ಜೊತೆ ಜೊತೆಯಲಿ ಸೀರಿಯಲ್ ಆರ್ಯ-ಅನು ವೈಭವದ ಮದುವೆ ಅಸಲಿಗೆ ವಿದೇಶದಲ್ಲಿ ನಡೆಯಬೇಕಿತ್ತು: ಆದರೆ ಆಗಿದ್ದು ಮಾತ್ರ ಬೇರೆ‌

ಕನ್ನಡ ಕಿರುತೆರೆಯ ಲೋಕದಲ್ಲಿ ತನ್ನದೇ ಆದ ಜನಪ್ರಿಯತೆ ಪಡೆದು ಮುನ್ನುಗ್ಗುತ್ತಿರುವ ಸೀರಿಯಲ್ ಜೊತೆಜೊತೆಯಲಿ. ಸೀರಿಯಲ್ ಆರಂಭದಲ್ಲೇ ಟಿ ಆರ್ ಪಿ ಗಳಿಕೆಯಲ್ಲಿ ಹೊಸ ದೊಂದು ದಾಖಲೆಯನ್ನು ಬರೆದು, ಕಿರುತೆರೆ ಇತಿಹಾಸದಲ್ಲಿ ಹೊಸದೊಂದು ಅಧ್ಯಾಯವನ್ನು ತೆರೆದಿತ್ತು. ದೀರ್ಘ ಸಮಯದ ವರೆಗೆ ಟಿ ಆರ್ ಪಿ ವಿಚಾರದಲ್ಲಿ ಮುಂದೆ ಇದ್ದ ಜೊತೆ ಜೊತೆಯಲಿ ಸೀರಿಯಲ್ ನಂಬರ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡು ರೂಲ್ ಮಾಡಿತ್ತು. ಇನ್ನು ಈ ಧಾರಾವಾಹಿ ಮೂಲಕ ಜನರ ಮುಂದೆ ಬಂದ ಕಲಾವಿದರು ಇಂದು ನಾಡಿನ ಮೂಲೆ ಮೂಲೆಗಳಲ್ಲಿ ತಮ್ಮ ಪಾತ್ರದ ಹೆಸರಿನ ಮೂಲಕವೇ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದಿನೇ ದಿನೇ ಹೊಸ ಹೊಸ ಟರ್ನ್ ಮತ್ತು ಟ್ವಿಸ್ಟ್ ಗಳ ಮೂಲಕ ಸೀರಿಯಲ್ ನ ಕಥೆ ರೋಚಕ ಘಟ್ಟಗಳ ಕಡೆಗೆ ಸಾಗಿದೆ.

ಇದೀಗ ಕಿರುತೆರೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಎನ್ನುವಂತೆ ಇದೇ ಎರಡು ವಾರಗಳಿಂದ ಸೀರಿಯಲ್ ನ ನಾಯಕ ಆರ್ಯವರ್ಧನ್ ಮತ್ತು ನಾಯಕಿ ಅನು ಸಿರಿಮನೆ ಮದುವೆಯ ಎಪಿಸೋಡ್ ಗಳು ಕಲ್ಯಾಣೋತ್ಸವ ರೂಪದಲ್ಲಿ ಮೂಡಿ ಬರುತ್ತಿದ್ದು, ಈ ಅದ್ದೂರಿಯಾದ, ವೈಭವೋಪೇತ ಮದುವೆಯನ್ನು ನೋಡಿ ಪ್ರೇಕ್ಷಕರು ಆಶ್ಚರ್ಯಪಡುತ್ತಿರುವುದು ಮಾತ್ರವೇ ಅಲ್ಲದೇ ಅಪಾರವಾದ ಪ್ರೀತಿ, ಮೆಚ್ಚುಗೆಯನ್ನು ವ್ಯಕ್ತಪಡಿಸುವಾಗಲೇ, ಹೊಸ ವಿಷಯವೊಂದು ಹೊರಗೆ ಬಂದು ಸದ್ದು ಮಾಡಿದೆ. ಹೌದು ವಾಸ್ತವವಾಗಿ ಈ ಸೀರಿಯಲ್ ನಲ್ಲಿ ಅನು ಆರ್ಯ ಮದುವೆ ಚಿತ್ರೀಕರಣ ವಿದೇಶದಲ್ಲಿ ಮಾಡುವ ಆಲೋಚನೆ ಇತ್ತು ಎನ್ನಲಾಗಿದೆ.

ಧಾರಾವಾಹಿ ತಂಡವು ಅನು ಆರ್ಯ ಮದುವೆಯ ದೃಶ್ಯಗಳನ್ನು ವಿದೇಶದಲ್ಲಿ ಬಹಳ ಅದ್ದೂರಿಯಾಗಿ ಚಿತ್ರೀಕರಣ ನಡೆಸಲು ಯೋಜಿಸಿತ್ತು ಎನ್ನಲಾಗಿದ್ದು, ವಿದೇಶ ಗಳಲ್ಲಿ ಮದುವೆಯಾದ ಸೆಲೆಬ್ರಿಟಿಗಳ ಮದುವೆಯ ವೈಭವವನ್ನು ಸೀರಿಯಲ್ ನಲ್ಲಿ ಸಹಾ ತೋರಿಸಲು ಯೋಜನೆ ಸಿದ್ದಪಡಿಸಲಾಗಿತ್ತು ಎನ್ನಲಾಗಿದ್ದು, ಆದರೆ ಕೊರೊನಾ ಕಾರಣದಿಂದ, ಲಾಕ್ ಡೌನ್ ಪರಿಣಾಮದಿಂದ ಎಲ್ಲವೂ ಸಹಾ ಕೈ ಬಿಡಬೇಕಾಯಿತು ಎನ್ನಲಾಗಿದೆ. ಹಾಗೆಂದ ಮಾತ್ರಕ್ಕೆ ಸೀರಿಯಲ್ ನಲ್ಲಿ ವೈಭವಕ್ಕೆ ಕೊರತೆ ಉಂಟಾಗಿಲ್ಲ. ಮದುವೆಯ ಪ್ರತಿಯೊಂದು ಶಾಸ್ತ್ರವನ್ನು ಸಹಾ ಬಹಳ ಅದ್ದೂರಿಯಾಗಿ ತೋರಿಸುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ಹರಿದು ಬರುತ್ತಿದೆ.