ಆ#ಘಾತಕಾರಿ! ಆಸ್ಟ್ರೇಲಿಯಾದ ವರ್ಲ್ಡ್ ಕಪ್ ವಿಜೇತ ಆಟಗಾರನೀಗ ಉದರ ನಿರ್ವಾಹಕ್ಕಾಗಿ ಮಾಡುತ್ತಿದ್ದಾನೆ ಬಡಿಗನ ಕೆಲಸ! ವಿಡಿಯೋ ವೈರಲ್…
ಒಂದು ಸಮಯದಲ್ಲಿ ವರ್ಲ್ಡ್ ಕಪ್ ಕೈಯಲ್ಲಿ ಹಿಡಿದು ಆನಂದೋತ್ಸವವನ್ನು ಆಚರಿಸಿದ ಈ ಆಟಗಾರ ಈಗ ತನ್ನ ಉದರ ನಿರ್ವಾಹಕ್ಕಾಗಿ ಬಡಿಗತನದ ಕೆಲಸ ಮಾಡುತ್ತಿದ್ದಾನೆ. ಕ್ರಿಕೆಟ್ನಲ್ಲಿ ಸಾಕಷ್ಟು ಹಣವಿದೆ ಅವರು ಶ್ರೀಮಂತರಾಗಿರುತ್ತಾರೆ ಎಂದು ನಮಗನಿಸುತ್ತದೆ. ಆದರೆ ಆಸ್ಟ್ರೇಲಿಯಾದಲ್ಲಿಯ ಮಾಜಿ ಕ್ರಿಕೆಟ್ ಆಟಗಾರನ ಜೊತೆಗೆ ಇದರ ವಿರುದ್ಧ ಪರಿಸ್ಥಿತಿ ಕಂಡುಬರುತ್ತಿದೆ. ಕ್ರಿಕೆಟ್ ತೊರೆದ ನಂತರ 12 ತಿಂಗಳವರೆಗೆ ಈ ಆಟಗಾರನಿಗೆ ಯಾವುದೇ ಕೆಲಸ ಸಿಕ್ಕಿರಲಿಲ್ಲ. ಆದರೆ ಈಗ ಹೊಟ್ಟೆ ತುಂಬಿಕೊಳ್ಳುವ ಸಲುವಾಗಿ ಬಡಿಗತನದ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಆಟಗಾರನ ವಿಡಿಯೋ ಸದ್ಯಕ್ಕೆ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತನ್ನ ಮೇಲೆ ಎಂಥ ಕಠಿಣ ಪ್ರಸಂಗ ಬಂದೊದಗಿದೆ ಎಂಬುದನ್ನು ಈ ಆಟಗಾರ ಹೇಳುತ್ತಿದ್ದಾನೆ.
ಜೇವಿಯರ್ ಡೋಹರ್ಟಿ.

ಆಸ್ಟ್ರೇಲಿಯಾ 2015 ರಲ್ಲಿ ವರ್ಲ್ಡ್ ಕಪ್ ಗೆದ್ದಿತ್ತು. ಆಗ ಆಸ್ಟ್ರೇಲಿಯಾ ತಂಡದಲ್ಲಿ ಜೇವಿಯರ್ ಡೋಹರ್ಟಿ ಮಹತ್ವದ ಆಟಗಾರ ಇದ್ದರು. ನಂತರ ಜೇವಿಯರ್ ಡೋಹರ್ಟಿ ಕ್ರಿಕೆಟ್ ನಿಂದ ರಿಟೈರ್ ಆದರು. ಇಲ್ಲಿಂದಲೇ ಅವರ ಕೆಟ್ಟ ದಿನಗಳು ಪ್ರಾರಂಭವಾದವು. ಕ್ರಿಕೆಟ್ ನಿಂದ ಸಂನ್ಯಾಸ ತೆಗೆದುಕೊಂಡ ನಂತರ ಒಂದು ವರ್ಷ ಇವರ ಕೈಗೆ ಯಾವುದೇ ಕೆಲಸ ಸಿಗಲಿಲ್ಲ. ಆದರೂ ಅಂತ ಸಂದರ್ಭದಲ್ಲಿ ಸಿಕ್ಕ ಕೆಲಸ ಮಾಡಲು ಹಿಂದೆ ಮುಂದೆ ನೋಡಲಿಲ್ಲ. ಆದರೆ ಅಲ್ಲಿ ಹಣ ಮಾತ್ರ ಹೆಚ್ಚು ಸಿಗುತ್ತಿರಲಿಲ್ಲ. ಆ ಸಮಯದಲ್ಲಿಯೇ ಇವರು ಬಡಿಗತನದ ಕೆಲಸವನ್ನು ಕಲಿತುಕೊಂಡರು. ಹೀಗಾಗಿ ಸದ್ಯಕ್ಕೆ ಇದೇ ಕೆಲಸವನ್ನು ಮಾಡುತ್ತಿದ್ದಾರೆ.
ಜೇವಿಯರ್ ಡೋಹರ್ಟಿ 2010 ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕಡೆಯಿಂದ ಆಡಲು ಶುರು ಮಾಡಿದರು. 7 ವರ್ಷ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದರು. ಆದರೆ ಕ್ರಿಕೆಟ್ ಆಡುವುದನ್ನು ನಿಲ್ಲಿಸಿದ ನಂತರ ಆರ್ಥಿಕ ಸಮಸ್ಯೆ ಎದುರಾಗಲು ಶುರುವಾಯಿತು. ಆಗ ಬಡಿಗತನದ ಕೆಲಸ ಕಲಿತುಕೊಂಡು ಈಗ ಇದೇ ಕೆಲಸವನ್ನು ಮಾಡುತ್ತಿದ್ದಾರೆ. ಆದ್ದರಿಂದ ಸಮಯ ಯಾರ ಮೇಲೆ ಯಾವಾಗ ಎಂಥ ಸಂದರ್ಭ ತರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಯಾವಾಗ ನಿಮ್ಮ ಕ್ರಿಕೆಟ್ ಜೀವನ ನಿಲ್ಲುತ್ತದೆ ಆಗ ಗೊತ್ತಾಗುತ್ತದೆ ಹಣ ನಿಮ್ಮ ಕಡೆಗೆ ಹೇಗೆ ಬರುತ್ತದೆ ಎಂದು. ಆಗ ಭವಿಷ್ಯದಲ್ಲಿ ಮುಂದೆನಾಗುವದು ಎಂಬ ಪ್ರಶ್ನೆ ಎದುರಾಗುತ್ತದೆ, ಎಂದು ಜೇವಿಯರ್ ಡೋಹರ್ಟಿ ಮನದೊಳಗಿನ ಮಾತನ್ನು ಹೇಳುತ್ತಾರೆ. ಆಸ್ಟ್ರೇಲಿಯಾದ ಕ್ರಿಕೆಟ್ ಅಸೋಸಿಯೇಷನ್ನ ವ್ಯವಸ್ಥಾಪಕರಾದ ಕಾರ್ಲಾ ಅವರು ನನಗೆ ನನ್ನ ಕಠಿಣ ಸಮಯದಲ್ಲಿ ಸಹಾಯ ಮಾಡಿದರು. ನನಗೆ ಸ್ವಲ್ಪ ಹಣದ ವ್ಯವಸ್ಥೆಯನ್ನು ಮಾಡಿದರು. ಅವರ ಸಹಾಯದಿಂದಲೇ ನಾನು ಬಡಿಗತನದ ಕೆಲಸಗಳನ್ನು ಕಲಿತೆನು. ಸದ್ಯಕ್ಕೆ ನಾನು ಬಡತನದ ಕೆಲಸವನ್ನು ಮಾಡಿಯೇ ನನ್ನ ಹೊಟ್ಟೆಯನ್ನು ತುಂಬಿಕೊಳ್ಳುತ್ತಿದ್ದೇನೆ ಎಂದು ಡೋಹರ್ಟಿ ಹೇಳುತ್ತಾರೆ.
ವಿಡಿಯೋ ನೋಡಿ
Test bowler turned carpenter 👷🔨
Xavier Doherty took some time to find what was right for him following his retirement from cricket, but he’s now building his future with an apprenticeship in carpentry.#NationalCareersWeek pic.twitter.com/iYRq2m39jt
— Australian Cricketers’ Association (@ACA_Players) May 18, 2021
ಡೋಹರ್ಟಿ ಅವರು 2010 ರಿಂದ ಆಸ್ಟ್ರೇಲಿಯಾ ಕಡೆಯಿಂದ ಆಡಲು ಶುರುಮಾಡಿದರು. ಅವರು ಒಟ್ಟು 60 ಏಕದಿನ ಮತ್ತು 11 ಟ್ವೆಂಟಿ-20 ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರು ಏಕದಿನ ಪಂದ್ಯಗಳಲ್ಲಿ 55, ಟ್ವೆಂಟಿ-20ಯಲ್ಲಿ 10 ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ 7 ವಿಕೆಟ್ಗಳನ್ನು ಪಡೆದಿದ್ದಾರೆ.