ಡ್ರೈವಿಂಗ್ ಲೈಸೆನ್ಸ್ (DL) ನಿಮ್ಮ ಫೋನ್ ನಲ್ಲಿ ಹೀಗೆ ಸೇವ್ ಮಾಡಿ, ಪೊಲೀಸರ ತಾಪತ್ರಯ ಹಾಗೂ ಫೈನ್ ನಿಂದ ಬಚಾವ್…!
ನೀವು ನಿಮ್ಮ ವಾಹನವನ್ನು ತೆಗೆದುಕೊಂಡು ಎಲ್ಲೇ ಹೋದರೂ ಡ್ರೈವಿಂಗ್ ಲೈಸೆನ್ಸ್ ನಿಮ್ಮ ಹತ್ತಿರ ರೂಲ್ಸ್ ಪ್ರಕಾರ ಇರಲೇಬೇಕು. ಈ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಹೋದರೆ ಪೊಲೀಸರು ನಿಮ್ಮಿಂದ ದಂಡವನ್ನು ವಸೂಲಿ ಮಾಡದೆ ಬಿಡುವದಿಲ್ಲ. ಎಷ್ಟೋ ಸಲ ಲೈಸೆನ್ಸ್ ಇದ್ದರೂ ಮನೆಯಲ್ಲಿ ಅಥವಾ ಆಫೀಸ್ ನಲ್ಲಿ ಉಳಿದು ಹೋದಾಗ ವಿನಾಕಾರಣ ದಂಡ ತೆತ್ತಬೇಕಾಗುವ ಪರಿಸ್ಥಿತಿ ಬರುವದು. ಏಷ್ಟೋ ಜನರಿಗೆ ಡ್ರೈವಿಂಗ್ ಲೈಸನ್ಸ್ ಕಳೆದು ಹೋದರೆ ಮರಳಿ ಪಡೆಯುವ ಸಲುವಾಗಿ ಬೇಡದ RTO ಆಫೀಸಿನ ದಾರಿ ತುಳಿಯುವ ಭಯವೂ ಇರುತ್ತದೆ.
ಈ ಎಲ್ಲ ಕಾರಣಗಳಿಂದ ರಿಲ್ಯಾಕ್ಸ್ ಆಗಲು ಇಂದಿನ ಈ ಲೇಖನದಲ್ಲಿ ನಿಮಗೆ ಒಂದು ಟ್ರಿಕ್ ಹೇಳಲಿದ್ದೇವೆ. ಇದರಿಂದ ನೀವು ಯಾವುದೇ ಸಮಯದಲ್ಲಿ ನಿಮ್ಮ ವಾಹನವನ್ನು ಹೊರಗಡೆ ತೆಗೆದುಕೊಂಡು ಹೋದರೂ ಡ್ರೈವಿಂಗ್ ಲೈಸನ್ಸ್ ಹತ್ತಿರ ಇಲ್ಲದಿರುವರುವ ಟೆನ್ಶನ್ ಬೇಡ. ಪೊಲೀಸರು ಸಹ ನಿಮ್ಮಿಂದ ದಂಡವನ್ನು ವಸೂಲಿ ಮಾಡುವದಿಲ್ಲ. ಡ್ರೈವಿಂಗ್ ಲೈಸೆನ್ಸ್ ಜೊತೆಯಲ್ಲಿ ಇಲ್ಲದಿದ್ದರೂ ನಿಮ್ಮ ಹತ್ತಿರ Digilocker ಅಥವಾ mParivahan App ನ ಸಹಾಯದಿಂದ ಅದರ ಸಾಫ್ಟ್ ಕಾಪಿ ನಿಮ್ಮ ಫೋನ್ ನಲ್ಲಿ ಸೇವ್ ಮಾಡಿ ಇಡಿ.

ಈ ಡ್ರೈವಿಂಗ್ ಲೈಸೆನ್ಸ್ ನ್ನು ನೀವು ಪೊಲೀಸರಿಗೆ ತೋರಿಸಿದರೆ ಅವರು ನಿಮ್ಮಿಂದ ಫೈನ್ ತೆಗೆದುಕೊಳ್ಳುವುದಿಲ್ಲ. ಕೇಂದ್ರೀಯ ಸಾರಿಗೆ ಸಚಿವಾಲಯವು 2018 ರಲ್ಲಿ ಒಂದು ಮಾರ್ಗಸೂಚಿಯನ್ನು ಹೊರಡಿಸಿತ್ತು. ಅದರಲ್ಲಿ Digilocker ಅಥವಾ mParivahan App ನ ಮಾಧ್ಯಮದಿಂದ ಅವಶ್ಯಕತೆ ಬಿದ್ದಲ್ಲಿ ಡ್ರೈವಿಂಗ್ ಲೈಸನ್ಸ್ ತೋರಿಸಬಹುದಾಗಿದೆ.
ಈ ಡಿಜೀಲಾಕರ್ ನಲ್ಲಿ ನೀವು ನಿಮ್ಮ ಅಕೌಂಟ್ ಹೇಗೆ ತಯಾರಿಸಬಹುದು ಎಂಬುದರ ಬಗ್ಗೆ ತಿಳಿಯಿರಿ.

ಎಲ್ಲಕ್ಕೂ ಮೊದಲು ನೀವು DigiLocker ನಲ್ಲಿ ಹೋಗಿ ಅಕೌಂಟ್ ಓಪನ್ ಮಾಡಿ. ಅಕೌಂಟ್ ತಯಾರಿಸಿದ ನಂತರ ನಿಮಗೆ ನಿಮ್ಮ ಮೊಬೈಲ್ ನಂಬರ್ ಮತ್ತು ಆಧಾರ್ ನಂಬರ್ ಮಾಹಿತಿ ನೀಡುವುದು ಅನಿವಾರ್ಯ. ತದನಂತರ DigiLocker ನಲ್ಲಿ 6 ಅಂಕಿಗಳ ಪಿನ್ ಮತ್ತು ಯೂಜರ ನೇಮ್ ಸಹ ಸೈನ್ ಇನ್ ಮಾಡಿ. ಅದಾದ ನಂತರ ನಿಮ್ಮ ರಿಜಿಸ್ಟರ್ ನಂಬರ್ ಗೆ ಒಂದು OTP ಬರುತ್ತದೆ. ಈ ಪಾಸ್ ವರ್ಡ್ ಸಹಾಯದಿಂದ ನೀವು DIgiLocker ನಲ್ಲಿ ಹೋಗಬಹುದು. ಅಲ್ಲಿರುವ ಸರ್ಚ್ ಬಾರ್ ಮೇಲೆ ಹೋಗಿ ಡ್ರೈವಿಂಗ್ ಲೈಸೆನ್ಸ್ ಚೆಕ್ ಮಾಡಿ. ಎಲ್ಲಿ ನೀವು ಲೈಸೆನ್ಸ್ ತಯಾರಿಸಿದ್ದೀರಿ ಆ ರಾಜ್ಯದ ಹೆಸರಿನ ಮೇಲೆ ಕ್ಲಿಕ್ ಮಾಡಿ. ಇಷ್ಟೆಲ್ಲ ಆದ ಮೇಲೆ ನಿಮ್ಮ ಲೈಸೆನ್ಸ್ ನಂಬರ್ ಹಾಕಿ Get Document ಎಂಬ ಬಟನ್ ಪ್ರೆಸ್ ಮಾಡಿ.
ಡ್ರೈವಿಂಗ್ ಲೈಸನ್ಸ್ ನ ಸಾಫ್ಟ್ ಕಾಪಿ ಡೌನ್ ಲೋಡ್ ಮಾಡಿಕೊಳ್ಳಿ.

ಯಾವಾಗ ನಿಮ್ಮ ಮುಂದೆ ಡ್ರೈವಿಂಗ್ ಲೈಸೆನ್ಸ್ ನ ಸಾಫ್ಟ್ ಕಾಪಿ ಓಪನ್ ಆಗುತ್ತದೆ ಆಗ ಅದನ್ನು ಡೌನ್ ಲೋಡ್ ಮಾಡಿ ಸೇವ್ ಮಾಡಿಕೊಳ್ಳಿ. ನೀವು DigiLocker ನಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಾಫ್ಟ್ ಕಾಪಿ ಇಟ್ಟುಕೊಳ್ಳಬಹುದು. ಇದರಿಂದ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮನೆಯಲ್ಲಿ ಮರೆತು ಬರುವದಾಗಲಿ ಅಥವಾ ಅಥವಾ ಸತತ ನಿಮ್ಮ ಹತ್ತಿರ ಇಟ್ಟುಕೊಳ್ಳುವ ಚಿಂತೆಯಿಂದ ಮತ್ತು ಕಳೆದು ಹೋಗುವ ಟೆನ್ಶನ್ ನಿಂದ ಮುಕ್ತಿ ಸಿಗುವದು.