ವಾಹನಗಳ ನಡುವೆ ಸುರಕ್ಷಿತ ಅಂತರ ಇಲ್ಲದೇ ಇದ್ದರೆ ಅಪಘಾತ ಖಂಡಿತ: ವೈರಲ್ ವೀಡಿಯೋ ಹೇಳಿದ ಸತ್ಯ ನೋಡಿ
ನಗರಗಳಲ್ಲಿ ಸಂಚಾರ ಮಾಡುವಾಗ ಮೈ ಎಲ್ಲಾ ಕಣ್ಣಾಗಿರಬೇಕು, ಇದಕ್ಕೆ ಪ್ರಮುಖ ಕಾರಣ ಏನು ಅನ್ನೋದಾದ್ರೆ ರಸ್ತೆ ನಿಯಮಗಳ ಪಾಲನೆ ಮಾಡದೇ ಇರೋದು. ಹೌದು ನಗರಗಳಲ್ಲಿ ದಿನ ಬೆಳಗಾದರೆ ಸಾಕು ಒಂದಲ್ಲಾ ಒಂದು ವಾಹನ ಅಪಘಾತ ಸಂಭವಿಸುತ್ತಾ ಇರುತ್ತದೆ. ರಸ್ತೆ ಸಂಚಾರ ನಿಯಮಗಳು ಎಂದರೆ ಉಡಾಫೆ ಎನ್ನುವ ಹಾಗೆ ವಾಹನ ಚಾಲನೆ ಮಾಡುವುದು ಅನೇಕರಿಗೆ ಹವ್ಯಾಸವೇ ಆಗಿದೆಯೇನೋ ಎನ್ನುವಂತೆ ಇದೆ. ಅಲ್ಲದೇ ಬಹಳಷ್ಟು ಮಂದಿ ಅತಿಯಾದ ವೇಗ, ಸಿಗ್ನಲ್ ಬ್ರೇಕ್, ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಹೀಗೆ ಹತ್ತು ಹಲವು ನಿಯಮಗಳನ್ನು ಮೀರಿ ವಾಹನ ಗಳನ್ನು ಚಾಲನೆ ಮಾಡುವುದು ನಗರಗಳಲ್ಲಿ ಸರ್ವೇ ಸಾಮಾನ್ಯ ಎನಿಸಿದೆ. ಇವೆಲ್ಲವುಗಳ ಜೊತೆಗೆ ಟ್ರಾಫಿಕ್ ಅಥವಾ ರಸ್ತೆಯಲ್ಲಿ ಸಂಚರಿಸುವಾಗ ವಾಹನ ವಾಹನಗಳ ನಡುವೆ ಒಂದು ನಿಯಮಿತವಾದ ಅಂತರ ಕಾಯ್ದುಕೊಳ್ಳುವುದು ಸಹಾ ಅನಿವಾರ್ಯ ಆಗಿರುತ್ತವೆ.
ವಾಹನಗಳ ನಡುವೆ ಅಂತರ ಕಾಯ್ದುಕೊಳ್ಳದೇ ಚಾಲನೆ ಮಾಡಿವುದು ಒಮ್ಮೊಮ್ಮೆ ಅಪಘಾತ ಗಳಿಗೆ ಕಾರಣವಾಗುವ ಅವಕಾಶಗಳು ಇರುತ್ತದೆ. ಕೆಲವರು ಇದನ್ನು ಸಹಾ ಉಡಾಫೆ ಎಂದು ಕೊಳ್ಳಬಹುದು. ಆದರೆ ಇದು ಅಕ್ಷರಶಃ ನಿಜವಾಗಿದೆ. ವಾಹನ ಗಳ ನಡುವೆ ಒಂದು ನಿರ್ದಿಷ್ಟವಾದಂತಹ ಅಂತರವನ್ನು ಕಾಯ್ದುಕೊಳ್ಳದೇ ವಾಹನ ಚಾಲನೆ ಮಾಡಿದರೆ ಅಪಾಯ ತಪ್ಪಿದ್ದಲ್ಲ ಎನ್ನುವುದನ್ನು ತೋರಿಸುವ ಒಂದು ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ಮೇಲೆ ರಸ್ತೆಗಳಲ್ಲಿ ವಾಹನಗಳ ನಡುವೆ ಅಂತರ ಕಾಯ್ದುಕೊಂಡು ಚಾಲನೆ ಮಾಡುವುದರ ಅವಶ್ಯಕತೆ ಏನೆಂದು ತಿಳಿಯುತ್ತದೆ.
ಈ ಘಟನೆಯು ಸೈಬರಾಬಾದ್ ನಲ್ಲಿ ನಡೆದಿದೆ ಎನ್ನಲಾಗಿದ್ದು ವೀಡಿಯೋ ನೋಡಿದಾಗ ಕಾರುಗಳು ನಗರದ ರಸ್ತೆಯಲ್ಲಿ ಬರುತ್ತಿವೆ. ಆದರೆ ಅವುಗಳ ನಡುವಿನ ಅಂತರ ಮಾತ್ರ ಕೇಳುವ ಹಾಗಿಲ್ಲ. ಸ್ವಲ್ಪ ಹಿಂದು ಮುಂದಾದರೂ ಕಾರುಗಳು ಒಂದಕ್ಕೊಂದು ತಾಕುವುದು ಸ್ಪಷ್ಟ. ಹೀಗಿರುವಾಗಲೇ ಸಿಗ್ನಲ್ ನಲ್ಲಿ ರೆಡ್ ಲೈಟ್ ಬಿದ್ದು ಮುಂದೆ ಇದ್ದ ಕಾರು ನಿಂತಿದೆ,ಅದರ ಹಿಂದೆಯೇ ಬಹಳ ಹತ್ತಿರದಲ್ಲೇ ಇದ್ದ ಕಾರು ಕೂಡಾ ನಿಲ್ಲುವ ವೇಳೆಗೆ ಅದರ ಹಿಂದೆ ಬಂದ ಇನ್ನೊಂದು ವಾಹನ ಕಪ್ಪು ಬಣ್ಣದ ಸ್ಕಾರ್ಪಿಯೋ ಮುಂದೆ ಇದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಆ ರಭಸಕ್ಕೆ ಅದರ ಮುಂದೆ ಇದ್ದ ಕಾರು ತನ್ನ ಮುಂದೆ ಇದ್ದ ಕಾರಿಗೆ ಹೋಗಿ ಹೊಡೆದಿದೆ. ಕೂಡಲೇ ಕಾರಿನ ಮಾಲೀಕ ಕೆಳಗೆ ಇಳಿದು ಬಂದಿದ್ದಾರೆ.
ಕಾರು ಮಾಲೀಕ ಹಿಂದಿನ ಕಾರಿನ ಚಾಲಕನ ಮೇಲೆ ಸಿಟ್ಟಾಗಿದ್ದರೆ, ಅವರು ತಮ್ಮ ಕಾರನ್ನು ಹಿಂದೆಯಿಂದ ಗುದ್ದಿದ ವಾಹನದ ಚಾಲಕನನ್ನು ಪ್ರಶ್ನೆ ಮಾಡಲು ಹೋಗಿದ್ದಾರೆ. ಆದರೆ ಎರಡನೇ ಕಾರನ್ನು ಗುದ್ದಿ ಅದು ಮುಂದಿನ ಕಾರನ್ನು ಗುದ್ದುವಂತೆ ಮಾಡಿದ ವಾಹನವು ಬಹಳ ಚಾಲಾಕಿತನದಿಂದ ಕೂಡಲೇ ತನ್ನ ವಾಹನವನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಘಟನೆ ಏನೇ ಆದರೂ ಒಂದು ನಿರ್ದಿಷ್ಟವಾದ ಅಂತರವನ್ನು ಕಾಯ್ದುಕೊಳ್ಳದೇ ವಾಹನ ಚಾಲನೆ ಮಾಡಿದ್ದು ಈ ಘಟನೆಗೆ ಕಾರಣ ಎನ್ನುವುದು ವಾಸ್ತವ. ಒಂದು ವೇಳೆ ಹಿಂದಿನಿಂದ ಬಂದ ವಾಹನ ಅತಿ ವೇಗವಾಗಿ ಬಂದಿದ್ದರೆ ಅಲ್ಲೊಂದು ಅವಘಡವೇ ಖಂಡಿತ ಸಂಭವಿಸಿರುತ್ತಿತ್ತು.
ವಿಡಿಯೋ ನೋಡಿ
ಈ ವೀಡಿಯೋವನ್ನು ಈಗಾಗಲೇ ಒಂಬತ್ತು ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ನೂರಾರು ಜನರು ವೀಡಿಯೋ ನೋಡಿ ಕಾಮೆಂಟ್ ಗಳಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನೆಟ್ಟಿಗರೊಬ್ಬರು ಈ ಘಟನೆಯಲ್ಲಿ ಸ್ಕಾರ್ಪಿಯೋ ಚಾಲಕ ಹೇಗೆ ತನ್ನ ವಾಹನ ಹಿಂದೆ ತೆಗೆದು ಬಿಟ್ಟ ಎಂಬುದನ್ನು ಗಮನಿಸಿದಿರಾ ಎಂದಿದ್ದಾರೆ. ಮತ್ತೊಬ್ಬರು ಹಾಸ್ಯ ಮಾಡುತ್ತಾ ಸ್ಕಾರ್ಪಿಯೋ ಮಾರುತಿ ಸ್ವಿಫ್ಟ್ ಮತ್ತು ಅದರ ಸಹೋದರರನ್ನು ಗುದ್ದಿದೆ ಎಂದಿದ್ದಾರೆ. ಬಹಳಷ್ಟು ಜನರು ಮಾರುತಿ ಕಂಪನಿಯ ಕಾರುಗಳ ಕ್ವಾಲಿಟಿ ಹೇಗಿದೆ ನೋಡಿ ಎಂದಿದ್ದಾರೆ. ಜಾಗೃತಿ ಮೂಡಬೇಕಾದ ಕಡೆ ಅನೇಕರು ಹಾಸ್ಯ ಮಾಡಿಕೊಂಡು ಇರುವುದು ವಿಷಾದನೀಯ ಎನಿಸುತ್ತದೆ