ಚೇಳು ಕಚ್ಚಿದ ನಂತರ ಒಂದೇ ನಿಮಿಷದಲ್ಲಿ ಪರಿಹಾರ ಮಾಡುವ ಮನೆ ಮದ್ದುಗಳು…….

ಪಟ್ಟಣಗಳಲ್ಲಿ ಚೇಳು ಕಚ್ಚುವುದರ ಪ್ರಮಾಣ ವಿರಳವಾಗಿದ್ದರೂ, ಆರ್ದ್ರ, ಕತ್ತಲೆಯ ಸ್ಥಳಗಳಲ್ಲಿರುವ ಕೊಟ್ಟಿಗೆಯ ಬಳಿ ಚೇಳುಗಳು ಇರಬಹುದು. ಅಂತಹ ಸ್ಥಳಗಳಲ್ಲಿ ಕೆಲಸ ಮಾಡುವಾಗ ಮತ್ತು ಹೊಲದಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಚೇಳು ಕಚ್ಚಬಹುದು. ಚೇಳು ಕಚ್ಚುವುದು ಅದರ ಬಾಯಿಂದಲ್ಲ, ಅದರ ಬಾಲದ ಕೊನೆಯ ಕೊಂಡಿಯಿಂದ. ಚೇಳಿಗೆ ಉದ್ದವಾದ ಬಾಲ ವಿರುತ್ತದೆ. ನಮ್ಮ ಕೈ ಬೆರಳಿನ ಹಾಗೆ ಬಾಲಕ್ಕೆ ಹಂತ ಹಂತವಾಗಿ ಭಾಗಗಳಿರುತ್ತವೆ. ಆದರೆ ಕೊನೆಯ ಭಾಗದಲ್ಲಿ ಅದರ ವಿಷ ತುಂಬಿರುತ್ತದೆ ಅಲ್ಲದೆ ಆ ಭಾಗಕ್ಕೆ ಒಂದು ಮುಳ್ಳಿನ ಹಾಗೆ ಕೊಂಡಿ ಇರುತ್ತದೆ ಅದರ ಮುಖಾಂತರ ನಮ್ಮ ಶರೀರಕ್ಕೆ ಚುಚ್ಚಿ ವಿಷ ಬಿಡುತ್ತದೆ. ಆಸ್ಪತ್ರೆಯಲ್ಲಿ ಡಾಕ್ಟರ್ ಗಳು ಇಂಜೆಕ್ಷನ್ ಒಳಗಡೆ ಚುಚ್ಚಿ ಹೇಗೆ ಔಷಧವನ್ನು ಬಿಡುತ್ತಾರೋ ಹಾಗೆಯೇ ಚೇಳು ಕೂಡಾ ನಮ್ಮ ಅಂಗದಲ್ಲಿ ವಿಷ ಬಿಡುತ್ತದೆ. ಚೇಳಿನ ವಿಷವು ಹಾವುಗಳಿಗಿಂತ ಹೆಚ್ಚು ವಿಷಕಾರಿಯಾಗಿರುತ್ತದೆ. ಆದರೆ ಚೇಳಿನ ವಿಷ ಕಡಿಮೆ ಇರುವದರಿಂದಾಗಿ ಅದರ ಪರಿಣಾಮಗಳು ಹಾವಿನ ವಿಷದಂತೆ ಗಮನಾರ್ಹವಾಗಿ ಕಂಡುಬರುವುದಿಲ್ಲ.
ಚೇಳು ನಮ್ಮ ಸುತ್ತಮುತ್ತಲೂ ಎಂದು ಹೇಳಲಾರದೆ ಬರುವಂತ ಜೀವಿಯಾಗಿದೆ. ಈ ಚೇಳು ಕಚ್ಚಿದ ನಂತರ, ಈ ಚೇಳು ಕಚ್ಚಿದ ವ್ಯಕ್ತಿ ತುಂಬಾ ಕೂಗುತ್ತಾನೆ, ವ್ಯಕ್ತಿಯು ತುಂಬಾ ನರ ಳುತ್ತಾನೆ. ಈ ಚೇಳಿನ ಕಡಿತಕ್ಕೆ ಆಯುರ್ವೇದ ಅಥವಾ ಯಾವುದೇ ಆಸ್ಪತ್ರೆ ಸ್ವಲ್ಪ ಮಟ್ಟಿಗೆ ಚಿಕಿತ್ಸೆ ಮಾಡಿಕೊಂಡು ಆರಾಮ ಪಡೆಯಬಹುದು. ಆಸ್ಪತ್ರೆಯಲ್ಲಿ ಒಂದು ಚಿಕಿತ್ಸೆ ಇದೆ, ಅದೇನೆಂದರೆ ಆಸ್ಪತ್ರೆಯಲ್ಲಿ ಚುಚ್ಚುಮದ್ದಿನ ಮೂಲಕ ಕಚ್ಚಿದ ಭಾಗವನ್ನು ಅರಿವಿಲ್ಲದ ಅಥವಾ ಪ್ರಜ್ಞಾಹೀನವಾಗಿ ಮಾಡುವದು. ಆದರೆ ಆಯುರ್ವೇದದಲ್ಲಿ ಇಂತಹ ಕಚ್ಚಿದ ಚೇಳುಗಳಿಗೆ ಪರಿಹಾರಗಳಿವೆ. ಅಂತಹ ಪರಿಹಾರಗಳು ಯಾವವು ಎಂಬುದು ನೋಡೋಣ. ಇಂತಹ ಅನೇಕ ಪರಿಹಾರಗಳು ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿಯೇ ಇರುತ್ತವೆ, ಅವುಗಳಲ್ಲಿ ಕೆಲವು ಪರಿಹಾರಗಳು ನೋಡೋಣ. ಎಲ್ಲರ ಮನೆಯಲ್ಲಿ ಅಥವಾ ಮನೆಯ ಹತ್ತಿರ ಸಹಜವಾಗಿ ಹುಣಸೆ ಹಣ್ಣಿನ ಬೀಜಗಳಿರುತ್ತವೆ. ಈ ಹುಣಸೆಕಪ್ಪನ್ನು ಚೇಳು ಕಚ್ಚಿದಲ್ಲೆಲ್ಲಾ ಅದರ ಸಿಪ್ಪೆ ತೆಗೆದು ಕಲ್ಲಿನ ಮೇಲೆ ಉಜ್ಜಬೇಕು . ಉಜ್ಜಿದ ಬೀಜವನ್ನು ಚೇಳು ಕಚ್ಚಿದ ಸ್ಥಳದಲ್ಲಿಯೇ ಹಚ್ಚಬೇಕು. ಇದರಿಂದ ತಕ್ಷಣ ಚೇಳಿನ ವಿಷದ ಹೊಡೆತದಿಂದ ಆರಾಮ ಪಡೆಯಬಹುದು. ಇದು ಹುಣಸೆ ಹಣ್ಣಿನ ಬೀಜದ ಪರಿಹಾರವಾಗಿದೆ. ಎರಡನೆಯ ಉಪಾಯ ತುಂಬಾ ಚಮ ತ್ಕಾರ ವಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಸ್ಫಟಿಕದ ತುಂಡುಗಳು ಇದ್ದೆ ಇರುತ್ತವೆ. ಈ ಸ್ಪಟಿಕವನ್ನು ನೀವು ಗ್ಯಾಸ್ ಮೇಲೆ ಅಥವಾ ಮೆಣಬತ್ತಿಯ ಮೇಲೆ ಗರಮ ಮಾಡಿ ಯಾವಾಗ ಈ ಸ್ಫಟಿಕ ನಿರಾಗಲು ಪ್ರಾರಂಭ ವಾಗುವದೋ ಆಗ ಇದನ್ನು ಚೇಳು ಕಚ್ಚಿದ ಜಾಗದಲ್ಲಿ ಹಚ್ಚಿರಿ. ಎಲ್ಲಿಯವರೆಗೆ ಚೇಳಿನ ವಿಷ ವಿರುವದೋ ಅಲ್ಲಿಯ ವರೆಗೆ ಇದು ಆ ಜಾಗದಿಂದ ಕೆಳಗಡೆ ಬೀಳುವದಿಲ್ಲ. ವಿಷ ಕಡಿಮೆ ಆಗುತ್ತಲೇ ಇದು ಕೆಳಗಡೆ ಬೀಳುವದು. ಇದೊಂದು ಚಮತ್ಕಾರಿಕ ಉಪಚಾರ ವಾಗಿದೆ.