲ್ಲಿಗೆ ಹೋಗಲು ಆಕೆಗೆ 10/20 ರೂಪಾಯಿಗಳನ್ನು ಕೊಡಲಾಗುತ್ತಿತ್ತು. ಅಷ್ಟು ಹಣ ಸಾಕಾಗುತ್ತಿರಲಿಲ್ಲ. ಹೀಗಾಗಿ ಮೀರಾ ಮನೆಯ ಹತ್ತಿರದಿಂದ ಹೋಗುವ ಟ್ರಕ್ ಗಳಲ್ಲಿಯೇ ಲಿಫ್ಟ್ ತೆಗೆದುಕೊಳ್ಳುವ ಉಪಾಯ ಕಂಡು ಹಿಡಿದರು. ಹೀಗೆ ಮಾಡುವಾಗ ಮನಸ್ಸಿನಲ್ಲಿ ಭೀತಿ ಮತ್ತು ಸಂಕೋಚ ನಿರ್ಮಾಣ ವಾಗುತ್ತಿತ್ತು. ಆದರೂ ಧೈರ್ಯದಿಂದ ತರಬೇತಿ ಶಿಬಿರಕ್ಕೆ ಹೋಗುತ್ತಿದ್ದರು.

ಸ್ವಲ್ಪ ದಿನಗಳ ನಂತರ ಈ ಚಾಲಕರು ಮೀರಾಳಿಗೆ ಪರಿಚಯದವರಾದರು. ಇವರ ಮನೆಯ ಹತ್ತಿರ ಬರುತ್ತಲೇ ಅವರು ದೂರದಿಂದಲೇ ಹಾರ್ನ್ ಬಾರಿಸಲು ಶುರು ಮಾಡಿದರು. ಹೀಗಾಗಿ ಚಾನು ಸಮಯಕ್ಕೆ ಸರಿಯಾಗಿ ಟ್ರೇನಿಂಗ್ ಸೆಂಟರ್ ಸೇರಲು ಸಹಾಯವಾಗುತ್ತಿತ್ತು.

ಮುಂದೆ ಟ್ರಕ್ ಚಾಲಕರು ಮತ್ತು ಮೀರಾಳ ಮಧ್ಯೆ ಒಳ್ಳೆಯ ಸಂಬಂಧವೇ ನಿರ್ಮಾಣವಾಯಿತು. ಹೀಗಾಗಿ ಈ ಟ್ರಕ್ ಚಾಲಕರು ಮೀರಾ ಅವರಿಂದ ಎಂದಿಗೂ ಹಣವನ್ನು ತೆಗೆದುಕೊಂಡಿಲ್ಲ. ಮೀರಾಳಿಗೆ ಪ್ರವಾಸಕ್ಕಾಗಿ ದೊರೆತ ಹಣದಿಂದಲೇ ತರಬೇತಿಯ ಮಧ್ಯದಲ್ಲಿ ಏನನ್ನಾದರೂ ತಿನ್ನಲು ಖರೀದಿಸಿಕೊಳ್ಳುತ್ತಿದ್ದರು. ಈಗ ಆ ಚಾಲಕರ ಉಪಕಾರವನ್ನು ಮುಟ್ಟಿಸಲು ಮೀರಾ ಹಾತೊರೆಯುತ್ತಿದ್ದಾರೆ.