T20 WC: ಮಹೇಂದ್ರ ಸಿಂಗ್ ಧೋನಿ ಅವರ ಕಡೆಗೆ BCCI ಮೆಂಟರ್ ಜವಾಬ್ದಾರಿಯನ್ನು ನೀಡಿದ ನಂತರ ಪಾಕಿಸ್ತಾನದ ಪ್ರತಿಕ್ರಿಯೆ…

ಈ t20 ವರ್ಲ್ಡ್ ಕಪ್ ಗೆದ್ದು ಬೀಗಬೇಕೆಂಬ ವಿಶ್ವಾಸದಲ್ಲಿ ಭಾರತ ತಂಡವು ಸನ್ನದ್ಧವಾಗಿದೆ. ಇದಕ್ಕಾಗಿ ಭಾರತ ತಂಡವು ಮೈದಾನದಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಐಪಿಎಲ್ ಅನುಭವ ಜೊತೆಯಲ್ಲಿ ಇರುವುದರಿಂದ ಭಾರತ ತಂಡವು ದುಬೈನಲ್ಲಿ ದಾಖಲೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಇದೇ ಸಂದರ್ಭದಲ್ಲಿ ಬಿಸಿಸಿಐ ತಂಡಕ್ಕೆ ಮಾರ್ಗದರ್ಶನ ನೀಡುವ ಸಲುವಾಗಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಜವಾಬ್ದಾರಿಯನ್ನು ವಹಿಸಿದನಂತರ ಪಾಕಿಸ್ತಾನದ ಮಾಜಿ ಆಟಗಾರ ಸಲ್ಮಾನ್ ಭಟ್ ಅವರು ತಮ್ಮ ಪ್ರತಿಕ್ರಿಯೆಯನ್ನು ಈ ರೀತಿಯಾಗಿ ಹೊರಹಾಕಿದ್ದಾರೆ. ಯುಟ್ಯೂಬ್ ಚಾನೆಲ್ ನಲ್ಲಿ ಚರ್ಚೆ ಮಾಡುವಾಗ ಧೋನಿಯವರ ಬಗ್ಗೆ ತಮ್ಮ ಮಾತುಗಳನ್ನು ಹೀಗೆ ಮಂಡಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿಯವರು ಒಬ್ಬ ಯಶಸ್ವಿ ನಾಯಕ ಹಾಗೂ ಆಟಗಾರರಾಗಿದ್ದಾರೆ. ಭಾರತೀಯ ತಂಡಕ್ಕೆ ಚೆನ್ನಾಗಿ ಮಾರ್ಗದರ್ಶನ ಮಾಡಬಲ್ಲರು. ಕಾರಣ ಅವರ ಕಡೆಗೆ ಒಳ್ಳೆಯ ಅನುಭವವಿದೆ. ಅವರ ನಿವೃತ್ತಿಯಾದ ನಂತರವೂ ಭಾರತ ಚೆನ್ನಾಗಿ ಕ್ರಿಕೆಟ್ ಆಡಿದೆ. ಆದರೆ ಫೈನಲ್ ಪಂದ್ಯದಲ್ಲಿ ಮಾತ್ರ ನಿಯೋಜನೆಯಲ್ಲಿ ಸ್ವಲ್ಪ ಕಡಿಮೆ ಬೀಳುತ್ತಿದೆ.

ಧೋನಿಯವರ ಕಡೆಗೆ ಫೈನಲ್ ಪಂದ್ಯ ಗೆಲ್ಲುವ ಅನುಭವ ತುಂಬಾ ಚೆನ್ನಾಗಿದೆ. ಹೀಗಾಗಿ ಭಾರತೀಯ ತಂಡಕ್ಕೆ ಅವರ ಕಡೆಯಿಂದ ತುಂಬಾ ಆಸೆಗಳಿವೆ. ಅವರ ಮಾರ್ಗದರ್ಶನದ ಕಾರಣದಿಂದಾಗಿ ಫೈನಲ್ ಪಂದ್ಯ ಭಾರತಕ್ಕೆ ಇನ್ನಷ್ಟು ಸುಲಭವಾಗಲಿದೆ. ಈ ಎಲ್ಲ ಕಾರಣಗಳಿಂದಲೇ ಬಹುಶಃ ಧೋನಿಯವರಿಗೆ ಮಾರ್ಗದರ್ಶಕರಾಗಿ ಬಿಸಿಸಿಐ ನಿಯುಕ್ತಿ ಮಾಡಿದೆ. ಎಂಬ ಮಾತುಗಳನ್ನು ಸಲ್ಮಾನ್ ಭಟ್ ಅವರು ತಮ್ಮ ಯುಟ್ಯೂಬ್ ಚಾನೆಲ್ ನ ಚರ್ಚೆಯಲ್ಲಿ ಹೇಳಿದ್ದಾರೆ.