ವಿದೇಶಗಳಲ್ಲಿ ‘ಬ್ಯಾನ್’ ಇವೆ ಈ 10 ವಸ್ತುಗಳು! ಆದರೆ ಭಾರತದಲ್ಲಿ ಮಾತ್ರ ರಾಜಾರೋಷವಾಗಿ ಮಾರಾಟವಾಗುತ್ತವೆ.

ಜಗತ್ತಿನ ಅನೇಕ ದೇಶಗಳಲ್ಲಿ ಬ್ಯಾನ್ ಆಗಿರುವ ಕೆಲವು ಪ್ರಾಡಕ್ಟ್ ಗಳು ಭಾರತದ ಮಾರುಕಟ್ಟೆಯಲ್ಲಿ ಮಾತ್ರ ಯಾವುದೇ ಬ್ಯಾನ್ ಇಲ್ಲ. ಇವುಗಳಲ್ಲಿ ಕೆಲವು ವಸ್ತುಗಳಂತೂ ಭಾರತೀಯರು ದಿನಂಪ್ರತಿ ಉಪಯೋಗಿಸುತ್ತಾರೆ. ಇಂಥದ್ದೇ ಕೆಲವು ಅಪಾಯಕಾರಿ ವಸ್ತುಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುವ. ಈ ವಸ್ತುಗಳು ಭಾರತದಲ್ಲಿ ಸಹಜವಾಗಿ ದೊರಕುತ್ತವೆ. ವಿದೇಶಗಳಲ್ಲಿ ಮಾತ್ರ ದೀಪ ಹಚ್ಚಿ ಹುಡುಕಿದರೂ ದೊರೆಯುವುದಿಲ್ಲ.

01 ಡಿಸ್ಪ್ರಿನ್ –

ತಲೆನೋವಿನಿಂದ ಆರಾಮ ಸಿಗುವ ಸಲುವಾಗಿ ಭಾರತೀಯರು ಡಿಸ್ಪ್ರೀನ್ ಮಾತ್ರೆಯ ಉಪಯೋಗ ಮಾಡುತ್ತಾರೆ. ಇದು ಇಲ್ಲಿಯ ಮಾರುಕಟ್ಟೆಯಲ್ಲಿ ಸಹಜವಾಗಿ ದೊರೆಯುತ್ತದೆ. ಆದರೆ ಅಂತರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದ್ದರಿಂದ ಇದು ಅಮೆರಿಕಾ ಮತ್ತು ಯುರೋಪ್ ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ.

02 ಜೇಲಿ ಸ್ವೀಟ್ –

ಅಮೆರಿಕ, ಕೆನಡಾ, ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಜೇಲಿ ಸ್ವೀಟ್ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಇದು ಮಕ್ಕಳ ಆರೋಗ್ಯಕ್ಕೆ ತುಂಬಾ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ಮಕ್ಕಳಲ್ಲಿ ಉಸಿರು ಗಟ್ಟುವಂತ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಇವು ಭಾರತದ ಮಾರುಕಟ್ಟೆಯಲ್ಲಿ ಸಹಜವಾಗಿ ಸಿಗುತ್ತವೆ.

03 ಕಿಂಡರ್ ಜಾಯ್ –

ಕಿಂಡರ್ ಜಾಯ್ ಸಹ ಮಕ್ಕಳ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಅಮೆರಿಕೆಯಲ್ಲಿ ಬ್ಯಾನ್ ಆಗಿರುವ ಈ ತಿಂಡಿ ಭಾರತದಲ್ಲಿಯ ಮಕ್ಕಳು ಮಾತ್ರ ತುಂಬಾ ಇಷ್ಟದಿಂದ ತಿನ್ನುತ್ತಾರೆ. ನಿಮಗೆ ಕೇಳಿ ಆಶ್ಚರ್ಯವಾಗಬಹುದು, ಇದನ್ನು ಖರೀದಿಸಿ ಹತ್ತಿರ ಇಟ್ಟುಕೊಂಡರೂ ಅಪರಾಧವೇ ಸರಿ. ಇದಕ್ಕಾಗಿ 1.75 ಲಕ್ಷಗಳ ವರೆಗೆ ದಂಡವು ಸಹ ತೆತ್ತಬೇಕಾಗುತ್ತದೆ.

04 ರೆಡ್ ಬುಲ್

ಭಾರತದ ತರುಣರಲ್ಲಿ ಕ್ರೇಜ್ ನಿರ್ಮಾಣ ಮಾಡಿದ ರೇಡ್ ಬುಲ್ ಎನರ್ಜಿ ಡ್ರಿಂಕ್ ಫ್ರಾನ್ಸ್ ಮತ್ತು ಡೆನ್ಮಾರ್ಕ್ ಗಳಂತಹ ದೇಶಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯುರೋಪಿಯನ್ ದೇಶಗಳಾದ ಲಿಥುನಿಯಾ ದೇಶದಲ್ಲಿ ಅಂತೂ 18 ವರ್ಷಕ್ಕಿಂತ ಕೆಳಗಿನವರೆಗೆ ಈ ಡ್ರಿಂಕ್ಸ್ ಕುಡಿಯಲು ಬ್ಯಾನ್ ಮಾಡಲಾಗಿದೆ. ಈ ಡ್ರಿಂಕ್ ಕುಡಿಯುವುದರಿಂದ ಹೃದಯಾಘಾತ, ಡಿಹೈಡ್ರೇಶನ್ ಹಾಗೂ ಹೈಪರ್ ಟೆನ್ಶನ್ ಗಳಂತಹ ಸಮಸ್ಯೆ ಆಗುವ ಸಂಭವ ಇದೆಯಂತೆ.

05 ಡಿ ಕೋಲ್ಡ್ ಟೋಟಲ್ –

ಶೀತ, ನೆಗಡಿಗಾಗಿ ನೀಡುವ ಡಿ ಕೋಲ್ಡ್ ಟೋಟಲ್ ಸಹಿತ ವಿದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಈ ಔಷಧ ಕಿಡ್ನಿಗಾಗಿ ಅಪಾಯಕಾರಿಯಾಗಿದೆ ಎಂದು ಅನೇಕ ಹೆಲ್ಥ ಅಥಾರಿಟಿಯವರು ದಾವೆ ಮಾಡಿದ್ದಾರೆ. ಆದರೆ ಭಾರತದಲ್ಲಿ ಮಾತ್ರ ಇದರ ಮಾರಾಟಕ್ಕೆ ಯಾರು ಕೇಳುವವರಿಲ್ಲ.

06 ಲೈಫ್ ಬಾಯ್ ಸೋಪು

ಲೈಫ್ ಬಾಯ್ ಸಾಬೂನಿಗೆ ಅಮೆರಿಕೆಯಲ್ಲಿ ಆಸ್ಪದವಿಲ್ಲ ಎಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ. ಇದು ನಮ್ಮ ತ್ವಚೆಗೆ ಹಾನಿ ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಹೊರಗೆ ಈ ಸಾಬೂನಿನ ಉಪಯೋಗವನ್ನು ನಾಯಿಯ ಮೈ ತೊಳೆಯಲು ಉಪಯೋಗಿಸುತ್ತಾರೆ. ಆದರೆ ಭಾರತದಲ್ಲಿ ಇದು ತುಂಬಾ ಜನಪ್ರಿಯ ಸಾಬುನಾಗಿದೆ.

07 ಅನ್ ಪಾಶ್ಚರಾಯಿಜ್ಡ ಮಿಲ್ಕ್

ಅಮೆರಿಕ ಮತ್ತು ಕೆನಡಾದಲ್ಲಿ ಅನ್ ಪಾಶ್ಚರಾಯಿಜ್ಡ ಮಿಲ್ಕ್ ಬ್ಯಾನ್ ಇದೆ. ಇದರಲ್ಲಿ ಅನೇಕ ಸೂಕ್ಷ್ಮ ಜೀವ ಜಂತುಗಳು ಇರುತ್ತವೆ ಅಂದು ಆರೋಗ್ಯ ಇಲಾಖೆ ಹೇಳುತ್ತದೆ. ಇದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳು ಆಗುತ್ತವೆ. ಆದರೂ ಭಾರತದಲ್ಲಿ ಮಾತ್ರ ಈ ಹಾಲು ರಾಜಾರೋಷವಾಗಿ ಮಾರಾಟವಾಗುತ್ತದೆ.

08 ಪೇಸ್ಟಿಸೈಡ್ಸ್ –

DDT ಮತ್ತು ಎಂಡೋಸಲ್ಫಾನ್ ನಂತಹ ಸುಮಾರು 60 ಕ್ಕೂ ಹೆಚ್ಚು ಹಾನಿಕಾರಕ ಕೀಟನಾಶಕಗಳನ್ನು ವಿದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಈ ಕೀಟನಾಶಕಗಳು ವಿದೇಶಗಳಲ್ಲಿ ಹಣ್ಣು- ತರಕಾರಿಗಳ ಮಾಧ್ಯಮದಿಂದ ದೇಹದಲ್ಲಿ ಪ್ರವೇಶಿಸುತ್ತವೆ ಹಾಗೂ ವಿವಿಧ ರೋಗಗಳಿಗೆ ಎಡೆ ಮಾಡಿಕೊಡುತ್ತವೆ. ಭಾರತದಲ್ಲಿ ಮಾತ್ರ ಬೆಳೆಯನ್ನು ಕೀಟಗಳಿಂದ ರಕ್ಷಿಸಲು ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ. ಆದರೆ ಜನರ ಮೇಲಾಗುವ ಅಡ್ಡ ಪರಿಣಾಮಗಳನ್ನು ಯಾರು ಲೆಕ್ಕಿಸುವದಿಲ್ಲ.

09 ನಿಮುಲಿಡ್

ಅಮೆರಿಕ, ಇಂಗ್ಲೆಂಡ್ ಮತ್ತು ಕೆನಡಾ ಹಾಗೂ ಆಸ್ಟ್ರೇಲಿಯಾಗಳಂತಹ ದೇಶಗಳಲ್ಲಿ ಈ ಪೇನ್ ಕಿಲ್ಲರ್ ನಿಮುಲಿಡ್ ಮೇಲೆ ಅಧಿಕೃತವಾಗಿ ಬ್ಯಾನ್ ಹಾಕಲಾಗಿದೆ. ಕಾರಣ ಇದು ಲೀವರ್ ಸಲುವಾಗಿ ಅತ್ಯಂತ ಅಪಾಯಕಾರಿಯಾಗಿದೆ. ಭಾರತದಲ್ಲಿ ಮಾತ್ರ ಇದು ಸಹಜವಾಗಿ ಸಿಗುತ್ತದೆ.

10 ಆಲ್ಟೊ 800

ಭಾರತದ ರಸ್ತೆಗಳ ಮೇಲೆ ಓಡಾಡುವ ಆಲ್ಟೊ 800 ಕಾರು ಇದು ಹೆಚ್ಚಿನ ಮಿಡಲ್ ಕ್ಲಾಸ್ ಫ್ಯಾಮಿಲಿಗಳ ಕನಸಿನ ಕಾರಾಗಿದೆ. ಆದರೆ ಇದೇ ಆಲ್ಟೊ 800 ಜಗತ್ತಿನ ಅನೇಕ ದೇಶಗಳಲ್ಲಿ ಬ್ಯಾನ್ ಇದೆ. ಕಾರಣ ಇದು ನ್ಯಾನೋ ಕಾರಿನ ತರ ‘ಗ್ಲೋಬಲ್ NCPA ಕ್ರ್ಯಾಷ್ ಟೆಸ್ಟ್’ ಕ್ಲಿಯರ್ ಮಾಡದ ಕಾರಣದಿಂದ ಅನೇಕ ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ.