ಟಾಲಿವುಡ್ ನ ಜಿಗರಿ ದೋಸ್ತ್ ಗಳ ನಡುವೆ ಅಸಮಾಧಾನದ ಅಲೆ?? ಇದ್ದಕ್ಕಿದ್ದಂತೆ ಈ ಸ್ನೇಹದಲ್ಲಿ ಅಸಮಾಧಾನ ಮೂಡಿದ್ದೇಕೆ??

ಟಾಲಿವುಡ್ ಸಿನಿ ರಂಗದಲ್ಲಿ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಹಾಗೂ ನಿರ್ದೇಶಕ ರಾಜಮೌಳಿ ಇಬ್ಬರ ನಡುವೆ ಎಂತಹ ಗಾಢವಾದ ಸ್ನೇಹವಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ಇಬ್ಬರ ನಡುವಿನ ಸ್ನೇಹ ಪ್ರಭಾಸ್ ನಾಯಕ ನಟನಾಗಿ ನಟಿಸಿದ ಛತ್ರಪತಿ ಸಿನಿಮಾದಿಂದ ಆರಂಭವಾಯಿತು. ಅನಂತರ ಬಾಹುಬಲಿ ಮೂಲಕ ಅವರ ಸ್ನೇಹ ಇನ್ನಷ್ಟು ಬಲವಾಯಿತು, ಇಬ್ಬರೂ ಮತ್ತಷ್ಟು ಆತ್ಮೀಯರು ಆದರು. ಆದರೆ ಈಗ ಈ ಇಬ್ಬರ ಸ್ನೇಹದಲ್ಲಿ ಬಿರುಕು ಉಂಟಾಗಿದೆಯಾ?? ರಾಜಮೌಳಿ ಬಗ್ಗೆ ಪ್ರಭಾಸ್ ಬೇಸರ ಹಾಗೂ ಅಸಮಾಧಾನಗೊಂಡಿದ್ದಾರಾ?? ಎನ್ನುವ ಪ್ರಶ್ನೆಗಳು ಮೂಡಿದ್ದು, ಆಪ್ತ ವಲಯ ಹಾಗೂ ಅಭಿಮಾನಿಗಳ ವಲಯದಲ್ಲಿ ಇಂತಹುದೊಂದು ಚರ್ಚೆ ಈಗಾಗಲೇ ಪ್ರಾರಂಭವಾಗಿದೆ.

ಈ ಇಬ್ಬರ ನಡುವೆ ಅಸಮಾಧಾನಕ್ಕೆ ಕಾರಣ ಅವರ ಆರ್ ಆರ್ ಆರ್ ಮತ್ತು ರಾಧೇ ಶ್ಯಾಮ್ ಸಿನಿಮಾಗಳು ಇರಬಹುದೇ ? ಎಂದು ನೀವು ಊಹಿಸುವುದಾದರೆ ನಿಮ್ಮ ಊಹೆ ಖಂಡಿತ ಸರಿ ಇದೆ.
ಈ ಇಬ್ಬರ ನಡುವಿನ ಅಸಮಾಧಾನಕ್ಕೆ ಮುಖ್ಯ ಕಾರಣವೇ ಅವರ ಪ್ರತಿಷ್ಠಿತ ಸಿನಿಮಾಗಳಾಗಿದ್ದು ಈಗ ಇವುಗಳ ಬಿಡುಗಡೆ ಹಾಗೂ ಹಣ ಗಳಿಕೆಯ ವಿಚಾರದಲ್ಲಿ ಘರ್ಷಣೆ ಉಂಟಾಗಬಹುದು ಎನ್ನಲಾಗಿದೆ. ಪ್ರಭಾಸ್ ನಾಯಕ ನಟನಾಗಿರುವ ರಾಧೇ ಶ್ಯಾಮ್ ಸಿನಿಮಾ 2022, ಜನವರಿ 14 ಸಂಕ್ರಾಂತಿಗೆ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಈ ಹಿಂದೆಯೇ ಘೋಷಣೆಯನ್ನು ಮಾಡಿದ್ದರು.

ಈಗ ನಿರ್ದೇಶಕ ರಾಜಮೌಳಿ ತಮ್ಮ ಪ್ರತಿಷ್ಠಿತ ಸಿನಿಮಾ ಆರ್ ಆರ್ ಆರ್ ಅನ್ನು ಜನವರಿ 7, 2022 ಕ್ಕೆ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ವಾಸ್ತವದಲ್ಲಿ ರಾಜಮೌಳಿ ತಮ್ಮ ಸಿನಿಮಾವನ್ನು ದಸರ ಸಮಯಕ್ಕೆ ಬಿಡುಗಡೆ ಮಾಡಲು ತಯಾರಿ ನಡೆಸಿದ್ದರು, ಆದರೆ ಕೊರೊನಾ ಆತಂಕ ಹಾಗೂ ಗಲ್ಲಾ ಪೆಟ್ಟಿಗೆ ದೃಷ್ಟಿಯಿಂದ ಆ ಯೋಜನೆಯನ್ನು ಕೈ ಬಿಟ್ಟಿದ್ದಾರೆ. ಈಗ ರಾಜಮೌಳಿ ತಮ್ಮ ಸಿನಿಮಾವನ್ನು ಜನವರಿಯಲ್ಲಿ ಬಿಡುಗಡೆ ಮಾಡಲು ಮುಂದಾದರೆ ಇದು ಅನೇಕ ನಿರ್ಮಾಪಕರ ಮೇಲೆ ಒಂದು ದೊಡ್ಡ ಹೊಡೆತವನ್ನು ನೀಡುವುದು ಅಕ್ಷರಶಃ ಸತ್ಯ ಎನ್ನುವುದು ಎಲ್ಲರಿಗೂ ತಿಳಿದೇ ಇದೆ.

ಒಂದು ವೇಳೆ ಆರ್ ಆರ್ ಆರ್ ಜನವರಿಗೆ ತೆರೆಗೆ ಬರುವುದಾದರೆ ಈಗಾಗಲೇ ತಮ್ಮ ಸಿನಿಮಾಗಳ ಬಿಡುಗಡೆಗೆ ಯೋಜಿಸಿರುವ ನಿರ್ಮಾಪಕ, ನಿರ್ದೇಶಕರು ತಮ್ಮ ಯೋಜನೆಗಳನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಏರ್ಪಡಲಿದೆ.
ಇದೇ ಕಾರಣದಿಂದ ರಾಧೇ ಶ್ಯಾಮ್ ನಿರ್ಮಾಪಕರು ಸಹಾ ಬೇಸರಗೊಂಡಿದ್ದಾರೆ, ಆದರೆ ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆ ದಿನಾಂಕವನ್ನು ಬದಲಿಸಲು ಸಿದ್ಧರಿಲ್ಲ ಎನ್ನಲಾಗಿದೆ. ಈಗ ಪ್ರಭಾಸ್ ಗಾಗಿ ರಾಜಮೌಳಿ ತಮ್ಮ ಯೋಜನೆಯನ್ನು ಬದಲಿಸುವರೋ ಇಲ್ಲವೋ ಕಾದು ನೋಡಬೇಕಾಗಿದೆ.