ಈ ಒಂದು ಕಾರಣದಿಂದಾಗಿ ಗಿರೀಶ್ ಕಾರ್ನಾಡ್ ಅವರು ಹೇಮಾಮಾಲಿನಿಯ ಜೊತೆಗೆ ಮದುವೆಯಾಗಲು ಒಪ್ಪಲಿಲ್ಲ…

ಬಾಲಿವುಡ್ ಡ್ರೀಮ್ ಗರ್ಲ್ ಎಂದೇ ಪ್ರಸಿದ್ಧರಾಗಿರುವ ಹೇಮಾಮಾಲಿನಿಯವರ ಜೊತೆಗೆ ಮದುವೆಯಾಗುವ ಕನಸನ್ನು ಅನೇಕರು ಕಂಡಿದ್ದರು.

ತಮ್ಮ ಸೌಂದರ್ಯ ಮತ್ತು ಅಭಿನಯದ ಕೌಶಲ್ಯದಿಂದ ನಟಿ ಹೇಮಾಮಾಲಿನಿಯವರು ಬಾಲಿವುಡ್ನಲ್ಲಿ ತಮ್ಮದೇ ಆದ ವಿಶೇಷ ಸ್ಥಾನವನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅವರ ಸೌಂದರ್ಯದ ಜಾದೂ ಅವರ ಅಭಿಮಾನಿಗಳ ಜೊತೆಗೆ ಅನೇಕ ನಟರ ಮೇಲೆಯೂ ಆಗಿತ್ತು. ಆದರೆ ಲೇಖಕ, ನಟ ಗಿರೀಶ್ ಕಾರ್ನಾಡ್ ಅವರು ಮಾತ್ರ ಹೇಮಾಮಾಲಿನಿ ಅವರ ಜೊತೆಗೆ ಮದುವೆಯಾಗಲು ಸ್ಪಷ್ಟವಾಗಿ ನಿರಾಕರಿಸಿದ್ದರು. ಗಿರೀಶ್ ಕಾರ್ನಾಡರು ತಮ್ಮ ಆತ್ಮಚರಿತ್ರೆಯಲ್ಲಿ ಈ ಪ್ರಸಂಗವನ್ನು ಹೇಳಿದ್ದಾರೆ.

1974-75 ರಲ್ಲಿ ಗಿರೀಶ್ ಕಾರ್ನಾಡ್ ಅವರು ಪುಣೆಯ FTII ಸಂಸ್ಥೆಯಲ್ಲಿ ಅಧ್ಯಕ್ಷರಾಗಿದ್ದರು. ಅದೇ ಸಂದರ್ಭದಲ್ಲಿ ಅವರಿಗೆ ಹೇಮಾಮಾಲಿನಿಯ ಜೊತೆಗೆ ಮದುವೆಯ ಪ್ರಸ್ತಾಪ ಬಂತು. ಗಿರೀಶ್ ಕಾರ್ನಾಡ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ಬರೆದಿದ್ದಾರೆ, ಆ ಸಮಯದಲ್ಲಿ ಜಯಾ ಚಕ್ರವರ್ತಿಯವರು ‘ಸ್ವಾಮಿ’ ಚಲನಚಿತ್ರವನ್ನು ನಿರ್ಮಿಸುತ್ತಿದ್ದರು. ಆ ಚಲನಚಿತ್ರದಲ್ಲಿ ಗಿರೀಶ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಬೇಕು ಎಂದು ಅವರ ಇಚ್ಛೆಯಾಗಿತ್ತು. ಅದಕ್ಕಾಗಿ ಮೇಲಿಂದ ಮೇಲೆ ಗಿರೀಶ್ ಕಾರ್ನಾಡ್ ಅವರಿಗೆ ಆಮಂತ್ರಣ ಬರುತ್ತಿತ್ತು. ಆದರೆ ನಿಧಾನವಾಗಿ ಅದರ ಹಿಂದಿನ ಉದ್ದೇಶ ಗಿರೀಶ್ ಕಾರ್ನಾಡ್ ಅವರಿಗೆ ಗೊತ್ತಾಯಿತು. ಅವರೆಲ್ಲ ಹೇಮಾಮಾಲಿನಿಯವರಿಗಾಗಿ ಹುಡುಗನ ಶೋಧದಲ್ಲಿದ್ದರು ಎಂದು. ಅದೇ ಸಂದರ್ಭದಲ್ಲಿ ಹೇಮಾಮಾಲಿನಿ ಮತ್ತು ಧರ್ಮೇಂದ್ರ ಇವರಿಬ್ಬರ ಪ್ರೇಮ ಪ್ರಕರಣದ ಬಗ್ಗೆ ಚರ್ಚೆ ಹೆಚ್ಚಾಗಿತ್ತು. ಹೇಮಾಮಾಲಿನಿ ಅವರ ಜೀವನ ಮತ್ತೊಮ್ಮೆ ಹೊಸದಾಗಿ ಪ್ರಾರಂಭವಾಗಬೇಕೆಂದು ಅವರೆಲ್ಲ ಇಚ್ಚಿಸುತ್ತಿದ್ದರು.

ಆ ಸಮಯದಲ್ಲಿ ಹೇಮಮಾಲಿನಿ ಬಾಲಿವುಡ್ನಲ್ಲಿ ತುಂಬಾ ಯಶಸ್ವಿ ಹಾಗೂ ಜನಪ್ರಿಯ ನಟಿಯಾಗಿದ್ದರು. ಜಯಾ ಚಕ್ರವರ್ತಿಯವರು ‘ರತ್ನದೀಪ’ ಚಿತ್ರದಲ್ಲಿ ಹೇಮಾಮಾಲಿನಿ ಮತ್ತು ಗಿರೀಶರಿಗೆ ಮುಖ್ಯ ಪಾತ್ರಕ್ಕಾಗಿ ಆಯ್ಕೆ ಮಾಡಿದ್ದರು. ಚಿತ್ರದ ಶೂಟಿಂಗ್ ಮಧ್ಯದಲ್ಲಿ ಹೇಮಾಮಾಲಿನಿಯವರು ಗಿರೀಶ್ ಕಾರ್ನಾಡ್ ಅವರಿಗೆ ಹೀಗೆ ಕೇಳಿದರು, ನಮ್ಮಿಬ್ಬರ ಮದುವೆಯ ಕುರಿತು ವೃತ್ತ ಪತ್ರಗಳಲ್ಲಿ ಸುದ್ದಿ ಬರುತ್ತಿವೆ ಇದಕ್ಕೆ ನೀವೇನು ಹೇಳುತ್ತೀರಿ? ಅದಕ್ಕೆ ಉತ್ತರವಾಗಿ ಗಿರೀಶ್ ಕಾರ್ನಾಡ್ ಅವರು, ಸುದ್ದಿಗಳಲ್ಲಿ ನಮ್ಮ ಬಗ್ಗೆ ಏನು ಬರುತ್ತದೆ ಎಂಬುದಕ್ಕೆ ನಾನು ಮಹತ್ವ ನೀಡುವುದಿಲ್ಲ, ನನ್ನ ಹತ್ತಿರ ಒಂದು ವಿಶೇಷ ಕಾರಣವಿದೆ ಆದ್ದರಿಂದ ನಾನು ಈ ಮದುವೆಗೆ ಒಪ್ಪುವುದಿಲ್ಲ, ಎಂದಿದ್ದರು.

ತಮ್ಮ ಆತ್ಮಚರಿತ್ರೆಯಲ್ಲಿ ಗಿರೀಶ್ ಕಾರ್ನಾಡ್ ಅವರು ಈ ಮದುವೆಯನ್ನು ನಿರಾಕರಿಸಿದ ಕಾರಣವನ್ನು ಬರೆದಿದ್ದಾರೆ. ಹೇಮಾ ಅವರ ಜೊತೆಗೆ ನಾನು ಮದುವೆಯಾಗುವುದು ಅಸಾಧ್ಯವಾಗಿತ್ತು. ಆಗ ನಾನು ಸರಸ್ವತಿಗೆ ಮದುವೆಗಾಗಿ ಕೇಳಿದ್ದೆ. ಒಂದು ವೇಳೆ ಸರಸ್ವತಿಯು ಸಹ ನನ್ನ ಜೊತೆಗೆ ಮದುವೆಗಾಗಿ ನಿರಾಕರಿಸಿದರೂ ನಾನು ಹೇಮಾ ಅವರ ಜೊತೆಗೆ ಮದುವೆಯಾಗುತ್ತಿರಲಿಲ್ಲ. ಕಾರಣ ಒಂದುಸಲ ನಾನು ಹೇಮಾ ಅವರಿಗೆ, ನೀವು ತಮಿಳು ಚಿತ್ರದಲ್ಲಿ ಯಾಕೆ ಕೆಲಸ ಮಾಡುವುದಿಲ್ಲ ಎಂದು ಕೇಳಿದ್ದೆ, ಅದಕ್ಕೆ ಅವರು ನಗುತ್ತಾ ಆ ಜನರು ತುಂಬಾ ಕ#ಪ್ಪಾಗಿದ್ದಾರೆ ಎಂದು ಉತ್ತರಿಸಿದರು. ಈ ಪ್ರಸಂಗದ ನಂತರ ನನ್ನ ದೃಷ್ಟಿಯಲ್ಲಿ ಹೇಮಮಾಲಿನಿ ಅವರ ವಿಷಯ ಮುಗಿದುಹೋಗಿತ್ತು, ಎಂದು ಗಿರೀಶ್ ಕಾರ್ನಾಡ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.