ಶಿವನ ದೇಗುಲದಲ್ಲಿ ಗಾಢ ನಿದ್ರೆಯಲ್ಲಿ ಮಲಗಿದವನ ಹಾಸಿಗೆಯಲ್ಲಿಯೇ ಸೇರಿತು ಕರಿನಾಗ! ಆನಂತರ ಮುಂದೇನಾಯಿತು…?

ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಇಂಥದೇ ಒಂದು ಮೈ ನಡುಗಿಸುವ ವಿಡಿಯೋ ರಾಜಸ್ಥಾನದ ಬಾಂಸವಾಡಾದಲ್ಲಿಯ ಶಿವನ ಮಂದಿರದಲ್ಲಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದಾಗ ಮೈಯೆಲ್ಲ ಕಂಪಿಸಿ ಬೇವೆತುಕೊಳ್ಳುವದು ಮಾತ್ರ ನಿಜ.

ವ್ಯಕ್ತಿಯೊಬ್ಬನು ಶಿವನ ಮಂದಿರದಲ್ಲಿ ಮಧ್ಯರಾತ್ರಿಯ ಸುಮಾರು ಗಾಢ ನಿದ್ರೆಯಲ್ಲಿ ಇದ್ದನು. ಮೈಮೇಲೆ ಹೊದಿಕೆಯನ್ನು ಹೊದ್ದಿಕೊಂಡು ಮಲಗಿಕೊಂಡಿದ್ದ. ಮಲಗಿದ ಸ್ವಲ್ಪ ಸಮಯದ ನಂತರ ಒಂದು ಕರಿನಾಗ ನೆಲದ ಮೇಲೆ ಹರಿದಾಡುತ್ತಾ ಬಂದು ವ್ಯಕ್ತಿಯ ಹಾಸಿಗೆಯಲ್ಲಿ ಸೇರಿತು. ಮುಂದೆ ನೋಡಿ ಏನಾಯ್ತು?

ಮಲಗಿದವನು ಗಾಢನಿದ್ರೆಯಲ್ಲಿ ಇರುವುದರಿಂದ ಹಾವು ಆತನ ಹಾಸಿಗೆಯಲ್ಲಿ ಸೇರಿದೆ ಎಂಬುದರ ಅರಿವೇ ಆತನಿಗೆ ಆಗುವದಿಲ್ಲ. ಪ್ರಸ್ತುತ ವ್ಯಕ್ತಿಯ ಹೆಸರು ಜಯ್ ಉಪಾಧ್ಯಾಯ ಎಂದು ಹೇಳಲಾಗಿದೆ. ಈತ ಅನೇಕ ದಿವಸಗಳಿಂದ ಮಂದಿರದಲ್ಲಿಯೇ ಮಲಗುತ್ತಿದ್ದ. ಯಾವಾಗ ಆತ ತನ್ನ ಹಾಸಿಗೆಯಲ್ಲಿ ಹಾವು ಇರುವುದನ್ನು ಗಮನಿಸಿದ ಆಗ ಆತ ಅಕ್ಷರಶಃ ಬೆಚ್ಚಿ ಬಿದ್ದನು.

ವಿಡಿಯೋ ನೋಡಿ

ಮೀಡಿಯಾದ ಜೊತೆಗೆ ಮಾತನಾಡುವಾಗ ಜಯ್ ಉಪಾಧ್ಯಯ ಹೇಳುತ್ತಾನೆ, ರವಿವಾರ ಸುಮಾರು 12 ಗಂಟೆಯ ಸಮಯಕ್ಕೆ ಹಾಸಿಗೆಯಲ್ಲಿ ಏನಾದರೂ ಹರಿದಾಡುತ್ತಿರುವ ಅನುಭವವಾಯಿತು. ಆದರೂ ನಾನು ಸ್ವಲ್ಪ ಹೊರಳಾಡಿ ಮತ್ತೆ ಮಲಗಿದೆ, ಆಗ ನಾನು ಗಾಢನಿದ್ರೆಯಲ್ಲಿ ಇದ್ದೆ. ಸ್ವಲ್ಪ ಸಮಯದ ನಂತರ ನನಗೆ ಮತ್ತೆ ಅದೇ ಅನುಭವವಾಯಿತು. ಆ ಹಾವು ನನ್ನ ಕಾಲ ಕೆಳಗೆ ಸಿಕ್ಕಿಬಿದ್ದಿತ್ತು. ನಾನು ಒಮ್ಮೆಲೆ ಬ್ಲಾಂಕೆಟ್ ಸರಿಸಿ ಅಲ್ಲಿಂದ ಎದ್ದು ನಿಂತೆ. ಆಗ ಹಾಸಿಗೆಯಲ್ಲಿ ನನಗೆ ಕರಿನಾಗ ಕಂಡಿತು. ಅದನ್ನು ನೋಡಿದಾಗ ನನಗೆ ತುಂಬಾ ಹೆದರಿಬಿಟ್ಟೆ. ಆ ಹಾವು ಬಹಳ ಹೊತ್ತು ನನ್ನ ಹಾಸಿಗೆಯಲ್ಲಿ ಇದ್ದರೂ ಅದು ನನಗೆ ಯಾವುದೇ ರೀತಿಯ ಹಾನಿ ಮಾಡಿರಲಿಲ್ಲ.

ಆತ ಹೇಳುವ ಹಾಗೆ ದೇಗುಲದಲ್ಲಿ ಮಹಾದೇವನೆ ಪ್ರತ್ಯಕ್ಷವಾಗಿ ನನಗೆ ದರ್ಶನ ನೀಡಿದ್ದಾನೆಂದು ಅನಿಸುತ್ತಿದೆ. ಮಧ್ಯರಾತ್ರಿ 12 ನಂತರ ಸೋಮವಾರ ಬಂದಿತ್ತು. ಸೋಮವಾರ ಇದು ಶಿವನ ವಾರ. ಇದೇ ವಿಶ್ವಾಸದಿಂದ ಆತ ದಿನಂಪ್ರತಿ ಶಿವನ ಮಂದಿರದಲ್ಲಿಯೇ ಮಲಗುತ್ತಿದ್ದ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋವನ್ನು ನೋಡಿ ನೆಟ್ಟಿಗರು ಕಾಮೆಂಟ್ ಗಳಲ್ಲಿ ತಮ್ಮ ಅನೇಕ ವಿಚಾರಗಳನ್ನು ಹೊರಹಾಕಿದ್ದಾರೆ. ಕೆಲವರು ಸ್ವತಃ ಶಿವನೇ ಆತನಿಗೆ ದರ್ಶನ ನೀಡಿದ್ದಾನೆ ಎಂದರೆ ಇನ್ನೂ ಕೆಲವರು ಆತನ ಅದೃಷ್ಟ ಚೆನ್ನಾಗಿತ್ತು ಎಂದು ಹೇಳಿದ್ದಾರೆ.