ಕಾರು ತನ್ನ ಮೇಲೆ ಕೆಸರು ಹಾರಿಸದಂತೆ ಕ್ಷಣ ಕೂಡಾ ತಡ ಮಾಡದೇ ಅದ್ಭುತ ಉಪಾಯ ಮಾಡಿದ ಮಹಿಳೆ: ವೈರಲ್ ಆಯ್ತು ವೀಡಿಯೋ

ಮಾನ್ಸೂನ್ ಈಗಾಗಲೇ ಪ್ರಾರಂಭವಾಗಿದೆ. ಹಲವು ಕಡೆಗಳಲ್ಲಿ ಜೋರಾದ ಮಳೆಯೂ ಸಹ ಬೀಳುತ್ತಿದೆ. ಜೋರು ಮಳೆಯ ಕಾರಣದಿಂದಾಗಿ ಅನೇಕ ಕಡೆಗಳಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಮಣ್ಣಿನ ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ. ಇಂತಹ ಸಂದರ್ಭಗಳಲ್ಲಿ ಜನರು ರಸ್ತೆಯ ಬದಿಗಳಲ್ಲಿ ನಡೆದು ಹೋಗುವಾಗ ಯಾವುದಾದರೂ ವಾಹನಗಳು ರಭಸವಾಗಿ ಬಂದರೆ, ಆ ವಾಹನಗಳ ಅಬ್ಬರಕ್ಕೆ ಜನ ಕೆಸರಿನಿಂದ ತೊಯ್ದು ಹೋಗುವುದು ಖಚಿತ. ವಾಹನ ಹೋಗುವ ರಭಸಕ್ಕೆ ರಸ್ತೆಯಲ್ಲಿ ನಿಂತಿರುವ ನೀರು ಅಕ್ಕಪಕ್ಕದ ಜನರ ಮೇಲೆ ಹಾರುತ್ತದೆ. ಅನೇಕರಿಗೆ ಇಂತಹದೊಂದು ಅನುಭವ ಈಗಾಗಲೇ ಆಗಿರಲೂ ಬಹುದು ಅಲ್ಲವೇ?? ಇಂದು ನಾವು ಹೇಳಲು ಹೊರಟಿರುವ ವಿಡಿಯೋ ಕೂಡ ಅಂಥದೇ ಒಂದು ವಿಚಾರದ ಕುರಿತಾಗಿದೆ.

ಒಂದು ವೇಳೆ ರಸ್ತೆಯಲ್ಲಿ ನಡೆಯುವಾಗ ವಾಹನಗಳು ಎಗರಿಸಿಕೊಂಡು ಹೋಗುವ ಹೆಸರಿನ ನೀರು ಮೈಮೇಲೆ ಬೀಳಬಾರದು ಎನ್ನುವುದಾದರೆ ಈ ವಿಡಿಯೋದಲ್ಲಿ ಈ ಮಹಿಳೆ ಮಾಡಿದಂತಹ ಉಪಾಯವನ್ನು ತಪ್ಪದೇ ನೋಡಲೇಬೇಕು. ಹೌದು ಮನಸ್ಸಿಗೆ ಮುದು ನೀಡುತ್ತಿರುವ ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾರವರು ಜುಲೈ 16 ರಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರು, “ಕಾಮನ್ ಸೆನ್ಸ್, ಸ್ವಯಂ ರಕ್ಷಣೆಗೆ ಸುಲಭ ಉಪಾಯ” ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಈ ವೀಡಿಯೋವನ್ನು ಸಾವಿರಾರು ಜನರು ವೀಕ್ಷಣೆಯನ್ನು ಮಾಡಿ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಈ ವಿಡಿಯೋ ಕೇವಲ ಹತ್ತು ಸೆಕೆಂಡ್ ಗಳ ಒಂದು ಸಣ್ಣ ವಿಡಿಯೋ ಆಗಿದೆ. ಈ ವಿಡಿಯೋದಲ್ಲಿ ಗಮನಿಸಿದಾಗ ಯುವತಿಯೊಬ್ಬಳು ರಸ್ತೆಯಲ್ಲಿ ನಡೆದು ಹೋಗುತ್ತಿರುತ್ತಾಳೆ. ಮಳೆಯ ಕಾರಣದಿಂದಾಗಿ ಆಕೆ ನಡೆದು ಹೋಗುತ್ತಿರುವ ಮಣ್ಣಿನ ರಸ್ತೆಯಲ್ಲಿ ನೀರು ತುಂಬಿಕೊಂಡಿರುತ್ತದೆ ಹಾಗೂ ಅದೇ ರಸ್ತೆಯಲ್ಲಿ ಕಾರೊಂದು ಬಹಳ ವೇಗವಾಗಿ ಬರುತ್ತಿರುವುದನ್ನು ಆಕೆ ಗಮನಿಸುತ್ತಾಳೆ. ಕಾರು ಅಷ್ಟು ವೇಗವಾಗಿ ಬಂದರೆ ರಸ್ತೆಯಲ್ಲಿರುವ ಕೆಸರಿನ ನೀರು ತನ್ನ ಮೈಮೇಲೆ ಬೀಳುವುದು ಖಚಿತ ಎನ್ನುವುದನ್ನು ಆಕೆ ಊಹಿಸುತ್ತಾಳೆ. ಇದಾದ ನಂತರ ಆಕೆ ಮಾಡುವ ಕೆಲಸ ಎಲ್ಲರ ಗಮನ ಸೆಳೆಯುತ್ತಿದೆ.

ವೇಗವಾಗಿ ಬರುತ್ತಿರುವ ಕಾರನ್ನು ನೋಡಿದ ಆಕೆ ತಡ ಮಾಡದೆ ಅಲ್ಲೇ ಹುಲ್ಲಿನಲ್ಲಿ ಬಿದ್ದಿದ್ದ ಕಂದನ್ನು ಕೈಗೆತ್ತಿಕೊಂಡು ಆಡಿಸಲು ಪ್ರಾರಂಭಿಸಿ, ಕಾರಿನ ಚಾಲಕನಿಗೆ ಎಚ್ಚರಿಕೆ ಸಂದೇಶ ನೀಡುತ್ತಾಳೆ. ಯುವತಿಯ ಕೈಯಲ್ಲಿ ಕಲ್ಲನ್ನು ನೋಡಿದ ಕಾರಿನ ಚಾಲಕ ತನ್ನ ಕಾರಿನ ವೇಗವನ್ನು ಕಡಿಮೆ ಮಾಡಿ ನಿಧಾನವಾಗಿ ಮುಂದೆ ಸಾಗಿ ಹೋಗುತ್ತಾನೆ. ಕಾರಿನ ವೇಗ ತಗ್ಗಿದ ಕಾರಣ ರಸ್ತೆಯ ಕೆಸರು ರಸ್ತೆ ಪಕ್ಕದಲ್ಲಿದ್ದ ಮಹಿಳೆಯ ಮೇಲೆ ಹಾರುವುದಿಲ್ಲ. ಮಹಿಳೆ ಮಾಡಿದ ಉಪಾಯ ನಿಜಕ್ಕೂ ಒಂದು ಅದ್ಭುತ ಉಪಾಯ ಎನಿಸಿಕೊಂಡು, ನೆಟ್ಟಿಗರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

ವಿಡಿಯೋ ನೋಡಿ

ವಿಡಿಯೋ ನೋಡಿದೆ ಟ್ವಿಟರ್ ಬಳಕೆದಾರರು ವಿವಿಧ ರೀತಿಯಲ್ಲಿ ತಮ್ಮ ಮೆಚ್ಚುಗೆಗಳನ್ನು ಸೂಚಿಸಿದ್ದಾರೆ. ಟ್ವಿಟರ್ ಬಳಕೆದಾರೊಬ್ಬರು, “ಅದ್ವಿತೀಯ ಉಪಾಯ, ಸ್ವಯಂ ರಕ್ಷಣೆಗೆ ಉತ್ತಮ ಉಪಾಯ” ಎಂದು ಹೇಳಿದ್ದಾರೆ. ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು, “ಲಾಟಿ ಬಳಸದೆಯೇ ಕಾರಿನ ವೇಗ ಕಡಿಮೆಯಾಗಿ ಹೋಯಿತು” ಎಂದು ಹಾಸ್ಯ ಚಟಾಕಿ ಯನ್ನು ಹಾರಿಸಿದ್ದಾರೆ. ಮತ್ತೊಬ್ಬರು, “ಗಾಂಧಿ ಗಿರಿಯನ್ನು ಬಿಟ್ಟು, ಮುಳ್ಳಿಗೆ ಮುಳ್ಳು ಎನ್ನುವ ನೀತಿಯನ್ನು ಅನುಸರಿಸಬೇಕು” ಎಂದಿದ್ದಾರೆ. 12 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿರುವ ಈ ವಿಡಿಯೋಗೆ ಒಂದು ಸಾವಿರಕ್ಕಿಂತ ಹೆಚ್ಚು ಜನರು ಲೈಕ್ ಗಳನ್ನು ನೀಡಿದ್ದಾರೆ.