T20 WC : ಪ್ರಾಕ್ಟೀಸ್ ಪಂದ್ಯಗಳಲ್ಲಿಯ ಭಾರತದ ಭರ್ಜರಿ ಗೆಲುವಿಗೆ, ಸದಾ ತೆಗಳುವ ಮೈಕಲ್ ವಾನ್ ಹೇಳುವ ಮಾತು ನೋಡಿ….

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಟೀಮ್ ಇಂಡಿಯಾದ ಬಗ್ಗೆ ಯಾವಾಗಲೂ ಕಠೋರ ಮಾತುಗಳನ್ನು ನುಡಿಯುತ್ತಾರೆ. ಆದರೆ ಈಗ t20 ವರ್ಲ್ಡ್ ಕಪ್ ಹಿನ್ನೆಲೆಯಲ್ಲಿ ಕಳೆದ ಎರಡು ಪ್ರಾಕ್ಟೀಸ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಪರ್ಫಾರ್ಮನ್ಸ್ ನೋಡಿ ಮೈಕಲ್ ವಾನ್ ಅವರು ತುಂಬಾ ಖುಷಿಯಾಗಿದ್ದಾರೆ. ಎರಡು ಪಂದ್ಯಗಳಲ್ಲಿ ಭಾರತವು ಮೊದಲು ಇಂಗ್ಲೆಂಡ್ ಆಮೇಲೆ ಆಸ್ಟ್ರೇಲಿಯಾಕ್ಕೆ ಸಹಜವಾಗಿ ಮಣಿಸಿತು.

ಭಾರತದ ಪರ ಕೆ ಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಇವರ ಹೊರತಾಗಿ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಬೌಲಿಂಗನಲ್ಲಿ ತಮ್ಮ ಪ್ರತಾಪವನ್ನು ತೋರಿಸಿದರು. ಪ್ರಾಕ್ಟೀಸ್ ಪಂದ್ಯಗಳಲ್ಲಿ ಭಾರತ ಯಾವ ರೀತಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಸದೆಬಡೆಯಿತು ಅದನ್ನು ನೋಡಿ ವಿರಾಟ್ ಸೇನೆಯ ಮೇಲೆ ಹೊಗಳಿಕೆಯ ಮಹಾಪೂರವೇ ಹರಿದುಬರುತ್ತಿದೆ.

ಏತನ್ಮಧ್ಯೆ ಮೈಕಲ್ ವಾನ್ ಟೀಮ್ ಇಂಡಿಯಾವು t20 ವರ್ಲ್ಡ್ ಕಪ್ ಗೆಲ್ಲುವ ಪ್ರಬಲ ತಂಡವಾಗಿದೆ ಎಂದು ತಮ್ಮ ಟ್ವೀಟರ್ ಮೂಲಕ ಸಂದೇಶವನ್ನು ನೀಡಿದ್ದಾರೆ. ಮೈಕಲ್ ಅವರು ತಮ್ಮ ಟ್ವಿಟರ್ ಸಂದೇಶದಲ್ಲಿ, “ಭಾರತ ತನ್ನ ಪ್ರಾಕ್ಟಿಸ್ ಪಂದ್ಯಗಳನ್ನು ಆಡುತ್ತಿರುವ ರೀತಿ ನೋಡಿದರೆ, ಈ ತಂಡವು t20 ವರ್ಲ್ಡ್ ಕಪ್ ಗೆಲ್ಲುವ ಪ್ರಬಲ ತಂಡವೆಂದು ಕಂಡುಬರುತ್ತಿದೆ” ಎಂದು ಭಾರತ ತಂಡದ ಬಗ್ಗೆ ಹೊಗಳಿಕೆ ಮಾತುಗಳನ್ನು ಹೇಳಿದ್ದಾರೆ.