ಈ 3 ಪ್ರಮುಖ ಕಾರಣಗಳಿಂದಾಗಿ ಮಹೇಂದ್ರ ಸಿಂಗ್ ಧೋನಿಯವರು ಬರುವ IPL ನಲ್ಲಿ ಚೆನ್ನೈ ನಾಯಕ ಪದ ತ್ಯಜಿಸಬಹುದು!
ಎಂಎಸ್ ಧೋನಿಯವರನ್ನು ಎಷ್ಟೇ ಹೊಗಳಿದರೆ ಅದು ಕಡಿಮೆಯೇ, ಅವರ ನಾಯಕತ್ವದಲ್ಲಿ ಟೀಂ ಇಂಡಿಯಾವು ಐಸಿಸಿಯ ಎಲ್ಲಾ ಫಾರ್ಮಟ್ ಟ್ರೋಫಿಗಳನ್ನು ಗೆದ್ದುಕೊಂಡಿದೆ, ಅಷ್ಟೇ ಅಲ್ಲ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿದೆ. ಆದರೆ ಮುಂದಿನ ಐಪಿಎಲ್ ನಲ್ಲಿ ಮಾಹಿ ಆಡುತ್ತಾರೆಯೋ ಅಥವಾ ಇಲ್ಲವೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಮುಂದಿನ ವರ್ಷ ಐಪಿಎಲ್ ಮೆಗಾ ಹರಾಜು (ಐಪಿಎಲ್ 2022 ಮೆಗಾ ಹರಾಜು) ನಡೆಯುವ ಮೊದಲು, ಸಿಎಸ್ಕೆ ಫ್ರಾಂಚೈಸ್ ಮಹೇಂದ್ರ ಸಿಂಗ್ ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೋ ಅಥವಾ ಇಲ್ಲವೋ ಎಂಬುದು ನಿರ್ಧರಿಸಿದೆ. ಆದರೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಮಾಹಿಯವರು ಮುಂದಿನ ಸೀಸನ್ ಬರುವ ಮೊದಲು ಹಳದಿ ಸೇನೆಯ ನಾಯಕತ್ವಕ್ಕೆ ರಾಜೀನಾಮೆ ನೀಡುವುದಲ್ಲದೆ, ಕ್ರಿಕೆಟ್ ನಿಂದ ನಿವೃತ್ತಿಯನ್ನು ಘೋಷಿಸುತ್ತಾರೆ ಎಂದು ತಿಳಿದು ಬರುತ್ತಿದೆ. ಇದಕ್ಕೆ 3 ಪ್ರಮುಖ ಕಾರಣಗಳಿವೆ, ಅವು ಯಾವವು ಎಂಬುದು ತಿಳಿದುಕೊಳ್ಳೋಣ.
1)ಎಂಎಸ್ ಧೋನಿ ಐಪಿಎಲ್ 2021 ರಲ್ಲಿ ನಾಯಕರಾಗಿ ಉತ್ತಮ ಯಶಸ್ಸನ್ನು ಗಳಿಸಿದ್ದರೂ ಕೂಡಾ ಅವರು ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದಾರೆ. ಅವರು ಈ ಐಪಿಎಲ್ ಸೀಸನ್ ನಲ್ಲಿ 16 ಪಂದ್ಯಗಳನ್ನು ಆಡಿದರು, ಇದರಲ್ಲಿ ಅವರು ಹೆಚ್ಚಿನ ಸಮಯದಲ್ಲಿ ನಂ .6 ಅಥವಾ ನಂ .7 ರಲ್ಲಿ ಬ್ಯಾಟ್ ಮಾಡಿದರು. ಏತನ್ಮಧ್ಯೆ, ಮಾಹಿಯವರು 16, 28 ರ ಸರಾಸರಿಯಲ್ಲಿ 114.54 ಸ್ಟ್ರೈಕ್ ರೇಟ್ ನಲ್ಲಿ ಕೇವಲ 114 ರನ್ ಗಳಿಸಿದರು. ಈ ಐಪಿ.ಎಲ್ನಲ್ಲಿ ಅವರ ಗರಿಷ್ಠ ಸ್ಕೋರ್ 18 ಆಗಿತ್ತು. ನೈಸರ್ಗಿಕವಾಗಿ, ಅವರ ಬೆಳೆಯುತ್ತಿರುವ ವಯಸ್ಸಿನ ಪರಿಣಾಮ ಬ್ಯಾಟಿಂಗ್ ಮೇಲೆ ಬೀರುತ್ತಿದೆ ಎಂದು ಸ್ಪಷ್ಟವಾಗಿದೆ.

2) MS ಧೋನಿ ಅವರ ನಾಯಕತ್ವದಲ್ಲಿ 9 ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಫೈನಲ್ ವರೆಗೆ ತಲುಪಿಸಿದ್ದಾರೆ. ಸದ್ಯಕ್ಕೆ ಚೆನ್ನೈ ತಂಡಕ್ಕೆ ಒಬ್ಬ ಯುವ ಆಟಗಾರ ಹಾಗೂ ಕೂಲ್ ಕ್ಯಾಪ್ಟನ್ ತರ ಒಬ್ಬ ನಾಯಕರು ಬೇಕಾಗಿದ್ದಾರೆ. 40 ವರ್ಷ ಪ್ರಾಯದ ಧೋನಿಯವರು ತಮ್ಮ ವಯಸ್ಸಿನ ಪರಿಣಾಮದಿಂದಾಗಿ ತಂಡಕ್ಕಾಗಿ ದೀರ್ಘ ಇನ್ನಿಂಗ್ಸ್ ಆಡಲು ಅವರಿಗೆ ಸಾಧ್ಯವಾಗುತ್ತಿಲ್ಲ.
3) ಎಂಎಸ್ ಧೋನಿ ನಿವೃತ್ತಿಯ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಚಾಂಪಿಯನ್ ಆಗುವದು ಅವರ ಕನಸ್ಸಾಗಿತ್ತು, ಆ ಕನಸ್ಸು ಈ ವರ್ಷದ ಐಪಿಎಲ್ ಗೆದ್ದು ಅವರ ಕನಸ್ಸು ನನಸಾಗಿಸಿ ಕೊಂಡಿದ್ದಾರೆ. ಧೋನಿ ಟ್ರೋಫಿಯೊಂದಿಗೆ ನಿವೃತ್ತರಾಗಲು ಇದೊಂದು ಸುವರ್ಣಾವಕಾಶವಾಗಿದ್ದು ಅದನ್ನು ತಪ್ಪಿಸಿಕೊಳ್ಳಬಾರದು.