ಸಮಂತಾ ಹೇಳ್ತಾರೆ, ನನ್ನದು ಅಫೇರ್ ಇತ್ತು, ನಾನು ಗರ್ಭಪಾತವೂ ಮಾಡಿಕೊಂಡುಬಿಟ್ಟೆ….

ಸೌತ್ ಇಂಡಿಯನ್ ಚಿತ್ರ ಸೃಷ್ಟಿಯ ಜೊತೆಗೆ ಬಾಲಿವುಡ್ ನಲ್ಲಿಯೂ ತಮ್ಮ ಅಭಿನಯದಿಂದ ಛಾಪು ಮೂಡಿಸಿದ ನಟಿ ಸಮಂತಾ ರುತ್ ಪ್ರಭು ಇವರು ತಮ್ಮ ವಿಚ್ಛೇದನೆಯ ನಂತರ ಈಗ ಮೌನ ಮುರಿದಿದ್ದಾರೆ. ಸಮಂತಾ ಅವರ ಮೇಲೆ ಈಗಾಗಲೇ ಅನೇಕ ಆರೋಪಗಳು ವ್ಯಕ್ತವಾಗಿವೆ. ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಬರೆಯುತ್ತಾ ತಮ್ಮನ್ನು ಸಪೋರ್ಟ್ ಮಾಡಿದವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಅದರ ಜೊತೆಗೆ ಸುಳ್ಳು ವದಂತಿಗಳಿಂದ ನಾನು ಕುಗ್ಗಿ ಹೋಗುವದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ.

ಸಮಂತಾ ಅವರ ಪೋಸ್ಟ್ ಹೀಗಿದೆ….

ನನ್ನ ವೈಯಕ್ತಿಕ ಸಂಕಟಗಳ ಈ ಸಮಯದಲ್ಲಿ ನೀವು ತೋರಿಸಿದ ಸಹಾನುಭೂತಿಯಿಂದ ನಾನು ತುಂಬಾ ಪ್ರಭಾವಿತಳಾಗಿದ್ದೆನೆ. ನೀವು ತೋರಿಸಿದ ಸಹಾನುಭೂತಿಗೆ ಕಾಳಜಿ ಮತ್ತು ಸುಳ್ಳು ವದಂತಿಗಳಿಂದ ನನ್ನನ್ನು ರಕ್ಷಿಸಿದ ಸಲುವಾಗಿ ನಿಮಗೆ ನಾನು ಹೃದಯದಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ವಯಕ್ತಿಕ ಜೀವನದಲ್ಲಿಯ ಈ ಸಂಕಟ ಸಮಯದಲ್ಲಿ ನೀವು ನನ್ನ ಜೊತೆಯಾಗಿ ಇದ್ದೀರಿ. ನನ್ನ ಅಫೇರ್ ಇತ್ತು, ನನಗೆ ಮಗು ಬೇಡವಾಗಿತ್ತು, ನಾನು ಅವಕಾಶವಾದಿ ಇದ್ದೇನೆ, ಅದಕ್ಕೂ ಮೇಲ್ಪಟ್ಟು ನಾನು ಗರ್ಭಪಾತವನ್ನು ಮಾಡಿಸಿಕೊಂಡಿದ್ದೇನೆ, ಅಂತೆಲ್ಲ ಸುಳ್ಳು ವದಂತಿಗಳು ಹರಡಿದ್ದವು. ವಿಚ್ಛೇದನೆಯ ಈ ಸಂಪೂರ್ಣ ಪ್ರಕ್ರಿಯೆ ತುಂಬಾ ನೋವಿನಿಂದ ಕೂಡಿರುತ್ತದೆ. ಇದರಿಂದ ಹೊರಬರಲು ನನಗೆ ಸ್ವಲ್ಪ ಸಮಯವನ್ನು ನೀಡಿ. ನನ್ನ ಖಾಸಗಿ ಜೀವನದ ಮೇಲೆ ಆಗುತ್ತಿರುವ ಈ ಶಬ್ದಗಳ ಇರಿತದ ಹಲ್ಲೆಗಳು ನಿಜವಾಗಿಯೂ ಅತ್ಯಂತ ಕೆಟ್ಟದ್ದಾಗಿದೆ. ಆದರೆ ನಾನು ನಿಮಗೆ ಭಾಷೆ ಕೊಡುತ್ತೇನೆ, ಅವರು ಮಾತನಾಡುತ್ತಿರುವ ಈ ರೀತಿಯ ಎಲ್ಲ ಮಾತುಗಳಿಂದ ನಾನು ಕುಗ್ಗಿ ಹೋಗುವಳಲ್ಲ, ಎಂದು ತಮ್ಮ ಮನದಾಳವನ್ನು ಪೋಸ್ಟ್ ಮುಖಾಂತರ ಹೊರ ಹಾಕಿದ್ದಾರೆ.

ಇದಕ್ಕೂ ಮೊದಲು ಸಮಂತಾ ಅವರು ತಮ್ಮ ರೋಷವನ್ನು ವ್ಯಕ್ತ ಮಾಡಿದ್ದರು. ಯಾವಾಗ ಮಹಿಳೆಯರಿಗೆ ಸಂಬಂಧ ಪಟ್ಟಂತೆ ಯಾವುದಾದರೂ ವಿಷಯ ಬರುತ್ತೆ ಆಗ ಅದರಮೇಲೆ ನೈತಿಕವಾಗಿ ಅನೇಕ ಪ್ರಶ್ನೆಗಳನ್ನು ಉಪಸ್ಥಿತ ಮಾಡಲಾಗುತ್ತದೆ. ಅದನ್ನೇ ಒಂದು ವೇಳೆ ಪುರುಷ ಮಾಡಿದರೆ ಆ ವಿಷಯಕ್ಕೆ ಸಂಬಂಧಪಟ್ಟಂತೆ ಯಾರು ಸಹ ಪ್ರಶ್ನೆ ಕೇಳುವುದಿಲ್ಲ ಎಂದು ಬರೆದಿದ್ದಾರೆ. ಸಮಂತ ಅವರು 6 ಅಕ್ಟೋಬರ್ 2017 ರಂದು ನಾಗಚೈತನ್ಯ ಜೊತೆಗೆ ಮದುವೆಯಾಗಿದ್ದರು. ಸತತ ಎರಡು ವರ್ಷ ಒಬ್ಬರಿಗೊಬ್ಬರು ಡೇಟ್ ಮಾಡಿದನಂತರ 2017 ರಲ್ಲಿ ಗೋವಾದಲ್ಲಿ ಇಬ್ಬರು ಮದುವೆಯಾಗಿದ್ದರು. ಇವರಿಬ್ಬರ ‘ಬಿಗ್ ಫ್ಯಾಟ್ ವೆಡ್ಡಿಂಗ್’ ನ ಚರ್ಚೆ ಸಂಪೂರ್ಣ ಫಿಲಂ ಇಂಡಸ್ಟ್ರಿಯಲ್ಲಿ ಆಗಿತ್ತು.