ಟ್ಯಾಂಕ್ ನಲ್ಲಿ ಬಿದ್ದ ಮರಿಯನ್ನು ತಾಯಿ ಮಂಗವು ಮೇಲೆ ಏರಿಸಿಕೊಳ್ಳಲು ಉಪಯೋಗಿಸಿದ ಚಾಣಾಕ್ಷತೆಯನ್ನು ನೋಡಿ ದಂಗಾದ ನೆಟ್ಟಿಗರು…
ಇಂಡಿಯನ್ ಫಾರೆಸ್ಟ್ ಆಫೀಸರ್ ಸುಶಾಂತ್ ನಂದ ಅವರು ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದಾರೆ. ಇವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಪ್ರಾಣಿಗಳಿಗೆ ಸಂಬಂಧಿಸಿದ ಸುಂದರವಾದ ಸಂದೇಶಗಳನ್ನು ನೀಡುವ ಅನೇಕ ವಿಡಿಯೋಗಳನ್ನು ಯಾವತ್ತು ಶೇರ್ ಮಾಡುತ್ತಲೇ ಇರುತ್ತಾರೆ.
ರಸ್ತೆ ಬದಿಯಲ್ಲಿರುವ ಒಂದು ಟ್ಯಾಂಕ್ ನಲ್ಲಿ ಮಂಗನ ಮರಿಯೊಂದು ಅಕಸ್ಮಾತ್ ಬಿದ್ದಿದೆ. ಆ ಮರಿಯ ತಾಯಿಯು ಇದನ್ನು ನೋಡಿ ಒಳಗೆ ಬಿದ್ದ ತನ್ನ ಜೀವದ ಕುಡಿಯನ್ನು ಮೇಲೆ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಈ ಪ್ರಯತ್ನದಲ್ಲಿ ಅದು ಹೇಗೆ ಯಶಸ್ವಿಯಾಗಿದೆ ಮತ್ತು ಅದಕ್ಕಾಗಿ ತನ್ನ ಬುದ್ಧಿಯನ್ನು ಹೇಗೆ ಉಪಯೋಗಿಸಿದೆ ಎಂಬುವುದನ್ನು ತೋರಿಸುವ ವಿಡಿಯೋ ಇದಾಗಿದೆ.
ಮೊದಲು ಮರಿಯು ಬಿದ್ದದ್ದನ್ನು ತಾಯಿ ಮಂಗವು ನೋಡಿ ಗಾಬರಿಯಾಗಿ ಟ್ಯಾಂಕಿನ ಮೇಲೆ ಅತ್ತಿತ್ತ ಓಡಾಡಿದೆ. ಆಮೇಲೆ ಏನಾದರೂ ಮಾಡಿ ತನ್ನ ಮರಿಯನ್ನು ಮೇಲೆ ಏರಿಸಿಕೊಳ್ಳಲು ಯೋಚಿಸಿ ನಂತರ ಅದಕ್ಕಾಗಿ ಸೂಪರ್ ಐಡಿಯಾವನ್ನು ಯೂಜ್ ಮಾಡಿದೆ.
ನೋಡಿ ಈ ವಿಡಿಯೋ…..
ತನಗಿರುವ ಬಾಲವನ್ನು ಹಗ್ಗದ ರೀತಿಯಲ್ಲಿ ಉಪಯೋಗಿಸಿಕೊಂಡಿದೆ. ಮರಿಯು ಕೆಳಗಿನಿಂದ ಮೇಲೆ ಬರುವಾಗ ತಾಯಿಯ ಬಾಲವನ್ನು ಮೆತ್ತಗೆ ಹಿಡಿದು ಮೇಲೆ ಬರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸದ್ಯ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 45 ಸಾವಿರ ಜನ ವೀಕ್ಷಿಸಿ ತಾಯಿಗಿರುವ ಕಾಳಜಿಯ ಬಗ್ಗೆ ರೀಟ್ವೀಟ್ ಗಳನ್ನು ಮಾಡಿದ್ದಾರೆ. ಹಾಗೂ ಈ ವಿಡಿಯೋಗೆ 5 ಸಾವಿರಕ್ಕೂ ಮೇಲ್ಪಟ್ಟು ಲೈಕ್ಸ್ ಗಳು ಬಂದಿವೆ.