ವಿಮಾನದಲ್ಲಿಯ ಮಾನವನ ಮಲ ಎಲ್ಲಿ ಹೋಗುತ್ತೆ..? ಕುತೂಹಲಕಾರಿ ಪ್ರಶ್ನೆಗೆ ಇಲ್ಲಿದೆ ಉತ್ತರ!
ಮೊದಲ ವಿಮಾನ ಪ್ರವಾಸ ಮಾಡುವಾಗ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುವವು. ಅದರಲ್ಲಿ ವಿಮಾನದಲ್ಲಿ ನಮ್ಮ ವ್ಯವಹಾರ ಹೇಗಿರಬೇಕು? ಯಾವುದನ್ನು ಮಾಡಬೇಕು,ಯಾವುದನ್ನು ಮಾಡಬಾರದು, ನಮ್ಮವರ ಹಾಗೂ ಸ್ವಂತದ ಕಾಳಜಿ ಹೇಗೆ ತೆಗೆದುಕೊಳ್ಳಬೇಕು, ಯಾವುದಕ್ಕೆ ಗಮನ ಕೊಡಬೇಕು, ಟೆನ್ಷನ್ ಫ್ರೀಯಾಗಿರಲು ಏನು ಮಾಡಬೇಕು ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪ್ರವಾಸಿಗ ವಿಚಾರ ಮಾಡುತ್ತಾನೆ.
ಅನೇಕರು ತಮ್ಮ ವಿಮಾನ ಪ್ರವಾಸದಲ್ಲಿ ಮುಜುಗರದ ಕಾರಣದಿಂದ ಶೌಚಾಲಯಕ್ಕೂ ಹೋಗದೆ ಹಾಗೆ ಕುಳಿತು ಕೊಳ್ಳುವವರೂ ಇರುತ್ತಾರೆ. ಇದು ದೇಹಕ್ಕೆ ಅಪಾಯವು ಹೌದು. ಹಾಗೆಯೇ ಅನೇಕರ ಮನಸ್ಸಿನಲ್ಲಿ ಈ ತ್ಯಾಜ್ಯ ಹೋಗುವದೆಲ್ಲಿ ಅಥವಾ ಇದರ ನಿರ್ಮೂಲನೆ ಮಾಡುವರೆಲ್ಲಿ ಎಂಬ ಪ್ರಶ್ನೆಗಳು ಉದ್ಭವಿಸುವದುಂಟು. ಈ ಪ್ರಶ್ನೆಯ ಉತ್ತರ ನಮ್ಮ ಹೊಟ್ಟೆಯಲ್ಲಿ ಸಂಗ್ರಹವಾದ ತ್ಯಾಜ್ಯ ವಿಮಾನದ ಹೊಟ್ಟೆಯಲ್ಲಿ ಹೋಗುತ್ತದೆ.

ಅರ್ಥ ಆಯ್ತಾ ವಾಚಕರೆ, ಇಲ್ಲವೇ ಹಾಗಾದರೆ ಓದಿ,
ಪ್ರತಿಯೊಂದು ವಿಮಾನದಲ್ಲಿ ಪ್ರವಾಸಿಗರಿಗರ ತ್ಯಾಜ್ಯವನ್ನು ಸಂಗ್ರಹಿಸುವ ಒಂದು ಟ್ಯಾಂಕ್ ನ ವ್ಯವಸ್ಥೆ ಮಾಡಿರುತ್ತಾರೆ. ಅದಕ್ಕೆ ಸಕ್ಷನ್ ಟ್ಯಾಂಕ್ ಅಥವಾ ಹೋಲ್ಡಿಂಗ್ ಟ್ಯಾಂಕ್ ಎನ್ನುತ್ತಾರೆ. ಯಾವಾಗ ಫ್ಲಶ್ ಮಾಡಲಾಗುತ್ತೋ ಆಗ ಅದು ಹೋಲ್ಡಿಂಗ್ ಟ್ಯಾಂಕ್ ನಲ್ಲಿ ಸೇರ್ಪಡೆಯಾಗುತ್ತೆ.
ಮೊದಮೊದಲು ಈ ತ್ಯಾಜ್ಯ ಯಾರದೋ ಮನೆಯ ಮೇಲೋ, ತೋಟದಲ್ಲಿ ಅಥವಾ ನಡೆದಾಡುವ ವ್ಯಕ್ತಿಗಳ ಮೇಲೆ ಬಿದ್ದ ಘಟನೆಗಳಾಗಿವೆ.
ಇಂಥ ಈ ಹೋಲ್ಡಿಂಗ್ ಟ್ಯಾಂಕ್ ನಲ್ಲಿ 20 ಗ್ಯಾಲನ್ ತ್ಯಾಜ್ಯ ಸಂಗ್ರವಾಗುತ್ತದೆ. ಈಗ ನಿಮ್ಮ ಮನಸ್ಸಿನಲ್ಲಿ ಈ ವಿಚಾರ ಮೂಡುತ್ತಿರಬಹುದು ಅದರ ಮುಂದಿನ ಪ್ರಕ್ರಿಯೆ, ನಿರ್ಮೂಲನೆ ಹೇಗೆ? ಅಂತ. ಅಲ್ವಾ? ಫ್ರೆಂಡ್ಸ್, ವಿಮಾನ ಲ್ಯಾಂಡಿಂಗ್ ಆದ ನಂತರ ಅದನ್ನು ಹೊತ್ತೊಯ್ಯಲು ಅಲ್ಲಿ ಲ್ಯಾವೋಟರಿ ಸರ್ವಿಸ್ ಟ್ರಕ್ ತರಲಾಗುತ್ತದೆ.

ಹೀಗೆ ಈ ರೀತಿಯಲ್ಲಿ ವಿಮಾನದಲ್ಲಿಯ ತ್ಯಾಜ್ಯದಿಂದ ತುಂಬಿದ ಟ್ಯಾಂಕ್ ಖಾಲಿ ಮಾಡಲಾಗುತ್ತದೆ ಮತ್ತು ವಿಮಾನವನ್ನು ಮರು ಹಾರಾಟಕ್ಕೆ ಅಣಿಗೊಳಿಸಲಾಗುತ್ತದೆ.