ಮುಂಬೈಯಿಂದ ದರಬಂಗಾ ತಲುಪಿದ ವಲಸೆ ಮಹಿಳೆಗೆ ಜನಿಸಿತು ಗಂಡು ಮಗು, ಹೆಸರಿಟ್ಟಳು “ಸೋನು ಸೂದ್!”
ಕರೋನಾ ವೈರಸ್ ನಿಂದ ಸುರಕ್ಷಿತವಾಗಿರುವ ಸಲುವಾಗಿ ದೇಶದಲ್ಲಿ ಲಾಕ್ಡೌನ್ ಮುಂದುವರೆದಿದೆ. ನಟ ಸೋನು ಸೂದ್ ಈ ಕಷ್ಟದ ಸಮಯದಲ್ಲಿ ಜನರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ಅವರು ಮುಂಬಯಿಯಿಂದ ವಲಸೆ ಕಾರ್ಮಿಕರನ್ನು ಬಸ್ಗಳಲ್ಲಿ ತಮ್ಮ ಊರಿಗೆ ಸಾಗಿಸುತ್ತಿದ್ದಾರೆ. ಸೋನು ಸೂದ್ ಹಗಲು ರಾತ್ರಿ ಎನ್ನದೆ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸೋನು ಸೂದ ಅವರು ಮನೆಗೆ ಕಳುಹಿಸಿದ ವಲಸೆ ಕಾರ್ಮಿಕರಲ್ಲಿ ಒಬ್ಬ ಗರ್ಭಿಣಿ ಸ್ತ್ರೀ ಮಗುವಿಗೆ ಜನ್ಮ ನೀಡಿದಳು ಅಲ್ಲದೆ ಅದಕ್ಕೆ ಸೋನು ಎಂದು ಹೆಸರಿಟ್ಟರು. ಈ ವಿಷಯ ಸೋನು ಸೂದ್ ಅವರ ಹೃದಯವನ್ನು ತಟ್ಟಿದೆ.
ಮಗುವಿನ ಹೆಸರು ಸೋನು ಸೂದ್ ಶ್ರೀವಾಸ್ತವ . ಸೋನು ಸೂದ್ ಅವರ ಹೆಸರು ಜನರ ಮನಸಲ್ಲಿ ಅಚ್ಚರಿಯಾಗಿ ಉಳಿದು ಬಿಟ್ಟಿದೆ. ತಮಾಷೆಯ ಘಟನೆಯ ಬಗ್ಗೆ ಅವರು ಬಾಂಬೆ ಟೈಮ್ಸ್ಗೆ ತಿಳಿಸಿದರು. ಮೇ 12 ರಂದು ದರ್ಬಂಗಾಗೆ ಒಂದು ಗುಂಪನ್ನು ಕಳುಹಿಸಿದ್ದೇನೆ ಎಂದು ಸೋನು ಹೇಳಿದ್ದಾರೆ. ಈ ಗುಂಪಿನ ಇಬ್ಬರು ಮಹಿಳೆಯರು ಗರ್ಭಿಣಿಯಾಗಿದ್ದರು. ಗುಂಪು ಮನೆಗೆ ತಲುಪಿದ ತಕ್ಷಣವೇ ಆ ಗುಂಪಿನಲ್ಲಿದ್ದ ಒಬ್ಬ ಗರ್ಭಿಣಿ ಮಹಿಳೆ ಮಗುವಿಗೆ ಜನ್ಮ ನೀಡಿದಳು. ಮನೆಯವರು ಸೋನು ಅವರನ್ನು ಕರೆ ಮಾಡಿ ತಮ್ಮ ಮಗನ ಹೆಸರು ಸೋನು ಸೂದ್ ಎಂದು ಹೆಸರಿಟ್ಟಿದ್ದೇವೆ ಎಂದು ತಿಳಿಸಿದರು. ಆಗ ಸೋನು ಅವರು ನಿಮ್ಮ ಮಗನ ಹೆಸರು ಬರೀ ಸೋನು ಇಟ್ಟಿದ್ದರೆ ಆತನ ಹೆಸರು ಸೋನು ಶ್ರೀವಾತ್ಸವ ವಾಗುವದು ಸೋನು ಸೂದ್ ಆಗುವದಿಲ್ಲ ಎಂದು ಅವರನ್ನು ಪ್ರಶ್ನಿಸಿದರು, ಆಗ ಅವರು ಅಲ್ಲ ಸರ್ ನನ್ನ ಮಗನ ಹೆಸರು ಸೋನು ಸೂದ್ ಶ್ರೀವಾತ್ಸವ ಎಂದು ಆಗುವದು ಎಂದು ಮರು ಉತ್ತರಿಸಿದರು. ಈ ಘಟನೆ ತುಂಬಾ ಹೃದಯ ತಟ್ಟಿದೆ ಎಂದು ಸೋನುಸೂದ್ ಅವರು ಬಾಂಬೆ ಟೈಮ್ಸ್ ನಲ್ಲಿ ತಿಳಿಸಿದ್ದಾರೆ.

ರಾಜ್ಯಪಾಲರು ಸೋನು ಸೂದ್ ಅವರನ್ನು ಕಾಫಿಗೆ ಅಮಂತ್ರಿಸಿದ್ದಾರೆ.
ಸೋನು ಸೂದ್ಅವರಿಗೆ ಬುಧವಾರ ತುಂಬಾ ವಿಶೇಷ ದಿನವಾಗಿತ್ತು. ಏಕೆಂದರೆ ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕೊಶ್ಯರಿ ಸೋನು ಸೂದ್ ಅವರನ್ನು ಕರೆದು ಅಭಿನಂದಿಸಿದರು. ಈ ಘಟನೆ ತನಗೆ ಗೌರವ ಹೆಚ್ಚಿಸಿದೆ ಎಂದು ಸೋನು ಸೂದ್ ಹೇಳುತ್ತಾರೆ. “ಅವರು ನನ್ನ ಕೆಲಸವನ್ನು ಬಾಯ್ತುಂಬ ಹೊಗಳಿದ್ದಾರೆ” ಎಂದು ಸೋನು ಹೇಳಿದರು. ಅಲ್ಲದೆ ರಾಜ್ಯಪಾಲರು ಸೋನು ಅವರಿಗೆ “ನಾವು ಭೇಟಿಯಾಗಬೇಕು, ನಾಳೆ ಅಥವಾ ನಾಡಿದ್ದು ಜೊತೆಗೂಡಿ ಕಾಫಿ ಕುಡಿಯೋಣ” ಎಂದೂ ಹೇಳಿದ್ದಾರಂತೆ..
Thank u so much sir. Your words inspire me to work harder. Will continue working for the migrant brothers and sisters till we unite them with their families 🙏 Honoured. https://t.co/fmZjfCfAqH
— sonu sood (@SonuSood) May 27, 2020
ಪ್ರತಿದಿನ ಸುಮಾರು 56 ಸಾವಿರ ಸಂದೇಶಗಳು ಬರುತ್ತಿವೆ.
ಸೋನು ಅವರ ಹೇಳಿಕೆಯ ಪ್ರಕಾರ, ಜನರು ನಿರಂತರವಾಗಿ ಕರೆ ಮಾಡುತ್ತಿದ್ದಾರೆ, ಎಷ್ಟು ಜನರು ಮೆಸೇಜ್ ಕಳುಹಿಸುತ್ತಿದ್ದಾರೆ. ನನಗೆ ಭಾರತದಾದ್ಯಂತ ಪ್ರತಿದಿನ ಸುಮಾರು 56 ಸಾವಿರ ಸಂದೇಶಗಳು ಬರುತ್ತಿವೆ. ಇದು ಒಂದು ಪ್ರಶ್ನೆ ಆದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಸಹ ಒಂದು ಪ್ರಕಾರದ ನೆಮ್ಮದಿ ಕೊಡುತ್ತದೆ. ದೇವರು ಏನೇನು ಕಲಿಸುತ್ತಾನೆ ಮತ್ತು ಏನೇನೂ ಮಾಡಿಸುತ್ತಾನೆ ಅವನಿಗೆ ಬಿಟ್ಟಿದ್ದು. ಆದರೆ ಈ ಅನುಭವ ತುಂಬಾ ಅದ್ಭುತವಾಗಿದೆ. ಇಂದು ನಾನು ಎಲ್ಲೆಡೆಯಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಿದ್ದೇನೆ. ಎಂದು ಸೋನು ಸೂದ ಅವರು ಹೇಳಿದ್ದಾರೆ.
ಸೋನು ಸೂದ್ಗೆ ಮಲಗಲು ಸಾಧ್ಯವಾಗುತ್ತಿಲ್ಲ
“ನಿಮ್ಮ ದಿನವು ಬೇಗನೆ ಪ್ರಾರಂಭವಾಗುತ್ತದೆಯೇ ಎಂದು ಸೋನು ಅವರನ್ನು ಕೇಳಿದಾಗ? ಅವರು, “ನಾವು ಎಲ್ಲಿ ಮಲಗಿಕೊಳ್ಳುವದೇ ಇಲ್ಲ. ನಾನು ಕೆಲವೊಮ್ಮೆ ಬೆಳಗ್ಗಿನ 4 ಗಂಟೆಯವರೆಗೆ ಎಚ್ಚರಿಕೆಯಿಂದ ಇರುತ್ತೇನೆ, ಕೆಲವೊಮ್ಮೆ ಬೆಳಗ್ಗೆ 6 ಗಂಟೆಯವರೆಗೆ ಮಲಗುವದಿಲ್ಲ ” ಎಂದು ಸೋನು ಸೂದ್ ಅವರು ಮರು ಉತ್ತರಿಸಿದರು.