ಸ್ಫೂರ್ತಿದಾಯಕ! ಪುಣೆಯ ಈ ಹುಡುಗಿ ಆಯ್ ಟಿ ಕಂಪನಿ ಉದ್ಯೋಗ ಬಿಟ್ಟು ಸ್ಕ್ರ್ಯಾಪ್ ಟಾಯರ ನಿಂದ ಹೀಗೆ ಮಾಡಿ ಏಳು ಲಕ್ಷದ ವರೆಗೆ ಸಂಪಾದಿಸುತ್ತಿದ್ದಾಳೆ..
ಪೂಜಾ ಆಪ್ಟೆ ಬದಾಮಿಕರ್ (ವಯಸ್ಸು 28) ಇವರ ಲೈಫ್ ಜರ್ನಿ ಬಗ್ಗೆ ನಾವು ಇಲ್ಲಿ ನೋಡುವವರಿದ್ದೇವೆ. ಪುಣೆಯಲ್ಲಿ ವಾಸಿಸುವ ಆಯ್ ಟಿ ಪ್ರೊಫೆಷನಲ್ ಪೂಜಾ ಆಪ್ಟೆ ಬದಾಮಿಕರ್ ಇವರು ಒಂದೊಳ್ಳೆಯ ಉದ್ಯೋಗವನ್ನು ಬಿಟ್ಟು ಸ್ಕ್ರ್ಯಾಪ್ ಟಾಯರ್ ನಿಂದ ಫೂಟ್ ವಿಯರ್ ಪಾದರಕ್ಷೆಗಳನ್ನು ತಯಾರಿಸುವ ಕೆಲಸವನ್ನು ಆರಂಭಿಸಿದರು..
ಅವರ ಈ ಅಪೂರ್ವ ಕಾರ್ಯದಿಂದ ಪರಿಸರದ ರಕ್ಷಣೆ ಆಗುತ್ತಿದೆ.ಪೂಜಾ ಪ್ರತಿ ತಿಂಗಳು 200 ಪಾದರಕ್ಷೆಗಳನ್ನು ತಯಾರಿಸುತ್ತಿದ್ದು ಪ್ರತಿ ವರ್ಷ 7 ಲಕ್ಷ ರೂಪಾಯಿಗಳ ವರೆಗೆ ವ್ಯವಹಾರ ಮಾಡುತ್ತಿದ್ದಾರೆ.

ಪುಣೆ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ ಹಾಗು ಟೆಲಿಕಾಂ ಇಂಜಿನೀರಿಂಗ್ ಮಾಡಿದ ನಂತರ ಪೂಜಾಗೆ ಆಯ್ ಟಿ ಕಂಪನಿಯಲ್ಲಿ ಕೆಲಸ ದೊರಕಿತ್ತು. ಅವರು ಅಲ್ಲಿ ನಾಲ್ಕು ವರ್ಷ ಕೆಲಸ ಮಾಡುತ್ತಾರೆ. ಅದೇ ಸಮಯದಲ್ಲಿ ಅವರು ದಿಲ್ಲಿಯ ಟೇರಿ ಯುನಿವರ್ಸಿಟಿ ಇಂದ ರೇನ್ಯೂಎಬಲ್ ಎನರ್ಜಿಯ ಪದವಿಯ ಶಿಕ್ಷಣವನ್ನು ಪಡೆಯುತ್ತಾರೆ.
ಕೋರ್ಸ್ ಜೊತೆಗೆ ಅವರು ಅಪ್ ಸೈಕ್ಲಿಂಗ್ ಹಾಗು ರಿಸೈಕ್ಲಿಂಗ್ ಬಗ್ಗೆ ಓದಲು ಪ್ರಾರಂಭಿಸಿದರು. ಅವಾಗ ಅವರಿಗೆ ಒಂದು ಮನವರಿಕೆ ಏನಾಯಿತು ಅಂದ್ರೆ ಎಲ್ಲರಿಗೂ ಪ್ಲಾಸ್ಟಿಕ್ ವಿಷಯದ ಬಗ್ಗೆ ಮಾಹಿತಿ ಇದೆ. ಆದರೆ ಟಾಯರ್ ನ ಪ್ರಶ್ನೆ ಗಂಭೀರವಾಗಿರುವದು ಕಡಿಮೆ ಜನರಿಗೆ ಮಾತ್ರ ಗೊತ್ತಿದೆ ಅಂತ.

ಯಾವಾಗ ನಾನು ಈ ವಿಷಯದ ಬಗ್ಗೆ ಓದಲು ಮತ್ತು ಸಂಶೋಧನೆ ಮಾಡಲು ಪ್ರಾರಂಭಿಸಿದೆನು ಆಗ ನನಗೆ ಆಫ್ರಿಕನ್ ಸಮುದಾಯದಿಂದ ಮಾಹಿತಿ ದೊರಕಿತು.
ಅವರು ಟಾಯರ್ ಸ್ಕ್ರ್ಯಾಪ್ ನಿಂದ ಪಾದರಕ್ಷೆಗಳನ್ನು ತಯಾರಿಸುತ್ತಿದ್ದರು. ನಾನು ಅವರಿಂದ ಪ್ರೇರಿತನಾದೆ ಹಾಗು ಸುಂದರವಾದ ಶುಸ್ ಡಿಸೈನ್ ಮಾಡುವ ಯೋಜನೆಯಲ್ಲಿ ಕೆಲಸ ಮಾಡಲು ನಿಶ್ಚಯಿಸಿದೆ.
ಪೂಜಾ ಅವರಿಗೆ ಈ ಪ್ರೋಟೋಟೈಪ್ ಮಾಡುವದು ಅಷ್ಟೊಂದು ಸುಲಭವಾಗಿದ್ದಿಲ್ಲ, ಅವರು ಹೇಳುತ್ತಾರೆ ನಾನು ಚಮ್ಮಾರರ ಬಳಿ ಹೋಗಿ ಹೇಳಿದಾಗ ಅವರು ಇದನ್ನು ನಿರಾಕರಿಸಿ ಮಾಡಲಾಗುವದಿಲ್ಲ ಎಂದು ಹೇಳಿದರು. ಹೀಗೆ ಕೆಲ ಚಮ್ಮಾರರ ಸಹಾಯದಿಂದ ನಾನು ಪ್ರೋಟೋಟೈಪ್ ತಯಾರಿಸಿದೆ. ಹಾಗೆಯೇ ಏಪ್ರಿಲ್ 2019 ರಲ್ಲಿ ನಾನು ಪ್ರೊಡಕ್ಟ್ ನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ.

ಪೂಜಾ ಅವರು ಹೇಳುತ್ತಾರೆ – ನಾವು ವುಮನ್ಸ್ ಕ್ಯಾಟಗೇರಿಯಲ್ಲಿ 35 ಪ್ರಕಾರದ ಪ್ರೊಡಕ್ಟ್ ಗಳು ತಯಾರಿಸುತ್ತಿದ್ದೇವೆ.ನಾವು ಇದನ್ನು ಆನ್ಲೈನ್ ಮುಖಾಂತರ ಕೂಡ ಮಾರಾಟ ಮಾಡುತ್ತಿದ್ದೇವೆ. ಇದನ್ನು ಬಿಟ್ಟು ಪುಣೆಯಲ್ಲಿ ನಮ್ಮದೇ ಆದ ಒಂದು ಚಿಕ್ಕ ವೇರ್ ಹೌಸ್ ಕೂಡ ಇದೆ. ನಾವು ಇಲ್ಲಿಂದ ಕೂಡ ಮಾರಾಟ ಮಾಡುತ್ತಿದ್ದೇವೆ ಹಾಗು ರಾ ಮಟೇರಿಯಲ್ ಡಿಸೈನಿಂಗ್ ಕೂಡ ಇಲ್ಲೇ ಮಾಡಲಾಗುತ್ತೆ ಎನ್ನುತ್ತಾರೆ.

ಪೂಜಾ ಅವರು ಹೇಳುತ್ತಾರೆ – ನಮ್ಮಲ್ಲಿ ಎರಡು ಪ್ರಕಾರದ ಆರ್ಡರ್ ಗಳಿವೆ. ಬಲ್ಕ್ ಹಾಗು ಸೆಕೆಂಡ್ ಕಸ್ಟಮೈಜೇಶನ್. ಈ ವ್ಯವಸಾಯ ಪ್ರಾರಂಭಿಸಲು 1ಲಕ್ಷ ರೂಪಾಯಿ ಹಾಕಲಾಯಿತು. 50 ಸಾವಿರ ರೂಪಾಯಿ ಸಂಶೋಧನೆಗೆ ಖರ್ಚು ಮಾಡಿದರೆ ಇನ್ನುಳಿದ 50 ಸಾವಿರ ರೂಪಾಯಿ ರಾ ಮಟೇರಿಯಲ್ ಗೆ ಖರ್ಚಾಗಿದೆ.ನಾವು ಈಗ ಪ್ರತಿ ತಿಂಗಳು 200 ಪೀಸ್ ನ ಪ್ರೊಡಕ್ಶನ್ ಮಾಡುತ್ತಿದ್ದೇವೆ ನಮ್ಮ ವಾರ್ಷಿಕ ಆದಾಯ 7 ಲಕ್ಷ ರೂಪಾಯಿಗಳ ವರೆಗೆ ಇದೆ.
