24 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಆಸ್ಪತ್ರೆ ಲಿಫ್ಟ್!! ಬಾಗಿಲು ತೆರೆದಾಗ ಕಂಡ ದೃಶ್ಯ ಬೆಚ್ಚಿ ಬೀಳಿಸಿತ್ತು.

ಜಗತ್ತಿನಲ್ಲೆಡೆ ಅನೇಕ ವರ್ಷಗಳಿಂದ ಮುಚ್ಚಲ್ಪಟ್ಟ ಮನೆಗಳಿಂದ ಆಗಾಗ ಬೆಚ್ಚಿಬೀಳಿಸುವ ಸುದ್ದಿಗಳು ಹೊರಬರುತ್ತಿರುತ್ತವೆ. ಎಷ್ಟೋ ವರ್ಷಗಳಿಂದ ಮನೆಯಲ್ಲಿಯೇ ಕೊಳೆತ ಮೃತದೇಹಗಳು ಸಿಕ್ಕಿದ್ದು ವರದಿಯಾಗಿವೆ. ಸದ್ಯ ಇಂತಹದೇ ಒಂದು ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ. ಬಸ್ತಿ ಹೆಸರಿನ ಜಿಲ್ಲೆಯ ಆಸ್ಪತ್ರೆಯಲ್ಲಿ 24 ವರ್ಷಗಳಿಂದ ಒಂದು ಲಿಫ್ಟ್ ಉಪಯೋಗಿಸದೆ ಹಾಗೆ ಮುಚ್ಚಲ್ಪಟ್ಟಿತ್ತು. 24 ವರ್ಷಗಳ ನಂತರ ಯಾವಾಗ ಈ ಲಿಫ್ಟಿನ ಬಾಗಿಲು ರಿಪೇರ್ ಮಾಡಿ ತೆಗೆಯಲಾಯಿತು ಆಗ ಒಳಗಿನ ದೃಶ್ಯವು ಅಲ್ಲಿದ್ದವರಿಗೆ ಬೆಚ್ಚಿಬೀಳಿಸುವಂತೆ ಇತ್ತು. ಆ ಲಿಫ್ಟ್ ನಲ್ಲಿ ಅನೇಕ ವರ್ಷಗಳಿಂದ ಕೊಳೆತ ಮೃತದೇಹವೊಂದು ಕಂಡುಬಂದಿತ್ತು.

ಪ್ರಸ್ತುತ ಘಟನೆ ಇದೇ ತಿಂಗಳ ಸೆಪ್ಟೆಂಬರ್ 1 ರಂದು ಬೆಳಕಿಗೆ ಬಂದಿದೆ. ಒಪೆಕ್ ಆಸ್ಪತ್ರೆಯ ಲಿಫ್ಟ್ ಕಳೆದ 24 ವರ್ಷಗಳಿಂದ ಮುಚ್ಚಲ್ಪಟ್ಟಿತ್ತು. ಸೆಪ್ಟೆಂಬರ್ 1 ರಂದು ಇಂಜಿನಿಯರುಗಳು ಈ ಲಿಫ್ಟನ್ನು ರಿಪೇರ್ ಮಾಡಿ ಓಪನ್ ಮಾಡಿದರು. ಲಿಫ್ಟ್ ನ ಬಾಗಿಲು ತೆರೆಯುತ್ತಲೇ ಅಲ್ಲಿದ್ದವರಿಗೆ ಶಾಕ್ ಕಾದಿತ್ತು. ಲಿಫ್ಟ್ ನಲ್ಲಿ ಮಾನವನ ಅಸ್ಥಿಪಂಜರ ಬಿದ್ದಿತ್ತು. ಈ ಮೃತದೇಹದ ಗುರುತು ಪತ್ತೆಯಾಗಿಲ್ಲ. ಸದ್ಯ ಡಿಎನ್ಎ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಅನೇಕ ವರ್ಷಗಳ ನಂತರ ಲಿಫ್ಟಿನ ಬಾಗಿಲು ತೆರೆಯುತ್ತಲೇ ಒಳಗೆ ನಿಂತ ಅಸ್ತಿಪಂಜರವನ್ನು ನೋಡಿ ಎಲ್ಲರೂ ಗಾಬರಿಯಾಗಿದ್ದರು. ಇಷ್ಟೊಂದು ವರ್ಷಗಳಿಂದ ಅಸ್ಥಿಪಂಜರ ಒಳಗೆಯೇ ಕೊಳೆತಿತ್ತು. ಇದು ಯಾರಿಗೂ ಗೊತ್ತಾಗಿರಲಿಲ್ಲ. ಪೊಲೀಸರು ಸುತ್ತಮುತ್ತಲಿನ ಪೊಲೀಸ್ ಸ್ಟೇಷನ್ ಗಳಿಗೆ ಮೆಸೇಜ್ ಕಳಿಸಿ ತನಿಖೆ ಆರಂಭಿಸಿದ್ದಾರೆ.

ದೊರೆತ ಮೂಲಗಳ ಮಾಹಿತಿ ಪ್ರಕಾರ, ಪ್ರಸ್ತುತ ಆಸ್ಪತ್ರೆ 1991 ರಲ್ಲಿ ಪ್ರಾರಂಭವಾಗಿತ್ತು. ಮುಂದೆ 97 ರವರೆಗೆ ಲಿಫ್ಟ್ ಚಾಲ್ತಿಯಲ್ಲಿತ್ತು. ಆನಂತರ ಲಿಫ್ಟ್ ಕೆಟ್ಟಿದ್ದರಿಂದ ಅದರ ಉಪಯೋಗ ನಿಲ್ಲಿಸಲಾಯಿತು. ಮುಂದೆ ಆಸ್ಪತ್ರೆಯ ವ್ಯವಸ್ಥಾಪನೆಯು ಸಹ ಲಿಫ್ಟ್ ರಿಪೇರ್ ಮಾಡುವ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಈಗ 24 ವರ್ಷಗಳ ನಂತರ ಲಿಫ್ಟ್ ದುರಸ್ತಿ ಮಾಡಿಸಿ ಬಾಗಿಲು ತೆರೆದರೆ ಒಳಗೆ ಅಸ್ಥಿಪಂಜರ ಕಂಡುಬಂದಿತ್ತು. ಸದ್ಯ ಈ ಮೃತದೇಹ ಯಾರದಿರಬಹುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.