ಏಳನೇ ವಯಸ್ಸಿನಲ್ಲಿ ಮೈಕ್ರೋಸಾಫ್ಟ್ ಟೆಕ್ನಾಲಜಿ ಅಸ್ಸೋಸಿಯೇಟ್ಸ್ ಪರೀಕ್ಷೆ ಪಾಸ್ ಮಾಡಿದ ಈ ಹುಡುಗ ಯಾರು???ಬನ್ನಿ ತಿಳಿದುಕೊಳ್ಳೋಣ…

ವಯಸ್ಸು ಹಾಗು ಜಾಣತನಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಈ ಚಿಕ್ಕ ಹುಡುಗ ಸಿದ್ಧ ಮಾಡಿದ್ದಾನೆ. ಒಡಿಶಾದ ಬಾಲನಗರಿಯಲ್ಲಿ ವಾಸಿಸುವ ಏಳು ವರ್ಷದ ವೆಂಕಟ ರಮಣ ಪಟನಾಯಕ್ ಈತ ಮೈಕ್ರೋಸಾಫ್ಟ್ ಟೆಕ್ನಾಲಜಿ ಅಸ್ಸೋಸಿಯೇಟ್ಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾನೆ. ಜಾಗತಿಕ ಮಟ್ಟದಲ್ಲಿ ನಡೆಯುವ

ಈ ಪರೀಕ್ಷೆ ಎಷ್ಟೋ ವರ್ಷ ಟೆಕ್ನಾಲಜಿ ಶಿಕ್ಷಣ ತೆಗೆದುಕೊಂಡವರೆ ಪಾಸ್ ಆಗುವದಿಲ್ಲ ಅಂತಹದರಲ್ಲಿ ಈ ಚಿಕ್ಕ ಹುಡಗ ಏಳನೇ ವಯಸ್ಸಿನಲ್ಲಿ ಪಾಸ್ ಆಗಿದ್ದಾನೆ.

ಈ ಒಂದು ಪರೀಕ್ಷೆ ಹೇಗಿದೆ ಅಂದ್ರೆ ಪಾಸ್ ಆಗ್ತಾ ಆಗ್ತಾ ಎಷ್ಟೋ ಬಾರಿ ಜನರ ತಲೆಗೂದಲು ಉದುರಿ ಹೋಗಿವೆ. ಆದರೆ ಈ ಚಿಕ್ಕ ಹುಡುಗ ಸ್ಕಾಲರ್ಶಿಪ್ ಪರೀಕ್ಷೆ ಪಾಸ್ ಮಾಡಿದ ಹಾಗೆ ಮಾಡಿ ತೋರಿಸಿದ್ದಾನೆ. ವೆಂಕಟ್ ಮೂರನೇ ತರಗತಿಯಲ್ಲಿ ಓದ್ತಾ ಇದ್ದಾನೆ. ಅವನು ಜಾವಾಸ್ಕ್ರಿಪ್ಟ್, ಪಾಯಥಾನ್, ಎಚ್ ಟಿ ಎಮ್ ಎಲ್, ಸಿ ಎಸ್ ಎಸ್ ಮತ್ತು ಡಾಟಾಬೇಸ್ ಅಡ್ಮಿನಿಸ್ಟ್ರೇಷನ್ ಇವುಗಳ ಅವಶ್ಯಕತೆ ಇರುವ ಎಮ್ ಟಿ ಎ ಪರೀಕ್ಷೆ ಪಾಸ್ ಮಾಡಿ ತೋರಿಸಿದ್ದಾನೆ.

ವೆಂಕಟ್ ಇವನು ವೈಟ್ ಹ್ಯಾಟ್ ಜೂನಿಯರ್ (white hat jr).ನ ವಿದ್ಯಾರ್ಥಿ ಆಗಿದ್ದಾನೆ. ಒಂದೇ ವರ್ಷದಲ್ಲಿ ಈತ ವೈಟ್ ಹ್ಯಾಟ್ ನ 160 ಕ್ಲಾಸುಗಳನ್ನು ಅಟೆಂಡ್ ಮಾಡಿದ್ದಾನೆ. ಈತನ ಬಗ್ಗೆ ಅವರ ಶಿಕ್ಷಕ ಜತಿಂದರ್ ಕೌರ್ ಎನ್ ಹೇಳ್ತಾರೆ ಅಂದ್ರೆ ವೆಂಕಟ್ ಮೊದಲನೇ ದಿನದಿಂದಲೆ ವೈಟ್ ಹ್ಯಾಟ್ ಕೋಡಿಂಗ್ ಮೇಲೆ ಹಿಡಿತ ಇಟ್ಟಿದ್ದನು ಇವನ ತರ ವಿದ್ಯಾರ್ಥಿಗಳು ತುಂಬಾನೇ ಕಡಿಮೆ ಇದ್ದಾರೆ ಎಂದು ಹೇಳಿದರು.

ವೆಂಕಟ್ ಹಾಗೆ ಇನ್ನೊಬ್ಬ ವಿದ್ಯಾರ್ಥಿ ಅಗಸ್ತ್ಯ ಜೈಸ್ವಾಲ್ ಇವನು ಕೂಡ ತುಂಬಾನೇ ಜಾಣ ವಿದ್ಯಾರ್ಥಿ. ಈತನೂ ಕೂಡ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ಪಡೆದಿದ್ದಾನೆ. ಈ ಒಂದು ಸಾಧನೆ ಮಾಡಿದ ಮೊದಲನೆಯ ಭಾರತೀಯ ಎಂದು ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

ಹೈದ್ರಾಬಾದ್ ನಲ್ಲಿ ವಾಸಿಸುವ ಅಗಸ್ತ್ಯ 9ನೆ ವಯಸ್ಸಿನಲ್ಲಿ ಎಸ್. ಎಸ್. ಎಲ್. ಸಿ. ಹಾಗು 11ನೆ ವಯಸ್ಸಿನಲ್ಲಿ 2nd ಪಿ. ಯು. ಸಿ. ಪಾಸ್ ಮಾಡಿದ ವಿದ್ಯಾರ್ಥಿ ಎಂದು ಹೇಳಲಾಗಿತ್ತು.

ಭವಿಷ್ಯದಲ್ಲಿ ಡಿಜಿಟಲ್ ಇಂಡಿಯಾ ಕ್ರಾಂತಿಯಲ್ಲಿ ಇವರಿಬ್ಬರು ತಮ್ಮದೇ ಆದ ವಿಶಿಷ್ಟ ರೀತಿಯ ಛಾಪು ಮುಡಿಸುತ್ತಾರೆ ಅನ್ನೋದರಲ್ಲಿ ಆಶ್ಚರ್ಯವೆನಿಸುವದಿಲ್ಲ…