ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಯಿಂದ ಬಚಾವಾಗಲು ನಿಮ್ಮ ಬೈಕ್ ನಲ್ಲಿ ಅಳವಡಿಸಿ CNG ಕಿಟ್! ಕಡಿಮೆ ವೆಚ್ಚದಲ್ಲಿ ಹೆಚ್ಚು ಮೈಲೇಜ್….

ಎಲ್ಲರಿಗೂ ಗೊತ್ತಿರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ. ಇದರಿಂದ ಸರ್ವಸಾಮಾನ್ಯನ ಜೇಬಿನ ಮೇಲೆ ಹೆಚ್ಚಿನ ಖರ್ಚು ಬೀಳುತ್ತಿದೆ. ಇಂಧನ ಬೆಲೆ ಹೇಗೆ ಹೇಗೆ ಹೆಚ್ಚಾಗುತ್ತಿದೆ ಹಾಗೆ ಅದಕ್ಕೊಂದು ಪರ್ಯಾಯ ಹುಡುಕುವುದು ಮಾರ್ಕೆಟ್ನಲ್ಲಿ ನಡೆದಿದೆ. ಇದೇ ಸಂದರ್ಭಕ್ಕೆ ಸೂಟ್ ಆಗುವಂತೆ ಈಗ ಸ್ಕೂಟರ್ ಸಲುವಾಗಿ CNG ಕಿಟ್ ಮಾರ್ಕೆಟ್ನಲ್ಲಿ ಉಪಲಬ್ಧವಾಗಿದೆ.

ಒಂದು ಕಡೆ ಪೆಟ್ರೋಲ್ ಬೆಲೆ 100 ರ ಆಸುಪಾಸು ಇದೆ. ಇನ್ನೊಂದೆಡೆ CNG ಬೆಲೆ 50 ರೂಪಾಯಿಗಳ ಸುತ್ತಮುತ್ತ ಇದೆ. ಸಿಎನ್ ಜಿ ಕಿಟ್ ಅಳವಡಿಸಿದ ಮೇಲೆ ಸ್ಕೂಟರ್ ಸುಮಾರು 80 ಕಿಲೋಮೀಟರ್ ವರೆಗೆ ಮೈಲೇಜ್ ನೀಡುವುದು. ಅದಕ್ಕಾಗಿಯೇ CNG ಸ್ಕೂಟರ್ ನಡೆಸುವವರ ಸಲುವಾಗಿ ಇದಕ್ಕೆ ಸಂಬಂಧಪಟ್ಟ ಡೀಟೇಲ್ಸ್ ಮಾಹಿತಿಯನ್ನು ಈ ಲೇಖನದಲ್ಲಿ ತಂದಿದ್ದೇವೆ. ಹಾಗಾದರೆ ಓದಿ ತಿಳಿದುಕೊಳ್ಳಿ….

LOVATO ಅವರು ಲಾಂಚ್ ಮಾಡಿದ್ದಾರೆ CNG ಕಿಟ್.

ಮಾಹಿತಿಯ ಪ್ರಕಾರ ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಕಂಪನಿಯು ಸ್ಕೂಟರ್ ನಲ್ಲಿ CNG ಕಿಟ್ ಅಳವಡಿಸಿ ಮಾರಾಟ ಮಾಡುತ್ತಿಲ್ಲ. ಆದರೆ ಲೋವಾಟೋ (Lovato) ಹೆಸರಿನ ಈ ಕಂಪನಿಯು ಸ್ಕೂಟರ್ ಸಲುವಾಗಿ CNG ಕಿಟ್ ನ್ನು ಮಾರ್ಕೆಟ್ನಲ್ಲಿ ಇಳಿಸಿದೆ. ಇದರ ಪ್ರಾರಂಭ ಹೋಂಡಾ ಆಕ್ಟಿವಾ ಗಾಡಿಯಿಂದ ಮಾಡಿದೆ. ಹೋಂಡಾ ಆಕ್ಟಿವಾ ಗಾಡಿ ಇರುವವರಿಗೆ ಕಂಪನಿಯು CNG ಕಿಟ್ ಅಳವಡಿಸಿಕೊಳ್ಳುತ್ತದೆ.

CNG ಕಿಟ್ ಅಳವಡಿಸಲು ಎಷ್ಟೊಂದು ಖರ್ಚು ಬರುತ್ತದೆ?

ಲೊವಾಟೋದ CNG ಕಿಟ್ ನ್ನು ಆಕ್ಟಿವಾ ವಾಹನದಲ್ಲಿ ಬರೀ 15 ಸಾವಿರ ರೂಪಾಯಿಗಳ ಖರ್ಚಿನಲ್ಲಿ ಅಳವಡಿಸಲು ಬರುತ್ತದೆ. ಒಂದು ವೇಳೆ ದಿನಂಪ್ರತಿ ನೀವು ಸ್ಕೂಟರ್ ಉಪಯೋಗಿಸುವವರಿದ್ದರೆ ಈ ಬೆಲೆ ನಿಮಗೆ ಒಂದು ವರ್ಷದಲ್ಲಿಯೇ ವಸೂಲಿ ಆಗುತ್ತದೆ.

ಪೆಟ್ರೋಲ್ ನಿಂದಲೂ ನಡೆಯುತ್ತದೆ ಆಕ್ಟಿವಾ.

ಕೆಲವರು ಹೀಗೂ ವಿಚಾರ ಮಾಡುತ್ತಿರಬಹುದು ಏನೆಂದರೆ, ಹೋಂಡಾ ಆಕ್ಟಿವಾದಲ್ಲಿ CNG ಕಿಟ್ ಅಳವಡಿಸಿದ ನಂತರ ಪೆಟ್ರೋಲ್ ನಿಂದ ಓಡುತ್ತದೆಯೋ ಅಥವಾ ಇಲ್ಲ ಅಂತ. ಈ ಕಿಟ್ ಅಳವಡಿಸಿದ ನಂತರ ಪೆಟ್ರೋಲ್ ಮುಖಾಂತರವು ಸ್ಕೂಟರ್ ಓಡುತ್ತದೆ. ಯಾಕೆಂದರೆ CNG ಕಿಟ್ ಅಳವಡಿಸುವಾಗ ಅದಕ್ಕೊಂದು ಸ್ವೀಚ್ ನೀಡಲಾಗುತ್ತದೆ. ಇದರಿಂದ ವಾಹನದ ಚಾಲಕ ತನ್ನ ಆಯ್ಕೆಯಂತೆ CNG ಅಥವಾ ಪೆಟ್ರೋಲ್ ನಿಂದ ಓಡಿಸಬಹುದಾಗಿದೆ.

CNG ಎಷ್ಟು ಸಮಯದಲ್ಲಿ ಫಿಟ್ ಆಗುತ್ತದೆ?

ಹೋಂಡಾ ಆಕ್ಟಿವಾ ಸ್ಕೂಟರ್ನಲ್ಲಿ ಇದನ್ನು ಅಳವಡಿಸಲು ನಾಲ್ಕು ಗಂಟೆಗಳ ಸಮಯ ಬೇಕಾಗುತ್ತದೆ. ಆಕ್ಟಿವ್ ಗಾಡಿಯ ಮುಂದಿನ ಭಾಗದಲ್ಲಿ ಎರಡು ಸಿಲೆಂಡರ್ ಗಳನ್ನು ಕೂಡಿಸಿ ನಂತರ ಅದಕ್ಕೆ ಕವರ್ ಮಾಡಲಾಗುತ್ತದೆ. ಇದರ ಹೊರತಾಗಿ ಸೀಟಿನ ಕೆಳಗಡೆ CNG ಕಿಟ್ ಗೆ ಆಪರೇಟ್ ಮಾಡಲು ಮಷೀನ್ ನೀಡಲಾಗುತ್ತದೆ.

CNG ಕಿಟ್ ಅಳವಡಿಸಿದ ನಂತರ ಯಾವ ಬದಲಾವಣೆಯಾಗುವುದು?

CNG ಕಿಟ್ ಅಳವಡಿಸಿದ ನಂತರ ಆಕ್ಟಿವಾ ಗಾಡಿಯು ಸ್ವಲ್ಪ ಕಡಿಮೆ ಶಕ್ತಿಯಿಂದ ಓಡುವದು. ಇದರಿಂದಾಗಿ ಬೇರೆ ವಾಹನಗಳನ್ನು ಓವರ್ಟೇಕ್ ಮಾಡುವಾಗ ಸಮಸ್ಯೆ ಉದ್ಭವಿಸುತ್ತದೆ.

CNG ಕಿಟ್ ನ ಈ ಸಿಲೆಂಡರ್ 1.2 KG ದ್ದು ಇರುತ್ತದೆ. ಇದನ್ನು ಒಂದು ಬಾರಿ ತುಂಬಿದ ನಂತರ 120 ರಿಂದ 130 ಕಿಲೋಮೀಟರ್ ಗಳವರೆಗೆ ಓಡಾಡಬಹುದು. ಹೀಗಾಗಿ ಇದಕ್ಕೆ ಮೇಲಿಂದ ಮೇಲೆ ಇಂಧನ ತುಂಬುವ ಅವಶ್ಯಕತೆ ಬೀಳುತ್ತದೆ.

(ಡಿಸ್ಕ್ಲೇಮರ್: ಈ ಸುದ್ದಿಯನ್ನು ವೆಬ್ಸೈಟ್ನಿಂದ ದೊರೆತ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ನಮ್ಮ ವೈರಲ್ ಪೋಸ್ಟ್ ಕನ್ನಡ ಇದನ್ನು ಯಾವುದೇ ರೀತಿಯಲ್ಲಿ ದೃಢೀಕರಿಸುವದಿಲ್ಲ.)