ಏಲಿಯನ್ ಗಳ ಬಯಸಿದರೆ ಕ್ಷಣಾರ್ಧದಲ್ಲಿ ಭೂಮಿಯನ್ನು ನಾಶ ಮಾಡಲಬಲ್ಲವು: UFO ತಜ್ಜರು ಹೇಳಿದ ಭಯಾನಕ ಸತ್ಯ!
ವೈಜ್ಞಾನಿಕತೆಯನ್ನು ಆದರಿಸಿ ಮೂಡಿ ಬಂದಿರುವ ಹಾಲಿವುಡ್ ನ ಕಲ್ಪನಾತ್ಮಕ ಸಿನಿಮಾಗಳನ್ನು ನೋಡಿ ಹಾಗೂ ಕಾದಂಬರಿಗಳನ್ನು ಓದಿದ ನಂತರ ಜನ ತಮ್ಮ ತಲೆಯಲ್ಲಿ ಏಲಿಯನ್ಸ್ ಗಳು ಭೂಮಿಗೆ ಬರುತ್ತದೆ, ಅವು ಮನುಷ್ಯರ ಜೊತೆ ಯುದ್ಧವನ್ನು ಮಾಡಿ ಆ ಯುದ್ಧದಲ್ಲಿ ಮನುಷ್ಯರು ಗೆದ್ದು, ಏಲಿಯನ್ ಗಳು ತಮ್ಮ ಪಾಡಿಗೆ ತಾವು ಹಿಂತಿರುಗಿ ಹೋಗುತ್ತವೆ ಎನ್ನುವ ಆಲೋಚನೆಗಳನ್ನು ಇಟ್ಟುಕೊಂಡಿದ್ದಾರೆ. ಆದರೆ UFO ತಜ್ಞರು ನಾವು ಮೊದಲು ಇಂತಹ ಆಲೋಚನೆಯನ್ನು ನಮ್ಮ ತಲೆಯಿಂದ ತೆಗೆದು ಹಾಕಬೇಕಾಗಿದೆ ಎಂದಿದ್ದಾರೆ. ಏಕೆಂದರೆ ಅನ್ಯ ಗ್ರಹಗಳಿಂದ ಬರುವ ಜೀವಿಗಳು ನಮಗಿಂತ ನೂರಾರು ವರ್ಷಗಳು ಮುಂದೆ ಇದ್ದು, ಅವರು ಅತ್ಯಾಧುನಿಕ ವಾದಂತಹ ತಂತ್ರಜ್ಞಾನವನ್ನು ಮಾತ್ರವೇ ಅಲ್ಲದೆ ಹೆಚ್ಚು ಪರಿಣಾಮಕಾರಿಯಾದ ಶಸ್ತ್ರಾಸ್ತ್ರಗಳನ್ನು ಕೂಡಾ ಹೊಂದಿರಬಹುದು ಎಂದು ಹೇಳಿದ್ದಾರೆ.
ನಿಕ್ ಪೋಪ್ ಹೆಸರಿನ ಯುಎಫ್ ಓ ತಜ್ಞರು ಒಂದು ವೇಳೆ ಮನುಷ್ಯರು ಮತ್ತು ಏಲಿಯನ್ ಗಳ ನಡುವೆ ಹೋರಾಟ ಏನಾದರೂ ನಡೆದರೆ, ಅದು ನಮ್ಮ ಪರವಾಗಿ ಖಂಡಿತ ಇರುವುದಿಲ್ಲ. ಏಲಿಯನ್ ಗಳು ಮಾನವರನ್ನು ಹತ್ತಿಕ್ಕಬಹುದಾಗಿದೆ. ಅಲ್ಲದೇ ಕೆಲವೇ ನಿಮಿಷಗಳಲ್ಲಿ ಭೂಮಿಯನ್ನು ಧ್ವಂಸಗೊಳಿಸಬಲ್ಲರು. ಅವರು ಸುಂದರವಾದ ನಮ್ಮ ಗ್ರಹವನ್ನು ಕ್ಷಣಾರ್ಧದಲ್ಲಿ ನಾಶ ಮಾಡಬಹುದು. ಅವರು ತಮ್ಮ ಶಕ್ತಿಯಿಂದ ಭೂಮಿಯನ್ನು ಕಡಲೆ ಕಾಯಿಯಂತೆ ಒಡೆಯಬಹುದು ಹಾಗೂ ಎಸೆಯಬಹುದು ಎಂದು ಹೇಳಿದ್ದಾರೆ. ಇಂತಹದೊಂದು ಭ ಯಾ ನ ಕವಾದ ಹೇಳಿಕೆಯನ್ನು ನೀಡಿರುವ ನಿಕ್ ಪೋಪ್ ಅವರು ಯುಎಸ್ಎ ರಕ್ಷಣಾ ಇಲಾಖೆಯ ಯು ಎಫ್ ಓ ತನಿಂಅ ತಂಡದ ಭಾಗವಾಗಿದ್ದಾರೆ ಎನ್ನುವುದು ವಿಶೇಷವಾಗಿದೆ.

ನಿಕ್ ಪೋಪ್ ಅವರು ಏಲಿಯನ್ ಗಳಿಂದ ನಮಗೆ ಏಕೆ ಅಪಾಯವಿದೆ ಎನ್ನುವುದಾದರೆ, ಅವುಗಳು ಕಾಲ ಗತಿಯಲ್ಲಿ ನಮಗಿಂತ ಲಕ್ಷಾಂತರ ವರ್ಷಗಳಷ್ಟು ಮುಂದೆ ಇದ್ದು, ಅವರ ತಂತ್ರಜ್ಞಾನವು, ಬುದ್ಧಿಶಕ್ತಿಯು ಲಕ್ಷಾಂತರ ವರ್ಷಗಳಷ್ಟು ಮುಂದೆ ಇದೆ. ಅಂತಹ ಅದ್ಭುತವಾದ ತಂತ್ರಜ್ಞಾನವನ್ನು ಹೊಂದಿರುವ ಏಲಿಯನ್ ಗಳು ಬಳಸುವ ಆಯುಧಗಳು ನಮಗೆ ಮ್ಯಾಜಿಕ್ ನಂತೆ ಇರುತ್ತದೆ. ಆ ಆಯುಧಗಳನ್ನು ಎದುರಿಸುವುದು ನಮಗೆ ಕಷ್ಟವಾಗಬಹುದು. ಹಾಗೆ ಮಾತನ್ನು ಮುಂದುವರಿಸಿದ ಅವರು ನಮ್ಮ ಬ್ರಹ್ಮಾಂಡವು 14 ಶತಕೋಟಿ ವರ್ಷಗಳಷ್ಟು ಹಳೆಯದು.. ಅಂದ ಮೇಲೆ ಇಲ್ಲಿ ಕೆಲವು ನಾಗರಿಕತೆಗಳು ಖಂಡಿತ ಇರುತ್ತದೆ.
ಹಾಗಾದರೆ ಒಮ್ಮೆ ಊಹಿಸಿಕೊಂಡು ನೋಡಿ, ಕಳೆದ ಇನ್ನೂರು ಮುನ್ನೂರು ವರ್ಷಗಳಲ್ಲಿ ನಾವು ಎತ್ತಿನಗಾಡಿಯಿಂದ ಬಾಹ್ಯಾಕಾಶಕ್ಕೆ ತಲುಪಿದ್ದೇವೆ ಎಂದರೆ ಎರಡು ಶತಕೋಟಿ ವರ್ಷಗಳ ಹಿಂದೆ ಹುಟ್ಟಿಕೊಂಡ ನಾಗರಿಕತೆ ಇಂದು ಎಂತಹ ಮಟ್ಟಕ್ಕೆ ಬೆಳೆದಿರುತ್ತದೆ. ಅಂದ ಮೇಲೆ ಏಲಿಯನ್ ಗಳ ಶಕ್ತಿಯನ್ನು ಊಹಿಸುವುದು ನಮಗೆ ಕಷ್ಟವಾಗುತ್ತದೆ ಎಂದಿದ್ದಾರೆ. ಯಾವ ನಾಗರಿಕತೆಯು ಬ್ರಹ್ಮಾಂಡದಲ್ಲಿ ಮೊದಲಿನಿಂದಲೂ ಇದೆಯೋ ಅವರ ಸಂಖ್ಯೆ ನಮಗಿಂತ ಬಹಳ ಹೆಚ್ಚಾಗಿರಬಹುದು. ಅಲ್ಲದೇ ಅವರು ಇಪ್ಪತ್ತು ಮೂವತ್ತು ವರ್ಷಗಳಷ್ಟು ಮುಂದಿನ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ. ಬದಲಾಗಿ ಅವರು ಲಕ್ಷಾಂತರ ವರ್ಷಗಳಷ್ಟು ಸುಧಾರಿತ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುತ್ತಾರೆ.
ಆದ ಕಾರಣ ಅವರು ಬಳಸುವ ವಸ್ತುಗಳು ಹಾಗೂ ಅಸ್ತ್ರಗಳು ನಮಗೆ ಜಾದು ಎನಿಸುತ್ತದೆ. ಅದು ಮಾಯೆ ಎನಿಸುತ್ತದೆ. ನಾವು ಇಂದು ಕಂಡುಹಿಡಿದಿರುವ ತಂತ್ರಜ್ಞಾನವನ್ನು ಅವರು 75 ಸಾವಿರ ವರ್ಷಗಳ ಹಿಂದೆಯೇ ಕಂಡುಕೊಂಡಿದ್ದಾರೆ. ಅಂತಹವರಿಗೆ ಭೂಮಿಯ ಮೇಲೆ ಬಂದು ಭೂಮಿಯನ್ನು ನಾಶಮಾಡಲು ಎಷ್ಟು ಕ್ಷಣಗಳು ಸಾಕು ಎನ್ನುವುದನ್ನು ಊಹಿಸಿ ನೋಡಿ ಎನ್ನುವ ಮೂಲಕ ಏಲಿಯನ್ ಗಳ ಕುರಿತಾದ ಸಿನಿಮಾ, ಕಥೆಗಳ ಜ್ಞಾನವನ್ನು ಆಲೋಚನೆಯನ್ನು ದೂರ ಮಾಡುವಂತೆ ಹೇಳಿದ್ದಾರೆ.