IPL: ಮುಂದಿನ ವರ್ಷಕ್ಕಾಗಿ ನಿಮ್ಮ ನಿಯೋಜನೆ ಏನಿದೆ? ಎಂದು ಕಮೆಂಟೇಟರ್ ಹರ್ಷ ಭೋಗ್ಲೆ ಕೇಳಿದಾಗ ಧೋನಿ ಹೇಳಿದ ಮಾತು….

ನಿನ್ನೆ ನಡೆದ ಐಪಿಎಲ್ ನ ಕೊನೆಯ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ನ್ನು ಬಗ್ಗು ಬಡೆದು ಐಪಿಎಲ್ ಕಪ್ ತನ್ನದಾಗಿಸಿಕೊಂಡಿತು. ಇದರೊಂದಿಗೆ ಚೆನ್ನೈ ಧೋನಿ ಸಾರಥ್ಯದಲ್ಲಿ ನಾಲ್ಕನೇ ಬಾರಿಗೆ ಐಪಿಎಲ್ ಕಿರೀಟ ತನ್ನ ಮುಡಿಗೇರಿಸಿಕೊಂಡಿತು. ಐಪಿಎಲ್ ನ ಮುಕುಟವನ್ನು ಮೂರನೇ ಬಾರಿಗೆ ಗೆಲ್ಲಬೇಕೆಂಬ ಕೋಲ್ಕತ್ತಾದ ಆಸೆ ನುಚ್ಚುನೂರಾಯಿತು.

ಪಂದ್ಯ ಮುಗಿದ ನಂತರ ಮಹೇಂದ್ರ ಸಿಂಗ್ ಧೋನಿಯವರು ಮಾತನಾಡುವಾಗ, “ಚೆನ್ನೈ ಬಗ್ಗೆ ಮಾತನಾಡುವ ಮೊದಲು ನಾನು ಕೋಲ್ಕತ್ತಾದ ಬಗ್ಗೆ ಎರಡು ಮಾತುಗಳನ್ನು ಹೇಳಲಿಚ್ಚಿಸುವೆ ಎಂದರು. ಒತ್ತಡದಲ್ಲಿದ್ದರು ಮತ್ತೆ ಕಂಬ್ಯಾಕ್ ಮಾಡುವಂತಹ ಕೆಲಸ ತುಂಬಾ ಕಠಿಣವಾಗಿರುತ್ತದೆ. ಅದನ್ನು ಅವರು ತುಂಬಾ ಚೆನ್ನಾಗಿ ಮಾಡಿದ್ದಾರೆ” ಎಂದು ಕೊಲ್ಕತ್ತಾದ ಬಗ್ಗೆ ಹೊಗಳುತ್ತಾರೆ ಧೋನಿ.

ಚೆನ್ನೈ ಬಗ್ಗೆ ಹೇಳಬೇಕಾದರೆ “ನಾವು ಆಟಗಾರರನ್ನು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸಿಕೊಂಡೆವು. ಏನೇ ಆಗಲಿ ರನ್ ಗಳನ್ನು ಹೇಗಾದರೂ ಮಾಡಿ ಹೆಚ್ಚಿಸಲೇಬೇಕೆಂಬ ಮಂತ್ರವನ್ನು ಕಾರ್ಯರೂಪಕ್ಕೆ ತಂದೆವು. ನಮ್ಮ ಆಟಗಾರರು ಆಟದಿಂದ ಆಟಕ್ಕೆ ಸುಧಾರಣೆ ಕಾಣುತ್ತ ಹೋದರು. ಪ್ರತಿಯೊಬ್ಬರಿಗೂ ಫೈನಲ್ ಪಂದ್ಯ ತುಂಬಾ ಮಹತ್ವದ್ದಾಗಿರುತ್ತದೆ. ನಮ್ಮ ಪ್ರಾಕ್ಟಿಸ್ ಸಹ ಚೆನ್ನಾಗಿತ್ತು. ಎಂದು ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ತಂಡವನ್ನು ಚೆನ್ನಾಗಿ ಹಾಡಿ ಹೊಗಳುತ್ತಾರೆ. ಇದರ ಜೊತೆಗೆ ಕ್ರೀಡಾ ರಸಿಕರಿಗೂ ಧನ್ಯವಾದಗಳನ್ನು ಅರ್ಪಿಸಿದರು. ದಕ್ಷಿಣ ಆಫ್ರಿಕಾ ಇರಲಿ ಅಥವಾ ಬೇರೆಯಲ್ಲಿಯೇ ಆಗಲಿ ಚೆನ್ನೈ ತಂಡದ ಫ್ಯಾನ್ಸ್ ಗಳು ನಮ್ಮನ್ನು ಭೇಟಿಯಾಗಿದ್ದಾರೆ. ನನ್ನ ಅನಿಸಿಕೆಯ ಪ್ರಕಾರ ರಸಿಕರು ಕ್ರಿಕೆಟ್ ನೋಡಲು ಬರಬೇಕು ಮತ್ತು ಕ್ರಿಕೆಟಿಗೆ ಪ್ರೋತ್ಸಾಹಿಸಬೇಕು. ಮುಂದಿನ ವರ್ಷ ಮತ್ತೆ ಚೆನ್ನೈನಲ್ಲಿ ಮರಳಿ ಆಡುತ್ತೇವೆ ಎಂಬ ಭಾವನೆ ವ್ಯಕ್ತ ಮಾಡುತ್ತೇನೆ.

ಇದೇ ಸಂದರ್ಭದಲ್ಲಿ ಕಮೆಂಟೇಟರ್ ಹರ್ಷ ಭೋಗ್ಲೆ ಅವರು ಮಹೇಂದ್ರ ಸಿಂಗ್ ಧೋನಿ ಅವರಿಗೆ ‘ನಿಮ್ಮ ಮುಂದಿನ ವರ್ಷದ ನಿಯೋಜನೆಯನ್ನು ಎನು’? ಎಂದು ಪ್ರಶ್ನೆ ಮಾಡಿದಾಗ ಧೋನಿ ಹೀಗೆ ಹೇಳುತ್ತಾರೆ, “ನಾನು ಹೇಳಿದ ಪ್ರಕಾರ ಎಲ್ಲವೂ ಬಿಸಿಸಿಐ ಮೇಲೆ ಅವಲಂಬಿತವಾಗಿದೆ. ಮುಂದಿನ ಯೋಜನೆ ಏನು ಎಂಬುದು ಚೆನ್ನೈ ನಿರ್ಧರಿಸಬೇಕಾಗಿದೆ. ಹಾಗೂ ಮುಂದಿನ 10 ವರ್ಷಗಳ ಬಗ್ಗೆ ಚೆನ್ನೈನ ಕಾರ್ಯತಂತ್ರ ಏನು ಎಂಬುದು ಫ್ರೆಂಚಾಯಿಸಿ ನಿರ್ಧರಿಸಬೇಕಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಒಂದು ಒಳ್ಳೆಯ ತಂಡವನ್ನು ಸಿದ್ಧಪಡಿಸುವುದು ಇದರ ಉದ್ದೇಶವಾಗಿದೆ” ಎಂದು ಧೋನಿ ಹೇಳುತ್ತಾರೆ.

ಏತನ್ಮಧ್ಯೆ ಮಹೇಂದ್ರ ಸಿಂಗ್ ಧೋನಿ ಅವರು ಗೆದ್ದ ಐಪಿಎಲ್ ಟ್ರೋಫಿಯನ್ನು ದೀಪಕ್ ಚಹರ್ ಕೈಗೆ ಒಪ್ಪಿಸಿದರು. ನಂತರ ದೀಪಕ್ ಅವರು ಚಾಂಪಿಯನ್ಸ್ ಎಂದು ಬರೆದಿರುವ ಬೋರ್ಡ್ ಹತ್ತಿರ ಟ್ರೋಫಿಯನ್ನು ಇಟ್ಟರು. ಆಮೇಲೆ ಧೋನಿ ಸಹ ಎಲ್ಲ ಆಟಗಾರರು ಫೋಟೋಗಾಗಿ ಪೊಜ್ ನೀಡಿದರು.