ಶಾಲೆಯ ಮೆಟ್ಟಿಲನ್ನೇ ತುಳಿಯದ ಈ ಅಜ್ಜಿ ಯೂಟ್ಯೂಬ್ ನಿಂದ ಇಂದು ತಿಂಗಳಿಗೆ ಗಳಿಸುತ್ತಿದ್ದಾರೆ ಲಕ್ಷಾವಧಿ ರೂಪಾಯಿಗಳನ್ನು!

ಜೀವನದಲ್ಲಿ ಏನಾದರೂ ಮಾಡಿ ಸಾಧಿಸಬೇಕೆಂಬ ಛಲವೊಂದಿದ್ದರೆ ಯಾವುದೇ ವಯಸ್ಸಿನಲ್ಲಿ ಮನುಷ್ಯ ಎಂಥ ಕೆಲಸವನ್ನಾದರೂ ಮಾಡಿ ಜೀವನದಲ್ಲಿ ಯಶಸ್ವಿ ಆಗೇ ಆಗುತ್ತಾರೆ. ಅದಕ್ಕಾಗಿ ಏನಾದರೂ ಹೊಸದನ್ನು ಕಲಿಯುವ ಮತ್ತು ಮಾಡಿ ತೋರಿಸುವ ಇಚ್ಛೆ ನಿಮ್ಮಲ್ಲಿ ಇರುವುದು ತುಂಬಾ ಅವಶ್ಯಕವಾಗಿದೆ.

ಇಂಥದ್ದೇ ಒಂದು ಛಲದಿಂದ ಶಾಲೆಯ ಮೆಟ್ಟಿಲನ್ನೇ ಹತ್ತದ ಅಜ್ಜಿಯೊಬ್ಬಳು ಇಂದು ಯೂಟ್ಯೂಬ್ ಮುಖಾಂತರ ಲಕ್ಷಾವಧಿ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ವಯಸ್ಸಿನ ಯಾವುದೇ ಹಂತದಲ್ಲಿ ಏನಾದರೂ ಹೊಸದನ್ನು ಪ್ರಾರಂಭಿಸಿ ಅದರಿಂದ ಹಣ ಗಳಿಸಿ ಯಶಸ್ವಿಯಾಗಬಹುದು ಎಂಬ ಮಂತ್ರವನ್ನು ಈ ಅಜ್ಜಿಯು ಹೇಳಿಕೊಟ್ಟಿದ್ದಾರೆ. ಅಜ್ಜಿಯ ಯಶಸ್ಸಿನ ಪ್ರವಾಸವನ್ನು ಇಲ್ಲಿ ನೋಡುವ…

ಈ ಅಜ್ಜಿಯ ಹೆಸರು ಸುಮನ್ ಧಾಮನೆ. ಈ ಅಜ್ಜಿಯು ಸಹಜವಾಗಿ ಯುಟ್ಯೂಬ್ ಪ್ರಾರಂಭಿಸಿದರು. ಅದರಲ್ಲಿ ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಶುರುಮಾಡಿದರು. ನೋಡುನೋಡುತ್ತಲೇ ಅವರ ಈ ಕಲೆಗೆ ಮಹಾರಾಷ್ಟ್ರ ಮಂತ್ರಮುಗ್ಧವಾಗಿತ್ತು. ಅಜ್ಜಿ ತಯಾರಿಸುತ್ತಿದ್ದ ಖಾದ್ಯ ಪದಾರ್ಥಗಳನ್ನು ಮಹಾರಾಷ್ಟ್ರವು ತುಂಬಾ ಪ್ರೀತಿಯಿಂದ ನೋಡಲು ಶುರು ಮಾಡಿತು. ತದನಂತರ ಅವರು ಸ್ವಂತದ ಮಸಾಲೆಗಳನ್ನು ಸಹಿತ ಮಾರಾಟ ಮಾಡಲು ಶುರುಮಾಡಿದರು. ಈಗ ಅವರು ಮಾರಾಟ ಮಾಡುವ ಮಸಾಲೆಗಳಿಗೆ ದೇಶದಿಂದಲೇ ಬೇಡಿಕೆಯಿದೆ.

ಇವರು ಮಹಾರಾಷ್ಟ್ರದ ಆಹ್ಮದ್ನಗರ್ ಜಿಲ್ಲೆಯಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ ಸಾರೋಳಾ ಕಾಸಾರ್ ಹೆಸರಿನ ಊರಿನಲ್ಲಿ ವಾಸಿಸುತ್ತಾರೆ. ಇವರು ತಮ್ಮ ಚಾನೆಲ್ನಲ್ಲಿ 150 ಕ್ಕಿಂತ ಹೆಚ್ಚು ವಿಡಿಯೋ ಗಳನ್ನು ಶೇರ್ ಮಾಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಅರ್ಜಿಯ ವಿಡಿಯೋಗಳು ತುಂಬಾ ಚರ್ಚೆಯಲ್ಲಿದ್ದವು. ಆ ಸಮಯದಲ್ಲಿ ಅವರ ಚಾನೆಲ್ಲಿಗೆ ಸಬ್ಸ್ಕ್ರಿಬರ್ ಸಹಿತ ಹೆಚ್ಚಾದರು. ಇವರ ಮೊಮ್ಮಗ ಯಶ್ ಪಾಠಕ ಎಂಟನೆಯ ಕ್ಲಾಸಿನಲ್ಲಿ ಇರುವಾಗಲೇ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದನು. ಆತನಿಂದಾಗಿಯೇ ಅಜ್ಜಿಯ ಯುಟ್ಯೂಬ್ ಚಾನೆಲ್ ಪ್ರಾರಂಭವಾಯಿತು.

ಮೊದಮೊದಲು ಅಜ್ಜಿಗೆ ಕ್ಯಾಮೆರಾದ ಮುಂದೆ ನಿಲ್ಲಲು ತುಂಬಾ ಭಯವಾಗುತ್ತಿತ್ತು. ದಿನಗಳದಂತೆ ಅಜ್ಜಿಯ ಭಯ ದೂರವಾಯಿತು. ಇವರ ಚಾನೆಲ್ ತುಂಬಾ ವೇಗದಲ್ಲಿ ಬೆಳೆಯಿತು. ಮೊದಲ ತಿಂಗಳದಲ್ಲಿ 1 ಲಕ್ಷ ಸಬ್ಸ್ಕ್ರಿಬರ್ ಗಳು ಹೆಚ್ಚಾದರು. ಅಜ್ಜಿ ಈಗ ತಿಂಗಳಿಗೆ ಸುಮಾರು ಒಂದೂವರೆಯಿಂದ 2 ಲಕ್ಷ ರೂಪಾಯಿಗಳವರೆಗೆ ಗಳಿಸುತ್ತಾರೆ.

ಶೂನ್ಯದಿಂದ ಶುರುಮಾಡಿದ ಅಜ್ಜಿಯ ಈ ಚಾನಲ್ ಗೆ ಇಂದು 10 ಲಕ್ಷಕ್ಕೂ ಮೀರಿ ಸಬ್ಸ್ಕ್ರೈಬರಗಳು ಇದ್ದಾರೆ. ಸಹಜ ಟೈಮ್ ಪಾಸ್ ಗಾಗಿ ಶುರುಮಾಡಿದ ಈ ಚಾನಲ್ ಇಂದು ಇಷ್ಟೊಂದು ಯಶಸ್ಸು ತಂದುಕೊಟ್ಟಿದೆ ಎಂದರೆ ಅಜ್ಜಿಗೂ ಸಹ ಇದರ ಮೇಲೆ ವಿಶ್ವಾಸ ಕೂಡುತ್ತಿಲ್ಲ. ಇಂದು ಸಂಪೂರ್ಣ ಮಹಾರಾಷ್ಟ್ರವು ಇವರಿಗೆ ಅಡುಗೆ ಅಜ್ಜಿ ಎಂದು ಗುರುತಿಸುತ್ತದೆ. ಈ ಅಜ್ಜಿಗೆ ಅವರ ತಾಯಿ ಮತ್ತು ಅತ್ತಿಗೆಯಿಂದ ಅಡುಗೆಯ ಜ್ಞಾನ ಸಂಪಾದನೆಯಾಗಿದೆ. ಅದರ ಜೊತೆಗೆ ಗಂಡನ ಮನೆಯಲ್ಲಿ ಬಂದನಂತರ ಅತ್ತೆ ಅವರಿಂದಲೂ ಅನೇಕ ಟಿಪ್ಸ್ ಗಳನ್ನು ಕಲಿತಿದ್ದಾರಂತೆ.

ಇವರು ತಯಾರಿಸುವ ಅಡುಗೆಯ ವಿಶೇಷವೇನೆಂದರೆ ಅದು ಸಂಪೂರ್ಣವಾಗಿ ಹಳ್ಳಿಯ ಪದ್ಧತಿಯಲ್ಲಿ ಇರುತ್ತದೆ. ಅವರ ಅಡುಗೆಯಲ್ಲಿ ತಾವೇ ತಯಾರಿಸಿದ ಮಸಾಲೆಯನ್ನು ಉಪಯೋಗಿಸುತ್ತಾರೆ. ಅಜ್ಜಿಗೆ ವಿಡಿಯೋ ತಯಾರಿಸುವ ಐಡಿಯಾ ಮೊಮ್ಮಗನಾದ ಯಶ್ ನಿಂದ ಹೊಳೆಯಿತು. ಒಂದು ದಿನ ಮೊಮ್ಮಗ ಯಶ್ ಅಜ್ಜಿಗೆ ಮಹಾರಾಷ್ಟ್ರದ ಫೇಮಸ್ ತಿನಿಸು ‘ಪಾವ್ ಭಾಜಿ’ ಮಾಡಲು ಹೇಳಿದನು. ಆ ಮಾತಿಗೆ ಅಜ್ಜಿ ಅದನ್ನು ತಯಾರಿಸಲು ನನಗೆ ಬರುವುದಿಲ್ಲ ಎಂದು ಹೇಳಿದಳು. ಆಗ ಯಶ್ ಪಾವ್ ಭಾಜಿ ತಯಾರಿಸುವ ರೆಸಿಪಿಯ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಅಜ್ಜಿಗೆ ತೋರಿಸಿದನು. ಅದನ್ನು ನೋಡಿ ಅಜ್ಜಿಯು ರುಚಿಕಟ್ಟಾದ ಪಾವ್ ಭಾಜಿ ತಯಾರಿಸಿದಳು. ಇದನ್ನೇ ನೋಡಿ ಯಶ್ ತನ್ನ ಅಜ್ಜಿಗೆ ನಾವು ಈ ರೀತಿಯ ವೀಡಿಯೋಗಳನ್ನು ತಯಾರಿಸಿ ಯೂಟ್ಯೂಬ್ ಗಳಲ್ಲಿ ಹಾಕುವ ಎಂದು ಅಜ್ಜಿಗೆ ಒಪ್ಪಿಸಿದನು.

ಇಬ್ಬರು ಅಂದುಕೊಂಡಂತೆ ಒಂದು ದಿನ ಚಾನಲ್ ಶುರುಮಾಡಿದರು. ಅವರ ಮೊದಲ ವಿಡಿಯೋ ಹಾಗಲಕಾಯಿ ಪಲ್ಯದ ವಿಡಿಯೋ ಆಗಿತ್ತು. ಅವರ ಮೊದಲ ವಿಡಿಯೋ ಕಹಿ ಪದಾರ್ಥದ್ದಿತ್ತು. ಆದರೆ ವಿಡಿಯೋ ಮಾತ್ರ ಜನರಿಗೆ ತುಂಬಾ ರುಚಿಯಾಗಿ ಪರಿಣಮಿಸಿತು. ಅವರ ಚಾನಲ್ ಗೆ ಇಂದು 11 ಲಕ್ಷ 80 ಸಾವಿರ ಸಬ್ ಸ್ಕ್ರೈಬರ್ ಇದ್ದಾರೆ. ಸದ್ಯ ಈ ಅಜ್ಜಿ ಸತತವಾಗಿ ವಿಡಿಯೋ ಹಾಕುತ್ತಿದ್ದಾರೆ.

ಈ ಅಜ್ಜಿಗೆ ಒಂದು ಸಲ ಹ್ಯಾಕಿಂಗ್ ಪೆಟ್ಟು ಸಹ ಬಿದ್ದಿದೆ. ಅವರ ಚಾನಲ್ ಯಾರೋ ಒಬ್ಬರು ಹ್ಯಾಕ್ ಮಾಡಿದ್ದರು. ಆ ಸಮಯದಲ್ಲಿ ಅಜ್ಜಿ ಊಟವನ್ನೇ ಬಿಟ್ಟಿದ್ದರು. ಆದರೆ ಮೊಮ್ಮಗ ಮತ್ತೆ ಎಲ್ಲ ರೀತಿಯ ಪ್ರಯತ್ನ ಮಾಡಿ ಚಾನೆಲ್ ನ್ನು ಮರಳಿ ಪಡೆದನು. ಇದರಿಂದ ಅಜ್ಜಿಯ ಹೋದ ಜೀವ ಮತ್ತೆ ಮರಳಿ ಬಂದಂತಾಯಿತು.

ಅಜ್ಜಿಯವರಿಗೆ ಯುಟ್ಯೂಬ್ ಕಡೆಯಿಂದ ಗೋಲ್ಡನ್ ಪ್ಲೇ ಬಟನ್ ಸಹ ಸಿಕ್ಕಿದೆ. ಅಜ್ಜಿ ಮತ್ತು ಮೊಮ್ಮಗ ಯಶ್ ಕೂಡಿ ಪ್ರಾರಂಭಿಸಿದ ಚಾನೆಲ್ ಇಂದು ಲಕ್ಷಾವಧಿ ರೂಪಾಯಿಗಳನ್ನು ಗಳಿಸಿ ಕೊಡುತ್ತಿದೆ. ಕಾರಣ ಅವರ ವಿಡಿಯೋ ಈಗ ಕೊಟ್ಯಾವಧಿ ಜನರು ವೀಕ್ಷಿಸುತ್ತಿದ್ದಾರೆ ಹೀಗಾಗಿ ಯುಟ್ಯೂಬ್ ಕಡೆಯಿಂದ ಒಳ್ಳೆಯ ಹಣವೂ ಸಿಗುತ್ತಿದೆ. ಅಷ್ಟೇ ಅಲ್ಲ ಅವರು ಸ್ವತಃ ತಯಾರಿಸಿದ ಮಾಸಾಲೆಗೂ ಸಹ ಡಿಮಾಂಡ್ ಇದೆ. ಅವರು ತಮ್ಮ ಮಸಾಲೆಯನ್ನು ಡಿಮಾಂಡ್ ಮಾಡಿದ ಗ್ರಾಹಕರಿಗೆ ಕಳುಹಿಸಿ ಕೊಡುತ್ತಾರೆ.