ಬರೀ 50 ಸಾವಿರ ರೂಪಾಯಿಗಳಲ್ಲಿ ಪ್ರಾರಂಭಿಸಿ ಈ ಬಿಜಿನೆಸ್, ಗಳಿಕೆ 5 ಲಕ್ಷ, ಸರಕಾರದಿಂದ 40% ಸಬ್ಸಿಡಿ.
ಸ್ವಂತದ ಉದ್ಯೋಗವನ್ನು ಪ್ರಾರಂಭಿಸುವುದು ಅನೇಕರ ಇಚ್ಛೆಯಾಗಿರುತ್ತದೆ. ಆದರೆ ಹಣದ ಅಭಾವ ಮತ್ತು ವಿವಿಧ ಯೋಜನೆಗಳ ಬಗ್ಗೆ ಅಲ್ಪ ಮಾಹಿತಿ ಇರುವ ಕಾರಣದಿಂದ ಅನೇಕರು ಈ ಅವಕಾಶದಿಂದ ವಂಚಿತರಾಗಿ ಉಳಿಯುತ್ತಾರೆ. ಒಂದು ವೇಳೆ ನೀವು ಕಡಿಮೆ ಬಂಡವಾಳದಲ್ಲಿ ಹಾಗೂ ಮನೆಯಲ್ಲಿಯೇ ಕುಳಿತು ಉದ್ಯೋಗವನ್ನು ಪ್ರಾರಂಬಿಸುವ ವಿಚಾರ ಮಾಡುತ್ತಿದ್ದರೆ, ಮಶ್ರೂಮ್ ತಯಾರಿಸುವ ವ್ಯವಸಾಯ ನಿಮಗೆ ಲಕ್ಷಾವಧಿ ರೂಪಾಯಿಗಳ ಗಳಿಕೆಯನ್ನು ತಂದು ಕೊಡುತ್ತದೆ. ಇತ್ತೀಚೆಗೆ ಎಲ್ಲ ಕಡೆಗೂ ಮಶ್ರೂಮ್ ಡಿಮಾಂಡ್ ಹೆಚ್ಚಾಗುತ್ತಿದೆ. ಇದಕ್ಕಾಗಿ ನಿಮಗೆ ದೊಡ್ಡ ತೋಟದ ಅಥವಾ ಸಾಕಷ್ಟು ಖಾಲಿ ಜಾಗದ ಅವಶ್ಯಕತೆ ಬೇಕಾಗಿಲ್ಲ. ಈ ವ್ಯವಸಾಯವನ್ನು ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಮಾಡಬಹುದಾಗಿದೆ. ಹಾಗೂ ಈ ಕೆಲಸದಿಂದ ಸಾಕಷ್ಟು ಹಣವನ್ನು ಸಹ ಗಳಿಸಬಹುದಾಗಿದೆ.
ಮಶ್ರೂಮ್ ನ ವ್ಯವಸಾಯ.

ಈ ವ್ಯವಸಾಯ ಸಾಕಷ್ಟು ಲಾಭ ತಂದು ಕೊಡುವ ವ್ಯವಸಾಯ ಎಂದು ಪರಿಗಣಿಸಲಾಗಿದೆ. ಮಶ್ರೂಮ್ ನ ಉಪಯೋಗ ಆಹಾರಕ್ಕಾಗಿ ಹಾಗೂ ಔಷಧಿಯ ನಿರ್ಮಿತಿಗಾಗಿ ಮಾಡಲಾಗುತ್ತದೆ. ಇದಕ್ಕೆ ದೇಶದಲ್ಲಿ ಅಷ್ಟೇ ಅಲ್ಲ ವಿದೇಶಗಳ ಮಾರುಕಟ್ಟೆಯಲ್ಲಿಯೂ ತುಂಬಾ ಡಿಮಾಂಡ್ ಇದೆ. ನೀವು ಈ ವ್ಯವಸಾಯವನ್ನು ಬರೀ 50 ಸಾವಿರ ರೂಪಾಯಿಗಳ ಬಂಡವಾಳದಿಂದ ಪ್ರಾರಂಭಿಸಬಹುದಾಗಿದೆ. ಈ ವ್ಯವಸಾಯ ಹೇಗೆ ಮಾಡಬಹುದು? ಎಂಬುದರ ಬಗ್ಗೆ ತಿಳಿದುಕೊಳ್ಳಿ.
ಮಶ್ರೂಮ್ ನ ಬೇಸಾಯ ಹೇಗೆ ಮಾಡಬೇಕು?

ಈ ಉದ್ಯೋಗವನ್ನು ನೀವು ಪ್ರಾರಂಭಿಸಬೇಕೆಂದರೆ ಇದರ ತಾಂತ್ರಿಕ ವಿಷಯಗಳ ಮೇಲೆ ಗಮನ ನೀಡಬೇಕಾಗುವುದು ಅಗತ್ಯ. ಪ್ರತಿ ಚದರ ಮೀಟರ್ ನಲ್ಲಿ 10 ಕೆಜಿ ಮಶ್ರೂಮ್ ಉತ್ಪಾದನೆ ಮಾಡಬಹುದಾಗಿದೆ. ಕನಿಷ್ಠ 40×30 ಅಡಿ ಜಾಗದಲ್ಲಿ ಮೂರು ಅಡಿ ಅಗಲದಲ್ಲಿ ನೀವು ಮಶ್ರೂಮ್ನ ಉತ್ಪಾದನೆ ಮಾಡಬಹುದು. ಮೂರು ಅಡಿ ಅಗಲದ ರ್ಯಾಕ್ ತಯಾರಿಸಿ ಅದರ ಮೇಲೆ ಮಶ್ರೂಮ್ ನ ಉತ್ಪಾದನೆಯನ್ನು ಸಹಜವಾಗಿ ಮಾಡಬಹುದು.
ಈ ವ್ಯವಸಾಯ ಸರಕಾರದ ಸಬ್ಸಿಡಿಯ ಸಹಾಯದಿಂದ ಪ್ರಾರಂಭಿಸಬಹುದು.
ಕಂಪೋಸ್ಟ್ ತಯಾರಿಸುವ ಪದ್ಧತಿ…..

ಕಂಪೋಸ್ಟ್ ತಯಾರಿಸಲು ಧಾನ್ಯದ ಸಿಪ್ಪೆಯನ್ನು ನೆನೆಸಬೇಕು. ಒಂದು ದಿನದ ನಂತರ ಅದನ್ನು ಡಿಎಪಿ, ಯೂರಿಯಾ, ಪೊಟ್ಯಾಶ್, ಗೋದಿ, ಜಿಪ್ಸಂ, ಕಾರ್ಬೋಫ್ಯುಡೊರನ್ ನೊಂದಿಗೆ ಬೆರೆಸಿ ಕೆಲವು ದಿನಗಳವರೆಗೆ ಕೊಳೆಯಲು ಇಡಲಾಗುತ್ತದೆ.
ಸುಮಾರು ಒಂದೂವರೆ ತಿಂಗಳದಲ್ಲಿ ಕಂಪೋಸ್ಟ್ ತಯಾರಾಗುತ್ತದೆ. ಆನಂತರ ಸೆಗಣಿ ಮತ್ತು ಮಣ್ಣನ್ನು ಬೆರೆಸಿ ಸುಮಾರು ಒಂದುವರೆ ಇಂಚು ದಪ್ಪಾದ ಪದರು ಹರಡಿಸುತ್ತಾರೆ. ಈ ಪದರಿನಲ್ಲಿ ಆರ್ದ್ರತೆ ಇರುವ ಸಲುವಾಗಿ ಸ್ಪ್ರೇ ಮುಖಾಂತರ ಮಶ್ರೂಮ್ ಮೇಲೆ ಎರಡರಿಂದ ಮೂರು ಬಾರಿ ನೀರನ್ನು ಸಿಂಪಡಿಸಿವರು. ಈ ರೀತಿಯಾಗಿ ಮಶ್ರೂಮ್ ನ ಬೆಳೆ ತೆಗೆದುಕೊಳ್ಳಲು ಬರುತ್ತದೆ.
ಮಶ್ರೂಮ್ ವ್ಯವಸಾಯದ ತರಬೇತಿಯನ್ನು ಪಡೆದು ಬಿಜಿನೆಸ್ ಪ್ರಾರಂಭಿಸಿ.
ಎಲ್ಲಾ ಕೃಷಿ ವಿದ್ಯಾಲಯಗಳು ಮತ್ತು ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಮಶ್ರೂಮಿನ ಉತ್ಪಾದನೆಯ ಬಗ್ಗೆ ತರಬೇತಿ ನೀಡಲಾಗುತ್ತದೆ. ಹಾಗೆಯೇ ಅನೇಕ ಕೇಂದ್ರಗಳು ಸಹ ಮಶ್ರೂಮಿನ ಉತ್ಪಾದನೆ ಹೇಗೆ ಮಾಡಬಹುದು ಎಂದುದರ ಬಗ್ಗೆ ತರಬೇತಿ ನೀಡುತ್ತವೆ. ಒಂದು ವೇಳೆ ನಿಮಗೆ ದೊಡ್ಡಪ್ರಮಾಣದಲ್ಲಿ ವ್ಯವಸಾಯ ಮಾಡುವುದಾದರೆ ಯೋಗ್ಯರೀತಿಯಲ್ಲಿ ಅದನ್ನು ಪ್ರಾರಂಭಿಸುವುದು ಒಳ್ಳೆಯದು.
ನೀವು ಈ ವ್ಯವಸಾಯವನ್ನು ಕೇವಲ 50 ಸಾವಿರ ರೂಪಾಯಿಗಳಿಂದ ಪ್ರಾರಂಭ ಮಾಡಬಹುದು.
ಮಶ್ರೂಮ್ ವ್ಯವಸಾಯಕ್ಕೆ ಬೇಕಾಗುವ ಹಣವು ಅನೇಕ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ನೀವು ಈ ವ್ಯವಸಾಯವನ್ನು ಬರೀ 50 ಸಾವಿರ ರೂಪಾಯಿಗಳಿಂದ ಪ್ರಾರಂಭಿಸಬಹುದು.
ಸರಕಾರದ ವತಿಯಿಂದ ಈ ವ್ಯವಸಾಯಕ್ಕೆ 40 ಪ್ರತಿಶತ ಸಬ್ಸಿಡಿ ಸಿಗುತ್ತದೆ. ಸರ್ಕಾರವು ಮಶ್ರೂಮಿನ ವ್ಯವಸಾಯದ ಸಲುವಾಗಿ ಸಾಲ ಸೌಲಭ್ಯವನ್ನು ಉಪಲಬ್ದ ಮಾಡಿ ಕೊಡುತ್ತದೆ. ಈ ವ್ಯವಸಾಯದಲ್ಲಿ ಒಳ್ಳೆಯ ಗಳಿಕೆ ಇದೆ. ಮಶ್ರೂಮ್ ನ ವ್ಯವಸಾಯ ಜಗತ್ತಿನಲ್ಲಿ 12.9 ಪ್ರತಿಶತದಲ್ಲಿ ವಿಸ್ತರಿಸುತ್ತಿದೆ. ಒಂದು ವೇಳೆ ನೀವು ಈ ಬಿಸಿನೆಸ್ ನ್ನು 100 ಚದರ ಅಡಿಯಲ್ಲಿ ಪ್ರಾರಂಭಿಸಿದರೆ ನಿಮಗೆ ಪ್ರತಿವರ್ಷ ಒಂದು ಲಕ್ಷ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳವರೆಗೆ ಲಾಭವಾಗುತ್ತದೆ.