ಚೇಳು ಮತ್ತು ಹಾವಿನ ವಿಷ ಮಾರಿ ಈತ ಆಗಿದ್ದು ಕೋಟ್ಯಾಧಿಪತಿ…ಓದಿದ ಮೇಲೆ ನಿಮಗೂ ಕೂಡ ಆಶ್ಚರ್ಯವೆನಿಸದೆ ಇರದು…

ನಮ್ಮ ಭಾರತದಲ್ಲಿ ತರಕಾರಿ ಹಾಗು ಬೇಸಾಯ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡಿದವರು ಇದ್ದಾರೆ. ಈ ವಿಚಿತ್ರ ಜಗತ್ತಿನಲ್ಲಿ ಇನ್ನು ಕೆಲವರು ಹೀಗೂ ಇದ್ದಾರೆ ಹಾವಿನ ಹಾಗು ಚೇಳಿನ ವಿಷ ಮಾರಿ ಲಕ್ಷ ಲಕ್ಷ ಸಂಪಾದಿಸಿದವರು.

“ಮಿಸ್ರ್”ದ ರಾಜಧಾನಿಯಾದ ಕೈರೋ ದಲ್ಲಿ ವಾಸಿಸುವ 25 ವರ್ಷದ ಮೊಹಮ್ಮದ್ ಬೋಷ್ಠಾ ಈತನು “ನಮ್” ಕಂಪನಿಯ ಮಾಲೀಕನಾಗಿದ್ದನು. ಅವನು ಯಾವ ಬೆಲೆಯಲ್ಲಿ ವಿಷ ಮರುತ್ತಾನೋ ಆ ಬೆಲೆಯನ್ನು ಕೇಳಿದರೆ ನಿಮಗೂ ಕೂಡ ಆಶ್ಚರ್ಯವೆನಿಸದೆ ಇರದು. ಈ ವಿಚಿತ್ರ ವ್ಯಾಪಾರ ಮಾಡುವ ಮೊದಲು ಈತನು ಪುರಾತನ ವಿಭಾಗದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದನು.

ಆದರೆ ಈತನಿಗೆ “ಮಿಸ್ರ್”ಮರುಭೂಮಿಯಲ್ಲಿ ಚೇಳು ಹಿಡಿಯೋದು ಅಂದ್ರೆ ತುಂಬಾನೇ ಇಷ್ಟ. ಮುಂದೆ ಆತ ಅದನ್ನೇ ಮುಂದುವರಿಸಿ ಶಿಕ್ಷಣವನ್ನು ಮಧ್ಯದಲ್ಲಿಯೇ ಬಿಟ್ಟನು. ಆದರೆ ಈಗ ಅವನು “ಮಿಸ್ರ್” ದಲ್ಲಿಯ ಅನೇಕ ಶ್ರೀಮಂತರಲ್ಲಿ ಪಟ್ಟಿಯಲ್ಲಿ ಈತನೂ ಕೂಡ ಒಬ್ಬನಾಗಿದ್ದಾನೆ.

ಅವನು ಬೇರೆ ಬೇರೆ ಜಾತಿಯ 80 ಸಾವಿರ ಹಾವು ಹಾಗೂ ಚೇಳನ್ನು ಸಾಕಿ ಅದರ ವಿಷವನ್ನು ಔಷಧಿಯನ್ನು ತಯಾರಿಸುವ ದೊಡ್ಡ ದೊಡ್ಡ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾನೆ. ಏಕೆಂದರೆ ಔಷಧಿಗಳ ತಯಾರಿಕೆಗೆ ವಿಷದ ಉಪಯೋಗ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ.

ಚೇಳಿನ ವಿಷ ತೆಗೆಯಲು ಚೇಳಿಗೆ ಯುವಿ ಲೈಟ್ ಮುಖಾಂತರ ಸಣ್ಣ ಎಲೆಕ್ಟ್ರಿಕ್ ಶಾಕ್ ಕೊಡ್ಬೇಕಾಗುತ್ತೆ, ಶಾಕ್ ಕೊಟ್ಟ ತಕ್ಷಣವೇ ವಿಷ ಹೊರಗೆ ಬರುತ್ತದೆ. ರಾಯಟರ್ಸ್ ನೀಡಿದ ವರದಿಯ ಪ್ರಕಾರ ಚೇಳಿನ ಒಂದು ಗ್ರಾಮ್ ವಿಷದಿಂದ 20 ರಿಂದ 50 ಸಾವಿರ ಅಂಟಿವಿನೋಮ್ ವಿಷರೋಧಕ ಡೋಸ ತಯಾರಾಗುತ್ತವೆ.

ಮೊಹಮ್ಮದ್ ಬೋಷ್ಠಾ ಈ ಚೇಳು ಮತ್ತು ಹಾವಿನ ವಿಷವನ್ನು ಯುರೋಪ್ ಮತ್ತು ಅಮೆರಿಕಾದಲ್ಲಿ ಪೂರೈಕೆ ಮಾಡುತ್ತಾನೆ. ಈ ವಿಷದ ಉಪಯೋಗ ಔಷಧ ಕಂಪನಿಯವರು ಅಂಟಿವಿನೋಮ್ ಹಾಗೂ ಹೈಪರ್ ಟೆನ್ಷನ್ ನ ಔಷಧಗಾಗಿ ಉಪಯೋಗಿಸುತ್ತಾರೆ.

ಚೇಳಿನ 1 ಗ್ರಾಮ್ ವಿಷ ಮಾರಿದ ನಂತರ ಅವನಿಗೆ 10ಸಾವಿರ ಯುರೋ ಅಂದ್ರೆ ಸರಿಸುಮಾರು ಏಳು ಲಕ್ಷ ರೂಪಾಯಿ ಸಿಗುತ್ತವೆ.