ನೀವೂ ನಂಬಲು ಸಾಧ್ಯವೇ ಇಲ್ಲ, ಈ ಕೋಣವು ರಾತ್ರಿ ವ್ಹಿಸ್ಕಿ ಕುಡಿಯುತ್ತೆ. ಮನೆಯಲ್ಲಿ, ಕ್ಲಬ್ ನಲ್ಲಿ, ಪಾರ್ಟಿಯಲ್ಲಿ ನಾವು ವ್ಹಿಸ್ಕಿ ಕುಡಿಯುವವರನ್ನು ನೋಡಿದ್ದೇವೆ. ಆದರೆ ಕೋಣ ಯಾವತ್ತಾದರೂ ವ್ಹಿಸ್ಕಿ ಕುಡಿಯುವದನ್ನು ನೋಡಿದ್ದೀರಾ?? ಸುಲ್ತಾನ ಹೆಸರಿನ ಈ ಕೋಣವು ದಿನನಿತ್ಯ
ರಾತ್ರಿ ವ್ಹಿಸ್ಕಿಯನ್ನೇ ಕುಡಿಯುತ್ತೆ…
ಹರಿಯಾಣದ ಈ ಕೋಣವು ಯಾವ ನವಾಬಕ್ಕಿಂತ ಕಡಿಮೆ ಇಲ್ಲ. ನೋಡಿದ ತಕ್ಷಣ ಅದರ ವೈಖರಿ ನಿಮ್ಮ ಕಣ್ಣು ಮುಂದೆ ನಿಲ್ಲುತ್ತೆ. ಇದಕ್ಕೆ ಹರಿಯಾಣಾದ ಎಲ್ಲಕ್ಕಿಂತ ದುಬಾರಿ ಕೋಣವೆಂದೇ ಹೇಳಲಾಗುತ್ತೆ. ಕಾರಣ ಈ ಕೋಣದ ಈಗಿನ ಬೆಲೆ 21 ಕೋಟಿ ರೂಪಾಯಿ ಇದೆ. ದಿನಾಲು ದೇಶಿ ತುಪ್ಪ ಸೇವಿಸುವ ಈ ಸುಲ್ತಾನ ರಾತ್ರಿ ವ್ಹಿಸ್ಕಿ ಕುಡಿಯುತ್ತೆ…
ನಿಮಗೆ ಇದು ಸುಳ್ಳು ಎನಿಸಬಹುದು ಆದರೂ ಸತ್ಯ. ಆರು ಅಡಿ ಉದ್ದ ಹಾಗೂ ಒಂದು ಟನ್ ತೂಕವಿರುವ ಈ ಸುಲ್ತಾನ್ ಅನೇಕ ಸ್ಪರ್ಧೆಗಳನ್ನು ಗೆದ್ದಿದೆ. ಈ ಕೋಣದ ಮಾಲೀಕನು ಇದರ ವೀರ್ಯವನ್ನು ಮಾರಿ ಪ್ರತಿವರ್ಷ 1 ಕೋಟಿಗಿಂತಲೂ ಹೆಚ್ಚು ಹಣವನ್ನು ಸಂಪಾದಿಸುತ್ತಿದ್ದಾನೆ…
ಯುವರಾಜ್
ಈ ಕೋಣದ ಅದೃಷ್ಟ ನೋಡಿ, ಹೇಗಿದೆ ಅಂದ್ರೆ ಇದಕ್ಕೆ ದಿನಾಲು ಬೇರೆ ಬೇರೆ ಬ್ರಾಂಡ್ ನ ವ್ಹಿಸ್ಕಿ ಹಾಗು ಸ್ಕಾಚ್ ಕೊಡಲಾಗುತ್ತೆ. ಆದರೆ ಪ್ರತಿ ಮಂಗಳವಾರ ಇದರ Dry Day ಅಂತನೇ ಹೇಳಬಹುದು. ಆ ದಿನ ಇದಕ್ಕೆ ಮಧ್ಯ ಕುಡಿಸುವದಿಲ್ಲ. ರಾಮನರೇಶ್ ಬೆನ್ನಿವಾಲ್ ಈತನು ಸುಲ್ತಾನ್ ಗೆ ರೋಹತಕ್ ನಿಂದ 2 ಲಕ್ಷ 40 ಸಾವಿರ ರೂಪಾಯಿಗಳಿಗೆ ಖರೀದಿ ಮಾಡಿದ್ದನು.
ಕೆಲ ದಿನಗಳ ನಂತರ ಹೊರ ರಾಷ್ಟ್ರದವನು ಈ ಸುಲ್ತಾನ್ಗೆ 21 ಕೋಟಿ ರೂಪಾಯಿಗಳಿಗೆ ಕೇಳಿದ್ದನು. ಆದರೆ ಮಾಲೀಕನಿಗೆ ಇದನ್ನು ಮಾರಾಟ ಮಾಡಲು ಮನಸ್ಸಿಲ್ಲ. ದಿನಾಲು ಬೆಳಿಗ್ಗೆ ಅಲ್ಪೋಪಹಾರಕ್ಕೆ ದೇಶಿ ತುಪ್ಪ ಹಾಗು ಹಾಲು ಸೇವಿಸುವ ಈ ಸುಲ್ತಾನ್ಗೆ ನೋಡಲು ಬಹಳಷ್ಟು ಜನರು ಬರುತ್ತಿರುತ್ತಾರೆ…
ಹೀಗೆ ಹರಿಯಾಣಾದಲ್ಲಿ ಇನ್ನೊಂದು ಕೋಣ ಇದೆ ಅದರ ಹೆಸರು ಯುವರಾಜ್ ಅದರ ಬೆಲೆ 9 ಕೋಟಿ ರೂಪಾಯಿ ಇದೆ.