ಸೂಪ್ ಮಾಡಲು ಹಾವನ್ನು ತುಂಡು ತುಂಡಾಗಿ ಕತ್ತರಿಸಿದ ಶೆಫ್: 20 ನಿಮಿಷಗಳ ನಂತರ ಹಾವು ತನ್ನ ಸಾವಿನ ಸೇಡು ತೀರಿಸಿಕೊಂಡೇ ಬಿಟ್ಟಿತು!
ಸಾವು ಯಾರಿಗೆ? ಹೇಗೆ? ಯಾವಾಗ ? ಬರಬಹುದು ಎನ್ನುವುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಮರಣ ಎನ್ನುವುದು ವ್ಯಕ್ತಿಯೊಬ್ಬರ ಜೀವನದಲ್ಲಿ ಯಾವ ಮಾರ್ಗದಲ್ಲಿ ಬೇಕಾದರೂ ಬರಬಹುದು. ಜಗತ್ತಿನಲ್ಲಿ ವರ್ಷವೊಂದಕ್ಕೆ ಸುಮಾರು ಒಂದು ಲಕ್ಷ ಜನರು ಹಾವಿನ ಕಡಿತಕ್ಕೆ ಒಳಗಾಗಿ ಸಾವನ್ನಪ್ಪುತ್ತಿದ್ದಾರೆ. ಮನುಷ್ಯನನ್ನು ತನ್ನ ವಿಷದಿಂದ ಕೊಲ್ಲುವ ಹಾವು ನಾನು ಸಾಯುವುದಿಲ್ಲ, ಅದು ಬದುಕಿರುತ್ತದೆ. ಆದರೆ ಚೀನಾದಲ್ಲಿ ನಡೆದಿರುವ ಘಟನೆಯೊಂದರಲ್ಲಿ ನಾಗರ ಹಾವೊಂದು ಬಾಣಸಿಗ( ಶೆಫ್) ಒಬ್ಬರನ್ನು ತಾನು ಸತ್ತ 20 ನಿಮಿಷಗಳ ನಂತರ ಕಚ್ಚಿ ಸಾಯಿಸಿದ ವಿಚಿತ್ರವಾದ ಘಟನೆ ನಡೆದಿದೆ. ಹೌದು ಹಾವಿನ ಕತ್ತರಿಸಿದ ತಲೆಯನ್ನು ತಟ್ಟೆಯಲ್ಲಿ ಇಟ್ಟಿದ್ದ ಶೆಫ್ ನನ್ನು ಅದೇ ಹಾವು ಕಚ್ಚಿರುವ ವಿಲಕ್ಷಣ ಘಟನೆ ಇದಾಗಿದೆ. ಇಂತಹುದೊಂದು ವಿಚಿತ್ರವಾದ ಪ್ರಕರಣ ಚೀನಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ದಕ್ಷಿಣ ಚೀನಾದಲ್ಲಿ ಹಾವಿನ ಚರ್ಮದಿಂದ ಹಾಗೂ ಮಾಂಸದಿಂದ ತಯಾರಿಸಲಾಗುವ ಸೂಪ್ ಗೆ ಬಹಳ ಬೇಡಿಕೆ ಇದ್ದು, ಇಲ್ಲಿನ ಜನರು ಕೋಬ್ರಾ ಸೂಪನ್ನು ಬಹಳ ಇಷ್ಟಪಟ್ಟು ಕುಡಿಯುತ್ತಾರೆ. ಹಾವಿನ ಚರ್ಮವನ್ನು ತೆಗೆದು ಅದರ ಮಾಂಸವನ್ನು ತುಂಡಾಗಿ ಕತ್ತರಿಸಿ, ಬೇಯಿಸಿ ವಿಶೇಷವಾದಂತಹ ಸೂಪ್ ತಯಾರಿಸಲಾಗುತ್ತದೆ. ಆದರೆ ಚೀನಾದ ಫೋಶನ್ ನಲ್ಲಿ ವಾಸಿಸುತ್ತಿರುವ ಬಾಣಸಿಗ ಪೆಂಗ್ ಫ್ಯಾನ್ ಗೆ ಈ ಸೂಪನ್ನು ತಯಾರಿಸುವುದು ಕಂಟಕವಾಗಿ ಪರಿಣಮಿಸಿದೆ. ಕೋಬ್ರಾ ಸೂಪ್ ತಯಾರು ಮಾಡುವಾಗ ಆತ ಸತ್ತ ಹಾವಿನ ಕಡಿತದಿಂದ ಮರಣ ಹೊಂದಿರುವುದು ಬಹಳ ವಿಚಿತ್ರ ಎನಿಸಿದೆ. ಪೆಂಗ್ ಅವರ ರೆಸ್ಟೋರೆಂಟ್ ನಲ್ಲಿ ಸಿಗುವ ಆಹಾರ ಪದಾರ್ಥಗಳಲ್ಲಿ ಕೋಬ್ರಾ ಸ್ನೇಕ್ ಕೂಡಾ ಒಂದಾಗಿದೆ.
ಇವರ ರೆಸ್ಟೋರೆಂಟ್ ನಲ್ಲಿ ಜನರು ಬಹಳ ಇಷ್ಟಪಟ್ಟು ಅದನ್ನು ಕುಡಿಯಲು ಅಲ್ಲಿಗೆ ಬರುತ್ತಾರೆ. ಘಟನೆ ನಡೆದ ದಿನ ಪೆಂಗ್ ರೆಸ್ಟೋರೆಂಟಿನ ಅಡುಗೆ ಮನೆಯಲ್ಲಿ ಕೋಬ್ರಾ ಸೂಪೂ ತಯಾರು ಮಾಡುವುದಕ್ಕಾಗಿ ಒಂದು ಹಾವನ್ನು ಕತ್ತರಿಸಿ, ಅದನ್ನು ತುಂಡು ತುಂಡು ಮಾಡಿ, ಹಾವಿನ ತಲೆಯನ್ನು ಒಂದು ಪ್ಲೇಟ್ ನಲ್ಲಿ ಇಟ್ಟು, ಉಳಿದ ಭಾಗವನ್ನು ಬೇಯಿಸಲು ಇಟ್ಟಿದ್ದಾರೆ ಎನ್ನಲಾಗಿದೆ. ಹಾವನ್ನು ಕತ್ತರಿಸಿದ ನಂತರ ಅವರು ಅಡುಗೆಮನೆಯನ್ನು ಸ್ವಚ್ಛಗೊಳಿಸುತ್ತಿರುವ ವೇಳೆಯಲ್ಲಿ ಹಾವಿನ ತಲೆಯನ್ನು ಕಸದ ಬುಟ್ಟಿಗೆ ಎಸೆಯಲು ಪ್ಲೇಟ್ ಬಳಿ ತನ್ನ ಕೈ ಇಟ್ಟಾಗ ಹಾವು ಆತನ ಕೈಯನ್ನು ಕಚ್ಚಿದೆ. ಹಾವಿನ ತಲೆ ಅದನ್ನು ಕತ್ತರಿಸಿದ 20 ನಿಮಿಷಗಳ ನಂತರ ಸಹ ಜೀವಂತವಾಗಿತ್ತು ಎನ್ನುವುದು ಒಂದು ಅದ್ಭುತವೆನಿಸಿದೆ.

ಕೋಬ್ರಾ ವಿಷವು ತುಂಬಾ ಅಪಾಯಕಾರಿ. ಅದರ ಒಂದು ಹನಿ ಕೂಡ ಜೀವವನ್ನು ತೆಗೆಯಬಲ್ಲದು. ಕೋಬ್ರಾ ವಿಷವು ನ್ಯೂರೋಟಾಕ್ಸಿನ್ಗಳನ್ನು ಹೊಂದಿರುತ್ತದೆ, ಅದರ ಒಂದು ಹನಿ ಕೇವಲ 30 ನಿಮಿಷಗಳಲ್ಲಿ ಯಾರನ್ನಾದರೂ ಕೊಲ್ಲಬಲ್ಲದು. ಕೋಬ್ರಾ ಕಡಿತದ ನಂತರ ಅದರ ಪರಿಣಾಮ ದೇಹದಲ್ಲಿ ಪಾರ್ಶ್ವವಾಯು ಆದ ಅನುಭವ ಆಗುತ್ತದೆ, ನಂತರ ಅವರು ಉಸಿರುಗಟ್ಟಿ ಸಾಯುತ್ತಾರೆ. ಕೋಬ್ರಾ ವಿಷದಿಂದ ಪ್ರಾಣ ಉಳಿಸುವ ಲಸಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಅದನ್ನು ತಕ್ಷಣವೇ ತೆಗೆದುಕೊಳ್ಳಬೇಕು. ಆದರೆ ಪೆಂಗ್ಗೆ ಹಾವು ಕಚ್ಚಿದ ನಂತರ ಸರಿಯಾದ ಸಮಯದಲ್ಲಿ ಔಷಧಿ ಸಿಗಲಿಲ್ಲ, ಇದರಿಂದಾಗಿ ಆತ ಅರ್ಧ ಗಂಟೆಯಲ್ಲಿ ಸಾವನ್ನಪ್ಪಿದ. ಘಟನೆಯ ಸಮಯದಲ್ಲಿ, ಅನೇಕ ಗ್ರಾಹಕರು ಸೂಪ್ ಕುಡಿಯಲು ರೆಸ್ಟೋರೆಂಟ್ಗೆ ಬಂದಿದ್ದರು.
ಚೀನಾ ಮಾತ್ರವೇ ಅಲ್ಲದೆ ವಿಶ್ವದ ಇನ್ನು ಕೆಲವು ಭಾಗಗಳಲ್ಲಿ ಜನರು ಕೋಬ್ರಾ ಸೂಪನ್ನು ಬಹಳ ಇಷ್ಟಪಟ್ಟು ಕುಡಿಯುತ್ತಾರೆ. ಇನ್ನು ಚೀನಾದಲ್ಲಿ ನಡೆದ ಘಟನೆಯ ಕುರಿತಾಗಿ ಉರಗ ತಜ್ಞರು ಆಶ್ಚರ್ಯವನ್ನು ವ್ಯಕ್ತ ಪಡಿಸುತ್ತಾ, ತಲೆಯನ್ನು ಕತ್ತರಿಸಿದ 20 ನಿಮಿಷಗಳ ನಂತರವೂ ಹಾವಿನ ತಲೆ ಜೀವಂತವಾಗಿರುವುದು ಆಶ್ಚರ್ಯವನ್ನು ಉಂಟು ಮಾಡಿದೆ ಎಂದು ಹೇಳಿದ್ದಾರೆ. ಹಾವನ್ನು ಕತ್ತರಿಸಿದ ನಂತರವೂ ಅದರ ತಲೆಯಲ್ಲಿ ಕೆಲವು ಕಾಲ ವಿಷ ಸಕ್ರಿವಾಗಿರುತ್ತದೆ ಎನ್ನುತ್ತಾರೆ ತಜ್ಞರು. ಇನ್ನು ಈ ಘಟನೆಯ ನಂತರ ಸೂಪ್ ಕುಡಿಯಲು ರೆಸ್ಟೋರೆಂಟ್ ಗೆ ಬಂದಿದ್ದ ಜನರು ಸೂಪ್ ಕುಡಿಯದೇ ಹಾಗೇ ಅಲ್ಲಿಂದ ಹೊರಟು ಹೋಗಿದ್ದು, ವಿಷಯ ತೀವ್ರವಾದ ಚರ್ಚೆಗೆ ಕಾರಣವಾಗಿದೆ.