19 ವಯಸ್ಸಿನ ಯುವತಿಯನ್ನು ಪ್ರೀತಿಸಿ ಮದುವೆಯಾದ 7 ಮಕ್ಕಳ‌ ತಂದೆ: ಈಗ ರಕ್ಷಣೆಗಾಗಿ ಹೈಕೋರ್ಟ್ ಮೊರೆ ಹೋದ ಜೋಡಿ!

ಪ್ರೇಮಕ್ಕೆ ಕಣ್ಣಿಲ್ಲ ಎಂದು ಹೇಳುವುದನ್ನು ನಾವು ಬಹಳಷ್ಟು ಬಾರಿ ಕೇಳಿದ್ದೇವೆ. ಪ್ರೇಮದಲ್ಲಿ ಅಥವಾ ಪ್ರೀತಿಯಲ್ಲಿ ಶ್ರೀಮಂತ-ಬಡವ, ಮೇಲು-ಕೀಳು, ಜಾತಿ ಬೇದ ಅಥವಾ ವಯಸ್ಸಿನ ಯಾವುದೇ ರೀತಿಯ ಅಡ್ಡಿ ಆತಂಕಗಳು ಇರುವುದಿಲ್ಲ. ಯಾರಿಗೆ ಯಾರ ಮೇಲಾದರೂ, ಯಾವುದೇ ಸಂದರ್ಭದಲ್ಲಾದರೂ ಪ್ರೀತಿ ಹುಟ್ಟಬಹುದು. ಪ್ರೇಮದ ಎಲ್ಲಿ, ಯಾವಾಗ ಆಗುತ್ತದೆ ಎಂಬುದನ್ನು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಪ್ರೀತಿಯಲ್ಲಿ ಬಿದ್ದವರು ತಮ್ಮ ಪ್ರೀತಿಯನ್ನು ಪಡೆದುಕೊಳ್ಳಲು ಯಾವುದೇ ಸವಾಲನ್ನು ಕೂಡಾ ಎದುರಿಸಲು ಸಿದ್ಧವಾಗಿ ಬಿಡುತ್ತಾರೆ. ಅವರು ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳಲು ಹಿಂದೆಮುಂದೆ ನೋಡುವುದಿಲ್ಲ. ವಿಶೇಷವಾಗಿ ಪ್ರೇಮ ಎನ್ನುವುದು ಬಹಳ ಕಠಿಣವಾಗುವುದು ಯಾವಾಗ ಎಂದರೆ ಅದು ಈಗಾಗಲೇ ಮದುವೆಯಾಗಿರುವ, ಮಕ್ಕಳಿರುವ ಇಬ್ಬರು ವ್ಯಕ್ತಿಗಳ ನಡುವೆ ಪ್ರೇಮ ಹುಟ್ಟಿದಾಗ.

ಹರಿಯಾಣದ ಪಲ್ವಲ್ ಜಿಲ್ಲೆಯ ಹತೀನ್ ಎನ್ನುವಲ್ಲಿ ಇಬ್ಬರು ಪ್ರೇಮಿಗಳ ನಡುವಿನ ಒಂದು ವಿಶಿಷ್ಟವಾದ ಅಥವಾ ವಿಚಿತ್ರವಾದ ವಿವಾಹದ ಪ್ರಕರಣವು ಬೆಳಕಿಗೆ ಬಂದಿದೆ. ಈ ವಿಶಿಷ್ಟವಾದ ಪ್ರಕರಣದಲ್ಲಿ 67 ವರ್ಷದ ವಯಸ್ಸಿನ ವ್ಯಕ್ತಿಯು 19 ವರ್ಷ ವಯಸ್ಸಿನ ಯುವತಿಯನ್ನು ಮದುವೆಯಾಗಿದ್ದಾನೆ. ಈಗ ಈ ಜೋಡಿಯು ತಮ್ಮ ತಮ್ಮ ಕುಟುಂಬಗಳಿಗೆ ಹೆದರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ತಮಗೆ ಭದ್ರತೆಯನ್ನು ನೀಡಬೇಕೆಂದು ಮನವಿಯನ್ನು ಸಲ್ಲಿಸಿದ್ದಾರೆ. ಅವರಿಗೆ ಭದ್ರತೆಯನ್ನು ದೊರೆತಿಲ್ಲವಾದರೂ ಇದೇ ಆಗಸ್ಟ್ ತಿಂಗಳಲ್ಲಿ ಅವರ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಮದುವೆಯಾಗಿರುವ ಹಿರಿಯ ವ್ಯಕ್ತಿ ಹಾಗೂ ಯುವತಿ ಇಬ್ಬರಿಗೂ ಕೂಡಾ‌ಮೊದಲೇ ಮದುವೆಯಾಗಿದೆ.

ಇನ್ನು ಆ ಹಿರಿಯ ವ್ಯಕ್ತಿಗೆ ಒಟ್ಟು 7 ಜನ ಮಕ್ಕಳಿದ್ದು ಅವರೆಲ್ಲರಿಗೂ ವಿವಾಹವಾಗಿದೆ ಎನ್ನಲಾಗಿದೆ. ಈ ಪ್ರಕರಣದ ಕುರಿತಾಗಿ ಹತೀನ್ ಡಿಎಸ್ಪಿ ಆಗಿರುವ ರತನ್ ದೀಪ್ ಬಾಲಿ ಅವರು ಮಾಹಿತಿಯನ್ನು ನೀಡುತ್ತಾ, 60 ವರ್ಷದ ಹಿರಿಯ ವ್ಯಕ್ತಿ ಹತೀನ್ ಹುಂಚಿಪುರ ಎನ್ನುವ ಗ್ರಾಮದ ನಿವಾಸಿಯಾಗಿದ್ದು, ನುಹ್ ಜಿಲ್ಲೆಯ ಗ್ರಾಮವೊಂದರ 19 ವರ್ಷದ ಯುವತಿಯನ್ನು ಮದುವೆಯಾಗಿದ್ದಾರೆ. ಮದುವೆಯ ನಂತರ ಇಬ್ಬರೂ ತಮ್ಮ ತಮ್ಮ ಕುಟುಂಬಗಳಿಂದ ಪ್ರಾಣಾಪಾಯವಿದೆ ಎಂದು ಹೈಕೋರ್ಟ್ ನ ಮೊರೆ ಹೋಗಿದ್ದಾರೆ. ಕೋರ್ಟ್ ಈ ವಿಷಯವಾಗಿ ತನಿಖೆಯನ್ನು ನಡೆಸುವಂತೆ ಹಾಗೂ ವಿಚಾರಣೆ ಮುಗಿಯುವವರೆಗೂ ಆ ಜೋಡಿಗೆ ಭದ್ರತೆ ಒದಗಿಸುವಂತೆ ಆದೇಶವನ್ನು ನೀಡಿದ್ದು, ಯಾವ ಪರಿಸ್ಥಿತಿಯಲ್ಲಿ ಇಬ್ಬರ ಮದುವೆ ನಡೆದಿದೆ ಎನ್ನುವುದನ್ನು ತಿಳಿಯುವಂತೆ ಸೂಚನೆಗಳನ್ನು ನೀಡಿದೆ.‌ 4 ವರ್ಷಗಳ ಹಿಂದೆ ಹಿರಿಯ ವ್ಯಕ್ತಿಯ ಪತ್ನಿಯನ್ನು ಕಳೆದುಕೊಂಡಿದ್ದಾರೆ ಎಂದು ಡಿಎಸ್ಪಿ ಅವರು ತಿಳಿಸಿದ್ದಾರೆ.

ರತನ್ ದೀಪ್ ಬಾಲಿ ಯವರು ಕೋರ್ಟ್ ನೀಡಿರುವ ಆದೇಶದ ಅನುಸಾರವಾಗಿ ನಾವು ತನಿಖೆಯನ್ನು ಮುಂದುವರಿಸಿದ್ದು, ಈ ಪ್ರಕರಣದ ವಿಚಾರವಾಗಿ ಸಂಬಂಧಪಟ್ಟವರಿಂದ ಮಾಹಿತಿಯನ್ನು ಪಡೆಯುತ್ತಿದ್ದೇವೆ, ಕೋರ್ಟಿಗೆ ಸೂಕ್ತ ಸಮಯದಲ್ಲಿ ಎಲ್ಲಾ ವಿಚಾರಗಳ ಕುರಿತಾಗಿ ಮಾಹಿತಿಯನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ. ಕೆಲವರು ಹೇಳುವ ಪ್ರಕಾರ ಯುವತಿಯ ಕುಟುಂಬದಲ್ಲಿ ಜಮೀನಿನ ವಿಚಾರದಲ್ಲಿ ಒಂದಷ್ಟು ವಿವಾದಗಳು ಉದ್ಭವಿಸಿದ್ದು ಆ ಸಂದರ್ಭದಲ್ಲಿ ಅದನ್ನು ಬಗೆಹರಿಸಲು ಈ ಹಿರಿಯ ವ್ಯಕ್ತಿ ಅವರ ಮನೆಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಹೀಗೆ ಬಂದು ಹೋಗುತ್ತಿದ್ದ ಅವರಿಗೆ ಯುವತಿಯ ಪರಿಚಯವಾಗಿ, ಅದು ಪ್ರೇಮವಾಗಿ, ಇಬ್ಬರು ಯಾರಿಗೂ ತಿಳಿಯದಂತೆ ಮದುವೆಯಾಗಿ ಈಗ ರಕ್ಷಣೆ ಬೇಕೆಂದು ಕೋರ್ಟ್ ಮೊರೆ ಹೋಗಿದ್ದಾರೆ.