ಪಿಜ್ಜಾ ಸಿಗಲಿಲ್ಲ ಅಂತ ಹುಡುಗಿಯು ತನ್ನ ಜೀವವನ್ನೇ ಕೊಟ್ಟಳು. ಹುಟ್ಟುಹಬ್ಬದ ಎರಡನೆಯ ದಿನಕ್ಕೆ ಅಂತ್ಯಕ್ರಿಯೆ.
ಕೆಲವೊಂದು ಸಲ ಅನೇಕ ಚಿಕ್ಕಪುಟ್ಟ ಕಾರಣಗಳೇ ಜೀವನದಲ್ಲಿ ದೊಡ್ಡ ದೊಡ್ಡ ನಷ್ಟಕ್ಕೆ ಕಾರಣವಾಗುತ್ತವೆ. ಉತ್ತರಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ ಇಂತದೇ ಒಂದು ದಿಗ್ಭ್ರಮೆಗೊಳಿಸುವ ಘಟನೆಯೊಂದು ವರದಿಯಾಗಿದೆ. ನರ್ಸಿಂಗ್ ನಲ್ಲಿ ಓದುತ್ತಿರುವ ಹುಡುಗಿಯೊಬ್ಬಳು ಬೇಗ ಪಿಜ್ಜಾ ಸಿಗಲಿಲ್ಲವೆಂಬ ಜುಜುಬಿ ಕಾರಣಕ್ಕಾಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ತಾಯಿಯು ಪಿಜ್ಜಾ ಸಲುವಾಗಿ ಸ್ವಲ್ಪ ಹೊತ್ತು ವೇಟ್ ಮಾಡು ಎಂದಿದ್ದಷ್ಟೇ ಇದಕ್ಕೆ ಕಾರಣವಾಯಿತು.
ಈ ಹುಡುಗಿಯ ಹುಟ್ಟುಹಬ್ಬವನ್ನು ಎರಡು ದಿನಗಳ ಮುಂಚೆಯೇ ಆಚರಿಸಲಾಗಿತ್ತು. ಈ ಘಟನೆಯ ಸೂಚನೆ ಸಿಗುತ್ತಲೇ ಪೊಲೀಸರು ಕಳೆಬರವನ್ನು ಪೋಸ್ಟ್ಮಾರ್ಟಮ್ ಸಲುವಾಗಿ ಕಳುಹಿಸಿಕೊಟ್ಟಿದ್ದಾರೆ. ಇದರಲ್ಲಿ ಪೊಲೀಸರು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ.
ಮಗಳು ತಾಯಿಗೆ ಪಿಜ್ಜಾ ತೆಗೆದುಕೊಂಡು ಬರಲು ಹೇಳಿದ್ದಳು. ಈ ಸಂದರ್ಭದಲ್ಲಿ ತಾಯಿಗೆ ಪಿಜ್ಜಾ ತೆಗೆದುಕೊಂಡು ಬರಲು ಸ್ವಲ್ಪ ಲೇಟಾಯಿತು.
ಈ ಹುಡುಗಿಯ ಹೆಸರು ಶಿಖಾ ಸೋನಿ (18) ಇದ್ದು ಕಳೆದ ಸೋಮವಾರ ರಾತ್ರಿ ಈಕೆಯ ಶವ ಫ್ಯಾನಿಗೆ ನೇತಾಡುತ್ತಿರುವುದು ಕಂಡು ಬಂದಿತ್ತು. ದೊರೆತ ಮಾಹಿತಿಯ ಪ್ರಕಾರ ಶಿಖಾ ತನ್ನ ತಾಯಿಗೆ ಪಿಜ್ಜಾ ತೆಗೆದುಕೊಂಡು ಬರಲು ಹೇಳಿದ್ದಳು. ಅದಕ್ಕೆ ತಾಯಿಯು ಸ್ವಲ್ಪ ವೇಟ್ ಮಾಡಲು ಹೇಳಿದಳು. ಇದೇ ಮಾತಿಗೆ ಬೇಸರಪಟ್ಟು ಶಿಖಾ ರೂಮಿನಲ್ಲಿ ನೇಣು ಬಿಗಿದುಕೊಂಡಿದ್ದಾಳೆ.
ಎರಡೇ ಎರಡು ದಿನಗಳ ಮೊದಲು ಆಚರಿಸಲಾಗಿತ್ತು ಹುಟ್ಟುಹಬ್ಬ.
ಹುಡುಗಿಯ ತಂದೆ ಮೋಹನ್ ಲಾಲ್ ಹೇಳುವ ಪ್ರಕಾರ, ಮಗಳು ನರ್ಸಿಂಗ್ ಕೋರ್ಸ್ ಮುಗಿಸಿ ಮೂರು ತಿಂಗಳ ತರಬೇತಿಗೆ ಜಾಯಿನ್ ಆಗಿದ್ದಳು. ಕಳೆದ ಸೋಮವಾರ ಸಾಯಂಕಾಲ ತಾಯಿಗೆ ಪಿಜ್ಜಾ ತರಲು ಹೇಳಿದಾಗ ತಾಯಿಯು, ತರುತ್ತೇನೆ ಸ್ವಲ್ಪ ವೇಟ್ ಮಾಡು ಎಂದು ಹೇಳಿದಳು. ಆ ಮಾತಿಗೆ ಮಗಳು ಬೇಸರಪಟ್ಟು ತನ್ನ ಕೋಣೆಯಲ್ಲಿ ಹೋದಳು. ಬಹಳ ಹೊತ್ತಾದರೂ ಆಕೆ ರೂಮಿನಿಂದ ಬರದ ಕಾರಣ ಒಳಗೆ ಇಣುಕಿ ನೋಡಲು ಆಕೆಯ ಶವ ಫ್ಯಾನಿಗೆ ನೇತಾಡುತ್ತಿತ್ತು. ಅಕ್ಟೋಬರ್ 10 ರಂದು ಆಕೆಯ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಮನೆಯಲ್ಲಿ ಶಿಖಾಳ ಹೊರತಾಗಿ ಇನ್ನಿಬ್ಬರು ಸೋದರಿಯರು ಇದ್ದಾರೆ. ಶಿಖಾ ಮನೆಯಲ್ಲಿ ಎಲ್ಲಕ್ಕೂ ಚಿಕ್ಕವಳಾಗಿದ್ದಳು.