ಎಮ್ಮೆಯ ಹೊಟ್ಟೆಯಲ್ಲಿ ಕಾಡು ಹಂದಿ: ವೈರಲ್ ವೀಡಿಯೋ ನೋಡಿ ಏನಿದು? ಎಂದು ಆಶ್ಚರ್ಯ ಪಟ್ಟ ಜನರು!
ಸೋಶಿಯಲ್ ಮೀಡಿಯಾ ಗಳಲ್ಲಿ ದಿನವೊಂದಕ್ಕೆ ಪ್ರಾಣಿಗಳ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ಬಹಳ ವಿಶೇಷ ಎನಿಸಿದರೆ, ಇನ್ನೂ ಕೆಲವು ವಿಡಿಯೋಗಳು ವಿಸ್ಮಯ ಎನ್ನುವಂತೆ ಇರುತ್ತವೆ. ಆದರೆ ಕೆಲವು ವಿಡಿಯೋಗಳು ಸಾಮಾನ್ಯ ವಿಡಿಯೋ ಗಳಂತೆ ಕಂಡರೂ ಕೂಡಾ ಅದರ ಜೊತೆಗೆ ಮನುಷ್ಯರು ಮಾಡುವಂತಹ ಕೆಲವು ತಪ್ಪುಗಳ ಕುರಿತಾಗಿಯೂ ಸಹ ವಿಚಾರವನ್ನು ಮಾಡುವಂತೆ, ತಮ್ಮ ತಪ್ಪಿನಿಂದ ಆದ ಬೆಳವಣಿಗೆ ಏನು ಎನ್ನುವುದನ್ನು ಅರಿಯುವಂತೆ ಸಹಾ ಮಾಡುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದಾಗ ಒಂದು ಕಡೆ ಜನ ನಗಬಹುದು ಆದರೆ ಮತ್ತೊಂದು ಕಡೆ ಈ ಘಟನೆಯ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕಾದ ಅನಿವಾರ್ಯತೆಯೂ ಇದೆ ಎಂದು ಅನೇಕರಿಗೆ ಅನಿಸಿರುವುದು ಸಹಾ ವಾಸ್ತವ ಆಗಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ನಾವು ಗಮನಿಸಿದಾಗ ಇದು ನಿಜಕ್ಕೂ ಒಂದು ವಿಚಿತ್ರ ಘಟನೆ ಎಂದು ಹೇಳಬಹುದು. ಇದಕ್ಕೆ ಪ್ರಮುಖ ಕಾರಣ ಏನೆಂದರೆ ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಸತ್ತ ಎಮ್ಮೆಯೊಂದರ ಹೊಟ್ಟೆಯಲ್ಲಿ ಕಾಡಿನ ಹಂದಿಯೊಂದು ಸಿಕ್ಕಿಹಾಕಿಕೊಂಡಿದ್ದು, ಅದು ಅಲ್ಲಿಂದ ಹೊರಗೆ ಬರಲು ಹರ ಸಾಹಸ ಪಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಬಹುಶಃ ಆ ಕಾಡು ಹಂದಿ ಸತ್ತಿರುವ ಎಮ್ಮೆಯ ಮಾಂಸವನ್ನು ತಿನ್ನುವುದಕ್ಕಾಗಿ ಬಂದಿದ್ದು, ಅದು ಹೇಗೋ ಆ ಸತ್ತ ಎಮ್ಮೆಯ ಹೊಟ್ಟೆಯಲ್ಲಿ ಸಿಲುಕಿಕೊಂಡಿದೆ. ಈ ಘಟನೆಯನ್ನು ನೋಡಿದಾಗ ನಿಜಕ್ಕೂ ವಿಚಿತ್ರ ಎನಿಸಿಬಿಡುತ್ತದೆ.
ಹಂದಿಯು ಎಮ್ಮೆಯ ಕಳೇಬರದ ಹೊಟ್ಟೆಯಿಂದ ಹೊರಗೆ ಬರಲು ಬಹಳಷ್ಟು ಪ್ರಯಾಸ ಪಡುತ್ತಿರುವುದನ್ನು ಗಮನಿಸಿದ ಕೆಲವರು ಸತ್ತ ಹೆಮ್ಮೆಯ ಕಳೇಬರದ ಹತ್ತಿರ ಹೋಗಿ ಹಂದಿಯನ್ನು ಹೊರಗೆ ಹೇಗೆ ತೆಗೆಯುವುದು ಎನ್ನುವುದನ್ನು ಚರ್ಚೆ ಮಾಡಿದ್ದಾರೆ. ನಂತರ ಒಬ್ಬ ವ್ಯಕ್ತಿಯ ಸತ್ತಿರುವ ಎಮ್ಮೆಯ ಹೊಟ್ಟೆಯ ಭಾಗವನ್ನು ಒಂದು ಹರಿತವಾದ ಪರಿಕರವನ್ನು ಬಳಸಿಕೊಂಡು ಕತ್ತರಿಸುವ ಪ್ರಯತ್ನ ಮಾಡಿದ್ದಾರೆ. ಯಾವಾಗ ಎಮ್ಮೆಯ ಹೊಟ್ಟೆಯ ಭಾಗದ ಚರ್ಮ ಸ್ವಲ್ಪ ಹರಿಯಿತೋ, ಆಗ ಹಂದಿಗೆ ಹೊರಗೆ ಬರಲು ಸುಲಭವಾಗಿದೆ. ಅದು ಕೂಡಲೇ ಎಮ್ಮೆಯ ಹೊಟ್ಟೆಯಿಂದ ಹೊರಗೆ ಬಂದು ಬದುಕಿದೆಯಾ ಬಡಜೀವ ಎನ್ನುವಂತೆ ಅಲ್ಲಿಂದ ಓಡಿ ಹೋಗಿದೆ.
ವೈರಲ್ ಆಗಿರುವ ಈ ವಿಚಿತ್ರ ವಿಡಿಯೋವನ್ನು ಈಗಾಗಲೇ 20 ಲಕ್ಷಕ್ಕಿಂತಲೂ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಸುಮಾರು 16 ಸಾವಿರ ಜನ ವಿಡಿಯೋಗೆ ಲೈಕ್ ಗಳನ್ನು ಒತ್ತಿದ್ದಾರೆ. ನೂರಾರು ಜನರು ಕಾಮೆಂಟ್ ಗಳನ್ನು ಮಾಡುವ ಮೂಲಕ ವಿಡಿಯೋದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ನೆಟ್ಟಿಗರು ತಮ್ಮ ಕಾಮೆಂಟ್ ನಲ್ಲಿ ” ಸಾಕಿರುವ ಪ್ರಾಣಿಗಳು ಸತ್ತಾಗ ಈ ರೀತಿ ಬಯಲಿನಲ್ಲಿ ಎಸೆಯಬೇಡಿ. ನಿಮಗೆ ಬಹಳಷ್ಟು ವರ್ಷಗಳ ಕಾಲ ಹಾಲನ್ನು ನೀಡಿದಂತಹ ಸಾಧು ಜೀವಿಯನ್ನು ಹೀಗೆ ಎಸೆಯುವ ಮುನ್ನ ಸ್ವಲ್ಪವಾದರೂ ನಾಚಿಕೆ ಪಡಿ” ತಮ್ಮ ಅಸಮಾಧಾನವನ್ನು ಹೊರಗೆ ಹಾಕಿದ್ದಾರೆ.
ವಿಡಿಯೋ ನೋಡಿ
ಇನ್ನೊಂದು ಕಾಮೆಂಟ್ ನಲ್ಲಿ ನೆಟ್ಟಿಗರೊಬ್ಬರು “ಒಮ್ಮೊಮ್ಮೆ ನಾವು ತಿನ್ನುವ ಆಹಾರವೇ ನಮ್ಮ ಸಾವಿಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಈ ದೃಶ್ಯವು ಸಾಕ್ಷಿಯಾಗಿದೆ” ಎಂದಿದ್ದಾರೆ. ಕೆಲವರು ಹಾಸ್ಯ ಮಾಡುತ್ತಾ, ” ಜಗತ್ತಿನಲ್ಲಿ ಇಂತಹ ಸನ್ನಿವೇಶ ನಡೆದಿರುವುದು ಇದೇ ಮೊದಲ ಸಲವಾಗಿದೆ, ಆದ್ದರಿಂದ ಇದು ತಪ್ಪದೇ ಗಿನ್ನಿಸ್ ವಿಶ್ವದಾಖಲೆಗೆ ಸೇರಬೇಕು” ಎಂದಿದ್ದಾರೆ. ಆದರೆ ಇದೇ ವೇಳೆಯಲ್ಲಿ ಇನ್ನೂ ಕೆಲವರು, “ಇಲ್ಲಿ ಹಾಸ್ಯ ಮಾಡುವಂತಹ ಅಥವಾ ನಗುವಂತಹ ಸನ್ನಿವೇಶ ಏನೂ ಇಲ್ಲ, ಬದಲಾಗಿ ನಾವು ಪ್ರಾಣಿಗಳ ಕಳೇಬರವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ನಿಲ್ಲಿಸಬೇಕು ಎನ್ನುವ ಪಾಠವನ್ನು ಹೇಳುತ್ತಿದೆ” ಎಂದಿದ್ದಾರೆ. ಒಟ್ಟಾರೆ ವಿಡಿಯೋ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.