ರೋಹಿತ್ ಶರ್ಮಾ ನಾಯಕರಾದ ಮೇಲೆ ವಿರಾಟ್ ಕೊಹ್ಲಿ ಅವರಿಗೆ ಬೌಲಿಂಗ್ ನೀಡಿದರು, ಇದರ ಹಿಂದಿನ ಕಾರಣವೇನು ನೋಡಿ…

ಆಸ್ಟ್ರೇಲಿಯಾ ವಿರುದ್ಧದ ಪ್ರಾಕ್ಟೀಸ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಕಡೆಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿತ್ತು. ಅವರಿಗೆ ನಾಯಕತ್ವ ನೀಡಿದ್ದರಿಂದ ಅಭಿಮಾನಿಗಳಿಗೆ ಶಾಕ್ ಕಾದಿತ್ತು. ಏಕೆಂದರೆ ರೋಹಿತ್ ಶರ್ಮಾ ನಾಯಕತ್ವ ಸ್ವೀಕರಿಸಿದ ನಂತರ ವಿರಾಟ್ ಕೊಹ್ಲಿ ಅವರನ್ನು ಬೌಲಿಂಗ್ ಸಲುವಾಗಿ ಕರೆದದ್ದು ಕಂಡುಬಂತು.

ರೋಹಿತ್ ಶರ್ಮಾ ವಿರಾಟ್ ಅವರಿಗೆ ಬೌಲಿಂಗ್ ಗಾಗಿ ಏಕೆ ಕರೆದರು ನೋಡಿ…

ರೋಹಿತ್ ಅವರು 7 ನೇ ಓವರ್ ಒಗೆಯುವ ಸಲುವಾಗಿ ವಿರಾಟ್ ಕೊಹ್ಲಿ ಅವರಿಗೆ ಬೌಲಿಂಗ್ ನೀಡಿದಾಗ ಎಲ್ಲರಿಗೂ ಆಶ್ಚರ್ಯವಾಯಿತು. ಏಕೆಂದರೆ ಅದಕ್ಕೂ ಮೊದಲು ಭುವನೇಶ್ವರ್ ಕುಮಾರ್, ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಬೌಲಿಂಗ್ ಮಾಡುತ್ತಿದ್ದರು. ಅದರ ನಂತರ ಶಾರ್ದುಲ್ ಠಾಕೂರ್, ರಾಹುಲ್ ಚಹಾರ್ ಮತ್ತು ವರುಣ್ ಚಕ್ರವರ್ತಿ ಇವರಿಗೆ ಬೌಲಿಂಗ್ ನೀಡುವ ಮೊದಲೇ ಕೊಹ್ಲಿ ಅವರನ್ನು ಕರೆದಿದ್ದರು. ವಿರಾಟ್ ಕೊಹ್ಲಿ ಅವರು ಮೊದಲ 2 ಬಾಲ್ ಗಳಲ್ಲಿ ಒಂದು ರನ್ ಸಹ ನೀಡಲಿಲ್ಲ. ಉಳಿದ ನಾಲ್ಕು ಬಾಲ್ ಗಳಲ್ಲಿ ಬರೀ ನಾಲ್ಕು ರನ್ ಮಾತ್ರ ನೀಡಿದರು. ವಿರಾಟ್ ಕೊಹ್ಲಿ ಅವರು ತಮ್ಮ ಎರಡು ಓವರ್ ಗಳಲ್ಲಿ ಒಟ್ಟು 12 ರನ್ಗಳನ್ನು ನೀಡಿದರು. ರೋಹಿತ್ ಶರ್ಮಾ ಅವರು ವಿರಾಟ್ ಅವರಿಗೆ ಬೌಲಿಂಗ್ ನೀಡಿದ ಕಾರಣ ಇಲ್ಲಿ ಗೊತ್ತಾಗುತ್ತದೆ. ಭಾರತದ ಕಡೆಗೆ ಒಳ್ಳೆಯ ಪೇಸರ್ ಇದ್ದಾರೆ. ಅದರ ಜೊತೆಗೆ ಒಳ್ಳೆಯ ಸ್ಪಿನ್ ಬೌಲರ್ ಗಳು ಸಹ ಇದ್ದಾರೆ. ಆದರೆ ಭಾರತದ ಕಡೆಗೆ ಮೀಡಿಯಂ ಪೇಸರ್ ಬೌಲರ್ಗಳು ಇಲ್ಲ. ಹೀಗಾಗಿ ತಂಡಕ್ಕೆ ಅವಶ್ಯಕತೆ ಬಿದ್ದಾಗ ಮೀಡಿಯಂ ಪೇಸರ್ ಬೌಲರ್ ಅಗತ್ಯವನ್ನು ಪೂರ್ಣ ಮಾಡಲು ಒಬ್ಬರು ಬೇಕು ಎಂಬ ಉದ್ದೇಶ ರೋಹಿತ್ ಅವರದ್ದು ಇದೆ. ಯಾಕೆಂದರೆ ಹಾರ್ದಿಕ್ ಪಾಂಡ್ಯ ಅವರು ಈ ವರ್ಲ್ಡ್ ಕಪ್ ನಲ್ಲಿ ಬೌಲಿಂಗ್ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಪ್ರಾಕ್ಟೀಸ್ ಮ್ಯಾಚ್ ನಲ್ಲಿ ವಿರಾಟ್ ಅವರು ಈ ಪ್ರಯೋಗ ಮಾಡಿರಬೇಕೆಂದು ತಿಳಿದುಬರುತ್ತಿದೆ. ಕೆಲವೊಂದು ಸಲ ತಂಡದಲ್ಲಿ ಪ್ರಮುಖ ಬೌಲರ್ಗಳು ನಿಷ್ಪ್ರಯೋಜಕರಾದಾಗ ಇಂಥ ಬೌಲರ್ಗಳು ಉಪಯೋಗಕ್ಕೆ ಬರುತ್ತಾರೆ. ಇನ್ನೊಂದು ಉದಯೋನ್ಮುಖ ಆಟಗಾರರಾದ ಶಾರ್ದುಲ್ ಮತ್ತು ಚಹರ್ ಅವರ ಬೌಲಿಂಗ್ ವಿರೋಧಿ ತಂಡಕ್ಕೆ ತಿಳಿದುಕೊಳ್ಳಲು ಹೆಚ್ಚು ಎಡೆಮಾಡಿ ಕೊಟ್ಟಂತಾಗುತ್ತದೆ ಎಂಬ ಕಾರಣಕ್ಕೂ ವಿರಾಟ್ ಅವರಿಗೆ ಬೌಲಿಂಗ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ವರ್ಲ್ಡ್ ಕಪ್ ನಲ್ಲಿ ವಿರಾಟ್ ಕೊಹ್ಲಿ ಅವರು ಬೌಲಿಂಗ್ ಮಾಡುತ್ತಾರೋ ಅಥವಾ ಇಲ್ಲ ಎಂಬುದರ ಬಗ್ಗೆ ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ.