ಹೌದೋ ಹುಲಿಯಾ! ಈ ರೈತ 30 ಕೋಟಿ ರೂ.ಗಳ ಹೆಲಿಕಾಪ್ಟರ್ ಖರೀದಿಸಿ, ತನ್ನ ಹೊಲದಲ್ಲೇ ನಿರ್ಮಿಸಿದನು ಹೆಲಿಪ್ಯಾಡ್….

ನಮ್ಮ ರೈತರು ಮನಸ್ಸು ಮಾಡಿದರೆ ದೊಡ್ಡ ದೊಡ್ಡ ಉದ್ಯೋಗ ಪತಿಗಳು ಸಹ ವಿಚಾರ ಮಾಡದ ಠೀವಿಯಲ್ಲಿ ಜೀವನ ನಡೆಸುತ್ತಾರೆ. ಇದಕ್ಕೆ ಒಂದು ಉದಾಹರಣೆ ನಮ್ಮ ಬದಿಯ ರಾಜ್ಯ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿ ತಾಲ್ಲೂಕಿನಲ್ಲಿಯ ರೈತನನ್ನೇ ನೋಡಿ. ಇವರ ಗೋದಾಮಿನ ವ್ಯಾಪಾರ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಗೊಂಡಿದೆ. ಇದರಿಂದ ಈ ಪ್ರದೇಶಕ್ಕೆ ಸಾಕಷ್ಟು ಆರ್ಥಿಕ ಸಮೃದ್ಧಿ ಬಂದಿದೆ. ಈ ಗ್ರಾಮೀಣ ಪ್ರದೇಶಗಳಲ್ಲಿ ಸಹ ಮರ್ಸಿಡಿಸ್, ಫಾರ್ಚೂನರ್, ಬಿಎಂಡಬ್ಲ್ಯು, ರೇಂಜ್ ರೋವರ್ ಮುಂತಾದ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.

ಅಷ್ಟೇ ಅಲ್ಲ ಅಮೆರಿಕ ಅಧ್ಯಕ್ಷರ ಪ್ರವಾಸದ ಸಲುವಾಗಿ ಬಳಸಲಾಗುವ ಕಾರು ಕ್ಯಾಡಿಲಾಕ್ ಅನ್ನು ಖರೀದಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಭಿವಂಡಿ ತಾಲ್ಲೂಕಿನಲ್ಲಿಯ ಅಂಜುರ್ ನಲ್ಲಿಯ ಅರುಣ್ ಆರ್ ಪಾಟೀಲ್ ಅವರಿಗೆ ಸಲ್ಲುತ್ತದೆ. ಅವರು ಆಗರಿ ಸಮಾಜದಲ್ಲಿಯ ಒಬ್ಬ ಉದ್ಯಮಿಯಾಗಿದ್ದಾರೆ. ಹೀಗಿರುವಾಗ ಇಲ್ಲಿಯ ಭಿವಂಡಿ ತಾಲ್ಲೂಕಿನ ವಾಡ್ಪೆ ಗ್ರಾಮದ ಸ್ಥಳೀಯ ರೈತ ಜನಾರ್ದನ್ ಭೋಯಿರ್ ಅವರು ಈಗ 30 ಕೋಟಿ ರೂ.ಗಳ ಹೆಲಿಕಾಪ್ಟರ್ ಖರೀದಿಸಿದ್ದಾರೆ.

ಭೋಯಿರ್ ಕೃಷಿಕರಾಗಿದ್ದು ಜೊತೆಗೆ ಸಹದ್ಯೋಗವೆಂದು ಡೈರಿ ವ್ಯವಸಾಯ ನಡೆಸುತ್ತಾರೆ. ಮನೆಯಲ್ಲಿ ಒಂದು ಕಾರು, ಬಂಗಲೆ ಮತ್ತು ಆರ್ಥಿಕ ಯೋಗಕ್ಷೇಮದೊಂದಿಗೆ, ಜನಾರ್ದನ್ ಭೋಯಿರ್ ಅವರು ಕಟ್ಟಡ ನಿರ್ಮಾಣ ವ್ಯವಸಾಯಕ್ಕೆ ಕೈಯೊಡ್ಡಲು ನಿರ್ಧರಿಸಿದರು. ಮೊದಲು, ಅವರು ತಮ್ಮ ಜಮೀನಿನಲ್ಲಿ ಗೋಡೌನ್ ನಿರ್ಮಿಸಿದರು. ಅದೇ ಸಮಯದಲ್ಲಿ, ಕೆಲವರಿಗೆ ಭೂಮಿಯನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡಲಾಯಿತು. ಇದು ಅವರಿಗೆ ಸಾಕಷ್ಟು ಆರ್ಥಿಕ ಯೋಗಕ್ಷೇಮವನ್ನು ತಂದಿತು.

ಭೋಯಿರ್ ಅವರಿಗೆ ಡೈರಿ ವ್ಯಾಪಾರಕ್ಕಾಗಿ ಪಂಜಾಬ್, ಹರಿಯಾಣ ಮತ್ತು ಗುಜರಾತ್‌ಗೆ ಹೋಗಬೇಕಾಗುತ್ತದೆ. ಈ ಕಾರಣದಿಂದ ಅವರು ಸ್ವತಃ ಹೆಲಿಕಾಪ್ಟರ್ ತೆಗೆದುಕೊಂಡರು. ಮಾರ್ಚ್ 15 ರಂದು ಒಂಬತ್ತು ಆಸನಗಳ ಹೊಂದಿದ ಹೆಲಿಕಾಪ್ಟರ್ ಸಿಗಲಿದೆ. ಅವರ ವಾಸಸ್ಥಳದಲ್ಲಿ ಹೆಲಿಕಾಪ್ಟರ್‌ಗಳಿಗೆ ನಿಖರವಾಗಿ ಏನು ವ್ಯವಸ್ಥೆ ಮಾಡಲಾಗಿದೆ ಎಂದು ನೋಡಲು ಮುಂಬೈನ ಕೆಲವು ತಂತ್ರಜ್ಞರು ಹೆಲಿಕಾಪ್ಟರ್ ಮೂಲಕ ವಾಡ್ಪೆ ಗ್ರಾಮಕ್ಕೆ ಬಂದಿದ್ದರು.

2.5 ಎಕರೆ ಭೂಮಿಯಲ್ಲಿ ರಕ್ಷಣಾತ್ಮಕ ಗೋಡೆ, ಹೆಲಿಪ್ಯಾಡ್, ಹೆಲಿಕಾಪ್ಟರ್ ನಿಲ್ಲಿಸಲು ಗ್ಯಾರೇಜ್, ಪೈಲಟ್‌ಗಳು, ಎಂಜಿನಿಯರ್‌ಗಳು ಮತ್ತು ಸೆಕ್ಯುರಿಟಿ ಗಾರ್ಡ್‌ ಇವರ ಸಲುವಾಗಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ವಿಶೇಷವೆಂದರೆ, ಇಂದು ಗ್ರಾಮದಲ್ಲಿ ಇಳಿದ ಹೆಲಿಕಾಪ್ಟರ್‌ನಲ್ಲಿ ಜನಾರ್ಥನ್ ಭೋಯಿರ್ ಅವರು ಸ್ವತಃ ಕುಳಿತುಕೊಳ್ಳದೆ ಅವರು ಇತ್ತೀಚೆಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಸದಸ್ಯರು ಸೇರಿದಂತೆ ಗ್ರಾಮದಲ್ಲಿ ತಮ್ಮ ಆಪ್ತರನ್ನು ಗ್ರಾಮದಲ್ಲಿ ಪ್ರವಾಸ ಮಾಡಿಸಿದರು.