ಶಮಿತಾ ಶೆಟ್ಟಿ ಖರ್ಚುಗಳನ್ನು ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ನಿಭಾಯಿಸುತ್ತಾರೆ: ಟ್ರೋಲ್ ಗಳಿಗೆ ಖಡಕ್ ಜವಾಬು ನೀಡಿದ ಶಮಿತಾ ಶೆಟ್ಟಿ
ರಾಜ್ ಕುಂದ್ರಾ ಬಂಧನದ ನಂತರ ಅವರ ಪತ್ನಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಸಹೋದರಿ ಶಮಿತಾ ಶೆಟ್ಟಿ ಸಹಾ ಸಾಕಷ್ಟು ಚರ್ಚೆಗೆ ಒಳಪಟ್ಟಿದ್ದಾರೆ. ಅ ಶ್ಲೀ ಲ ಸಿನಿಮಾಗಳ ನಿರ್ಮಾಣ ಹಾಗೂ ಹಂಚಿಕೆಯ ಆರೋಪ ಎದುರಿಸುತ್ತಿರುವ ರಾಜ್ ಕುಂದ್ರಾ ವಿಚಾರದಲ್ಲಿ ನಟಿ ಶಿಲ್ಪಾ ಶೆಟ್ಟಿ ಮೇಲೆ ಮೂಡಿರುವ ಅನುಮಾನಗಳ ಕಾರಣದಿಂದ ಅವರ ಬಗ್ಗೆಯೂ ತನಿಖೆ ಹಾಗೂ ವಿಚಾರಣೆಗಳು ನಡೆಯುತ್ತಿವೆ. ಇದೇ ವೇಳೆಯಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಶಮಿತಾ ಶೆಟ್ಟಿ ಅವರನ್ನು ಸಹ ಭರ್ಜರಿಯಾಗಿ ಟ್ರೋಲ್ ಮಾಡಲಾಗುತ್ತಿದೆ. ಶಮಿತಾ ಶೆಟ್ಟಿ 2018 ರಲ್ಲಿ ಮೊಹಬ್ಬತೇ ಸಿನಿಮಾದ ಮೂಲಕ ಬಾಲಿವುಡ್ ಗೆ ಪ್ರವೇಶ ನೀಡಿದರು. ಇದಾದ ನಂತರ ಶಮಿತ ಸಾಲುಸಾಲಾಗಿ ಸಿನಿಮಾಗಳಲ್ಲಿ ನಟಿಸಿದರು. ಆ ಸಿನಿಮಾಗಳು ಸೂಪರ್ ಹಿಟ್ ಆದರೂ ಕೂಡಾ ಶಮಿತಾ ಶೆಟ್ಟಿಗೆ ಮಾತ್ರ ಸಫಲತೆಯ ಸವಿಯನ್ನು ಸವಿಯುವುದು ಸಾಧ್ಯವಾಗಲಿಲ್ಲ. ಬಾಲಿವುಡ್ ನಲ್ಲಿ ಸ್ಟಾರ್ ನಟಿಯ ಪಟ್ಟವನ್ನು ಪಡೆದುಕೊಳ್ಳುವಲ್ಲಿ ಶಮಿತಾ ವಿಫಲರಾದರು.
ಶಮಿತಾ ಶೆಟ್ಟಿ ಅವರನ್ನು ಅವರ ಅಕ್ಕ ಶಿಲ್ಪಾಶೆಟ್ಟಿಗೆ ಹೋಲಿಕೆ ಮಾಡಲಾಯಿತು. ಶಮಿತಾ ಅವರನ್ನು ಬಿಗ್ ಬಾಸ್ ಶೋಗಾಗಿ ಆಹ್ವಾನ ನೀಡಿದಾಗ ಅವರು ಅದಕ್ಕೆ ಸ್ಪರ್ಧಿಯಾಗಿ ಬಂದರು ಶಮಿತಾ. ಆದರೆ ಅದರಿಂದಲೂ ಕೂಡಾ ಅವರಿಗೆ ಯಾವುದೇ ವಿಶೇಷ ಉಪಯೋಗ ಖಂಡಿತ ಆಗಲಿಲ್ಲ. ಡಾನ್ಸ್ ರಿಯಾಲಿಟಿ ಶೋ ಒಂದರಲ್ಲೂ ಶಮಿತಾ ಭಾಗವಹಿಸಿದ್ದರು. ಪ್ರಸ್ತುತ ಟ್ರೋಲ್ ಮಾಡುವ ಮಂದಿ ಶಮಿತಾ ಅವರನ್ನು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ. ಶಮಿತಾ ಅದರ ಖರ್ಚುವೆಚ್ಚಗಳನ್ನು ರಾಜ್ ಕುಂದ್ರಾ ಮತ್ತು ಶಿಲ್ಪ ಶೆಟ್ಟಿ ಅವರು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾ ಶಮಿತಾ ಬಗ್ಗೆ ಟ್ರೋಲ್ ಮಾಡಲಾಗಿದೆ. ಅಲ್ಲದೇ ಶಮಿತಾ ಬಗ್ಗೆ ಕೆಲವು ಅವಹೇಳನ ಮಾಡುವಂತಹ ಟ್ರೋಲ್ ಗಳು ಕೂಡಾ ಮಾಡಿದ ಹಿನ್ನೆಲೆಯಲ್ಲಿ ಶಮಿತಾ ತಮ್ಮ ಮೌನವನ್ನು ಮುರಿದಿದ್ದಾರೆ.

ಬಾವ ರಾಜ್ ಕುಂದ್ರಾ ಬಂ ಧನದ ನಂತರ ತಮ್ಮ ಅಕ್ಕ ಶಿಲ್ಪಾಶೆಟ್ಟಿ ಪರವಾಗಿ ಈಗಾಗಲೇ ಶಮಿತಾ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೇ ತಾನು ತನ್ನ ಸಹೋದರಿಯ ಸಂತೋಷ ಹಾಗೂ ದುಃಖ ದ ಸಮಯದಲ್ಲೂ ಜೊತೆಯಾಗಿ ನಿಲ್ಲುವುದಾಗಿ ಹೇಳಿದ್ದಾರೆ. ಟ್ರೋಲ್ ಮಾಡಿದವರು ಶಮಿತಾ ಶೆಟ್ಟಿ ತಮ್ಮ ಜೀವನಕ್ಕಾಗಿ ಏನು ಮಾಡುವ ಅವಶ್ಯಕತೆ ಇಲ್ಲ, ಏಕೆಂದರೆ ಅವರ ಸಂಪೂರ್ಣ ಖರ್ಚುವೆಚ್ಚಗಳನ್ನು ರಾಜ್ ಕುಂದ್ರಾ ಹಾಗೂ ಶಿಲ್ಪಶೆಟ್ಟಿ ನಿಭಾಯಿಸುತ್ತಾರೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಶಮಿತಾ ಮಾತನಾಡಿದ್ದು, ಇದು ಅಕ್ಷರಶಃ ಸುಳ್ಳು, ನನ್ನ ಸ್ವಂತ ಖರ್ಚುವೆಚ್ಚಗಳನ್ನು ನಾನೇ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.
ಸಂದರ್ಶನದ ವೇಳೆಯಲ್ಲಿ ಶಮಿತಾ, ನನ್ನ ಎಲ್ಲ ಖರ್ಚುವೆಚ್ಚಗಳನ್ನು ನಿಭಾಯಿಸುವುದು ಹಾಗೂ ನನ್ನ ಜೀವನ ನಿರ್ವಹಣೆ ಸಂಪೂರ್ಣವಾಗಿ ನನ್ನದೇ ಜವಾಬ್ದಾರಿಯಾಗಿದೆ ಎಂದು ಈ ಸಮಯದಲ್ಲಿ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದಾರೆ. ತನ್ನನ್ನು ಶಿಲ್ಪಾಶೆಟ್ಟಿಗೆ ಹೋಲಿಕೆ ಮಾಡುವ ವಿಚಾರವಾಗಿ ಮಾತನಾಡಿರುವ ಅವರು ನನ್ನನ್ನು ಶಿಲ್ಪಾಗೆ ಹೋಲಿಕೆ ಮಾಡಿದಾಗ ನನಗೆ ಬೇಸರ ಆಗುವುದಿಲ್ಲ. ಏಕೆಂದರೆ ನಾನು ಚಿಕ್ಕವಯಸ್ಸಿನಿಂದಲೇ ಶಿಲ್ಪಾ ಶೆಟ್ಟಿ ರೀತಿಯಲ್ಲೇ ಆಗಬೇಕೆಂದು ಬಯಸಿದ್ದವಳು. ಆದರೆ ಜನ ಹೇಗೆ ಇಬ್ಬರು ವ್ಯಕ್ತಿಗಳು ಜೀವನದಲ್ಲಿ ಒಂದೇ ರೀತಿ ಯಶಸ್ಸನ್ನು ಪಡೆಯಬೇಕು ಎಂದು ಆಶಿಸುತ್ತಾರೆ?? ಇಂತಹ ಆಲೋಚನೆ ಎಷ್ಟು ಸರಿಯಾಗಿದೆ?? ಎಂದು ಪ್ರಶ್ನೆ ಮಾಡಿದ್ದಾರೆ

ಕೆಲವೇ ದಿನಗಳ ಹಿಂದೆ ಶಮಿತಾ ಯಾರ ಹೆಸರನ್ನೂ ಹೇಳದೆ ಟ್ವಿಟರ್ನಲ್ಲಿ ಎರಡು ಟ್ವೀಟ್ಗಳನ್ನು ಮಾಡಿದ್ದಾರೆ. ಅವರ ಈ ಟ್ವೀಟ್ಗಳು ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಯವರ ಕುರಿತು ಎನ್ನುವುದು ಅರ್ಥವಾಗುತ್ತದೆ. ಶಮಿತಾ ಅದರಲ್ಲಿ ‘ಕೆಲವೊಮ್ಮೆ ನಿಮ್ಮೊಳಗಿನ ಶಕ್ತಿ ಬೆಂಕಿಯಂತೆ ಇರುವುದಿಲ್ಲ, ಅದನ್ನು ಇತರರು ನೋಡುವುದಿಲ್ಲ. ಆದರೆ ಅದು ಉರಿಯುತ್ತಲೇ ಇರುವ ಕಿಡಿಯಂತೆ. ಆದ್ದರಿಂದ ನೀವು ಮುನ್ನಡೆಯಿರಿ. ಜನರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ?? ಎಂಬುದನ್ನು ನೀವು ನಿರ್ಧರಿಸಲು ಸಾಧ್ಯವಿಲ್ಲ. ನೀವು ಏನೇ ಹೇಳಿದರೂ, ಜನರು ಅದನ್ನು ಅವರ ದೃಷ್ಟಿ ಹಾಗೂ ಅವರ ಅನುಭವಗಳ ಆಧಾರದ ಮೇಲೆಯೇ ನೋಡುತ್ತಾರೆ. ನಿಮ್ಮ ಕೆಲಸವನ್ನು ನೀವು ಉತ್ಸಾಹದಿಂದ ಮಾಡುತ್ತಿರಿ ಎಂದು ಬರೆದುಕೊಂಡಿದ್ದಾರೆ.