ವಯಸ್ಸು 41 ಆದರೂ ಮದುವೆಯಾಗಿಲ್ಲ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ: ಅಸಲಿ ಕಾರಣ ಏನೆಂದು ಸ್ವತಃ ತಿಳಿಸಿದ ಶಮಿತಾ!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿಯಾಗಿರುವ ನಟಿ ಶಮಿತಾ ಶೆಟ್ಟಿ ಮೊಹಬ್ಬತೇ ಸಿನಿಮಾದ ಮೂಲಕ ಬಾಲಿವುಡ್ ಗೆ ಭರ್ಜರಿಯಾದ ಪ್ರವೇಶವನ್ನು ಮಾಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿತ್ತು. ಇದಾದ ನಂತರದಲ್ಲಿ ಶಮಿತಾ ತಮ್ಮ ವೃತ್ತಿ ಜೀವನದಲ್ಲಿ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದರೂ ಕೂಡಾ ಅವರಿಗೆ ದೊಡ್ಡಮಟ್ಟದಲ್ಲಿ ಜನಪ್ರಿಯತೆ ಸಿಗಲಿಲ್ಲ. ಶಮಿತಾ ಶೆಟ್ಟಿ ಬಾಲಿವುಡ್‌ ನ ಸ್ಟಾರ್ ನಟಿಯರ ಸಾಲಿನಲ್ಲಿ ಹೆಸರನ್ನು ಪಡೆಯಲು ಸಾಧ್ಯವಾಗಲಿಲ್ಲ. ನಟಿ ಶಮಿತಾ ಚಿತ್ರರಂಗದಿಂದ ದೂರವಾಗಿ ಸಾಕಷ್ಟು ಸಮಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅವರು ಇಂಟೀರಿಯರ್ ಡಿಸೈನಿಂಗ್ ಕಡೆಗೆ ತಮ್ಮ ಗಮನವನ್ನು ಹರಿಸಿದ್ದಾರೆ. ಶಮಿತಾ ಅವರಿಗೆ ಈಗಾಗಲೇ 40 ವರ್ಷ ವಯಸ್ಸು ದಾಟಿದೆ. ಅವರು 41ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರು ಇನ್ನೂ ಅವಿವಾಹಿತೆಯಾಗಿಯೇ ಉಳಿದುಕೊಂಡಿದ್ದಾರೆ.

ಶಮಿತಾ ಅವರ ಮದುವೆಯ ವಿಷಯವಾಗಿ ಸಂದರ್ಶನವೊಂದರಲ್ಲಿ ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳಿದಾಗ, ಅವರು ಅದಕ್ಕೆ ಉತ್ತರವನ್ನು ನೀಡಿದ್ದಾರೆ. ಶಮಿತಾ ಅವರನ್ನು, ನೀವೇಕೆ ಇನ್ನೂ ಮದುವೆಯಾಗಿಲ್ಲ?? ಎಂದು ಪ್ರಶ್ನೆ ಮಾಡಿದಾಗ ಅದಕ್ಕೆ ಉತ್ತರಿಸಿದ ಶಮಿತಾ, “ನಾನು ನನ್ನ ಜೀವನದಲ್ಲಿ ಅತ್ಯುತ್ತಮ ವ್ಯಕ್ತಿಯ ಹುಡುಕಾಟದಲ್ಲಿದ್ದೇನೆ” ಎಂದು ಹೇಳಿದ್ದಾರೆ. ಅನಂತರ ಅವರನ್ನು “ನಿಮ್ಮ ಮನೆಯಲ್ಲಿ ಮದುವೆಯ ವಿಚಾರ ವಾಗಿ ನಿಮ್ಮನ್ನು ಪ್ರಶ್ನೆ ಮಾಡುವುದಿಲ್ಲವೇ?? ನಿಮಗೆ ಮದುವೆಯಾಗುವಂತೆ ಒತ್ತಡವನ್ನು ಹೇರುವುದಿಲ್ಲವೇ?” ಎನ್ನುವ ಪ್ರಶ್ನೆಯನ್ನು ಕೇಳಲಾಯಿತು.

ಈ ಪ್ರಶ್ನೆಗೆ ಉತ್ತರ ನೀಡಿದ ಶಮಿತಾ, “ಮದುವೆಯ ವಿಚಾರದಲ್ಲಿ ಮನೆಯವರ ಕಡೆಯಿಂದ ಯಾವುದೇ ರೀತಿಯ ಒತ್ತಡ ಖಂಡಿತ ಇಲ್ಲ. ಆದರೆ ಎಲ್ಲಾ ತಂದೆ ತಾಯಿಯರಂತೆ ನಮ್ಮ ಮನೆಯಲ್ಲಿ ಸಹಾ ನಮ್ಮ ತಂದೆ-ತಾಯಿ ಅವರ ಮಕ್ಕಳು ತ ತಮ್ಮದೇ ಕುಟುಂಬ ಹೊಂದಬೇಕೆನ್ನುವ ಆಸೆಯನ್ನು ಇಟ್ಟುಕೊಂಡಿದ್ದಾರೆ. ನಮ್ಮ ತಂದೆ ನಮ್ಮನ್ನು ಅಗಲಿ ಹೋದ ಮೇಲೆ ನಮ್ಮ ತಾಯಿ ನನ್ನ ಮದುವೆಯ ವಿಚಾರವಾಗಿ ಬಹಳಷ್ಟು ಚಿಂತಾಕ್ರಾಂತರಾಗಿದ್ದರು. ಆದರೆ ನಾನು ಮಾತ್ರ ಮದುವೆಯ ವಿಷಯವಾಗಿ ಯಾವುದೇ ರೀತಿಯ ಚಿಂತೆಯನ್ನು ಮಾಡುತ್ತಿಲ್ಲ ಮತ್ತು ಒತ್ತಡದಲ್ಲೂ ಅನುಭವಿಸುತ್ತಿಲ್ಲ” ಎಂದು ಹೇಳಿದ್ದಾರೆ.

ಇನ್ನು ಇದೇ ವಿಚಾರದಲ್ಲಿ ತಮ್ಮ ಅಕ್ಕ ಶಿಲ್ಪಾಶೆಟ್ಟಿ ಬಗ್ಗೆ ಹೇಳಿದ ಅವರು, ಈಗ ಅವಳಿಗೆ ಯಾವುದೇ ಚಿಂತೆಯಿಲ್ಲ, ನನ್ನ ದಾರಿಯನ್ನು ನಾನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ವಿಷಯ ಅರ್ಥವಾಗಿದೆ. ಅದಕ್ಕೆ ಅವಳು ನನಗೆ ಏನು ಹೇಳಲು ಹೋಗುವುದಿಲ್ಲ. ಅದು ಅಲ್ಲದೇ ಯಾವಾಗ ಏನು ಆಗಬೇಕೋ, ಅದು ಆಗಲೇ ಆಗುತ್ತದೆ. ನಿಜ ಹೇಳಬೇಕೆಂದರೆ ಜೀವನಪೂರ್ತಿ ಒಬ್ಬರ ಜೊತೆಯಾಗಿ ನಡೆಯಬೇಕೆನ್ನುವ ಭಾವನೆಯನ್ನು ಮೂಡಿಸುವಂತಹ ವ್ಯಕ್ತಿಯು ಇದುವರೆಗೂ ನನ್ನ ಜೀವನದಲ್ಲಿ ಯಾರೂ ಕಂಡಿಲ್ಲ ಎನ್ನುವ ಮಾತುಗಳನ್ನು ಶಮಿತಾ ಹೇಳಿದ್ದಾರೆ.

ಶಮಿತಾ ಇದೇ ವೇಳೆಯಲ್ಲಿ ಮದುವೆ ವಿಚಾರದ ಕುರಿತಾಗಿ, ಇತ್ತೀಚಿನ ದಿನಗಳಲ್ಲಿ ಮದುವೆಯ ನಂತರ ಗಂಡ ಹೆಂಡತಿ ಒಬ್ಬರಿಗೊಬ್ಬರು ಮೋಸ ಮಾಡುವ ಘಟನೆಗಳು ನಡೆಯುತ್ತಿವೆ‌. ಪತಿ-ಪತ್ನಿಯರ ಸಂಬಂಧದಲ್ಲಿ ಅರ್ಥವಿಲ್ಲದಂತೆ ಆಗುತ್ತಿದೆ. ಒಬ್ಬರು ಮತ್ತೊಬ್ಬರನ್ನು ಗೌರವಿಸುತ್ತಿಲ್ಲ. ಭಾವನೆಗಳಿಗೆ ಬೆಲೆ ಇಲ್ಲದಂತೆ ಆಗಿದೆ. ಇಂತಹ ಘಟನೆಗಳನ್ನೆಲ್ಲಾ ನೋಡಿದ ಮೇಲೆ ನನಗೆ ಮದುವೆಯ ಬಗ್ಗೆ ಒಂದು ಭಯ ಕಾಡಿದೆ. ಮದುವೆಯ ಕುರಿತಾಗಿ ಆಲೋಚನೆ ಮಾಡುವುದು ಬಿಟ್ಟಿದ್ದೇನೆ* ಮದುವೆಗಾಗಿ ನಾನಿನ್ನು ಸಿದ್ಧವಾಗಿಲ್ಲ ಎಂದು ಸಹಾ ಹೇಳಿದ್ದಾರೆ.