ಈ ವ್ಯಕ್ತಿ ಕಳೆದ 17 ತನ್ನವರ್ಷಗಳಿಂದ ಮೃ#ತ ಹೆಂಡತಿಯ ಬದಿಗೆ ಮಲಗುತ್ತಿದ್ದಾನೆ, ಏಕೆ ಗೊತ್ತಾ?

ಸಾಮಾನ್ಯವಾಗಿ ಸಂಸಾರ ಎಂದರೆ ಅದರಲ್ಲಿ ಗಂಡ ಹೆಂಡತಿಮಕ್ಕಳು ತಾಯಿ ತಂದೆ ಇವರೆಲ್ಲರೂ ಮನೆಯಲ್ಲಿ ಇದ್ದರೆ ಮಾತ್ರ ಸಂಸಾರ ಸುಖವಾಗಿ ಮುಂದೆ ವರೆಯುವದು ಇದರಲ್ಲಿ ಯಾರೊಬ್ಬರ ಇರುವಿಕೆ ಕಡಿಮೆ ಯಾದರೆ ಕೆಲವೊಮ್ಮೆ ನಡೆಯ ಬಾರದಂಥ ಘಟನೆ ನಡೆಯುತ್ತವೆ. ಎಲ್ಲಕ್ಕೂ ಹೆಚ್ಚಾಗಿ ಗಂಡನಿಗೆ ಹೆಂಡತಿ ತುಂಬಾ ಮುಖ್ಯ ಅವಳು ಹೇಗೆ ಇರಲಿ. ಗಂಡ ತನ್ನ ಹೆಂಡತಿಯ ಸಲುವಾಗಿ ಏನೆಲ್ಲಾ ಮಾಡಲು ಸಿದ್ಧನಿರುತ್ತಾನೆ. ಕೆಲವೊಮ್ಮೆ ತಾನು ಪ್ರೀತಿಸಿದ ಹುಡುಗಿ ತನ್ನ ಹೆಂಡತಿಯಾಗಿ ಸಿಕ್ಕರೆ ಸಾಕು ಸ್ವರ್ಗವೇ ತನ್ನ ಕಾಲ ಕೆಳಗೆ ಬಂದಂತಾಗುತ್ತದೆ.

ಆದ್ರೆ ಪ್ರೀತಿ ತುಂಬಿದ ಸಂಸಾರದಲ್ಲಿ ಒಮ್ಮಿಂದೊಮ್ಮೆ ಹೆಂಡತಿ ಮರೆಯಾದರೆ ಅಂದ್ರೆ ಬಿಟ್ಟು ಹೋದರೆ ಏನೆಲ್ಲಾ ಸಮಸ್ಯೆ ಉಂಟಾಗುತ್ತವೆ ಎಂಬುದು ಹೇಳಲು ಸಾಧ್ಯವಾಗುದಿಲ್ಲ. ಅದಕ್ಕೆ ಈ ನೈಜ ಘಟನೆಯೇ ಸಾಕ್ಷಿ.
ಪ್ರಸ್ತುತ ಸುದ್ಧಿಯಲ್ಲಿ ಒಬ್ಬ ಪತಿ ತನ್ನ ಮಡದಿ ಸತ್ತು 17 ವರ್ಷ ಕಳೆದರು ಸಹ ಅವಳ ಜೊತೆಗೆನೇ ಮಲಗುತ್ತಿದ್ದಾನೆ. ಅದು ಹೇಗೆ ಸಾಧ್ಯ ಅಂತೀರಾ ಹಾಗಿದ್ದರೆ ತಿಳಿದುಕೊಳ್ಳಿ.

ವ್ಹಿಯೇತ್ನಾಮ್ ದಲ್ಲಿಯ ಒಬ್ಬ ವ್ಯಕ್ತಿ ಸ್ಮಶಾನ ಭೂಮಿಯಿಂದ ಮೃತ ಪಟ್ಟ ತನ್ನ ಹೆಂಡತಿಯ ಎಲಬುಗಳನ್ನು ತಗೆದುಕೊಂಡು ಬಂದು ಅವುಗಳ ಉಪಯೋಗ ಮಾಡಿ ಒಂದು ಪ್ಲಾಸ್ಟಿಕ ಗೊಂಬೆಯನ್ನು ತಯಾರಿಸಿ ಅದರ ಜೊತೆಗೆ ಕಳೆದ 17 ವರ್ಷದಿಂದ ಮಲಗಿಕೊಳ್ಳುತ್ತಿದ್ದಾನೆ.

ಈ ವ್ಯಕ್ತಿಯ ಹೆಸರು ಲೇ ವ್ಯಾನ್ ಇದೆ. ಈ ವ್ಯಕ್ತಿ 1975 ರಲ್ಲಿ ವಿವಾಹವಾಗಿದ್ದರು. ತದನಂತರ ಇವರಿಗೆ ಏಳು ಮಕ್ಕಳು ಸಹ ಆದವು. 2003 ರಲ್ಲಿ ವ್ಯಾನ್ ಅವರು ಮನೆಯಿಂದ ದೂರವಿದ್ದು ಕೆಲಸ ಮಾಡುತ್ತಿದ್ದಾಗ ತನ್ನ ಪತ್ನಿಯ ಮ ರಣದ ಸುದ್ದಿ ಬಂದಿತು. ತದನಂತರ ತನ್ನ ಪತ್ನಿಯನ್ನು ತುಂಬಾ ಹಚ್ಚೋಕೊಂಡಿದ್ದ ವ್ಯಾನ್ ಅವರು ಪತ್ನಿಯ ಮುಖ ನೋಡಲು ಏನು ನೋಡದೇ ಓಡೋಡಿ ಬಂದು ತನ್ನ ಪತ್ನಿಯ ಮೃತ ದೇಹಕ್ಕೆ ಅಪ್ಪಿಕೊಂಡು ತುಂಬಾ ಅಳುತ್ತಾರೆ.

ತನ್ನ ಪತ್ನಿಯನ್ನು ಕಳೆದುಕೊಂಡ ನಂತರ ಆಕೆಯ ನೆನಪು ಬಂದಾಗ ವ್ಯಾನ್ ಅವರು ಹಗಲು ರಾತ್ರಿ ಯನ್ನದೆ ಅವರ ಗೋರಿಯ ಬಳಿ ಹೋಗು ಕುಳಿತುಕೊಳ್ಳುತ್ತಿದ್ದರು ಅಷ್ಟೇ ಅಲ್ಲ ಕೆಲವೊಮ್ಮೆ ಹೆಂಡತಿಯ ಗೋರಿಯ ಮೇಲೆ ಮಲಗಿಕೊಳ್ಳುತ್ತಿದ್ದರು ಸಹ. ಪದೇ ಪದೇ ಹೀಗೆ ಮಾಡುತ್ತಿರುವಾಗ ಕೆಲವು ತಿಂಗಳ ನಂತರ ವಾತಾವರಣದಲ್ಲಿ ಬದಲಾವಣೆಯಾಯಿತು ಅಂದರೆ ಕೆಟ್ಟ ವಾತಾವರಣ ಮತ್ತು ಮಳೆಯ ಸಮಸ್ಯೆ ಉಂಟಾದಾಗ ವ್ಯಾನ್ ಅವರು ತುಂಬಾ ನೊಂದು ಕೊಂಡರು.

ಅಲ್ಲದೆ ವ್ಯಾನ್ ಅವರ ಮಕ್ಕಳು ಸಹ ಸ್ಮಶಾನ ಹೋಗದಂತೆ ತಡೆಯುತ್ತಿದ್ದರು ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕೆಂದು ವ್ಯಾನ್ ಅವರು ಒಂದು ಬೆರೆನೆ ಯೋಜನೆ ಮಾಡಿದರು.

ತದನಂತರ ಎಲ್ಲದಕ್ಕೂ ಬೇಸತ್ತ ವ್ಯಾನ್ ಅವರು ತನ್ನ ಪತ್ನಿಯ ಗೋರಿಯನ್ನು ಅಗೆದು ಅದರಲ್ಲಿದ್ದ ಹೆಂಡತಿಯ ಅಸ್ತಿ ಪಂಜರ ಅಂದರೆ ಎಲುಬುಗಳನ್ನು ಒಟ್ಟಿಗೂಡಿಸಿ ಅವುಗಳನ್ನು ಮನೆಗೆ ತಂದರು. ನಂತರ ಆ ಎಲುಬುಗಳು ಸಹಾಯದಿಂದ ಒಂದು ಪ್ಲಾಸ್ಟಿಕ್ ಪ್ರತಿಮೆಯನ್ನು ತಯಾರಿಸಿ ಅದನ್ನು ಮನೆಯಲ್ಲಿ ತಂದು ಇಟ್ಟರು. ಇದನ್ನು ನೋಡಿದ ಬದಿಯ ಜನರು ಹೆದರಿಕೊಂಡು ಈ ವಿಷಯ ಸ್ಥಳೀಯ ಪ್ರಶಾಸನದವರಿಗೆ ತಕರಾರು ನೊಂದಿಸಿದರು.

ಇದನ್ನರಿತ ಸ್ಥಳೀಯ ಪ್ರಶಾಸಕಿಯ ಅಧಿಕಾರಿಗಳು ಬಂದು ವ್ಯಾನ್ ಆವರಿಗೆ ತಿಳಿಹೇಳಲು ಎಷ್ಟೋ ಪ್ರಯತ್ನಿಸಿದರು. ಆದರೂ ಅದು ಪ್ರಯೋಜನ ವಾಗಲಿಲ್ಲ. ಆಗ ಮಕ್ಕಳು ವ್ಯಾನ್ ಅವರನ್ನು ತಮ್ಮ ಮನೆಯ ಬಿಟ್ಟು ದೂರ ಸ್ಥಳದಲ್ಲಿ ಒಂದು ಮನೆಯನ್ನು ಮಾಡಿಕೊಟ್ಟು ಅದರಲ್ಲಿ ಇರಲು ತಿಳಿಸಿದರು. ಸುಮಾರು 17 ವರ್ಷಗಳಿಂದ ವ್ಯಾನ್ ಅವರು ಆ ತಮ್ಮ ಹೆಂಡತಿಯ ಎಲಬುಗಳನ್ನು ಹಾಕಿ ತಯಾರಿಸಿದ ಪ್ಲಾಸ್ಟಿಕ್ ಪ್ರತಿಮೆಯೊಂದಿಗೆ ಕಾಲ ಕಳೆಯುತ್ತಿದ್ದಾರೆ.