ಈ ಫೋಟೋದಲ್ಲಿ ಒಂದು ತಪ್ಪು ಇದೆ, ಅದೇನೆಂಬುದು ನೀವು ಕಂಡು ಹಿಡಿಯಬಲ್ಲಿರಾ?

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಚಾಲೆಂಜ್ ಗಳು ತುಂಬಾ ವೈರಲ್ ಆಗುತ್ತಿವೆ. ಅಂತಹದೇ ಒಂದು ಚಾಲೆಂಜ್ ಸದ್ಯಕ್ಕೆ ತುಂಬಾ ವೈರಲ್ ಆಗುತ್ತಿದೆ. ನಾವು ಚಿಕ್ಕವರಿರುವಾಗ ತಪ್ಪು ಹುಡುಕಿ ಎಂಬ ಆಟವನ್ನು ಆಡಿದ್ದೇವೆ ಹಾಗೆಯೇ ಪ್ರಸ್ತುತ ಫೋಟೋದಲ್ಲಿ ಕೂಡಾ ಒಂದೇ ಒಂದು ತಪ್ಪಿದೆ ಅದು ಯಾವುದೆಂದು ಹುಡುಕಿ ಹೇಳಬೇಕಿದೆ.

ಈ ಫೋಟೋ ಸೋಶಿಯಲ್ ಸೈಟ್ ಗಳಾದ ಇಮಗುರ್ ಮತ್ತು ರೆಡ್ಡಿಟ್ ನಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ನಾಲ್ಕು ಹುಡುಗಿಯರು ಕಾಣಿಸುತ್ತಿದ್ದಾರೆ. ಆದರೆ ಈ ಫೋಟೋ ದಲ್ಲಿ ಒಂದು ದೊಡ್ಡ ತಪ್ಪೇ ನಡೆದಿದೆ. ಈ ತಪ್ಪನ್ನು ಹುಡುಕುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರಿಗೆ ಸವಾಲು ನೀಡಲಾಗಿತ್ತು ಆದರೆ ಶೇಕಡಾ 99.9 ರಷ್ಟು ತಪ್ಪನ್ನು ಹುಡುಕಲು ಅಯಶಸ್ವಿಯಾಗಿದ್ದಾರೆ. ನೀವು ಕೂಡಾ ಪ್ರಯತ್ನ ಮಾಡಿ ನೋಡಿ.

ಈ ಗ್ರೂಪ್ ಫೋಟೋನಲ್ಲಿ ನೀವು ನೋಡಬಹುದು ನಾಲ್ಕು ಹುಡುಗಿಯರಲ್ಲಿ ಮೂರು ಹುಡುಗಿಯರ ನೋಟ ಕ್ಯಾಮೆರಾ ಕಡೆಗೆ ಇದ್ದರೆ ಒಬ್ಬ ಹುಡುಗಿಯ ನೋಟ ಮಾತ್ರ ಬೇರೆ ಕಡೆಗೆ ಇದ್ದುದ್ದೆ ತಪ್ಪಾಗಿದೆ ಎಂದು ನೀವು ಭಾವಿಸಿದರೆ ಅದು ನಿಮ್ಮ ತಪ್ಪಾಗುತ್ತೆ. ಏಕೆಂದರೆ ಈ ಫೋಟೋದಲ್ಲಿ ಬೇರೆ ಏನೋ ಮತ್ತೊಂದು ದೊಡ್ಡ ತಪ್ಪು ಅಡಗಿದೆ. ಇನ್ನೊಮ್ಮೆ ನೋಡಿ.

ನಿಮಗೇನಾದರೂ ತಪ್ಪು ಸಿಕ್ಕಿತಾ? ಸಿಕ್ಕಿದ್ದರೆ ಕಾಮೆಂಟ್ ಮಾಡಿ. ಸಿಗದಿದ್ದರೆ ನಾವು ಹುಡುಕಲು ಸಹಾಯ ಮಾಡುತ್ತೇವೆ. ಈ ಫೋಟೋದಲ್ಲಿ ಏಕಚಿತ್ತದಿಂದ ನೋಡಿದರೆ ತಪ್ಪು ಗೊತ್ತಾಗುತ್ತೆ. ಅದೇನೆಂದರೆ ಈ ತರುಣಿಯರ ಹಿಂದುಗಡೆ ಒಬ್ಬ ಯುವಕ ನಿಂತಿದ್ದಾನೆ ನೋಡಿ. ಈ ಯುವತಿಯರ ಹಿಂದುಗಡೆ ಕಾಣುತ್ತಿರುವ ಎಲ್ಲರ ಮುಖ ಆತನ ಹಾಗೆ ಕಾಣುತ್ತಿವೆ ಸೂಕ್ಷ್ಮವಾಗಿ ನೋಡಿ ಗೊತ್ತಾಗುತ್ತೆ. ಇದೇ ಈ ಫೋಟೋದಲ್ಲಿಯ ತಪ್ಪಾಗಿದೆ.

ಈ ಫೋಟೋವನ್ನು ಯುವಕನು ನಡೆಯುತ್ತಿರುವಾಗ ಫೋಟೋ ಕ್ಲಿಕ್ ಮಾಡಿರಬಹುದು ಅಥವಾ ಈ ಫೋಟೋವನ್ನು ಯಾರೋ ಎಡಿಟ್ ಮಾಡಿ ಆ ಯುವಕನ ಮುಖವನ್ನು ಎಲ್ಲರ ಹಿಂದೆ ಅಂಟಿಸಿರಬಹುದು ಎಂಬ ಅನುಮಾನವಿದೆ.