ಗ್ಲೇನ್ ಮ್ಯಾಕ್ಸ್ ವೆಲ್ ಶೀಘ್ರದಲ್ಲೇ ಭಾರತದ ಈ ತರುಣಿಯೊಂದಿಗೆ ವಿವಾಹವಾಗಲಿದ್ದಾರೆ, ಯಾರು ಆ ಸುಂದರ ಯುವತಿ?
ನಿನ್ನೆ ತಾನೇ ಐಪಿಎಲ್ ಮುಕ್ತಾಯಗೊಂಡಿದೆ. ಐಪಿಎಲ್ 2021 ರ ಸೀಸನ್ ಕೊನೆಯ ಪಂದ್ಯ ಅಂದರೆ ಫೈನಲ್ ಪಂದ್ಯ ಕೋಲಕತ್ತ ಮತ್ತು ಚೆನ್ನೈ ನಡುವೆ ನಡೆಯಿತು. ಈ ಪಂದ್ಯದಲ್ಲಿ ಚೆನ್ನೈ ಗೆದ್ದು ಐಪಿಎಲ್ ಕಪ್ ತನ್ನದಾಗಿಸಿಕೊಂಡಿದೆ. ಐಪಿಎಲ್ ನಲ್ಲಿ ಈ ಬಾರಿ ಗ್ಗ್ಲೇನ್ ಮ್ಯಾಕ್ಸ್ ವೆಲ್ ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಇವರು ಈ ಬಾರಿ ಬೆಂಗಳೂರು ಟೀಮ್ ಕಡೆಯಿಂದ ಆಡಿದರು. ಈ ವರ್ಷದ ಹರಾಜಿನಲ್ಲಿ ಇವರನ್ನು ಯಾರು ತಗೆದುಕೊಳ್ಳದೆ ಇದ್ದಾಗ ಬೆಂಗಳೂರು ಟೀಮ್ ಮಾಲಿಕರು ಇವರನ್ನು ಖರೀದಿಸಿದ್ದರು. ಇವರು ಬೆಂಗಳೂರು ಟೀಮ್ ತಮ್ಮ ಮೇಲೆ ತೋರಿಸಿದ ಪ್ರೀತಿ ವಿಶ್ವಾಸಕ್ಕೆ ಉತ್ತಮವಾದ ರೀತಿಯಲ್ಲಿ ಆಟ ಆಡಿ ಹೌದು ಎನಿಸಿಕೊಂಡಿದ್ದಾರೆ.
ಸದ್ಯಕ್ಕೆ ಮ್ಯಾಕ್ಸ್ ವೆಲ್ ಅವರ ಮದುವೆಯ ಕುರಿತು ಸಮಾಜಿಕಜಾಲತಾಣಗಳಲ್ಲಿ ತುಂಬಾ ಚರ್ಚೆ ನಡೆಯುತ್ತಿದೆ. ಅವರು ಒಬ್ಬ ಭಾರತೀಯ ಸುಂದರಿಯೊಂದಿಗೆ ವಿವಾಹ ವಾಗಲಿದ್ದಾರೆ. ಅವರನ್ನು ಮದುವೆಯಾಗುವ ಸುಂದರಿಯ ಹೆಸರು ವಿನಿ ರಮಣ. ವಿನಿ ರಮಣ ಇವರು ತಮ್ಮ ಸೋಶಿಯಲ್ ಅಕೌಂಟ್ ಮುಖಾಂತರ ಮ್ಯಾಕ್ಸ್ ವೆಲ್ ಅವರ ಜನ್ಮದಿನದಂದು ಶುಭಾಶಯಗಳನ್ನು ತಿಳಿಸುತ್ತಾ ಹೀಗೆ ಹೇಳಿದ್ದಾರೆ, 2022 ಈ ವರ್ಷ ನಮ್ಮದಾಗಲಿದೆ’ ಇದರ ಮೇಲಿಂದ ತಿಳಿದು ಬರುವದೇನೆಂದರೆ ಇವರಿಬ್ಬರ ನಡುವೆ ಮದುವೆಯ ಅನುಬಂಧ ಗಟ್ಟಿಯಾಗಿದೆ ಎಂದು ಅವರು ಪರೋಕ್ಷವಾಗಿ ಸ್ಪಷ್ಟ ಪಡಿಸಿದ್ದಾರೆ. ವಿನಿ ಇವರು
ಮ್ಯಾಕ್ಸ್ ವೆಲ್ ಅವರ ಗರ್ಲ್ ಫ್ರೆಂಡ್ ಆಗಿದ್ದು ಕಳೆದ ವರ್ಷ ಇವರಿಬ್ಬರ ನಡುವೆ ನಿಶ್ಚಿತಾರ್ಥ ಕೂಡ ನಡೆದು ಹೋಗಿದೆ.

ಮ್ಯಾಕ್ಸ್ ವೆಲ್ RCB ಟೀಮ್ ಸಲುವಾಗಿ ಆಟ ಆಡುತ್ತಾರೆ. ಇವರೊಬ್ಬ ಅತ್ಯಂತ ಪ್ರಭಾವಶಾಲಿ ಬ್ಯಾಟ್ಸ್ಮನ್ ಎಂದು ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಈ ವರ್ಷದ ಅವರ ಆಟ ನಮ್ಮ ಕರ್ನಾಟಕದ ಜನತೆಯ ಹಾಗೂ ಬೆಂಗಳೂರು ಟೀಮ್ ಫ್ಯಾನ್ಸ್ ಗಳ ಮನ ಗೆದ್ದಿದೆ. ಮ್ಯಾಕ್ಸ್ ವೆಲ್ 2019 ರಲ್ಲಿ ಕ್ರಿಕೆಟ್ ದಿಂದ ಸ್ವಲ್ಪ ದೂರವಿದ್ದರು, ಆ ಸಮಯದಲ್ಲಿ ಕ್ರಿಕೆಟ್ ದಿಂದ ದೂರವಿದ್ದ ಕಾರಣ ಅವರ ಗರ್ಲ್ ಫ್ರೆಂಡ್ ಅಂತ ಸುದ್ದಿ ಎಲ್ಲೆಡೆಗೆ ಹರಡಿತ್ತು. ಆದರೆ ಈ ಕುರಿತು ಅವರ ‘ಇದೆಲ್ಲ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರು. ಮಾನಸಿಕ ಒತ್ತಡದಿಂದ ಮುಕ್ತ ವಾಗಲು ಅವಳು ನನ್ನನ್ನು ತುಂಬಾ ಸಹಾಯ ಮಾಡಿದ್ದಾಳೆ, ಕಠಿಣ ಪರಸ್ಥಿತಿಯಲ್ಲಿ ನನ್ನ ಜೊತೆಗಿದ್ದು ನನ್ನನ್ನು ಆ ಪರಿಸ್ಥಿತಿಯಿಂದ ದೂರವಿರಲು ಪ್ರೋತ್ಸಾಹಿಸಿದ್ದಾಳೆ ಎಂದು ಮ್ಯಾಕ್ಸ್ ವೆಲ್ ಅವರು ಹೇಳಿದ್ದಾರೆ. ವಿನಿಯ ಉಪದೇಶ ಹಾಗೂ ಅವರ ನೀಡಿರುವ ಪ್ರೀತಿ ಇವುಗಳಿಂದಲೇ ನಾನು ಆ ಪರಸ್ಥಿತಿ ಎದುರಿಸಲು ಸಾಧ್ಯವಾಯಿತು ಇಲ್ಲದಿದ್ದರೆ ಮತ್ತೇನೋ ಆಗಿರುತ್ತಿತ್ತು ಎಂದು ಮ್ಯಾಕ್ಸ್ ವೆಲ್ ಹೇಳುತ್ತಾರೆ.

ಮ್ಯಾಕ್ಸ್ ವೆಲ್ ಇವರು ಭಾರತೀಯ ಮಹಿಳೆಯೊಂದಿಗೆ ವಿವಾಹವಾಗಲಿರುವ ಎರಡನೆಯ ಆಟಗಾರರಾಗಿದ್ದಾರೆ. ಇದಕ್ಕಿಂತ ಮುಂಚೆ ಅಂದರೆ 2014 ರಲ್ಲಿ ಆಸ್ಟ್ರೇಲಿಯಾ ಆಟಗಾರರಾದ ಶಾನ್ ಟೇಟ್ ಅವರು ಭಾರತಿಯ ವಂಶದ ಮಾಸುಮ್ ಸಿಂಘಾ ಅವರೊಂದಿಗೆ ಮದುವೆ ಮಾಡಿಕೊಂಡಿದ್ದಾರೆ. ಇವರಿಬ್ಬರು ಐಪಿಎಲ್ ಪಾರ್ಟಿಯೊಂದರಲ್ಲಿ ಒಬ್ಬರಿಗೊಬ್ಬರು ಭೇಟಿ ಯಾಗಿದ್ದರು. ಸ್ವಲ್ಪ ಸಮಯದವರೆಗೆ ರಿಲೇಷನ್ ಶಿಪ್ ನಲ್ಲಿದ್ದ ಕಾರಣ ಇಬ್ಬರ ನಡುವೆ ಪ್ರೀತಿ ಹೆಚ್ಚಾಗಿ ವಿವಾಹ ವಾಗಿದ್ದರು. ಮ್ಯಾಕ್ಸ್ ವೆಲ್ ಮತ್ತು ವಿನಿ ಇವರಿಬ್ಬರು 2017 ರಿಂದ ಒಬ್ಬರಿಗೊಬ್ಬರು ಡೇಟ್ ಮಾಡುತ್ತಿದ್ದರು. ಅಷ್ಟೇ ಅಲ್ಲದೆ 2019 ರಲ್ಲಿ ಮ್ಯಾಕ್ಸ್ ವೆಲ್ ವಿನಿಯವರಿಗೆ ಆಸ್ಟ್ರೇಲಿಯಾ ಕ್ರಿಕೇಟ್ ಅವಾರ್ಡ್ ಸಮಾರಂಭಕ್ಕೆ ಕರೆದುಕೊಂಡು ಹೋಗಿದ್ದರು. ಅದಾದ ಕೆಲವು ದಿವಸಗಳ ನಂತರ ಇಬ್ಬರು ಯೂರೋಪ್ ಟ್ರಿಪ್ ಸಹ ಮಾಡಿದ್ದಾರೆ. ಇವರಿಬ್ಬರು ತಮ್ಮಿಬ್ಬರ ನಡುವೆ ಇರುವ ಸಂಬಂಧವನ್ನು ತೋರಿಸಲು ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡುತ್ತಾರೆ. ವಿನಿ ಆಸ್ಟ್ರೇಲಿಯಾದಲ್ಲಿಯ ಮೇಲಬಾರ್ನ್ ನಲ್ಲಿ ವಾಸ್ತವ್ಯ ಹೊಂದಿದ್ದಾರೆ. ಅಲ್ಲಿ ಒಬ್ಬ ಫಾರ್ಮ್ ಸಿಸ್ಟ್ ಎಂದು ಕಾರ್ಯ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾ ಆಲ್ರೌಂಡರ್ ಮ್ಯಾಕ್ಸ್ ವೆಲ್ ಮತ್ತು ವಿನಿ ರಮಣ ಅವರಿಗೆ ಮುಂದಿನ ಜೀವನಕ್ಕಾಗಿ ಶುಭಾಶಯಗಳು.