ಶೂಟಿಂಗ್ ಸಮಯದಲ್ಲಿಯ ಪ್ರಿಯಾಂಕಾ ಅವರ ಈ ಫೋಟೋ ತುಂಬಾ ವೈರಲ್ ಆಗುತ್ತಿದೆ..! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಪ್ರಿಯಾಂಕಾ ಚೋಪ್ರಾ ಅವರ ಹಾಲಿವುಡ್ ಚಿತ್ರ ‘ಬೇವಾಚ್’ ಚಿತ್ರದ ವೈಫಲ್ಯದಿಂದ ಅವರ ವೃತ್ತಿಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಬೇವಾಚ್ ನಂತರ ಅವರು ಇನ್ನೂ ಎರಡು ಹಾಲಿವುಡ್ ಚಲನಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಆ ಎರಡು ಚಿತ್ರಗಳಲ್ಲಿ ಒಂದು ಚಿತ್ರವಾದ ‘Isn’t romantic?’ ಈ ಚಿತ್ರದ ಶೂಟಿಂಗ್ ಸಮಯದಲ್ಲಿಯ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ಚಿತ್ರಪಟದ ಶೂಟಿಂಗ್ ಸಮಯದಲ್ಲಿಯ ಪ್ರಿಯಾಂಕಾ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬೆಳಕಿಗೆ ಬಂದಿವೆ. ಈ ಫೋಟೋಗಳಲ್ಲಿ ಪ್ರಿಯಾಂಕಾ ಅವರು ಗುಲಾಬಿ ಬಣ್ಣದ ಡೀಪ್ ನೆಕ್ ಡ್ರೆಸ್ ಧರಿಸಿದ್ದಾರೆ. ಅವರ ಜೊತೆಗೆ ಈ ಚಿತ್ರಪಟದಲ್ಲಿ ನಟಿಸುತ್ತಿರುವ ನಟ ಆಡಮ್ ಡಿವಿನ್ ಕೂಡಾ ಕಾಣಿಸಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋ ತುಂಬಾ ಆ#ಶ್ಚರ್ಯಚಕಿತ ಗೊಳಿಸುವಂತಿದೆ.
ವಾಸ್ತವವಾಗಿ ಈ ಫೋಟೋ ಹಿಂದಿನ ನಿಜ ಸಂಗತಿ ಏನೆಂದರೆ, ಈ ಚಿತ್ರಪಟದಲ್ಲಿಯ ಒಂದು ಸೀನ್ ಶೂಟಿಂಗ್ ಮಾಡುವದಿತ್ತು. ಆ ಸೀನ್ ನಲ್ಲಿ ಏನಿದೆ ಎಂದರೆ, ಪ್ರಿಯಾಂಕಾ ಕಾಫಿ ಟೇಬಲ್ ಮೇಲೆ ಕುಳಿತುಕೊಂಡು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುತ್ತಿರುತ್ತಾರೆ ಅಷ್ಟರಲ್ಲಿ ಕೆಲವು ಪದಾರ್ಥ ಪ್ರಿಯಾಂಕಾ ಅವರ ಗಂಟಲಿನಲ್ಲಿ ಸಿಲುಕಿಕೊಳ್ಳುತ್ತದೆ. ತದನಂತರ ಅವರಿಗೆ ನೋವು ಉಂಟಾಗಲು ಪ್ರಾರಂಭ ವಾಗುತ್ತದೆ. ಆಗ ನಟ ಆಡಮ್ ಡೇವಿನ್ ಅವರು ಅಲ್ಲಿಗೆ ಬರುತ್ತಾರೆ ಮತ್ತು ಪ್ರಿಯಾಂಕಾ ಅವರನ್ನು ಉಳಿಸಲು ಪ್ರಯತ್ನ ಮಾಡುತ್ತಾರೆ. ತದನಂತರ ಪ್ರಿಯಾಂಕಾ ಅವರು ತನ್ನ ಪ್ರಾಣ ಉಳಿಸಿದಕ್ಕಾಗಿ ಆಡಮ್ ಅವರಿಗೆ ಧನ್ಯವಾದಗಳು ತಿಳಿಸುತ್ತಾರೆ. ಗಂಟಲಲ್ಲಿ ಸಿಲುಕಿದ ಪದಾರ್ಥವನ್ನು ಹೊರಗಡೆ ತಗೆಯುವ ಸಲುವಾಗಿ ಡೇವಿನ್ ಅವರು ಪ್ರಿಯಾಂಕಾ ಅವರನ್ನು ಎತ್ತಿ ಹಿಡಿದುಕೊಂಡು ಅವರ ಕುತ್ತಿಗೆ ಕೆಳಗಡೆ ಮಾಡುವ ಸಂದರ್ಭದಲ್ಲಿಯ ಫೋಟೋ ಇದಾಗಿದೆ.

ಈ ಸೀನ್ ನ್ಯೂಯಾರ್ಕ್ ನ ಒಂದು ರೆಸ್ಟೋರೆಂಟ್ ಶೂಟ್ ಮಾಡಲಾಗಿತ್ತು ಆದರೆ ಈ ಸೀನ್ ದ ಕೆಲವು ಛಾಯಾಚಿತ್ರಗಳು ಮಾತ್ರ ಇಂಟರ್ನೆಟ್ ನಲ್ಲಿ ತುಂಬಾ ವೈರಲ್ ಆಗಿವೆ.
ಈ ಚಿತ್ರಪಟದಲ್ಲಿ ಪ್ರಿಯಾಂಕಾ ಅವರು ಯೋಗಧೂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಮತ್ತು ಆಡಮ್ ಡೇವಿನ್ ಜೊತೆಗೆ ಈ ಚಿತ್ರಪಟದಲ್ಲಿ ರೀಬೇಲ್ ವಿಲ್ಸನ್ ಮತ್ತು ಲೋಯಾಮ್ ಹೆಮ್ಸ್ ವರ್ಥ ರಂತಹ ದಿಗ್ಗಜ ಕಲಾಕಾರರು ಸಹ ನಟಿಸಿದ್ದಾರೆ. ಈ ಚಿತ್ರದ ನಿರ್ದೇಶನವನ್ನು ಸ್ಟ್ರಾಸ್ ಶುಲ್ಸನ್ ಇವರು ಮಾಡಿದ್ದಾರೆ. ಅಲ್ಲದೆ ಈ ಚಿತ್ರಪಟದ ಕಥೆಯನ್ನು ಏರಿನ್ ಕಾರ್ಡಿಲೋ, ಡಾನಾ ಫಾಕ್ಸ್, ಕ್ಯಾಟಿ ಸಿಲ್ವರ್ಮನ್ ಮತ್ತು ಪಾಲ್ ಪೆಲ್ ಇವರು ಬರೆದಿದ್ದಾರೆ.